AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Edelweiss Tokio Insurance: ಪ್ರೀಮಿಯಂ ಕಟ್ಟದೆಯೇ ನಾಮಿನಿಗೆ ಪಾಲಿಸಿ ಸೌಲಭ್ಯ; ಎಡೆಲ್​ವೀಸ್ ಟೋಕಿಯೋ ಲೈಫ್ ಇನ್ಷೂರೆನ್ಸ್​ನ ಹಿಟ್ ಫೀಚರ್

Zindagi Protect Plan: ಭಾರತದ ಖಾಸಗಿ ವಿಮಾ ಸಂಸ್ಥೆ ಎಡೆಲ್​ವೀಸ್ ಟೋಕಿಯೋ ಲೈಫ್ ಇನ್ಷೂರೆನ್ಸ್ ಸಂಸ್ಥೆ ಇದೀಗ ಜಿಂದಗಿ ಪ್ರೊಟೆಕ್ಟ್ ಹೆಸರಿನ ಹೊಸ ಪ್ಲಾನ್ ಆಫರ್ ಕೊಟ್ಟಿದೆ. ಇದರಲ್ಲಿ ಹಲವು ಗಮನಾರ್ಹ ಫೀಚರ್​ಗಳಿದ್ದು, ಈ ಬಗ್ಗೆ ಒಂದಷ್ಟು ಮಾಹಿತಿ...

Edelweiss Tokio Insurance: ಪ್ರೀಮಿಯಂ ಕಟ್ಟದೆಯೇ ನಾಮಿನಿಗೆ ಪಾಲಿಸಿ ಸೌಲಭ್ಯ; ಎಡೆಲ್​ವೀಸ್ ಟೋಕಿಯೋ ಲೈಫ್ ಇನ್ಷೂರೆನ್ಸ್​ನ ಹಿಟ್ ಫೀಚರ್
ಲೈಫ್ ಇನ್ಷೂರೆನ್ಸ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 09, 2023 | 6:39 PM

ಲೈಫ್ ಇನ್ಷೂರೆನ್ಸ್ ಎಂದರೆ ಹಲವರಿಗೆ ಎಲ್​ಐಸಿ ಹೆಸರು ಮೊದಲು ಕಣ್ಮುಂದೆ ಬರಬಹುದು. ಆದರೆ, ಬಜಾಜ್ ಅಲಾಯನ್ಜ್ ಸೇರಿದಂತೆ ಹಲವು ಖಾಸಗಿ ವಿಮಾ ಸಂಸ್ಥೆಗಳು ಭಾರತದಲ್ಲಿ ಕಾರ್ಯನಿರ್ವಹಿಸುತ್ತಿವೆ. ಬಹಳ ಆಕರ್ಷಕವಾಗ ಕವರೇಜ್​ಗಳು ಖಾಸಗಿ ವಿಮಾ ಕಂಪನಿಗಳಿಂದ ಸಿಗುತ್ತವೆ. ಅಂಥ ವಿಮಾ ಸಂಸ್ಥೆಗಳಲ್ಲಿ ಎಡೆಲ್​ವೀಸ್ ಟೋಕಿಯೋ ಲೈಫ್ ಇನ್ಷೂರೆನ್ಸ್ (Edelweiss Tokio Life Insurance Company) ಒಂದು. 2011ರಲ್ಲಿ ಭಾರತದಲ್ಲಿ ಆರಂಭಗೊಂಡ ಎಡೆಲ್​ವೀಸ್ ಟೋಕಿಯೋ ಲೈಫ್ ಇನ್ಷೂರೆನ್ಸ್ ಸಂಸ್ಥೆ ಇದೀಗ ಜಿಂದಗಿ ಪ್ರೊಟೆಕ್ಟ್ (Zindagi Protect Plan) ಎನ್ನುವ ಹೊಸ ಟರ್ಮ್ ಇನ್ಷೂರೆನ್ಸ್ ಪ್ಲಾನ್ ಅನಾವರಣಗೊಳಿಸಿದೆ. ಇದರಲ್ಲಿ ಮೂರು ಐಚ್ಛಿಕ ಲಾಭಗಳು ಇವೆ. ಚೈಲ್ಡ್ ಫ್ಯೂಚರ್ ಪ್ರೊಟೆಕ್ಟ್ ಬೆನಿಫಿಟ್, ಬೆಟರ್ ಹಾಫ್ ಬೆನಿಫಿಟ್, ಮತ್ತು ಪ್ರೀಮಿಯಮ್ ಬ್ರೇಕ್ ಬೆನಿಫಿಟ್ ಎಂಬ ಆಯ್ಕೆಗಳಿವೆ.

ಎಡಲ್​ವೀಸ್ ಟೋಕಿಯೋ ಲೈಫ್ ಇನ್ಷೂರೆನ್ಸ್ ಚೈಲ್ಡ್ ಫ್ಯೂಚರ್ ಪ್ರೊಟೆಕ್ಟ್ ಬೆನಿಫಿಟ್

ಇದರಲ್ಲಿ ಪಾಲಿಸಿದಾರ ತನ್ನ ಮಗು ಬೆಳೆದು ದೊಡ್ಡವನಾಗಿ 25 ವರ್ಷ ಮುಗಿಯುವವ ಅವಧಿಯವರೆಗೂ ಜೀವ ವಿಮೆಯ ಅವಧಿಯನ್ನು ಹೆಚ್ಚಿಸುವ ಅವಕಾಶ ಇರುತ್ತದೆ. ಇದರಿಂದ ಕುಟುಂಬದ ಹಣಕಾಸು ಭದ್ರತೆಗೆ ಸಹಾಯಕವಾಗುತ್ತದೆ.

ಇದನ್ನೂ ಓದಿTata AIA: ವಾಟ್ಸಾಪ್, ಯುಪಿಐ ಮೂಲಕ ಇನ್ಷೂರೆನ್ಸ್ ಪ್ರೀಮಿಯಮ್ ಪಾವತಿ: ಟಾಟಾ ಎಐಎ ಗ್ರಾಹಕರಿಗೆ ಹೊಸ ಅನುಕೂಲ

ಬೆಟರ್ ಹಾಫ್ ಬೆನಿಫಿಟ್ ಫೀಚರ್​ನ ವಿಶೇಷತೆ ಏನು?

ಪಾಲಿಸಿದಾರ ಮೃತಪಟ್ಟರೆ ಅವರಿಗಿದ್ದ ವಿಮಾ ಸೌಲಭ್ಯ ಪತಿ ಅಥವಾ ಪತ್ನಿಗೆ ವರ್ಗಾವಣೆ ಆಗುತ್ತದೆ. ಹಾಗಾದಾಗ ಫಲಾನುಭವಿಗಳು ಮತ್ತೆ ಇನ್ಷೂರೆನ್ಸ್ ಪ್ರೀಮಿಯಮ್ ಪಾವತಿಸುವ ಅವಶ್ಯಕತೆ ಇರುವುದಿಲ್ಲ. ಇಂಥದ್ದೊಂದು ಫೀಚರ್ ಭಾರತದಲ್ಲಿ ಇದೇ ಮೊದಲು ಇರಬಹುದು.

ಪ್ರೀಮಿಯಮ್ ಬ್ರೇಕ್ ಬೆನಿಫಿಟ್ ಫೀಚರ್

ಇದರಲ್ಲಿ ನೀವು 8 ಪ್ರೀಮಿಯಮ್​ಗಳವರೆಗೆ ಹಣ ಪಾವತಿಸದೇ ಇರುವಂತಹ ಅವಕಾಶ ಕೊಡುತ್ತದೆ ಪ್ರೀಮಿಯಮ್ ಬ್ರೇಕ್ ಬೆನಿಫಿಟ್ ಫೀಚರ್. ಇದು ಸಾಧ್ಯವಾಗಬೇಕಾದರೆ ನೀವು ಹೆಚ್ಚುವರಿ ಪ್ರೀಮಿಯಮ್ ಪಾವತಿಸಬೇಕು. ಒಂದು ರೀತಿಯಲ್ಲಿ ಇದು ಸಾಲಕ್ಕೆ ಮುಂಗಡವಾಗಿ ಕಂತುಗಳನ್ನು ಕಟ್ಟಿದಂತೆ.

ಇದನ್ನೂ ಓದಿCancer Insurance: ನೀವು ಕ್ಯಾನ್ಸರ್ ಇನ್ಷೂರೆನ್ಸ್ ಪ್ಲಾನ್ ಪಡೆಯುವ ಮುನ್ನ ಈ 7 ಅಂಶಗಳು ಗಮನದಲ್ಲಿರಲಿ

ಇನ್ನೂ ಹಲವು ಫೀಚರ್​ಗಳಿವೆ

ಲೈಫ್ ಕವರ್ ಪಡೆಯುತ್ತೀರೋ ಅಥವಾ ರಿಟರ್ ಆಫ್ ಪ್ರೀಮಿಯಮ್ ಪಡೆಯುತ್ತೀರೋ ನಿಮ್ಮ ಆಯ್ಕೆಗೆ ಬಿಟ್ಟಿದ್ದು.

ಲಾಗಿನ್ ಆಗಿ ಏಳು ದಿನದೊಳಗೆ ವೈದ್ಯಕೀಯ ಪರೀಕ್ಷೆ ಪೂರ್ಣಗೊಳಿಸಿದರೆ ಮೊದಲ ಪ್ರೀಮಿಯಮ್ ಹಣದಲ್ಲಿ ಶೇ. 6ರಷ್ಟು ರಿಯಾಯಿತಿ ಇರುತ್ತದೆ.

ಪಾಲಿಸಿದಾರ ಮೃತಪಟ್ಟಾಗ ಹಣವನ್ನು ಒಟ್ಟಿಗೆ ಬೇಕಾದರೂ ನಾಮಿನಿಗೆ ಸಿಗುವಂತೆ ಮಾಡಬಹುದು. ಅಥವಾ ತಿಂಗಳಿಗೆ ಕಂತುಗಳಾಗಿ ಸಿಗುವಂತೆ ಮಾಡಬಹುದು. ಅಥವಾ ನಿರ್ದಿಷ್ಟ ಮೊತ್ತವನ್ನು ಲಂಪ್ಸಮ್ ಆಗಿ ಕೊಟ್ಟು, ಉಳಿದ ಹಣವನ್ನು ಕಂತುಗಳ ರೂಪದಲ್ಲಿ ಕೊಡುವ ಆಯ್ಕೆ ಮಾಡಿಕೊಳ್ಳಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ