PMLA: ಜಿಎಸ್​ಟಿ ವಂಚನೆ ಎಸಗುವವರಿಗೆ ಕಾದಿದೆ ಇಡಿ ಕುಣಿಕೆ; ಪಿಎಂಎಲ್​ಎ ವ್ಯಾಪ್ತಿಗೆ ಜಿಎಸ್​ಟಿಎನ್ ಸೇರಿಸಿದ ಸರ್ಕಾರ

|

Updated on: Jul 09, 2023 | 4:05 PM

GSTN Comes Under PMLA: ನಕಲಿ ಇನ್ವಾಯ್ಸ್, ನಕಲಿ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಇತ್ಯಾದಿ ಜಿಎಸ್​ಟಿ ವಂಚನೆ ಎಸಗುವ ಪ್ರಕರಣಗಳನ್ನು ಪಿಎಂಎಲ್​ಎ ಕಾಯ್ದೆ ವ್ಯಾಪ್ತಿಗೆ ತರಲಾಗಿದೆ. ಇದರಿಂದ ಜಾನಿ ನಿರ್ದೇಶನಾಲಯಕ್ಕೆ ಇನ್ನಷ್ಟು ಬಲ ಬಂದಿದೆ.

PMLA: ಜಿಎಸ್​ಟಿ ವಂಚನೆ ಎಸಗುವವರಿಗೆ ಕಾದಿದೆ ಇಡಿ ಕುಣಿಕೆ; ಪಿಎಂಎಲ್​ಎ ವ್ಯಾಪ್ತಿಗೆ ಜಿಎಸ್​ಟಿಎನ್ ಸೇರಿಸಿದ ಸರ್ಕಾರ
ಜಿಎಸ್​ಟಿ
Follow us on

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ ಜಾಲ (GSTN- Goods and Services Tax Network) ಅನ್ನು ಸರ್ಕಾರ ಅಕ್ರಮ ಹಣ ವರ್ಗಾವಣೆ ನಿಯಂತ್ರಣ ಕಾಯ್ದೆ (PMLA- Prevention of Money Laundering Act) ಅಡಿಗೆ ಸೇರಿಸಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣಗಳ ತನಿಖೆ ನಡೆಸುವ ಜಾರಿ ನಿರ್ದೇಶನಾಲಯಕ್ಕೆ ಈಗ ಇನ್ನಷ್ಟು ಹರಿತದ ಹಲ್ಲು ಸೇರಿಕೊಂಡಂತಾಗಿದೆ. ನಕಲಿ ಇನ್ವಾಯ್ಸ್, ನಕಲಿ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಇತ್ಯಾದಿ ಯಾರಾದರೂ ಸೃಷ್ಟಿಸಿದರೆ ಅವರ ಕೃತ್ಯವು ಪಿಎಂಎಲ್​ಎ ಕಾಯ್ದೆ ವ್ಯಾಪ್ತಿಗೆ ಬರುತ್ತದೆ. ಇತ್ತೀಚೆಗೆ ಇಂಥ ನಕಲಿ ಇನ್ವಾಯ್ಸ್, ಐಟಿಸಿಗಳು ಹೆಚ್ಚು ನಡೆದಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿರುವ ಸಾಧ್ಯತೆ ಇದೆ. 2022ರ ಹಣ ಅಕ್ರಮ ವರ್ಗಾವಣೆ ನಿಯಂತ್ರಣ ಕಾಯ್ದೆಯ ಸೆಕ್ಷನ್ 66ರ ಸಬ್ ಸೆಕ್ಷನ್​ನಲ್ಲಿ(1) ಈ ಹೊಸ ಕಾನೂನಿಗೆ ಅವಕಾಶ ಇದೆ.

ಕುತೂಹಲ ಎಂದರೆ ಪಿಎಂಎಲ್​ಎ ಕಾನೂನನ್ನು ಭಯೋತ್ಪಾದಕರು ಮತ್ತು ಡ್ರಗ್ ಮಾಫಿಯಾಗಳ ಹಣಕಾಸು ಹರಿವನ್ನು ನಿಲ್ಲಿಸುವ ಉದ್ದೇಶದಿಂದ ರಚಿಸಲಾಗಿತ್ತು. ಈಗ ನಕಲಿ ಇನ್ವಾಯ್ಸ್, ನಕಲಿ ಐಟಿಸಿ ಇತ್ಯಾದಿ ಜಿಎಸ್​ಟಿ ಸಂಬಂಧಿಸಿದ ಅಪರಾಧಗಳನ್ನೂ ಇದೇ ವ್ಯಾಪ್ತಿಗೆ ತಂದಿರುವುದು ಕುತೂಹಲ. ಜಿಎಸ್​ಟಿಎನ್​ನಲ್ಲಿ ಬಹಳ ಸೂಕ್ಷ್ಮ ಹಾಗೂ ಬಹಳ ವಿವರವಾದ ಮಾಹಿತಿ ಇರುತ್ತದೆ. ಪಿಎಂಎಲ್​ಎ ಅಡಿಯ ಪ್ರಕರಣಗಳ ಇಡಿ ವಿಚಾರಣೆ ನಡೆಸುವಾಗ ಜಿಎಸ್​ಟಿಎನ್ ಬಹಳ ಉಪಯೋಗಕ್ಕೆ ಬರುತ್ತದೆ. ಯಾವುದೇ ಅವ್ಯವಹಾರ ನಡೆದ ಅನುಮಾನ ಬಂದರೆ ಅದರ ಮೂಲ ಜಾಲಾಡಲು ಜಿಎಸ್​ಟಿಎನ್ ಮೂಲಕ ಸಾಧ್ಯವಾಗುತ್ತದೆ. ಹೀಗಾಗಿ, ಪಿಎಂಎಲ್​ಎ ವ್ಯಾಪ್ತಿಗೆ ಜಿಎಸ್​ಟಿಎನ್ ಅನ್ನು ತಂದ ಕ್ರಮ ಗಮನಾರ್ಹ ಎನಿಸಿದೆ.

ಇದನ್ನೂ ಓದಿRefund Status: ಐಟಿ ರಿಟರ್ನ್ಸ್ ಸಲ್ಲಿಸಿದ್ದೀರಾ? ರೀಫಂಡ್ ಬಂದಿದೆಯಾ ಎಂದು ಪರಿಶೀಲಿಸುವುದು ಹೇಗೆ?

ಜಿಎಸ್​ಟಿ ನೆಟ್ವರ್ಕ್ ಭಾರತದಲ್ಲಿ 1.8 ಕೋಟಿ ನೊಂದಾಯಿತ ಸಂಸ್ಥೆಗಳ ವಿಳಾಸಗಳನ್ನು ಜಿಯೋಕೋಡ್ ಮಾಡಿದೆ. ಇದರಿಂದ ನೊಂದಾಯಿತ ಸಂಸ್ಥೆಯ ನಿಖರ ಸ್ಥಳ ಹುಡುಕಲು ಹಾಗೂ ನಕಲಿ ನೊಂದಣಿಗಳನ್ನು ನಿಯಂತ್ರಿಸಲು ಇದು ಸಹಾಯಕವಾಗುತ್ತದೆ. ಹೀಗಾಗಿ, ಜಿಎಸ್​ಟಿಎನ್ ಸರ್ಕಾರಕ್ಕೆ ಒಂದು ಉತ್ತಮ ಸಲಕರಣೆ ಆಗಿದೆ.

ಇನ್ನು ಜಿಎಸ್​ಟಿ ಕಳೆದ 6 ವರ್ಷದಲ್ಲಿ ಬಹಳ ಗಮನಾರ್ಹ ಬೆಳವಣಿಗೆ ಸಾಧಿಸಿದೆ. 2017ರಲ್ಲಿ 68 ಲಕ್ಷದಷ್ಟು ಇದ್ದ ತೆರಿಗೆ ಪಾವತಿದಾರರು ಈಗ 1.4 ಕೋಟಿಗೆ ಹೆಚ್ಚಿದ್ದಾರೆ. 2017-18ರಲ್ಲಿ ಜಿಎಸ್​ಟಿಯಿಂದ 90,000 ರೂನಷ್ಟು ಇದ್ದ ಸರಾಸರಿ ಮಾಸಿಕ ಆದಾಯ ಪ್ರಸಕ್ತ ಹಣಕಾಸು ವರ್ಷದಲ್ಲಿ 1.69 ಲಕ್ಷ ಕೋಟಿ ರೂಪಾಯಿಗೆ ಏರಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ