Higher Pension: ಅಧಿಕ ಇಪಿಎಸ್ ಪಿಂಚಣಿಗೆ ಜುಲೈ 11 ಡೆಡ್​ಲೈನ್; ಇಪಿಎಸ್ ಮತ್ತು ಎನ್​ಪಿಎಸ್, ಯಾವುದು ಬೆಟರ್?

Employee Pension Scheme Deadline: ಎಂಪ್ಲಾಯೀ ಪೆನ್ಷನ್ ಸ್ಕೀಮ್​ನಲ್ಲಿ ಹೆಚ್ಚುವರಿ ಹಣದ ಕೊಡುಗೆಗೆ ಅವಕಾಶ ಕೊಡಲು ಕೋರಿ ಅರ್ಜಿ ಸಲ್ಲಿಸಲು ಜುಲೈ 11 ಕೊನೆಯ ದಿನವಾಗಿದೆ. ಇಪಿಎಸ್ ಮತ್ತು ಎನ್​ಪಿಎಸ್ ಮಧ್ಯೆ ಏನಿದೆ ವ್ಯತ್ಯಾಸ? ಈ ಬಗ್ಗೆ ಒಂದು ವರದಿ

Higher Pension: ಅಧಿಕ ಇಪಿಎಸ್ ಪಿಂಚಣಿಗೆ ಜುಲೈ 11 ಡೆಡ್​ಲೈನ್; ಇಪಿಎಸ್ ಮತ್ತು ಎನ್​ಪಿಎಸ್, ಯಾವುದು ಬೆಟರ್?
ಪಿಂಚಣಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 10, 2023 | 3:36 PM

ಇಪಿಎಫ್​ಗೆ ಜೋಡಿತವಾದ ಇಪಿಎಸ್ ಸ್ಕೀಮ್​ನಲ್ಲಿ ಅಧಿಕ ಪಿಂಚಣಿಗೆ ಅರ್ಜಿ ಸಲ್ಲಿಸಲು ಜುಲೈ 11ಕ್ಕೆ ಕೊನೆಯ ದಿನವಾಗಿ ಸರ್ಕಾರ ನಿಗದಿ ಮಾಡಿದೆ. ಈ ಡೆಡ್​ಲೈನ್​ಗೆ ಇನ್ನೊಂದೇ ದಿನ ಬಾಕಿ ಇದೆ. 2014ಕ್ಕೆ ಮುಂಚೆ ಇಪಿಎಸ್​ಗೆ ಹೆಚ್ಚುವರಿ ಹಣ (Higher EPS Pension) ಜಮೆ ಆಗುವಂತೆ ಆಯ್ಕೆ ಮಾಡಿಕೊಂಡವರು ಈಗ ಅಧಿಕ ಪಿಂಚಣಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಸುಪ್ರೀಂ ಕೋರ್ಟ್ 2022ರ ನವೆಂಬರ್ 4ರಂದು ನೀಡಿದ ಆದೇಶದ ಪ್ರಕಾರ ಇಪಿಎಫ್​ಒ ಸಂಸ್ಥೆ (EPFO) ಅಧಿಕ ಇಪಿಎಸ್ ಪಿಂಚಣಿ ಬಗ್ಗೆ ಮಾರ್ಗಸೂಚಿ ನೀಡಿತ್ತು.

ಏನಿದು ಇಪಿಎಸ್ ಸ್ಕೀಮ್?

ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಯೋಜನೆಯಲ್ಲಿ ಉದ್ಯೋಗಿಯ ಮೂಲ ವೇತನ ಮತ್ತು ಭತ್ಯೆ ಸೇರಿದ ಮೊತ್ತದ ಶೇ. 12ರಷ್ಟು ಹಣವನ್ನು ಕಡಿತಗೊಳಿಸಿ ಅವರ ಇಪಿಎಫ್ ಖಾತೆಗೆ ಹಾಕಲಾಗುತ್ತದೆ. ಅವರು ಕೆಲಸ ಮಾಡುವ ಸಂಸ್ಥೆ ಕೂಡ ಶೇ. 12ರಷ್ಟು ಹಣದ ಕೊಡುಗೆ ನೀಡುತ್ತದೆ. ಇದರಲ್ಲಿ ಶೇ. 8.33ರಷ್ಟು ಹಣ ಪ್ರತ್ಯೇಕವಾಗಿ ಇಪಿಎಸ್ ಖಾತೆಗೆ ಹಾಕಲಾಗುತ್ತದೆ. 2014ಕ್ಕೆ ಮುನ್ನ ಹೆಚ್ಚುವರಿ ಇಪಿಎಸ್ ಹಣದ ಕೊಡುಗೆಯನ್ನು ಆಯ್ದುಕೊಳ್ಳುವ ಅವಕಾಶ ಇತ್ತು. ಆದರೆ, 2014ರಲ್ಲಿ 15,000 ರೂ ಸಂಬಳದವರೆಗೆ ಮಾತ್ರ ಇಪಿಎಸ್ ಸ್ಕೀಮ್ ಅನ್ನು ಸೀಮಿತಗೊಳಿಸಲಾಯಿತು. ಅಂದರೆ ತಿಂಗಳಿಗೆ ಗರಿಷ್ಠ 1,250 ರೂ ಮಾತ್ರವೇ ಇಪಿಎಸ್ ಖಾತೆಗೆ ಜಮೆಯಾಗುತ್ತದೆ. ಈ ಪ್ರಮಾಣವನ್ನು ಹೆಚ್ಚಿಸುವ ಅವಕಾಶ ಈಗ ನೀಡಲಾಗಿದೆ. ಇದು 2014ಕ್ಕೆ ಮುನ್ನ ಅಧಿಕ ಇಪಿಎಸ್ ಪಿಂಚಣಿಯ ಅವಕಾಶ ಆಯ್ದುಕೊಂಡವರಿಗೆ ಈಗ ಅರ್ಜಿ ಸಲ್ಲಿಸಲು ಅವಕಾಶ ಇದೆ.

ಇದನ್ನೂ ಓದಿIT Return: ಒಂದಿಷ್ಟು ತೆರಿಗೆ ಉಳಿಸಲು ಆದಾಯ ಕಡಿಮೆ ತೋರಿಸದಿರಿ; ಜೈಲಿಗೆ ಹೋಗಬೇಕಾದೀತು ಜೋಕೆ..!

ಇಪಿಎಸ್ ಅಂದರೆ ಎಂಪ್ಲಾಯೀ ಪೆನ್ಷನ್ ಸ್ಕೀಮ್. ಉದ್ಯೋಗಿ ನಿವೃತ್ತಿಯ ಬಳಿಕ ಪಿಂಚಣಿ ರೂಪದಲ್ಲಿ ಈ ನಿಧಿ ಬಳಕೆಯಾಗುತ್ತದೆ. ಪೂರ್ವದಲ್ಲೇ ಪಿಂಚಣಿ ಹಣ ವಿತ್​ಡ್ರಾ ಮಾಡಲು ನಿರ್ಬಂಧಗಳಿವೆ.

ಎನ್​ಪಿಎಸ್ ಯೋಜನೆ ಏನು?

ಎನ್​ಪಿಎಸ್ ಎಂದರೆ ನ್ಯಾಷನಲ್ ಪೆನ್ಷನ್ ಸ್ಕೀಮ್. ಇಪಿಎಸ್ ಎಂಬುದು ಉದ್ಯೋಗಸ್ಥರಿಗೆಂದು ರೂಪಿಸಲಾದ ಪಿಂಚಣಿ ಸಿಸ್ಟಂ ಆಗಿದೆ. ಎನ್​ಪಿಎಸ್ ಎಂಬುದು ಯಾವುದೇ ಸಾರ್ವಜನಿಕರಿಗೆ ತೆರೆದಿರುವ ಯೋಜನೆ. 18ರಿಂದ 75 ವರ್ಷ ವಯಸ್ಸಿನ ಯಾವುದೇ ಭಾರತೀಯ ಪ್ರಜೆಗಳು ಎನ್​ಪಿಎಸ್ ಸ್ಕೀಮ್ ಪಡೆಯಬಹುದು. ನ್ಯಾಷನಲ್ ಪೆನ್ಷನ್ ಸ್ಕೀಮ್​ನಲ್ಲಿ ಒಬ್ಬರು ಎಷ್ಟು ಬೇಕಾದರೂ ಹೂಡಿಕೆ ಮಾಡುತ್ತಾ ಹೋಗಬಹುದು. ಇದಕ್ಕೆ ಹಾಕುವ ನಮ್ಮ ಹಣವನ್ನು ಷೇರುಮಾರುಕಟ್ಟೆ, ಬಾಂಡ್ ಇತ್ಯಾದಿ ಕಡೆ ಹೂಡಿಕೆ ಮಾಡಲಾಗುತ್ತದೆ. ಅದರಿಂದ ಬರುವ ಲಾಭದಲ್ಲಿ ಹಂಚಿಕೆ ಆಗುತ್ತದೆ. ಒಂದು ರೀತಿಯಲ್ಲಿ ಇದು ಮ್ಯೂಚುವಲ್ ಫಂಡ್ ರೀತಿಯ ರಿಟರ್ನ್ ತಂದುಕೊಡುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ