ಈ ಟಿಪ್ಸ್ ಪಾಲಿಸಿ ನಿವೃತ್ತಿ ಜೀವನಕ್ಕೆ ಈಗಿನಿಂದಲೇ ದುಡ್ಡು ಉಳಿಸಿ
ನಿವೃತ್ತಿ ಜೀವನಕ್ಕಾಗಿ ಹಣ ಉಳಿಸಲು ಬೇಗನೆ ಹೂಡಿಕೆ ಪ್ರಾರಂಭಿಸುವುದು, ಹಣದುಬ್ಬರವನ್ನು ಮೀರಿಸುವ ಯೋಜನೆಗಳನ್ನು ಆಯ್ಕೆ ಮಾಡುವುದು ಮತ್ತು ತುರ್ತು ನಿಧಿಯನ್ನು ಸಿದ್ಧಪಡಿಸಿಕೊಳ್ಳುವುದು ಅತ್ಯಂತ ಮುಖ್ಯವಾಗಿದೆ. ಭಾರತದಲ್ಲಿ ಲಭ್ಯವಿರುವ ವಿವಿಧ ಹೂಡಿಕೆ ಆಯ್ಕೆಗಳತ್ತ ಗಮನ ಹರಿಸಿದ್ರೆ ನಿವೃತ್ತಿ ನಂತರದಲ್ಲಿ ಯಾರ ಮೇಲು ಅವಲಂಬಿತರಾಗಬೇಕಾದ ಅವಶ್ಯಕತೆ ಇರಲ್ಲ.

ಮುಖ್ಯಾಂಶಗಳು
- ನಿವೃತ್ತಿ ನಂತರ ಇತರರ ಮೇಲೆ ಅವಲಂಬಿತರಾಗದೇ ಸ್ವಾವಲಂಬಿಯಾಗಿ ಬದುಕಬೇಕು
- ಉಳಿತಾಯದಿಂದ ಜೀವನಶೈಲಿಯನ್ನು ಕಾಪಾಡಿಕೊಳ್ಳಲು ಮತ್ತು ಅನಿರೀಕ್ಷಿತ ವೆಚ್ಚಗಳನ್ನು ಎದುರಿಸಬಹುದು
- ಈ ಟಿಪ್ಸ್ ಪಾಲಿಸಿದರೆ ನಿವೃತ್ತಿ ಜೀವನಕ್ಕೆ ಈಗಿನಿಂದಲೇ ದುಡ್ಡು ಉಳಿಸಬಹುದು
ನಿವೃತ್ತಿ (Retirement) ನಂತರವೂ ಮಕ್ಕಳು ಅಥವಾ ಇತರರ ಮೇಲೆ ಅವಲಂಬಿತರಾಗದೇ ಸ್ವಾವಲಂಬಿಯಾಗಿ ಬದುಕುಬೇಕು ಎನ್ನುವುದಿರುತ್ತದೆ. ಇಂತಹ ಆಲೋಚನೆ ಇದ್ರೆ ನಿಮ್ಮ ಕೈಯಲ್ಲಿ ಹಣವಿರುವುದು ಮುಖ್ಯ. ದುಡಿಯುವ ವಯಸ್ಸಿನಲ್ಲಿ ಮಾಡುವ ಉಳಿತಾಯವೂ ನಿವೃತ್ತಿಯ ನಂತರದಲ್ಲಿ ಆರ್ಥಿಕ ಸ್ವಾತಂತ್ರ್ಯ ನೀಡುತ್ತದೆ. ನಿಯಮಿತ ಆದಾಯ ನಿಂತ ನಂತರವೂ ನಿಮ್ಮ ಜೀವನಶೈಲಿಯನ್ನು ಕಾಪಾಡಿಕೊಳ್ಳಲು ಹಾಗೂ ಅನಿರೀಕ್ಷಿತ ವೆಚ್ಚಗಳನ್ನು ಎದುರಿಸಬಹುದು. ನಿವೃತ್ತಿ ನಂತರ ಜೀವನಕ್ಕಾಗಿ ಈ ಕೆಲವು ಟಿಪ್ಸ್ ಗಳನ್ನು ಅನುಸರಿಸಿ.
ನಿವೃತ್ತಿ ಜೀವನಕ್ಕಾಗಿ ಹಣ ಉಳಿಸುವುದು ಹೇಗೆ?
ಬೇಗನೇ ಹೂಡಿಕೆ ಪ್ರಾರಂಭಿಸಿ: ನೀವು ಎಷ್ಟು ಬೇಗ ಹೂಡಿಕೆ ಪ್ರಾರಂಭಿಸುತ್ತಿರೋ ಹೆಚ್ಚು ಲಾಭ ಪಡೆಯುತ್ತೀರಿ. ಉದ್ಯೋಗಕ್ಕೆ ಸೇರಿದ ಪ್ರಾರಂಭದಲ್ಲೇ ಹೂಡಿಕೆಯತ್ತ ಗಮನ ಹರಿಸಿದ್ರೆ ನಿವೃತ್ತಿ ವೇಳೆ ದೊಡ್ಡ ಮೊತ್ತ ನಿಮ್ಮ ಕೈಯಲ್ಲಿ ಇರುತ್ತದೆ.
ಬಜೆಟ್ ಮತ್ತು ವೆಚ್ಚ ನಿಯಂತ್ರಣ: ನಿವೃತ್ತಿಗೆ ಉಳಿತಾಯ ಮಾಡಲು ಬಯಸಿದ್ರೆ ಈಗಿನಿಂದಲೇ ಮಾಸಿಕ ಆದಾಯ ಹಾಗೂ ಖರ್ಚುಗಳನ್ನು ಲೆಕ್ಕಹಾಕಿ. ಎಷ್ಟು ಸಾಧ್ಯವೋ ಅಷ್ಟು ಅನಗತ್ಯ ಖರ್ಚುಗಳನ್ನು ಕಡಿಮೆ ಮಾಡಿ, ಪ್ರತಿ ವರ್ಷ ಉಳಿತಾಯದ ಮೊತ್ತವನ್ನು ಹೆಚ್ಚಿಸಿ.
ಆರೋಗ್ಯ ವಿಮೆ ಇರಲಿ: ವಯಸ್ಸಾದಂತೆ ಆರೋಗ್ಯ ಸಮಸ್ಯೆಗಳು ಕಾಡುವುದು ಸಹಜ. ಹೀಗಾಗಿ ನೀವು ನಿವೃತ್ತಿಗೂ ಮೊದಲೇ ಉತ್ತಮವಾದ ಆರೋಗ್ಯ ವಿಮೆ ಮಾಡಿಟ್ಟುಕೊಳ್ಳಿ. ಆರೋಗ್ಯ ವಿಮೆ ಇಲ್ಲದಿದ್ರೆ ನಿಮ್ಮ ಉಳಿತಾಯ ಮೊತ್ತವನ್ನೇಲ್ಲಾ ಆಸ್ಪತ್ರೆಗೆ ಸುರಿಯಬೇಕಾಗಬಹುದು.
ವಿವಿಧ ಯೋಜನೆಗಳಲ್ಲಿ ಹಣ ಹೂಡಿಕೆ ಮಾಡಿ: ನಿಮ್ಮ ಎಲ್ಲಾ ಹಣವನ್ನು ಒಂದೇ ಕಡೆ ಹಾಕಬೇಡಿ. ಭಾರತದಲ್ಲಿ ನಿವೃತ್ತಿಗಾಗಿ ಲಭ್ಯವಿರುವ ಎನ್‌ಪಿಎಸ್, ಇಪಿಎಫ್, ಪಿಪಿಎಫ್ ಹಾಗೂ ಈಕ್ವಿಟಿ ಮ್ಯೂಚುವಲ್ ಫಂಡ್‌ಗಳು, ಫಿಕ್ಸೆಡ್ ಡೆಪಾಸಿಟ್, ಆರ್ ಡಿ ಹಾಗೂ ಚಿನ್ನ ಹೀಗೆ ವಿವಿಧ ಕಡೆಗಳಲ್ಲಿ ಹಣವನ್ನು ಹೂಡಿಕೆ ಮಾಡಿ, ಸೇವಿಂಗ್‌ನತ್ತ ಗಮನಹರಿಸಿ.
ಇದನ್ನೂ ಓದಿ: ಎಷ್ಟೇ ದುಡಿದ್ರೂ ಕೈಯಲ್ಲಿ ದುಡ್ಡು ನಿಲ್ತಾ ಇಲ್ವಾ, ಉಳಿತಾಯಕ್ಕೆ ಇಲ್ಲಿದೆ ಟಿಪ್ಸ್
ಸಾಲದಿಂದ ಮುಕ್ತರಾಗಿ: ನಿಮ್ಮ ನಿವೃತ್ತಿ ವಯಸ್ಸು ಹತ್ತಿರ ಬರುತ್ತಿದ್ದಂತೆ ಹೋಮ್ ಲೋನ್ ಸೇರಿದಂತೆ ವಿವಿಧ ಸಾಲಗಳಿದ್ದರೆ ಬೇಗನೇ ತೀರಿಸಿಕೊಳ್ಳಿ. ನಿವೃತ್ತಿಯ ನಂತರ ಈ ಸಾಲಗಳು ನಿಮಗೆ ಹೊರೆಯಾಗದಿರಲಿ.
ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
