AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇವಲ 16 ತಿಂಗಳಲ್ಲಿ 23 ಪಟ್ಟು ಜಿಗಿದ ಷೇರುಬೆಲೆ: 92 ಲಕ್ಷ ರೂ ಆದಾಯಕ್ಕೆ 95 ಲಕ್ಷ ರೂ ತೆರಿಗೆ ಹಾಗೂ ದಂಡ

ಮುಂಬೈನ ಹೂಡಿಕೆದಾರರೊಬ್ಬರು ಷೇರು ಮಾರುಕಟ್ಟೆಯಲ್ಲಿ ಗಳಿಸಿದ ಬೃಹತ್ ಲಾಭವನ್ನು ದೀರ್ಘಕಾಲೀನ ಬಂಡವಾಳ ಲಾಭ (LTCG) ಎಂದು ಘೋಷಿಸಿದ್ದರೂ, ಆದಾಯ ತೆರಿಗೆ ಇಲಾಖೆ ಅದನ್ನು ತಿರಸ್ಕರಿಸಿದೆ. ನಕಲಿ ಷೇರು ವಹಿವಾಟು ಮತ್ತು ಷೇರು ಬೆಲೆ ಕೃತಕ ಏರಿಕೆ (Stock manipulation) ಮಾಡಲಾಗಿದೆ ಎಂಬುದು ಇಲಾಖೆ ಆರೋಪ. ಈ ಪ್ರಕರಣವೇನು, ಷೇರುಬೆಲೆ ತಿರುಚುವ ಜಾಲ ಹೇಗೆ ಕೆಲಸ ಮಾಡುತ್ತದೆ ಎನ್ನುವ ವಿವರ ಇಲ್ಲಿದೆ.

ಕೇವಲ 16 ತಿಂಗಳಲ್ಲಿ 23 ಪಟ್ಟು ಜಿಗಿದ ಷೇರುಬೆಲೆ: 92 ಲಕ್ಷ ರೂ ಆದಾಯಕ್ಕೆ 95 ಲಕ್ಷ ರೂ ತೆರಿಗೆ ಹಾಗೂ ದಂಡ
ಷೇರು ಮಾರುಕಟ್ಟೆImage Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 27, 2026 | 12:45 PM

Share

ಮುಂಬೈ, ಅಕ್ಟೋಬರ್ 27: ಷೇರು ಮಾರುಕಟ್ಟೆಯಲ್ಲಿ ಸಣ್ಣ ಹೂಡಿಕೆಯ ಮೂಲಕ ದೊಡ್ಡ ಲಾಭ ಗಳಿಸುವುದು ಎಲ್ಲರ ಕನಸಾಗಿರುತ್ತದೆ. ಆದರೆ, ಕೆಲವೊಮ್ಮೆ ಅತಿಹೆಚ್ಚು ಮತ್ತು ಅಸಹಜ ಲಾಭವು ಹೂಡಿಕೆದಾರರನ್ನು ಆದಾಯ ತೆರಿಗೆ ಇಲಾಖೆಯ (Income Tax Department) ಕಾನೂನು ತೊಡಕುಗಳಿಗೆ ಸಿಲುಕಿಸುತ್ತದೆ. ಮುಂಬೈನ ಹೂಡಿಕೆದಾರರೊಬ್ಬರ ವಿಚಾರದಲ್ಲಿ ಇಂತಹದ್ದೇ ಒಂದು ಘಟನೆ ನಡೆದಿದ್ದು, ಗಳಿಸಿದ ಲಾಭಕ್ಕಿಂತ ಹೆಚ್ಚಿನ ಮೊತ್ತವನ್ನು ತೆರಿಗೆ ಮತ್ತು ದಂಡದ ರೂಪದಲ್ಲಿ ಪಾವತಿಸಬೇಕಾಗಿ ಬಂದಿದೆ.

ಮುಂಬೈನ ಹೂಡಿಕೆದಾರರಾದ ಸಂಧ್ಯಾ ರಾಕೇಶ್ ಶರ್ಮಾ ಅವರು ‘ಸಂತೋಷಿಮಾ ಟ್ರೇಡ್‌ಲಿಂಕ್ಸ್’ (ನಂತರ ‘ಸರೈಸ್ ಏಷ್ಯನ್ ಲಿಮಿಟೆಡ್’ ಎಂದು ಬದಲಾವಣೆ) ಕಂಪನಿಯ 21,000 ಷೇರುಗಳನ್ನು ಆಫ್-ಮಾರ್ಕೆಟ್ ವಹಿವಾಟು ಮೂಲಕ ಒಟ್ಟು ₹4.41 ಲಕ್ಷ ನೀಡಿ (ಪ್ರತಿ ಷೇರಿಗೆ ₹21 ರಂತೆ) 2012ರ ನವೆಂಬರ್‌ನಲ್ಲಿ ಖರೀದಿಸಿದ್ದರು. ಸುಮಾರು 16 ತಿಂಗಳ ನಂತರ, ಅಂದರೆ 2013ರ ನವೆಂಬರ್ ಮತ್ತು 2014ರ ಮಾರ್ಚ್ ನಡುವೆ ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ (BSE) ಈ ಷೇರುಗಳ ದೊಡ್ಡ ಭಾಗವನ್ನು ಮಾರಾಟ ಮಾಡಿ ಒಟ್ಟು ₹92,03,421 (₹92 ಲಕ್ಷಕ್ಕೂ ಅಧಿಕ) ಹಣ ಪಡೆದಿದ್ದರು.

ತೆರಿಗೆ ವಿನಾಯಿತಿ ಕೋರಿಕೆ ತಿರಸ್ಕಾರ

ಹೂಡಿಕೆದಾರರು ಈ ಬೃಹತ್ ಮೊತ್ತವನ್ನು ದೀರ್ಘಕಾಲೀನ ಬಂಡವಾಳ ಲಾಭ (Long-Term Capital Gain – LTCG) ಎಂದು ಘೋಷಿಸಿ ತೆರಿಗೆ ವಿನಾಯಿತಿ ಕೋರಿದ್ದರು. ಆದರೆ, ಆದಾಯ ತೆರಿಗೆ ಇಲಾಖೆಯು ಇದನ್ನು ಒಪ್ಪಲಿಲ್ಲ. ಹೂಡಿಕೆದಾರರಿಗೆ ಈ ಅಲ್ಪಾವಧಿಯಲ್ಲಿ ಇಷ್ಟು ದೊಡ್ಡ ಲಾಭ ಸಿಕ್ಕಿದ್ದರ ಬಗ್ಗೆ ಅಧಿಕಾರಿಗಳಿಗೆ ಅನುಮಾನ ಬಂದಿತು. ಹೂಡಿಕೆ ಮಾಡಲಾದ ಕಂಪನಿ ಯಾವುದೇ ಬಲವಾದ ಆರ್ಥಿಕ ಹಿನ್ನೆಲೆ ಅಥವಾ ವ್ಯವಹಾರಿಕ ಬೆಳವಣಿಗೆಯಿಲ್ಲದೆ ಕೇವಲ 16 ತಿಂಗಳಲ್ಲಿ ಷೇರು ಬೆಲೆ 23 ಪಟ್ಟು (ಅಂದರೆ ₹50 ರಿಂದ ₹615 ಕ್ಕೆ) ಅಸಹಜವಾಗಿ ಏರಿಕೆಯಾಗಿದ್ದು ಈ ಅನುಮಾನಕ್ಕೆ ಕಾರಣ. ಈ ಕಂಪನಿಯ ‘ಷೇರು ಬೆಲೆಯನ್ನು ಕೃತಕವಾಗಿ ಉಬ್ಬರಿಸಲಾಗಿದೆ’ (Stock Price Manipulation) ಮತ್ತು ನಕಲಿ ವಹಿವಾಟಿನಿಂದ ಕೂಡಿದೆ ಎಂದು ಇಲಾಖೆ ಶಂಕಿಸಿತು. ಸೆಬಿ (SEBI) ತನಿಖೆಯಲ್ಲೂ ಈ ಕಂಪನಿಯು ಅಕ್ರಮ ವಹಿವಾಟಿನಲ್ಲಿ ತೊಡಗಿರುವುದು ಸಾಬೀತಾಗಿ ದಂಡ ವಿಧಿಸಲಾಗಿತ್ತು.

ಇದನ್ನೂ ಓದಿ: ಷೇರುಗಳ ಮೇಲಿನ ಎಲ್​ಟಿಸಿಜಿ ತೆರಿಗೆ ದರ ಪರಿಷ್ಕರಣೆಗೆ ಕೇಂದ್ರ ಆಲೋಚನೆ; ಬಜೆಟ್​ನೊಳಗೆ ನಿರ್ಧಾರ ಸಾಧ್ಯತೆ

ತೆರಿಗೆ ಇಲಾಖೆ ಮತ್ತು ನ್ಯಾಯಮಂಡಳಿ (ITAT) ಕ್ರಮ

ಮುಂಬೈನ ಆದಾಯ ತೆರಿಗೆ ಅಪೆಲ್ಟೆ Tribunal (ITAT) ಕೂಡ ಹೂಡಿಕೆದಾರರ ಅರ್ಜಿಯನ್ನು ತಿರಸ್ಕರಿಸಿದೆ. ಮಾರಾಟದಿಂದ ಬಂದ ಸಂಪೂರ್ಣ ₹92 ಲಕ್ಷಕ್ಕೂ ಅಧಿಕ ಹಣವನ್ನು ‘ವಿವರಿಸದ ನಗದು ಜಮಾ’ (Unexplained Cash Credit) ಎಂದು ಪರಿಗಣಿಸಲಾಗಿದೆ. ಇದರೊಂದಿಗೆ ಕಮಿಷನ್ ವೆಚ್ಚ ಮತ್ತು ಇತರ ತೆರಿಗೆಗಳನ್ನು ಸೇರಿಸಿ ಒಟ್ಟು ₹94,79,580 (ಸುಮಾರು ₹95 ಲಕ್ಷ) ತೆರಿಗೆ ಹಾಗೂ ದಂಡವನ್ನು ಪಾವತಿಸುವಂತೆ ಆದೇಶಿಸಲಾಗಿದೆ.

ಷೇರುಬೆಲೆ ಕೃತಕವಾಗಿ ಉಬ್ಬಿಸಿದ್ದು ಹೇಗೆ? ತನಿಖಾಧಿಕಾರಿಗಳು ಹೇಳಿದ್ದಿದು…

ಕೃತಕವಾಗಿ ಷೇರು ಬೆಲೆ ಉಬ್ಬಿಸುವ ಹಲವು ಆಪರೇಟರ್ಸ್, ಎಂಟ್ರಿ ಪ್ರೊವೈಡರ್​ಗಳು ಇರುತ್ತಾರೆ. ಬಹಳ ಕಡಿಮೆ ಬೆಲೆಯಲ್ಲಿರುವ ಪೆನ್ನಿ ಸ್ಟಾಕ್​ಗಳನ್ನು ಇವರು ಟಾರ್ಗೆಟ್ ಮಾಡುತ್ತಾರೆ. ಅಕ್ರಮ ಕ್ಯಾಷ್ ಹೊಂದಿರುವ ಜನರು ಈ ಆಪರೇಟರ್ನ್ಸ್​ಗೆ ಕ್ಯಾಷ್ ನೀಡುತ್ತಾರೆ. ಆ ಹಣವನ್ನು ವಿವಿಧ ಶೆಲ್ ಕಂಪನಿಗಳ ಜಾಲದ ಮೂಲಕ ವರ್ಗಾವಣೆ ಮಾಡಲಾಗುತ್ತದೆ. ಮೊದಲೇ ರೂಪಿಸಲಾದ ಸರ್ಕ್ಯುಲರ್ ಟ್ರೇಡಿಂಗ್ ಮತ್ತು ಪ್ರೈಸ್ ರಿಗ್ಗಿಂಗ್ ತಂತ್ರಗಳನ್ನು ಬಳಸಿ, ಷೇರುಗಳನ್ನು ಹೆಚ್ಚಿನ ಬೆಲೆಗೆ ವಹಿವಾಟು ಮಾಡಲಾಗುತ್ತದೆ.

ಇದನ್ನೂ ಓದಿ: ಜಿಯೋ ಐಪಿಒಗೆ ನಿರೀಕ್ಷೆಮೀರಿದ ಸ್ಪಂದನೆ; ವಿಶ್ವದಾಖಲೆಗಳು, ಮೈಲಿಗಲ್ಲುಗಳು

ಈಗ ಹೂಡಿಕೆದಾರರಿಗೆ ಬಹಳ ದೊಡ್ಡ ಮೊತ್ತದ ಲಾಭ ಸಿಗುತ್ತದೆ. ಎಲ್​ಟಿಸಿಜಿ ಹೆಸರಿನಲ್ಲಿ ಆ ಲಾಭದ ಹಣವನ್ನು ಐಟಿ ಕಾಯ್ದೆ ಸೆಕ್ಷನ್ 10(38) ಅಡಿಯಲ್ಲಿ ತೆರಿಗೆ ವಿನಾಯಿತಿ ಕೋರಲಾಗುತ್ತದೆ. ವಾಸ್ತವವಾಗಿ, ಇದು ಹೂಡಿಕೆದಾರರ ಅಕ್ರಮ ಕ್ಯಾಷ್ ಹಣವು ಕ್ಯಾಪಿಟಲ್ ಗೇನ್ ರೂಪದಲ್ಲಿ ವೈಟ್ ಮನಿಯಾಗಿ ರೂಪಾಂತರಗೊಂಡಿರುತ್ತದೆ. ಇದು ಈ ಪ್ರಕರಣದಲ್ಲಿ ತನಿಖಾಧಿಕಾರಿಗಳು ತಿಳಿಸಿದ ಸಂಗತಿ.

ವಿವರಣೆ ಇಲ್ಲದ ಆದಾಯಕ್ಕೆ ಏನಿದು ತೆರಿಗೆ ಕಾನೂನು?

ಈ ಪ್ರಕರಣದಲ್ಲಿ ಆದಾಯ ತೆರಿಗೆ ಇಲಾಖೆಯು ಸಂಧ್ಯಾ ರಾಕೇಶ್ ಶರ್ಮಾ ಅವರ ಷೇರು ಆದಾಯವನ್ನು ವಿವರಣೆ ಇಲ್ಲದ ಆದಾಯ (Unexplained Income) ಎಂದು ವರ್ಗೀಕರಿಸಿತು. ಇಂಥ ಆದಾಯಕ್ಕೆ ಶೇ. 60ರಷ್ಟು ತೆರಿಗೆ ಇರುತ್ತದೆ. ಆ ತೆರಿಗೆ ಮೊತ್ತದ ಮೇಲೆ ಶೇ. 25ರಷ್ಟು ಸರ್​ಚಾರ್ಜ್ ಹಾಕಲಾಗುತ್ತದೆ. ಸೆಸ್ ಎಲ್ಲವೂ ಸೇರಿ ಒಟ್ಟು ತೆರಿಗೆಯು ಆದಾಯದ ಶೇ. 78ರಷ್ಟಾಗುತ್ತದೆ. ಆ ಬಳಿಕ ವಿವಿಧ ದಂಡವನ್ನೂ ಒಳಗೊಂಡರೆ, ಒಟ್ಟು ಹಣವು ಆದಾಯದ ಶೇ. 84ಕ್ಕಿಂತ ಹೆಚ್ಚಾಗುತ್ತದೆ. ಕೆಲವೊಮ್ಮೆ ಅದು ಆದಾಯದ ಹಣಕ್ಕಿಂತಲೂ ಹೆಚ್ಚಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಬೀದರ್‌ನ 8 ವಿದ್ಯಾರ್ಥಿಗಳಿಗೆ ವಿಮಾನಯಾನದ ಉಡುಗೊರೆ ನೀಡಿದ ಶಿಕ್ಷಕ!
ಬೀದರ್‌ನ 8 ವಿದ್ಯಾರ್ಥಿಗಳಿಗೆ ವಿಮಾನಯಾನದ ಉಡುಗೊರೆ ನೀಡಿದ ಶಿಕ್ಷಕ!
ಪ್ರಮೋದಾದೇವಿ ಆರೋಪಗಳ ಬಗ್ಗೆ ಸಿಎಂ ಡಿಕೆ ಶಿವಕುಮಾರ್​​ ಏನಂದ್ರು?
ಪ್ರಮೋದಾದೇವಿ ಆರೋಪಗಳ ಬಗ್ಗೆ ಸಿಎಂ ಡಿಕೆ ಶಿವಕುಮಾರ್​​ ಏನಂದ್ರು?
ಸ್ಟಿಂಗ್ ಪ್ರಕರಣ: ಸಿಸಿಬಿಗೆ ಇನ್ನೂ ಸಿಕ್ಕಿಲ್ಲ 2 ಮದರ್ ಡಿವೈಸ್, ಮೊಬೈಲ್!
ಸ್ಟಿಂಗ್ ಪ್ರಕರಣ: ಸಿಸಿಬಿಗೆ ಇನ್ನೂ ಸಿಕ್ಕಿಲ್ಲ 2 ಮದರ್ ಡಿವೈಸ್, ಮೊಬೈಲ್!
ಸೌಜನ್ಯ ಪ್ರಕರಣ ಮರು ತನಿಖೆ: 15ಕ್ಕೂ ಹೆಚ್ಚು ಅಧಿಕಾರಿಗಳಿಗೆ SIT ನೋಟಿಸ್
ಸೌಜನ್ಯ ಪ್ರಕರಣ ಮರು ತನಿಖೆ: 15ಕ್ಕೂ ಹೆಚ್ಚು ಅಧಿಕಾರಿಗಳಿಗೆ SIT ನೋಟಿಸ್
ಹಾಸನಾಂಬೆ ಭಕ್ತರಿಗೆ ಗುಡ್‌ನ್ಯೂಸ್‌; ವಿಶೇಷ ರೈಲು, 200ಕ್ಕೂ ಹೆಚ್ಚು ಬಸ್‌!
ಹಾಸನಾಂಬೆ ಭಕ್ತರಿಗೆ ಗುಡ್‌ನ್ಯೂಸ್‌; ವಿಶೇಷ ರೈಲು, 200ಕ್ಕೂ ಹೆಚ್ಚು ಬಸ್‌!
ಕಬ್ಬು ಬೆಳೆಗಾರರ ಸಭೆ ಮುಗಿಸಿ ಸಿಎಂ ಡಿಕೆಶಿ ಹೇಳಿದ್ದೇನು ನೋಡಿ
ಕಬ್ಬು ಬೆಳೆಗಾರರ ಸಭೆ ಮುಗಿಸಿ ಸಿಎಂ ಡಿಕೆಶಿ ಹೇಳಿದ್ದೇನು ನೋಡಿ
ಬಿಗ್ ಬಾಸ್ ಮನೆಯಲ್ಲಿ ಶೆಟ್ಟಿ ಡಾನ್ ಮದುವೆ; ವರನ ಹುಡುಕಾಟ ಶುರು
ಬಿಗ್ ಬಾಸ್ ಮನೆಯಲ್ಲಿ ಶೆಟ್ಟಿ ಡಾನ್ ಮದುವೆ; ವರನ ಹುಡುಕಾಟ ಶುರು
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ವಯನಾಡಿನಲ್ಲಿ ಬೆಟ್ಟದಿಂದ ಬಿದ್ದು ಆನೆ ಮರಿ ಸಾವು; ತಾಯಾನೆಯ ಗೋಳಾಟ
ವಯನಾಡಿನಲ್ಲಿ ಬೆಟ್ಟದಿಂದ ಬಿದ್ದು ಆನೆ ಮರಿ ಸಾವು; ತಾಯಾನೆಯ ಗೋಳಾಟ
ಸಾಲ ಮನ್ನಾಕ್ಕೆ ಆಗ್ರಹಿಸಿ ಮಹಾರಾಷ್ಟ್ರ ಸಿಎಂ ನಿವಾಸದತ್ತ ರೈತರ ಮೆರವಣಿಗೆ
ಸಾಲ ಮನ್ನಾಕ್ಕೆ ಆಗ್ರಹಿಸಿ ಮಹಾರಾಷ್ಟ್ರ ಸಿಎಂ ನಿವಾಸದತ್ತ ರೈತರ ಮೆರವಣಿಗೆ