Doctors: ವೈದ್ಯರಿಗೆ ಯೂನಿಕ್ ಐಡಿ ಕಡ್ಡಾಯ; ದೇಶದ ಎಲ್ಲಾ ವೈದ್ಯರ ಹೆಸರು ನ್ಯಾಷನಲ್ ಮೆಡಿಕಲ್ ರಿಜಿಸ್ಟರ್​ನಲ್ಲಿ

|

Updated on: May 15, 2023 | 11:40 AM

Unique ID Number For Medical Professionals: ವೈದ್ಯಕೀಯ ವೃತ್ತಿಯಲ್ಲಿರುವ ಪ್ರತಿಯೊಬ್ಬರಿಗೂ ವಿಶೇಷ ಗುರುತಿನ ಸಂಖ್ಯೆ ಕೊಡಲಾಗುತ್ತಿದೆ. ಇದು ಇಲ್ಲದೇ ಯಾರೂ ವೈದ್ಯಕೀಯ ವೃತ್ತಿ ಮಾಡುವಂತಿಲ್ಲ ಎಂದು ರಾಷ್ಟ್ರೀಯ ವೈದ್ಯಕೀಯ ಆಯೋಗ ಅಧಿಸೂಚನೆ ಹೊರಡಿಸಿದೆ.

Doctors: ವೈದ್ಯರಿಗೆ ಯೂನಿಕ್ ಐಡಿ ಕಡ್ಡಾಯ; ದೇಶದ ಎಲ್ಲಾ ವೈದ್ಯರ ಹೆಸರು ನ್ಯಾಷನಲ್ ಮೆಡಿಕಲ್ ರಿಜಿಸ್ಟರ್​ನಲ್ಲಿ
ವೈದ್ಯ
Follow us on

ನವದೆಹಲಿ: ಭಾರತದಲ್ಲಿ ವೈದ್ಯಕೀಯ ವೃತ್ತಿ ನಡೆಸುವ ಎಲ್ಲಾ ವೈದ್ಯರೂ ವಿಶೇಷ ಗುರುತಿನ ಸಂಖ್ಯೆ (UID- Unique Identification Number) ಹೊಂದಿರುವುದು ಕಡ್ಡಾಯ. ನ್ಯಾಷನಲ್ ಮೆಡಿಕಲ್ ಕಮಿಷನ್​ನ (NMC- National Medical Commission) ಎಥಿಕ್ಸ್ ಬೋರ್ಡ್ ಈ ಯೂನಿಕ್ ಐಡಿಯನ್ನು ಒದಗಿಸುತ್ತದೆ. ಭಾರತದಲ್ಲಿ ವೈದ್ಯಕೀಯ ಸೇವೆ ನೀಡಲು ವೈದ್ಯರಿಗೆ ಇದು ಅಗತ್ಯವಾಗಿದೆ. ರಾಷ್ಟ್ರೀಯ ವೈದ್ಯಕೀಯ ಆಯೋಗದ ಅಧಿಸೂಚನೆಯಲ್ಲಿ ಇದನ್ನು ಪ್ರಕಟಿಸಲಾಗಿದೆ. ದೇಶದಲ್ಲಿರುವ ಎಲ್ಲಾ ನೊಂದಾಯಿತ ವೈದ್ಯರ ರಾಷ್ಟ್ರೀಯ ವೈದ್ಯಕೀಯ ನೊಂದಣಿ (NMR- National Medical Register) ಇಡಲಾಗುತ್ತದೆ. ಎನ್​ಎಂಸಿಯ ಎಥಿಕ್ಸ್ ಮತ್ತು ಮೆಡಿಕಲ್ ರಿಜಿಸ್ಟ್ರೇಷನ್ ಬೋರ್ಡ್ ಈ ರಿಜಿಸ್ಟರ್ ಅನ್ನು ನಿರ್ವಹಿಸುತ್ತದೆ.

ರಾಜ್ಯ ವೈದ್ಯಕೀಯ ಮಂಡಳಿಗಳ ರಿಜಿಸ್ಟರ್​ಗಳಲ್ಲಿರುವ ಎಲ್ಲಾ ನೊಂದಾಯಿತ ವೈದ್ಯರನ್ನು ರಾಷ್ಟ್ರೀಯ ವೈದ್ಯಕೀಯ ರಿಜಿಸ್ಟರ್​ಗೆ ಸೇರಿಸಲಾಗುತ್ತದೆ. ಈ ರಿಜಿಸ್ಟರ್​ನಲ್ಲಿ ವೈದ್ಯರ ಸ್ಪೆಷಲ್ ಕ್ವಾಲಿಫಿಕೇಶನ್, ತೇರ್ಗಡೆ ವರ್ಷ, ಯೂನಿವರ್ಸಿಟಿ ಅಥವಾ ಶಿಕ್ಷಣ ಸಂಸ್ಥೆಯ ಹೆಸರು, ಕೆಲಸ ಮಾಡುವ ಸಂಸ್ಥೆ ಹೆಸರು ಇತ್ಯಾದಿ ವಿವರಗಳು ಇರುತ್ತವೆ. ಈ ಎಲ್ಲಾ ದತ್ತಾಂಶಗಳನ್ನು ಎನ್​ಎಂಸಿಯ ಅಧಿಕೃತ ವೆಬ್​ಸೈಟ್ www.nmc.org.in ಅನ್ನು ಯಾರು ಬೇಕಾದರೂ ವೀಕ್ಷಿಸಬಹುದು.

ಇದನ್ನೂ ಓದಿMultibagger: ಒಂದು ವರ್ಷದಲ್ಲಿ 16 ಪಟ್ಟು ಹೆಚ್ಚು ಲಾಭ; ಶೇ. 30 ಡಿವಿಡೆಂಡ್; ಸೌತ್ ಇಂಡಿಯನ್ ಬ್ಯಾಂಕ್​ನ ಷೇರಿಗೆ ಸಖತ್ ಬೇಡಿಕೆ

ಪ್ರತೀ 5 ವರ್ಷಕ್ಕೆ ವೈದ್ಯರು ಪರವಾನಿಗೆ ನವೀಕರಿಸಬೇಕು

ರಾಷ್ಟ್ರೀಯ ವೈದ್ಯಕೀಯ ಆಯೋಗದ ಅಧಿಸೂಚನೆ ಪ್ರಕಾರ ವೈದ್ಯಕೀಯ ವೃತ್ತಿಯಲ್ಲಿರುವವರು ಪ್ರತೀ 5 ವರ್ಷಕ್ಕೆ ಲೈಸೆನ್ಸ್ ನವೀಕರಿಸಬೇಕು ಎಂದು ಸೂಚಿಸಿದೆ. ಪರವಾನಿಗೆ ಅವಧಿ ಮುಗಿಯುವ ದಿನಕ್ಕೆ ಕನಿಷ್ಠ 3 ತಿಂಗಳು ಮುಂಚೆ ರಿನಿವಲ್​ಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಆದರೆ, ಪರವಾನಿಗೆ ನವೀಕರಣಕ್ಕೆ ಯಾವುದೇ ಶುಲ್ಕ ಇರುವುದಿಲ್ಲ ಎಂದು ತಿಳಿಸಲಾಗಿದೆ.

ಪರವಾನಿಗೆ ನವೀಕರಣಕ್ಕೆ ಅರ್ಜಿಯನ್ನು ರಾಜ್ಯ ವೈದ್ಯಕೀಯ ಮಂಡಳಿಗೆ ಸಲ್ಲಿಸಬೇಕಾಗುತ್ತದೆ. ಒಂದು ವೇಳೆ ರಾಜ್ಯ ಮಂಡಳಿಯು ಲೈಸೆನ್ಸ್ ನವೀಕರಣಕ್ಕೆ ನಿರಾಕರಿಸಿದರೆ ಆ ವೈದ್ಯರು ಎನ್​ಎಂಸಿಯ ಎಥಿಮ್ಸ್ ಅಂಡ್ ಮೆಡಿಕಲ್ ರೆಗ್ಯುಲೇಶನ್ ಬೋರ್ಡ್​ಗೆ ಮನವಿ ಮಾಡಬಹುದು. ಆದರೆ, ಇದು 30 ದಿನದೊಳಗೆ ಆಗಬೇಕು. ಅಂದರೆ ಲೈಸೆನ್ಸ್ ನವೀಕರಣ ಅರ್ಜಿ ತಿರಸ್ಕೃತವಾಗಿ 30 ದಿನದೊಳಗೆ ಮೇಲ್ಮನವಿ ಸಲ್ಲಿಸುವ ಅವಕಾಶ ಇರುತ್ತದೆ. ರಾಜ್ಯ ವೈದ್ಯಕೀಯ ಮಂಡಳಿಗೆ ಸಲ್ಲಿಸಿದ ಮೂಲ ಅರ್ಜಿಯನ್ನು ಸೇರಿಸಿ ಎನ್​ಎಂಸಿಯ ಕಾರ್ಯದರ್ಶಿಗೆ ವೈದ್ಯರು ಮೇಲ್ಮನವಿ ಹೋಗಬಹುದು. ಇದಕ್ಕೆ ಪ್ರೋಸಸಿಂಗ್ ಶುಲ್ಕ ಇರುತ್ತದೆ.

ಇದನ್ನೂ ಓದಿBill Gates: ನಾನು ಓದುವಾಗಲೇ ತಿಳಿಯಬೇಕಿತ್ತು: 5 ಸೂತ್ರ ಬಿಚ್ಚಿಟ್ಟ ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್

30 ದಿನದೊಳಗೆ ಈ ಮೇಲ್ಮನವಿ ಅರ್ಜಿಯ ಬಗ್ಗೆ ಅಂತಿಮ ತೀರ್ಮಾನ ಆಗುತ್ತದೆ. ಈ ತೀರ್ಮಾನವೇ ಅಂತಿಮ ಆಗಿರುತ್ತದೆ. ಲೈಸೆನ್ಸ್ ನವೀಕರಿಸಬೇಕೆಂದು ಇಲ್ಲಿ ತೀರ್ಮಾನವಾದಲ್ಲಿ ರಾಜ್ಯ ವೈದ್ಯಕೀಯ ಮಂಡಳಿ ಅದನ್ನು ತಪ್ಪದೇ ಪಾಲಿಸಬೇಕು. ಒಂದು ವೇಳೆ, ಈ ಮೊದಲ ಮನವಿ ಅರ್ಜಿ ತಿರಸ್ಕೃತವಾದಲ್ಲಿ ಎರಡನೇ ಬಾರಿ ಮೇಲ್ಮನವಿ ಸಲ್ಲಿಸುವ ಅವಕಾಶವೂ ಇರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ