ರಸಗೊಬ್ಬರ ದುರ್ಬಳಕೆ ತಡೆಯಲು ಮಹತ್ತರ ಕ್ರಮ; 100 ಕೋಟಿ ರೂಪಾಯಿಗೂ ಹೆಚ್ಚು ಸೋರಿಕೆ ತಡೆದ ಕೇಂದ್ರ ಸರ್ಕಾರ

| Updated By: Srinivas Mata

Updated on: Jul 12, 2022 | 9:18 PM

ಕೇಂದ್ರ ಸರ್ಕಾರದಿಂದ ಸಬ್ಸಿಡೈಸ್ಡ್ ರಸಗೊಬ್ಬರವನ್ನು ಬಹಳ ಕಡಿಮೆ ಬೆಲೆಗೆ ದೊರೆಯುವಂತೆ ಮಾಡಲಾಗುತ್ತಿದೆ. ಅದರ ದುರ್ಬಳಕೆ ತಡೆಯುವ ನಿಟ್ಟಿನಲ್ಲಿ ಸರ್ಕಾರ ಕೈಗೊಂಡ ಕ್ರಮಗಳನ್ನು ತಿಳಿಸಲಾಗಿದೆ.

ರಸಗೊಬ್ಬರ ದುರ್ಬಳಕೆ ತಡೆಯಲು ಮಹತ್ತರ ಕ್ರಮ; 100 ಕೋಟಿ ರೂಪಾಯಿಗೂ ಹೆಚ್ಚು ಸೋರಿಕೆ ತಡೆದ ಕೇಂದ್ರ ಸರ್ಕಾರ
ಸಾಂದರ್ಭಿಕ ಚಿತ್ರ
Follow us on

ಡಿಒಎಫ್​ ಘಟಕದಿಂದ ದೇಶದಾದ್ಯಂತ ನಡೆದ ದಾಳಿ ಬಗ್ಗೆ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಲಾಗಿದೆ. ಕೇಂದ್ರ ಸರ್ಕಾರದಿಂದ (Central Government) ಸಬ್ಸಿಡೈಸ್ಡ್ ರಸಗೊಬ್ಬರವನ್ನು ಬಹಳ ಕಡಿಮೆ ಬೆಲೆಗೆ ದೊರೆಯುವಂತೆ ಮಾಡಲಾಗುತ್ತಿದೆ. 45 ಕೇಜಿಯ ಯೂರಿಯಾ ಬ್ಯಾಗ್​ ರೈತರಿಗೆ 266 ರೂಪಾಯಿಗೆ ದೊರೆಯುತ್ತದೆ, ಅದಕ್ಕೆ ಭಾರತ ಸರ್ಕಾರವು 3000 ರೂಪಾಯಿ ವೆಚ್ಚ ಮಾಡುತ್ತದೆ. ಪ್ಲೈವುಡ್, ಮೌಲ್ಡಿಂಗ್ ಪುಡಿ, ರಾಸುವಿನ ಆಹಾರ, ಡೇರಿ, ಕೈಗಾರಿಕೆ ಗಣಿಗಾರಿಕೆ ಸ್ಫೋಟಕ ಮತ್ತಿತರ ಕೈಗಾರಿಕೆಗಳಲ್ಲಿ ಯೂರಿಯಾ ಬಳಸಲಾಗುತ್ತದೆ. ವಿವಿಧ ಖಾಸಗಿ ಸಂಸ್ಥೆಗಳು ಕಳಪೆ ಗುಣಮಟ್ಟದ ಸಬ್ಸಿಡೈಸ್ಡ್ ರಸಗೊಬ್ಬರ ಪೂರೈಕೆ ಮಾಡುತ್ತಿದ್ದಾರೆ, ಕಾಳದಂಧೆ ನಡೆಸುತ್ತಿದ್ದಾರೆ ಎಂಬಿತ್ಯಾದಿ ದೂರುಗಳು ಸರ್ಕಾರಕ್ಕೆ ಬಂದಿದ್ದವು. ಐಜಿಯು ಪೂರೈಕೆದಾರರು ಜಿಎಸ್​ಟಿ ತಪ್ಪಿಸಿರುವ ಮೊತ್ತ 63.48 ಕೋಟಿ ರೂಪಾಯಿಯನ್ನು ಡಿಒಎಫ್​ ಗುರುತಿಸಿದ್ದು, ಆ ಮಾಹಿತಿಯನ್ನು ಜಿಎಸ್​ಟಿ ಇಲಾಖೆ ಜತೆಗೆ ಹಂಚಿಕೊಂಡಿದ್ದು, ಈ ತನಕ 5.14 ಕೋಟಿ ರೂಪಾಯಿ ವಶಪಡಿಸಿಕೊಳ್ಳಲಾಗಿದೆ.

ಲೆಕ್ಕಕ್ಕೆ ಸಿಗದ ಕೃಷಿ ಗುಣಮಟ್ಟದ ದಾಸ್ತಾನು 7.5 ಕೋಟಿ ರೂಪಾಯಿ ಮೌಲ್ಯದ 25 ಸಾವಿರ ಚೀಲದಷ್ಟು ವಶಪಡಿಸಿಕೊಳ್ಳಲಾಗಿದ್ದು, 6 ಮಂದಿಯನ್ನು ಸಿಜಿಎಸ್​ಟಿ ಕಾಯ್ದೆ 2017ರ ಅಡಿಯಲ್ಲಿ ಬಂಧಿಸಲಾಗಿದೆ ಮತ್ತು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದ್ದು, ಫಾಲೋ-ಅಪ್ ವಿಚಾರಣೆ ಪ್ರಕ್ರಿಯೆ ನಡೆಯುತ್ತಿದೆ. ಐಎಫ್​ಎಂಎಸ್​ ದಾಖಲೆಯಂತೆ ಏಪ್ರಿಲ್ 30, 2022ರಂತೆ, ಎಂಟು ರಾಜ್ಯಗಳ ವ್ಯಾಪ್ತಿಯ ಉತ್ಪಾದನಾ ಘಟಕಗಳಲ್ಲಿ 38 ಮಿಕ್ಸ್​ಚರ್ಸ್ ಪರಿಶೀಲಿಸಲಾಗಿದೆ. ಮಾದರಿಯನ್ನು ಪರಿಶೀಲಿಸಿ, ಗುಣಮಟ್ಟ ವಿಶ್ಲೇಷಣೆ ಮಾಡಿದಾಗ ಶೇ 70ರಷ್ಟು ಕಳಪು ಗುಣಮಟ್ಟದ್ದು ಎಂದು ಗೊತ್ತಾಗಿದೆ. 25 ಘಟಕ್ಳ ಉತ್ಪಾದನಾ ಪರವಾನಗಿಯನ್ನು ರದ್ದುಗೊಳಿಸಲಾಗಿದೆ. iFMSನಿಂದ ಸಬ್ಸಿಡೈಸ್ಡ್ ರಸಗೊಬ್ಬರ ಖರೀದಿಸುವುದರಿಂದ ಮಾನ್ಯತೆ ರದ್ದು ಮಾಡಲಾಗಿದೆ.

ಮೇ 20, 2022ರಂದು ದೇಶದಾದ್ಯಂತ ಮುರಿದುಕೊಂಡು ಬೀಳಲಾಯಿತು. ಆರು ರಾಜ್ಯಗಳಲ್ಲಿ 52 ಘಟಕಗಳಲ್ಲಿ ರಸಗೊಬ್ಬರವನ್ನು ಬೇರೆಡೆ ಸಾಗಿಸಿದ್ದು ಪತ್ತೆ ಹಚ್ಚಲಾಯಿತು. 7400 ಬ್ಯಾಗ್​ಗಳ ಅನಧಿಕೃತ ಯೂರಿಯಾ ಬ್ಯಾಗ್​ಗಳು, 2.22 ಕೋಟಿ ರೂಪಾಯಿ ಮೌಲ್ಯದ್ದು ವಶಕ್ಕೆ ಪಡೆಯಲಾಯಿತು. 59 ಶಂಕಿತ ಯೂರಿಯಾ ಮಾದರಿಗಳನ್ನು ಪಡೆದಿದ್ದು, ಆ ಪೈಕಿ 22ರಲ್ಲಿ ಬೇವಿನ ಎಣ್ಣೆ ಈ ತನಕ ಪತ್ತೆ ಆಗಿದೆ. ಕಾನೂನು ಬಾಹಿರ ಚಟುವಟಿಕೆಯಲ್ಲಿ ಪಾಲ್ಗೊಂಡ ಘಟಕಗಳ ವಿರುದ್ಧ ಏಳು ಎಫ್​ಐಆರ್​/ದೂರುಗಳನ್ನು ನೋಂದಾಯಿಸಲಾಗಿದೆ.

ಜುಲೈ 9ರಂದು ಡಿಒಎಫ್​ ಗುಜರಾತ್​ನ 23 ಮಿಕ್ಸ್​ಚರ್ಸ್ ಉತ್ಪಾದನಾ ಘಟಕದ ಮೇಲೆ ದಾಳಿ ನಡೆಸಿತು. 9 ಘಟಕಗಳ 15 ಮಾದರಿಯನ್ನು ಗುಣಮಟ್ಟದ ವಿಶ್ಲೇಷಣೆಗೆ ಕಳಿಸಿದ್ದು, ವರದಿ ಬಂದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ಮಾರಾಟ ನಿಲ್ಲಿಸುವ ನೋಟಿಸ್​ ಅನ್ನು ಎರಡು ಘಟಕಗಳಿಗೆ ನೀಡಿ, ರಸಗೊಬ್ಬರವನ್ನು ವಶಪಡಿಸಿಕೊಳ್ಳಲಾಗಿದೆ. ಕಳೆದ ಕೆಲವು ತಿಂಗಳಲ್ಲಿ ಕೈಗೊಂಡ ರಹಸ್ಯ ಕಾರ್ಯಾಚರಣೆ ವೇಳೆ 100 ಕೋಟಿ ರುಪಾಯಿಗೂ ಅಧಿಕ ಮೊತ್ತದ ಸೋರಿಕೆಯನ್ನು ಗುರುತಿಸಲಾಗಿದೆ. ತನಿಖೆ ಇನ್ನೂ ಮುಂದುವರಿದಿದ್ದು, ಈ ಅಂಕಿ-ಅಂಶ ಮತ್ತಷ್ಟು ಹೆಚ್ಚಳ ಆಗುವ ಸಾಧ್ಯತೆ ಇದೆ.

ಡಿಒಎಫ್​ ವಿಶೇಷ ತಂಡ ರಚಿಸಿದ್ದು, ಅದಕ್ಕಾಗಿಯೇ ಅಧಿಕಾರಿಗಳಿದ್ದಾರೆ. ಫರ್ಟಿಲೈಸರ್ ಫ್ಲೈಯಿಂಗ್ ಸ್ಕ್ವಾಡ್ ಮಾಡಿಕೊಂಡು ನಿಯಮಿತವಾಗಿ ದಾಳಿ ನಡೆಸಿ, ಸೂಕ್ತ ಕ್ರಮ ಕೈಗೊಳ್ಳುತ್ತಾರೆ.

Published On - 9:18 pm, Tue, 12 July 22