Refund Status: ಐಟಿ ರಿಟರ್ನ್ಸ್ ಸಲ್ಲಿಸಿದ್ದೀರಾ? ರೀಫಂಡ್ ಬಂದಿದೆಯಾ ಎಂದು ಪರಿಶೀಲಿಸುವುದು ಹೇಗೆ?

|

Updated on: Jul 09, 2023 | 2:26 PM

ITR Filing 2023: ಕಳೆದ ಹಣಕಾಸು ವರ್ಷದ ಐಟಿ ರಿಟರ್ನ್ ಫೈಲ್ ಮಾಡಿದವರು ತಮಗೆ ರೀಫಂಡ್ ಬಂದಿದೆಯಾ ಎಂಬುದನ್ನು ಆನ್​ಲೈನ್​ನಲ್ಲಿ ಪರಿಶೀಲಿಸಬಹುದು. ಇದರ ವಿಧಾನಗಳ ವಿವರ ಇಲ್ಲಿದೆ...

Refund Status: ಐಟಿ ರಿಟರ್ನ್ಸ್ ಸಲ್ಲಿಸಿದ್ದೀರಾ? ರೀಫಂಡ್ ಬಂದಿದೆಯಾ ಎಂದು ಪರಿಶೀಲಿಸುವುದು ಹೇಗೆ?
ಐಟಿ ರಿಟರ್ನ್
Follow us on

ಬೆಂಗಳೂರು: 2022-23ರ ಹಣಕಾಸು ವರ್ಷದ ನಿಮ್ಮ ಆದಾಯ ತೆರಿಗೆಯ ರಿಟರ್ನ್ ಅನ್ನು ಫೈಲ್ ಮಾಡಲು ಜುಲೈ 31ರವರೆಗೂ ಅವಕಾಶ ಇದೆ. ಈಗಾಗಲೇ ಒಂದು ಕೋಟಿಗೂ ಹೆಚ್ಚು ಮಂದಿ ತೆರಿಗೆ ಪಾವತಿದಾರರು ಐಟಿಆರ್ ಸಲ್ಲಿಕೆ ಮಾಡಿದ್ದಾರೆ. ಐಟಿ ರಿಟರ್ನ್ ಫೈಲ್ ಮಾಡಿದ ಕೆಲ ದಿನಗಳ ಬಳಿಕ ರೀಫಂಡ್ ಹಣ (IT Refund) ನಮ್ಮ ಖಾತೆಗೆ ಬಿಡುಗಡೆ ಆಗುತ್ತದೆ. ಅಗತ್ಯಕ್ಕಿಂತ ಹೆಚ್ಚು ತೆರಿಗೆ ಕಟ್ಟಿದ್ದರೆ ಅದನ್ನು ರಿಟರ್ನ್ ಫೈಲ್ ಮಾಡುವಾಗ ನಾವು ಕ್ಲೈಮ್ ಮಾಡಿಕೊಳ್ಳಬಹುದು. ಈ ಹಣವನ್ನು ಐಟಿ ಇಲಾಖೆ ರೀಫಂಡ್ ಮಾಡುತ್ತದೆ. ಈ ರೀಫಂಡ್ ಹಣ ಬಿಡುಗಡೆ ಆಗಿದೆಯಾ ಎಂಬುದನ್ನು ಆನ್​ಲೈನ್​ನಲ್ಲಿ ಪರಿಶೀಲಿಸಬಹುದು. ಟಿನ್ ಎನ್​ಎಸ್​ಡಿಎಲ್ ವೆಬ್​ಸೈಟ್ ಮತ್ತು ಐಟಿ ಇಫೈಲಿಂಗ್ ಪೋರ್ಟಲ್ ಎರಡೂ ಕಡೆಯೂ ರೀಫಂಡ್ ಸ್ಟೇಟಸ್ ನೋಡಬಹುದು.

ಎನ್​ಎಸ್​ಡಿಎಲ್ ವೆಬ್​ಸೈಟ್​ನಲ್ಲಿ ಐಟಿ ರಿಟರ್ನ್ ರೀಫಂಡ್ ಸ್ಟೇಟಸ್ ತಿಳಿಯುವ ಕ್ರಮ

ಟಿಐಎನ್ ಎನ್​ಎಸ್​ಡಿಎಲ್ ವೆಬ್​ಸೈಟ್​ನಲ್ಲಿ ಈ ಹಿಂದಿನಂತೆ ಐಟಿ ರೀಫಂಡ್ ಸ್ಥಿತಿ ಬಗ್ಗೆ ಮಾಹಿತಿ ತಿಳಿದುಕೊಳ್ಳಬಹುದು. ಅದರ ನೇರ ಲಿಂಕ್ ಇಲ್ಲಿದೆ: tin.tin.nsdl.com/oltas/refund-status-pan.html

ಇದನ್ನೂ ಓದಿBSE 148 Years: ಆಲದ ಮರದ ಕೆಳಗೆ ಶುರುವಾದ ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​ನ 148 ವರ್ಷಗಳ ಇಂಟರೆಸ್ಟಿಂಗ್ ಇತಿಹಾಸ

ಇಫೈಲಿಂಗ್ ಪೋರ್ಟಲ್​ನಲ್ಲಿ ರೀಫಂಡ್ ಸ್ಟೇಟಸ್ ಪರಿಶೀಲಿಸುವ ಕ್ರಮ

  • ಮೊದಲಿಗೆ ಇನ್ಕಮ್ ಟ್ಯಾಕ್ಸ್ ಇಫೈಲಿಂಗ್ ಪೋರ್ಟಲ್​ಗೆ ಹೋಗಿ www.incometax.gov.in/iec/foportal/
  • ಕ್ವಿಕ್ ಲಿಂಕ್ಸ್ ಸೆಕ್ಷನ್​ನಲ್ಲಿ ಕೆಳಗೆ ಸ್ಕ್ರಾಲ್ ಮಾಡಿದರೆ ‘ನೋ ಯುವರ್ ರೀಫಂಡ್ ಸ್ಟೇಟಸ್’ ಕಾಣುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ
  • ಪ್ಯಾನ್ ನಂಬರ್ ಹಾಗೂ ಅಸೆಸ್ಮೆಂಟ್ ಇಯರ್ ಮತ್ತು ಮೊಬೈಲ್ ನಂಬರ್ ಕೊಡಿ
  • ಮೊಬೈಲ್ ನಂಬರ್​ಗೆ ಬರುವ ಒಟಿಪಿಯನ್ನು ಒದಗಿಸಿ

ಈಗ ನಿಮ್ಮ ಇನ್ಕಮ್ ಟ್ಯಾಕ್ಸ್ ರೀಫಂಡ್ ಸ್ಥಿತಿಯನ್ನು ತೋರಿಸುತ್ತದೆ. ಬ್ಯಾಂಕ್ ವಿವರ ಸೇರಿದಂತೆ ಯಾವುದಾದರೂ ಕಾರಣಕ್ಕೆ ರೀಫಂಡ್ ಬಿಡುಗಡೆಗೆ ತಡೆಯಾಗಿದ್ದರೆ ಅದನ್ನೂ ತೋರಿಸಲಾಗುತ್ತದೆ.

ಇದನ್ನೂ ಓದಿGreenchef IPO: ಬೆಂಗಳೂರಿನ ಗ್ರೀನ್​ಚೆಫ್ ಷೇರುಪೇಟೆಗೆ ಭರ್ಜರಿ ಎಂಟ್ರಿ; 53.62 ಕೋಟಿ ರೂ ಐಪಿಒ ಯಶಸ್ವಿ; ತುಮಕೂರಿನಲ್ಲಿ ಹೊಸ ಫ್ಯಾಕ್ಟರಿ ಸ್ಥಾಪನೆಗೆ ವಿನಿಯೋಗ

ಒಂದು ಕೋಟಿಗೂ ಹೆಚ್ಚು ಐಟಿಆರ್ ಸಲ್ಲಿಕೆ

ಭಾರತದಲ್ಲಿ ಆದಾಯ ತೆರಿಗೆ ಪೋರ್ಟಲ್​ನಲ್ಲಿ ತೆರಿಗೆ ರಿಟರ್ನ್ ಫೈಲ್ ಮಾಡಲು 11.22 ಕೋಟಿ ನೊಂದಾಯಿತ ಸದಸ್ಯರಿದ್ದಾರೆ. ಈ ಪೈಕಿ ಜುಲೈ 2ವರೆಗೆ ಸಿಕ್ಕಿರುವ ಮಾಹಿತಿ ಪ್ರಕಾರ 1.32 ಕೋಟಿ ಐಟಿ ರಿಟರ್ನ್ ಫೈಲ್ ಮಾಡಲಾಗಿದೆ. ಇದರಲ್ಲಿ 1.25 ಕೋಟಿ ಮಂದಿಯ ಅರ್ಜಿಗಳನ್ನು ವೆರಿಫೈ ಮಾಡಲಾಗಿದೆ. ಈ ಪೈಕಿ 4,000ದಷ್ಟು ಐಟಿಆರ್​ಗಳ ಪ್ರೋಸಸಿಂಗ್ ಆಗಿರುವುದು ತಿಳಿದುಬಂದಿದೆ.

ಐಟಿ ರಿಟರ್ನ್ ಫೈಲ್ ಮಾಡುವವರಲ್ಲಿ ಬಹುತೇಕರು ಸಂಬಳದಾರರೇ ಆಗಿದ್ದಾರೆ. ಇವರು ಬಹುತೇಕ ಐಟಿಆರ್-1 ಫಾರ್ಮ್ ತುಂಬಿಸಿ ಸಲ್ಲಿಸಬೇಕಾಗುತ್ತದೆ. ಬೇರೆ ಆದಾಯ ಮೂಲಗಳಿದ್ದರೆ ಅದಕ್ಕೆ ಬೇರೆ ಬೇರೆ ಫಾರ್ಮ್​ಗಳಿರುತ್ತವೆ. ಜುಲೈ 31ಕ್ಕೆ ಈ ಫಾರ್ಮ್ ತುಂಬಿಸಿ ಸಲ್ಲಿಸಲು ಕೊನೆಯ ದಿನವಾಗಿದೆ. ಈ ವಾಯಿದೆ ಮೀರಿದರೆ ಅಥವಾ ಸಲ್ಲಿಕೆಯೇ ಮಾಡದಿದ್ದರೆ ದಂಡ ಪಾವತಿಸಬೇಕಾಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 2:25 pm, Sun, 9 July 23