
ನವದೆಹಲಿ, ಅಕ್ಟೋಬರ್ 28: ಭಾರತ ಮೊಬೈಲ್ ಪಿಎಲ್ಐ ಸ್ಕೀಮ್ (Mobile PLI scheme) ಮೂಲಕ ಚೀನಾದ ಮ್ಯಾನುಫ್ಯಾಕ್ಚರಿಂಗ್ ಮಾಡಲ್ ಅನ್ನು ನಕಲು ಮಾಡುತ್ತಿದೆ. ಇದರಿಂದ ಭಾರತಕ್ಕೆ ನಷ್ಟವೇ ಹೊರತು ಯಾವ ಉಪಯೋಗ ಇಲ್ಲ ಎನ್ನುವ ಟೀಕೆಗಳಿಗೆ ಕೇಂದ್ರ ಐಟಿ, ಎಲೆಕ್ಟ್ರಾನಿಕ್ಸ್ ಮತ್ತು ರೈಲ್ವೆ ಸಚಿವ ಡಾ. ಅಶ್ವಿನಿ ವೈಷ್ಣವ್ ಅವರು ಅಂಕಿ ಅಂಶಗಳ ಸಹಿತ ತಿರುಗೇಟು ನೀಡಿದ್ದಾರೆ. ಸರ್ಕಾರ 19,000 ಕೋಟಿ ರೂ ಸಬ್ಸಿಡಿಗೆ ಬದಲಾಗಿ ಹೇಗೆ 3.25 ಲಕ್ಷ ಕೋಟಿ ರೂ ಆದಾಯ ಪಡೆಯುತ್ತಿದೆ ಎಂದು ವಿವರಿಸಿದ್ದಾರೆ.
ಭಾರತ ಮೊಬೈಲ್ ಮ್ಯಾನುಫ್ಯಾಕ್ಚರಿಂಗ್ನಲ್ಲಿ ಚೀನಾವನ್ನು ನಕಲು ಮಾಡಬಾರದು. ಮೊಬೈಲ್ ಮ್ಯಾನುಫ್ಯಾಕ್ಚರಿಂಗ್ನಿಂದ ಭಾರತಕ್ಕೆ ಯಾಕೆ ಉಪಯೋಗವಿಲ್ಲ ಎಂದು ಮಾಧ್ಯಮವೊಂದು ವಿವರಿಸಿತ್ತು. ಅದಕ್ಕೆ ಅಶ್ವಿನಿ ವೈಷ್ಣವ್ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ: ವ್ಯಾಪಾರ ಒಪ್ಪಂದಗಳು ಭಾರತಕ್ಕೆ ವಿಶ್ವದ ಶೇ. 76 ಮಾರುಕಟ್ಟೆ ಬಾಗಿಲು ತೆರೆಯುತ್ತವೆ: ಪೀಯುಷ್ ಗೋಯಲ್
ಪ್ರತೀ ನಾಲ್ಕು ಐಫೋನ್ಗಳಲ್ಲಿ ಒಂದು ಭಾರತದಲ್ಲಿ ತಯಾರಿಕೆಯಾಗುತ್ತದೆ. ಆದರೆ, ದುಬಾರಿ ಸಬ್ಸಿಡಿ, ಆಮದಿತ ಬಿಡಿಭಾಗಗಳು ಭಾರತದ ಐಫೋನ್ ಮ್ಯಾನುಫ್ಯಾಕ್ಚರಿಂಗ್ ಯಶಸ್ಸನ್ನು ಮಸುಕುಗೊಳಿಸುತ್ತವೆ. ಭಾರತ ಸೆಮಿಕಂಡಕ್ಟರ್ನಲ್ಲಿ ಹೈಎಂಡ್ ಫ್ಯಾಬ್ರಿಕೇಶನ್ ಹಂತಕ್ಕೆ ಹೋಗಲು ವರ್ಷಗಳೇ ಬೇಕು. ಹೀಗಾಗಿ, ಭಾರತವು ತಾನು ಸಮರ್ಥ ಎನಿಸಿರುವ ಎಂಜಿನಿಯರಿಂಗ್, ಡಿಸೈನ್ ಕಡೆ ಗಮನ ಹರಿಸಬೇಕು. ಕೋಟ್ಯಂತರ ಜನರಿಗೆ ಉದ್ಯೋಗ ನೀಡಬಲ್ಲ ಪಾದರಕ್ಷೆ, ಜವಳಿ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಬೇಕು ಎಂದು ಆ ಮಾಧ್ಯಮ ವರದಿಯಲ್ಲಿ ಹೇಳಲಾಗಿತ್ತು.
ಭಾರತಕ್ಕೆ ಫೋನ್ ಮ್ಯಾನುಫ್ಯಾಕ್ಚರಿಂಗ್ ಯೋಜನೆ ಅಪ್ರಯೋಜಕ ಎನ್ನುವ ವಾದವನ್ನು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಬಲವಾಗಿ ತಳ್ಳಿಹಾಕಿದ್ದಾರೆ. ಮೊಬೈಲ್ ಮ್ಯಾನುಫ್ಯಾಕ್ಚರಿಂಗ್ಗೆ ಉತ್ತೇಜನ ನೀಡುವ ಪಿಎಲ್ಐ ಸ್ಕೀಮ್ನಲ್ಲಿ ತಯಾರಕರಿಗೆ ಸರ್ಕಾರದಿಂದ 19,000 ಕೋಟಿ ರೂ ಇನ್ಸೆಂಟಿವ್ ನೀಡಲಾಗಿದೆ.
ಇದನ್ನೂ ಓದಿ: ಕೇವಲ 16 ತಿಂಗಳಲ್ಲಿ 23 ಪಟ್ಟು ಜಿಗಿದ ಷೇರುಬೆಲೆ: 92 ಲಕ್ಷ ರೂ ಆದಾಯಕ್ಕೆ 95 ಲಕ್ಷ ರೂ ತೆರಿಗೆ ಹಾಗೂ ದಂಡ
ಇದಕ್ಕೆ ಪ್ರತಿಯಾಗಿ, ನೇರ ತೆರಿಗೆ ರೂಪದಲ್ಲಿ ಸರ್ಕಾರಕ್ಕೆ 25,000 ಕೋಟಿ ರೂ, ಜಿಎಸ್ಟಿ 3 ಲಕ್ಷ ರೂ ಸೇರಿ ಒಟ್ಟು 3.25 ಲಕ್ಷ ಕೋಟಿ ರೂ ಆದಾಯ ಸಿಕ್ಕಿದೆ ಎಂದು ಸಚಿವರು ವಿವರಿಸಿದ್ದಾರೆ.
ಅಶ್ವಿನಿ ವೈಷ್ಣವ್ ಅವರ ಎಕ್ಸ್ ಪೋಸ್ಟ್
ಅಷ್ಟೇ ಅಲ್ಲ, ಎಲೆಕ್ಟ್ರಾನಿಕ್ಸ್ ಮ್ಯಾನುಫ್ಯಾಕ್ಚರಿಂಗ್ ಉದ್ಯಮವು 25 ಲಕ್ಷ ಮಂದಿಗೆ ಕೆಲಸ ಕೊಟ್ಟಿದೆ. ಇದರಲ್ಲಿ ಮೊಬೈಲ್ ಮ್ಯಾನುಫ್ಯಾಕ್ಚರಿಂಗ್ವೊಂದರಲ್ಲೇ 12 ಲಕ್ಷ ಮಂದಿ ಕೆಲಸ ಮಾಡುತ್ತಿದ್ದಾರೆ ಎಂದು ಐಟಿ ಮತ್ತು ಎಲೆಕ್ಟ್ರಾನಿಕ್ಸ್ ಸಚಿವರು ಹೇಳಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ