AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೂತ್ರ 72; ನಿಮ್ಮ ಹಣ ಡಬಲ್ ಅಗುವುದು ಯಾವಾಗ? ಎಷ್ಟು ಬಡ್ಡಿದರ ಅಗತ್ಯ? ಎಲ್ಲಕ್ಕೂ ಕೆಲಸ ಮಾಡುತ್ತೆ ಈ ಫಾರ್ಮುಲಾ

Formula 72: ಹಣ ಹೂಡಿಕೆ ಮಾಡಿದಾಗ ಅದು ನಿಗದಿತ ಅವಧಿಯಲ್ಲಿ ಎಷ್ಟು ಬೆಳೆಯುತ್ತದೆ ಎಂಬ ಕುತೂಹಲ ಎಲ್ಲರಿಗೂ ಇರುತ್ತದೆ. ಅದಕ್ಕೆ ಆನ್ಲೈನ್ ಕ್ಯಾಲ್ಕುಲೇಟರ್ಸ್ ಹಲವಿವೆ. ಹಣ ಯಾವಾಗ ಡಬಲ್ ಆಗಬಹುದು, ಅಥವಾ ಹಣ ಡಬಲ್ ಆಗಲು ಹೂಡಿಕೆಗೆ ಎಷ್ಟು ಬಡ್ಡಿಬೇಕು ಎಂಬಿತ್ಯಾದಿ ಲೆಕ್ಕಾಚಾರಕ್ಕೆ ಸೂತ್ರ 72 ಅನ್ನು ಬಳಸಬಹುದು.

ಸೂತ್ರ 72; ನಿಮ್ಮ ಹಣ ಡಬಲ್ ಅಗುವುದು ಯಾವಾಗ? ಎಷ್ಟು ಬಡ್ಡಿದರ ಅಗತ್ಯ? ಎಲ್ಲಕ್ಕೂ ಕೆಲಸ ಮಾಡುತ್ತೆ ಈ ಫಾರ್ಮುಲಾ
ಹೂಡಿಕೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 03, 2024 | 11:35 AM

ನಮ್ಮ ಉಳಿತಾಯ ಹಣವನ್ನು ಆರ್​ಡಿಗೋ, ಎಫ್​ಡಿಗೋ, ಷೇರಿಗೋ, ಮ್ಯೂಚುವಲ್ ಫಂಡಿಗೋ, ರಿಯಲ್ ಎಸ್ಟೇಟ್​ಗೋ, ಚಿನ್ನಕ್ಕೋ ಹಾಕಿರುತ್ತೇವೆ. ಷೇರು, ಮ್ಯುಚುವಲ್ ಫಂಡ್, ರಿಯಲ್ ಎಸ್ಟೇಟ್, ಚಿನ್ನ ಇವುಗಳಲ್ಲಿನ ಹೂಡಿಕೆಗೆ (investment) ಯಾವಾಗ ಎಷ್ಟು ರಿಟರ್ನ್ ಬರುತ್ತದೆ ಎಂಬುದು ಖಾತ್ರಿ ಇರುವುದಿಲ್ಲ. ಎಫ್​ಡಿ, ಆರ್​ಡಿ, ವಿವಿಧ ಸಣ್ಣ ಉಳಿತಾಯ ಯೋಜನೆ ಇತ್ಯಾದಿ ನಿಶ್ಚಿತ ರಿಟರ್ನ್ ತರುವ ಸಾಧನಗಳಲ್ಲಿ ಹಣ ಹೂಡಿಕೆ ಮಾಡಿದರೆ ನಮ್ಮ ರಿಟರ್ನ್​ಗಳ ಲೆಕ್ಕಾಚಾರ ಸುಲಭವಾಗಿ ಮಾಡಬಹುದು. ಆನ್ಲೈನ್​ನಲ್ಲಿ ಈ ರೀತಿ ಹೂಡಿಕೆಯ ರಿಟರ್ನ್ಸ್ ಅಂದಾಜು ಮಾಡುವ ಹಲವು ಕ್ಯಾಲ್ಕುಲೇಟರ್​ಗಳಿವೆ. ಈ ಮಧ್ಯೆ ಹೂಡಿಕೆ ಲೆಕ್ಕಾಚಾರದಲ್ಲಿ ಫಾರ್ಮುಲಾ 72 ಬಹಳ ಉಪಯೋಗಕ್ಕೆ ಬರುತ್ತದೆ. ನಿಮ್ಮ ಹೂಡಿಕೆ ಹಣ ಎಷ್ಟು ವರ್ಷಕ್ಕೆ ಡಬಲ್ ಆಗಬಹುದು ಎಂಬುದನ್ನು ಈ ಸರಳ ಸೂತ್ರದ ಮೂಲಕ ಕಂಡುಕೊಳ್ಳಬಹುದು.

ಏನಿದು ಫಾರ್ಮುಲಾ 72

ಒಂದು ನಿಶ್ಚಿತ ವಾರ್ಷಿಕ ಬಡ್ಡಿದರದಲ್ಲಿ ಹೂಡಿಕೆಯ ಹಣ ದ್ವಿಗುಣಗೊಳ್ಳಲು ಎಷ್ಟು ವರ್ಷ ಬೇಕಾಗಬಹುದು ಎಂಬುದನ್ನು ಈ ಫಾರ್ಮುಲಾ ಮೂಲಕ ಲೆಕ್ಕ ಹಾಕಬಹುದು.

ಪಿ = 72 / ಬಡ್ಡಿ

ಇದರಲ್ಲಿ ಪಿ ಎಂಬುದು ನಿಮ್ಮ ಡಬಲ್ ಆಗಬೇಕೆಂದಿರುವ ಸಮಯವನ್ನು ಪ್ರತಿನಿಧಿಸುತ್ತದೆ. ಬಡ್ಡಿಯು ನಿಮ್ಮ ಹೂಡಿಕೆಯಿಂದ ಸಿಗುವ ವಾರ್ಷಿಕ ಬಡ್ಡಿದರವಾಗಿದೆ.

ಇದನ್ನೂ ಓದಿ: Systematic Deposit Plan: ಎಫ್​ಡಿ ಅಲ್ಲ, ಎಸ್​ಐಪಿ ಅಲ್ಲ, ಇದು ಎಸ್​ಡಿಪಿ, ಸಿಸ್ಟಮ್ಯಾಟಿಕ್ ಡೆಪಾಸಿಟ್ ಪ್ಲಾನ್

ನೀವು ವಾರ್ಷಿಕವಾಗಿ ಶೇ. 9ರಷ್ಟು ಬಡ್ಡಿ ಒದಗಿಸುವ ಯಾವುದಾದರೂ ಹೂಡಿಕೆಯಲ್ಲಿ ಹಣ ತೊಡಗಿಸುತ್ತೀರಿ ಎಂದಿಟ್ಟುಕೊಳ್ಳಿ. ಆಗ ಈ ಫಾರ್ಮುಲಾವನ್ನು ಹೀಗೆ ಹಾಕಬಹುದು.

ಪಿ = 72 / 9 = 8

ಅಂದರೆ ಶೇ. 9ರ ವಾರ್ಷಿಕ ಬಡ್ಡಿದರದಲ್ಲಿ ಅಂದಾಜು ಎಂಟು ವರ್ಷಕ್ಕೆ ನಿಮ್ಮ ಹಣ ದ್ವಿಗುಣಗೊಳ್ಳುತ್ತದೆ. ಇದರಲ್ಲಿ ವಾರ್ಷಿಕ ಚಕ್ರಬಡ್ಡಿಯೂ ಒಳಗೊಳ್ಳುತ್ತದೆ. ಅಂದರೆ ಒಂದು ವರ್ಷದಲ್ಲಿ ನಿಮ್ಮ ಹೂಡಿಕೆಗೆ ಸೇರುವ ಬಡ್ಡಿಹಣವೂ ಅಸಲಿ ಹಣಕ್ಕೆ ಹೆಚ್ಚುವರಿಯಾಗಿ ಸೇರುತ್ತದೆ. ಅದಕ್ಕೂ ಬಡ್ಡಿ ಅನ್ವಯ ಆಗುತ್ತಾ ಹೋಗುತ್ತದೆ.

ಕೆಲವೊಂದು ಹೂಡಿಕೆಗಳಲ್ಲಿ ಮೂರು ತಿಂಗಳಿಗೊಮ್ಮೆ ಬಡ್ಡಿಹಣವು ಹೂಡಿಕೆ ಮೊತ್ತಕ್ಕೆ ಜಮೆ ಆಗುತ್ತಾ ಹೋಗುತ್ತದೆ. ಅಂಥ ಹೂಡಿಕೆಗಳು ಹೆಚ್ಚು ರಿಟರ್ನ್ ತರುತ್ತವೆ.

ಇದನ್ನೂ ಓದಿ: Gold: ಒಂದು ವರ್ಷದಲ್ಲಿ ಚಿನ್ನದ ಬೆಲೆ ಹೆಚ್ಚಾಗಿದ್ದು ಎಷ್ಟು? ಹೂಡಿಕೆ ಮಾಡಿದವರಿಗೆ ಎಷ್ಟು ಲಾಭ?

ಫಾರ್ಮುಲಾ 72 ಅನ್ನು ಬೇರೆ ರೀತಿಯೂ ಬಳಸಬಹುದು…

ಗಣಿತ ಸೂತ್ರಗಳನ್ನು ಅಗತ್ಯಕ್ಕೆ ತಕ್ಕಂತೆ ಮಾರ್ಪಡಿಸಿಕೊಳ್ಳಬಹುದು. ಅಂತೆಯೇ ಸೂತ್ರ 72 ಅನ್ನೂ ಕೂಡ ಬೇರೆ ಅವಶ್ಯಕತೆಗಳಿಗೂ ಮಾರ್ಪಡಿಸಬಹುದು. ಉದಾಹರಣೆಗೆ, ನಿಮ್ಮ ಹಣವನ್ನು 5 ವರ್ಷಕ್ಕೆ ಡಬಲ್ ಮಾಡಬೇಕೆಂದರೆ ಹೂಡಿಕೆಯು ಎಷ್ಟು ದರದಲ್ಲಿ ಬೆಳೆಯಬೇಕು ಎಂಬುದು ನಿಮ್ಮ ಪ್ರಶ್ನೆಯಾಗಿದ್ದರೆ ಸೂತ್ರ 72 ಅನ್ನು ಹೀಗೆ ಬದಲಿಸಬಹುದು:

ಪಿ = 72 / ಬಡ್ಡಿ

ಇಲ್ಲಿ ಪಿ ಎಂಬುದು ಹಣ ಡಬಲ್ ಆಗುವ ಅವಧಿ.

5 = 72 / ಬಡ್ಡಿ

ಬಡ್ಡಿ = 72/5 = 14.4

ಅಂದರೆ, 14.4% ಬಡ್ಡಿದರದಲ್ಲಿ ನಿಮ್ಮ ಹೂಡಿಕೆ ಬೆಳೆದರೆ 5 ವರ್ಷದಲ್ಲಿ ಅದು ದ್ವಿಗುಣಗೊಳ್ಳಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಇ-ಖಾತಾ ಬಗ್ಗೆ ಮಹತ್ವದ ಮಾಹಿತಿ ನೀಡಿದ ಡಿಕೆ ಶಿವಕುಮಾರ್
ಇ-ಖಾತಾ ಬಗ್ಗೆ ಮಹತ್ವದ ಮಾಹಿತಿ ನೀಡಿದ ಡಿಕೆ ಶಿವಕುಮಾರ್
ಬೆಂಗಳೂರಿನಲ್ಲಿ ಫುಟ್ ಪಾತ್ ಅಂಗಡಿ ತೆರವುಗೊಳಿಸಲು ನಿರ್ಧಾರ: ಡಿಕೆಶಿ
ಬೆಂಗಳೂರಿನಲ್ಲಿ ಫುಟ್ ಪಾತ್ ಅಂಗಡಿ ತೆರವುಗೊಳಿಸಲು ನಿರ್ಧಾರ: ಡಿಕೆಶಿ
​ ಕ್ರಿಪ್ಟೋ ಕರೆನ್ಸಿ ಹೆಸರಿನಲ್ಲಿ ಸಾವಿರಾರು ಜನರಿಗೆ ವಂಚನೆ
​ ಕ್ರಿಪ್ಟೋ ಕರೆನ್ಸಿ ಹೆಸರಿನಲ್ಲಿ ಸಾವಿರಾರು ಜನರಿಗೆ ವಂಚನೆ
ಝಾನ್ಸಿಯಲ್ಲಿ ಬಿರುಗಾಳಿಯ ಹೊಡೆತಕ್ಕೆ 70ಕ್ಕೂ ಹೆಚ್ಚು ಗಿಳಿಗಳು ಬಲಿ
ಝಾನ್ಸಿಯಲ್ಲಿ ಬಿರುಗಾಳಿಯ ಹೊಡೆತಕ್ಕೆ 70ಕ್ಕೂ ಹೆಚ್ಚು ಗಿಳಿಗಳು ಬಲಿ
ಹತ್ತು ಸಾವಿರ ಜನ ಕೂತು ವೀಕ್ಷಿಸಲು ಗ್ಯಾಲರಿಗಳ ವ್ಯವಸ್ಥೆ: ಶಿವಕುಮಾರ್
ಹತ್ತು ಸಾವಿರ ಜನ ಕೂತು ವೀಕ್ಷಿಸಲು ಗ್ಯಾಲರಿಗಳ ವ್ಯವಸ್ಥೆ: ಶಿವಕುಮಾರ್
ಎಲ್ಲ ಪಕ್ಷಗಳ ಮುಖ್ಯಮಂತ್ರಿಗಳನ್ನು ಭೇಟಿಯಾದ ಪ್ರಧಾನಿ ಮೋದಿ
ಎಲ್ಲ ಪಕ್ಷಗಳ ಮುಖ್ಯಮಂತ್ರಿಗಳನ್ನು ಭೇಟಿಯಾದ ಪ್ರಧಾನಿ ಮೋದಿ
ಬೆಂಗಳೂರಿನಲ್ಲಿ ಸುರಂಗ ಮಾರ್ಗದ ಬಗ್ಗೆ ಮಹತ್ವದ ಅಪ್ಡೇಟ್​ ನೀಡಿದ ಡಿಕೆಶಿ
ಬೆಂಗಳೂರಿನಲ್ಲಿ ಸುರಂಗ ಮಾರ್ಗದ ಬಗ್ಗೆ ಮಹತ್ವದ ಅಪ್ಡೇಟ್​ ನೀಡಿದ ಡಿಕೆಶಿ
ಬಸವಣ್ಣನವರನ್ನು ಟೀಕಿಸುವ ಬಸನಗೌಡ ಯತ್ನಾಳ್ ಒಬ್ಬ ಅರೆಹುಚ್ಚ: ರೇಣುಕಾಚಾರ್ಯ
ಬಸವಣ್ಣನವರನ್ನು ಟೀಕಿಸುವ ಬಸನಗೌಡ ಯತ್ನಾಳ್ ಒಬ್ಬ ಅರೆಹುಚ್ಚ: ರೇಣುಕಾಚಾರ್ಯ
ಖರ್ಗೆ ಹಠಾವ್ ಬಿಜೆಪಿ ಬಚಾವ್ ಅನ್ನೋದು ವಿಪಕ್ಷ ನಾಯಕರ ಅಜೆಂಡಾ ಆಗಿದೆ: ಖರ್ಗೆ
ಖರ್ಗೆ ಹಠಾವ್ ಬಿಜೆಪಿ ಬಚಾವ್ ಅನ್ನೋದು ವಿಪಕ್ಷ ನಾಯಕರ ಅಜೆಂಡಾ ಆಗಿದೆ: ಖರ್ಗೆ
ಖರ್ಗೆ ಕುಟುಂಬ ನನ್ನ ವಿರುದ್ಧ ನಡೆಸುತ್ತಿರುವ ಪಿತೂರಿ ಗೊತ್ತಿದೆ: ಚಲವಾದಿ
ಖರ್ಗೆ ಕುಟುಂಬ ನನ್ನ ವಿರುದ್ಧ ನಡೆಸುತ್ತಿರುವ ಪಿತೂರಿ ಗೊತ್ತಿದೆ: ಚಲವಾದಿ