Money9: ಬೆಂಗಳೂರಲ್ಲಿ ವಾಸವಾಗಿರುವ ಕಲಬುರಗಿಯ ವಾಣಿ ತಮ್ಮ ಸ್ನೇಹಿತೆಯೊಬ್ಬರ ಒತ್ತಡಕ್ಕೆ ಮಣಿದು ಒಂದು ಜೀವವಿಮಾ ಪಾಲಿಸಿಯನ್ನು ಖರೀದಿಸಿ ಮೂರು ವರ್ಷಗಳವರೆಗೆ ವಾರ್ಷಿಕ ಒಂದು ಲಕ್ಷ ರೂ. ನಂತೆ ಪ್ರೀಮಿಯಂಗಳನ್ನು ಪಾವತಿಸಿದರು. ಆದರೆ, ವಾಣಿಯವರಿಗೆ ತಾವು ಖರೀದಿಸಿರುವ ಪಾಲಿಸಿ ಅಗತ್ಯಗಳಿಗೆ ಪೂರಕವಾಗಿಲ್ಲ ಅಂತ ಅನಿಸತೊಡಗಿದ್ದರಿಂದ ಪ್ರೀಮಿಯಂ ಕಟ್ಟುವುದನ್ನು ನಿಲ್ಲಿಸಿಬಿಟ್ಟರು. ಹಾಗಾಗಿ, ಅವರು ಖರೀದಿಸಿದ ಪಾಲಿಸಿ ಸ್ಥಗಿತಗೊಂಡಿತು. ಪಾಲಿಸಿಯನ್ನು ಪುನರುಜ್ಜೀವಗೊಳಿಸಲು ವಿಮಾ ಕಂಪನಿಯು ವಾಣಿ ಮೇಲೆ ಒತ್ತಡ ಹೇರುತ್ತಿದ್ದರೆ ಅವರ ಪರಿಚಯದ ಹೂಡಿಕೆ ಸಲಹೆಗಾರ ಪಾಲಿಸಿಯನ್ನು ಸರೆಂಡರ್ ಮಾಡುವಂತೆ ಹೇಳುತ್ತಿದ್ದಾರೆ.
ಒಂದು ಪಕ್ಷ ವಾಣಿ ತಮ್ಮ ಪಾಲಿಸಿಯನ್ನು ಸರೆಂಡರ್ ಮಾಡಿದರೆ, ಅವರಿಗೆ ಒಂದು ವರ್ಷದ ಪ್ರೀಮಿಯಂ ಕೂಡ ವಾಪಸ್ಸು ಸಿಗಲಾರದು. ಅಸಲು ಸಂಗತಿಯೇನೆಂದರೆ ಹೂಡಿಕೆಯ ಉದ್ದೇಶದಿಂದ ಖರೀದಿಸಲಾದ ಪಾಲಿಸಿಯೊಂದು ಆರಂಭಿಕ ವರ್ಷಗಳಲ್ಲಿ ಸ್ಥಗಿತಗೊಂಡು, ಅದನ್ನು ಸರೆಂಡರ್ ಮಾಡಿದ್ದೇಯಾದಲ್ಲಿ ಪ್ರೀಮಿಯಂ ರೂಪದಲ್ಲಿ ಜಮಾಗೊಂಡಿರುವ ಪಾಲಿಸಿದಾರರ ಹಣದ ಒಂದು ಭಾಗ ಮಾತ್ರ ವಾಪಸ್ಸು ಸಿಗುತ್ತದೆ.
ಇಂಥ ಸಂದರ್ಭಗಳಲ್ಲಿ ವಿಮಾ ಕಂಪನಿಯು ಪ್ರೀಮಿಯಂಗಳ ಭಾಗವಾಗಿ ಜಮಾ ಆಗಿರುವ ನಿಮ್ಮ ಠೇವಣಿ ಮೊತ್ತದಲ್ಲಿ ಪೂರ್ಣಾವಧಿಯ ವೆಚ್ಚವನ್ನು ತೆಗೆದುಕೊಳ್ಳುತ್ತದೆ. ವಿಮಾ ಪಾಲಿಸಿಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯಲು Money9 ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.
ಏನಿದು Money9 ಆ್ಯಪ್?
Money9 ಒಂದು ಒಟಿಟಿ ಆ್ಯಪ್ ಆಗಿದ್ದು ಗೂಗಲ್ ಪೇ ಮತ್ತು iOS ನಲ್ಲಿ ಲಭ್ಯವಿದೆ. ನಿಮ್ಮ ಹಣಕ್ಕೆ ಸಂಬಂಧಿಸಿದ ಪ್ರತಿಯೊಂದು ಸಂಗತಿ ಏಳು ಬಾಷೆಗಳಲ್ಲಿ ಚರ್ಚೆಗೊಳಗಾಗುತ್ತದೆ. ಇದೊಂದು ವಿನೂತನ ಮತ್ತು ವಿಶಿಷ್ಟ ಪ್ರಯೋಗವಾಗಿದೆ. ಶೇರು ಮಾರುಕಟ್ಟೆ, ಮ್ಯೂಚುವಲ್ ಫಂಡ್ಸ್, ಆಸ್ತಿ, ತೆರಿಗೆ, ಆರ್ಥಿಕ ನೀತಿಗಳು ಮೊದಲಾದ ವಿಷಯಗಳ ಜೊತೆಗೆ ಯಾವ ಅಂಶ ನಿಮ್ಮ ಪರ್ಸ್ ಮತ್ತು ಬಜೆಟ್ ಮೇಲೆ ಪ್ರಭಾವ ಬೀರುತ್ತದೆ ಅನ್ನೋದನ್ನು ಸಹ ಚರ್ಚಿಸಲಾಗುತ್ತದೆ.
ಹಾಗಾಗಿ ತಡಮಾಡದೆ Money9 ಆ್ಯಪ್ ಅನ್ನು ಇಂದೇ ಡೌನ್ ಲೋಡ್ ಮಾಡಿಕೊಂಡು ಆರ್ಥಿಕತೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ನಿಮ್ಮ ಗ್ರಹಿಕೆಯನ್ನು ವೃದ್ಧಿಸಿಕೊಳ್ಳಿ.
ಯಾಕೆಂದರೆ Money9 ಗೆ ವಿಷಯಗಳನ್ನು ಅರ್ಥ ಮಾಡಿಕೊಂಡಾಗಲೇ ಅವು ಸುಲಭವೆನಿಸುತ್ತವೆ (Knowing Makes it Easy) ಎಂಬ ತತ್ವದಲ್ಲಿ ನಂಬಿಕೆ ಇದೆ.