Sign In

By signing in or creating an account, you agree with Associated Broadcasting Company's Terms & Conditions and Privacy Policy.

GDP Growth: ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚು ಬೆಳವಣಿಗೆ: 2023-24ರಲ್ಲಿ ಶೇ. 7.3ರಷ್ಟು ವೃದ್ಧಿ- ಸರ್ಕಾರವೇ ಮಾಡಿದ ಲೆಕ್ಕಾಚಾರ

Indian Economy: ಭಾರತದ ಆರ್ಥಿಕತೆ 2023-24ರ ಹಣಕಾಸು ವರ್ಷದಲ್ಲಿ ಶೇ. 7.3ರಷ್ಟು ಬೆಳೆಯಬಹುದು ಎಂದು ನ್ಯಾಷನಲ್ ಸ್ಟಾಟಿಸ್ಟಿಕ್ಸ್ ಆಫೀಸ್ ಅಂದಾಜು ಮಾಡಿದೆ. 2022-23ರಲ್ಲಿ ಭಾರತದ ಜಿಡಿಪಿ ಶೇ. 7.2ರಷ್ಟು ಬೆಳೆದಿತ್ತು. ಹಿಂದಿನ ವರ್ಷಕ್ಕಿಂತ ಈ ಬಾರಿ ಹೆಚ್ಚು ಬೆಳವಣಿಗೆ ಇರಲಿದೆ. ಈ ಹಣಕಾಸು ವರ್ಷದ ಮೊದಲ ಎರಡು ಕ್ವಾರ್ಟರ್​ನಲ್ಲಿ ಆರ್ಥಿಕತೆ ಶೇ. 7.8 ಮತ್ತು ಶೇ 7.6ರಷ್ಟು ಬೆಳೆದಿರುವುದು ಅಚ್ಚರಿ ಮೂಡಿಸಿದೆ.

GDP Growth: ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚು ಬೆಳವಣಿಗೆ: 2023-24ರಲ್ಲಿ ಶೇ. 7.3ರಷ್ಟು ವೃದ್ಧಿ- ಸರ್ಕಾರವೇ ಮಾಡಿದ ಲೆಕ್ಕಾಚಾರ
ಭಾರತದ ಆರ್ಥಿಕತೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 05, 2024 | 7:04 PM

ನವದೆಹಲಿ, ಜನವರಿ 5: ಕಳೆದ ವರ್ಷ (2022-23ರಲ್ಲಿ) ಶೇ. 7.2ರಷ್ಟು ಬೆಳೆದಿದ್ದ ಭಾರತದ ಆರ್ಥಿಕತೆ ಈ ಹಣಕಾಸು ವರ್ಷದಲ್ಲಿ (2023-24) ಶೇ. 7.3ರಷ್ಟು ಹೆಚ್ಚಬಹುದು (GDP Growth) ಎಂದು ಸರ್ಕಾರ ನಿರೀಕ್ಷಿಸಿದೆ. ರಾಷ್ಟ್ರೀಯ ಸಾಂಖ್ಯಿಕ ಕಚೇರಿ (NSO- National Statistics Office) ಶುಕ್ರವಾರ ಈ ಅಂದಾಜು ಮಾಡಿದೆ. ಇದು ನಿಜವೇ ಆದಲ್ಲಿ ಭಾರತದ ಜಿಡಿಪಿ ಈ ವರ್ಷವೂ ನಿರೀಕ್ಷೆಮೀರಿ ಬೆಳೆಯಲಿದೆ.

‘2023-24ರ ವರ್ಷದಲ್ಲಿ ಹಾಲಿ ಬೆಲೆಗಳ ಆಧಾರದ ಜಿಡಿಪಿ ಅಥವಾ ನಾಮಿನಲ್ ಜಿಡಿಪಿ 296.58 ಲಕ್ಷ ಕೋಟಿ ಇರಲಿದೆ. 2022-23ರ ವರ್ಷದಲ್ಲಿ 272.41 ಲಕ್ಷ ಕೋಟಿ ರೂನಷ್ಟು ನಾಮಿನಲ್ ಜಿಡಿಪಿ ಇದೆ. ಆ ಹಣಕಾಸು ವರ್ಷದಲ್ಲಿ ನಾಮಿನಲ್ ಜಿಡಿಪಿ ಶೇ. 16.1ರಷ್ಟು ಬೆಳೆದಿತ್ತು. 2023-24ರಲ್ಲಿ ನಾಮಿನಲ್ ಜಿಡಿಪಿ ಶೇ. 8.9ರಷ್ಟು ಬೆಳೆಯುವ ಸಾಧ್ಯತೆ ಇದೆ,’ ಎಂದು ಎನ್​ಎಸ್​ಒ ತನ್ನ ವರದಿಯಲ್ಲಿ ತಿಳಿಸಿದೆ.

ಇದನ್ನೂ ಓದಿ: IPOs in January: ಈ ಜನವರಿ ತಿಂಗಳಲ್ಲಿ ಮೆಡಿ ಅಸಿಸ್ಟ್ ಸೇರಿದಂತೆ 5 ಸಂಸ್ಥೆಗಳಿಂದ ಐಪಿಒ ಬಿಡುಗಡೆ ಸಾಧ್ಯತೆ

2023-24ರಲ್ಲಿ ಭಾರತದ ಜಿಡಿಪಿ ಶೇ. 7.3ರಷ್ಟು ಬೆಳೆಯಬಹುದು ಎನ್ನುವ ಅಂದಾಜು ಸದ್ಯಕ್ಕೆ ಅನಿರೀಕ್ಷಿತವೆಂದು ಭಾವಿಸಲು ಸಾಧ್ಯವಿಲ್ಲ. ಈ ಹಣಕಾಸು ವರ್ಷದ ಮೊದಲ ಕ್ವಾರ್ಟರ್​ನಲ್ಲಿ ಶೇ. 7.8ರಷ್ಟು ಬೆಳೆದರೆ, ಎರಡನೇ ಕ್ವಾರ್ಟರ್​ನಲ್ಲಿ ಬೆಳವಣಿಗೆ ಶೇ. 7.6ರಷ್ಟು ಇದೆ. ಎರಡನೇ ತ್ರೈಮಾಸಿಕದ ವೃದ್ಧಿದರ ನಿರೀಕ್ಷೆಗಿಂತ ಹೆಚ್ಚಾಗಿದೆ. ಕೊನೆಯ ಎರಡು ಕ್ವಾರ್ಟರ್​ನಲ್ಲಿ ಶೇ. 6.5ಕ್ಕಿಂತ ಕಡಿಮೆ ದರದಲ್ಲಿ ಆರ್ಥಿಕತೆ ಬೆಳೆಯಬಹುದು ಎಂದು ಬಹಳಷ್ಟು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಆರ್​ಬಿಐ ಕೂಡ 2023-24ರ ಹಣಕಾಸು ವರ್ಷದಲ್ಲಿ ಶೇ. 7ರಷ್ಟು ಬೆಳೆಯಬಹುದು ಎಂದು ಅಂದಾಜು ಮಾಡಿದೆ. ಈ ಹಿನ್ನೆಲೆಯಲ್ಲಿ ಎನ್​ಎಸ್​ಒ ನಿರೀಕ್ಷೆ ಹೆಚ್ಚಿನ ಮಟ್ಟದಲ್ಲೇ ಇದೆ.

ಇದನ್ನೂ ಓದಿ: Economy: ಭಾರತದ ಆರ್ಥಿಕ ಬೆಳವಣಿಗೆ ಈ ವರ್ಷವೂ ಇತರ ದೇಶಗಳಿಗಿಂತ ಮುಂದು: 2024ರಲ್ಲಿ ಶೇ. 6.2ರಷ್ಟು ಬೆಳೆಯುವ ಸಾಧ್ಯತೆ ವಿಶ್ವಸಂಸ್ಥೆ ಅಂದಾಜು

ಎಸ್ ಅಂಡ್ ಪಿ ಗ್ಲೋಬಲ್ ರೇಟಿಂಗ್ಸ್, ಗೋಲ್ಡ್ ಮ್ಯಾನ್ ಸ್ಯಾಕ್ಸ್ ಮೊದಲಾದ ಹಲವು ರೇಟಿಂಗ್ ಏಜೆನ್ಸಿಗಳು ಭಾರತದ ಆರ್ಥಿಕ ಬೆಳವಣಿಗೆ ಬಗ್ಗೆ ಹೆಚ್ಚಿನ ನಿರೀಕ್ಷೆ ಇರಿಸಿವೆ. ಸದ್ಯ ವಿಶ್ವದ ಪ್ರಮುಖ ಆರ್ಥಿಕತೆಗಳ ಪೈಕಿ ಭಾರತವೇ ಅತಿ ಹೆಚ್ಚು ವೇಗದಲ್ಲಿ ಬೆಳೆಯುತ್ತಿದೆ. ಇದು ಮುಂದಿನ ಕೆಲ ವರ್ಷಗಳಲ್ಲಿ ಈ ಸ್ಥಿತಿಯೇ ಮುಂದುವರಿಯಲಿದೆ ಎಂದು ಬಹುತೇಕ ಎಲ್ಲಾ ಸಂಸ್ಥೆಗಳೂ ಅಭಿಪ್ರಾಯಪಟ್ಟಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ