Greenchef IPO: ಬೆಂಗಳೂರಿನ ಗ್ರೀನ್​ಚೆಫ್ ಷೇರುಪೇಟೆಗೆ ಭರ್ಜರಿ ಎಂಟ್ರಿ; 53.62 ಕೋಟಿ ರೂ ಐಪಿಒ ಯಶಸ್ವಿ; ತುಮಕೂರಿನಲ್ಲಿ ಹೊಸ ಫ್ಯಾಕ್ಟರಿ ಸ್ಥಾಪನೆಗೆ ವಿನಿಯೋಗ

NSE Emerge Listing: ಬೆಂಗಳೂರಿನ ಗ್ರೀನ್​ಚೆಫ್ ಅಪ್ಲಾಯನ್ಸಸ್ ಸಂಸ್ಥೆ ಮೊದಲ ಬಾರಿಗೆ ಕೈಗೊಂಡ ಐಪಿಒದಲ್ಲಿ 53.62 ಕೋಟಿ ರೂ ಸಂಗ್ರಹಿಸಿದ್ದು, ಎನ್​ಎಸ್​ಇ ಎಮರ್ಜ್ ಪ್ಲಾಟ್​ಫಾರ್ಮ್​ನಲ್ಲಿ 17 ರೂ ಹೆಚ್ಚಿನ ಬೆಲೆಗೆ ಲಿಸ್ಟ್ ಆಗಿದೆ.

Greenchef IPO: ಬೆಂಗಳೂರಿನ ಗ್ರೀನ್​ಚೆಫ್ ಷೇರುಪೇಟೆಗೆ ಭರ್ಜರಿ ಎಂಟ್ರಿ; 53.62 ಕೋಟಿ ರೂ ಐಪಿಒ ಯಶಸ್ವಿ; ತುಮಕೂರಿನಲ್ಲಿ ಹೊಸ ಫ್ಯಾಕ್ಟರಿ ಸ್ಥಾಪನೆಗೆ ವಿನಿಯೋಗ
ಎನ್​ಎಸ್​ಇ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Jul 09, 2023 | 10:52 AM

ನವದೆಹಲಿ: ಬೆಂಗಳೂರು ಮೂಲದ ಗೃಹೋಪಕರಣ ತಯಾರಕ ಸಂಸ್ಥೆ ಗ್ರೀನ್​ಚೆಫ್ ಅಪ್ಲಾಯನ್ಸಸ್ (Greechef Appliances) ಮೊದಲ ಬಾರಿಗೆ ನಡೆಸಿದ ಐಪಿಒದಲ್ಲಿ ನಿರೀಕ್ಷಿತ 53.62 ಕೋಟಿ ರೂ ಬಂಡವಾಳ ಸಂಗ್ರಹಿಸುವಲ್ಲಿ ಯಶಸ್ವಿಯಾಗಿದೆ. ಈ ಹಣವನ್ನು ತುಮಕೂರಿನ ವಸಂತನರಸಪುರ ಬಳಿ ಸ್ಥಾಪನೆಯಾಗುತ್ತಿರುವ ಹೊಸ ಫ್ಯಾಕ್ಟರಿಗೆ ಬಳಸಲು ಸಂಸ್ಥೆ ನಿರ್ಧರಿಸಿದೆ. ಬೆಂಗಳೂರಿನಲ್ಲಿ 3 ಸೇರಿದಂತೆ ಸದ್ಯ ಒಟ್ಟು 4 ಘಟಕಗಳನ್ನು ಹೊಂದಿರುವ ಗ್ರೀನ್​ಚೆಫ್ ಅಪ್ಲಾಯನ್ಸಸ್ ಲಿ ಸಂಸ್ಥೆ ಶುಕ್ರವಾರ (ಜುಲೈ 6) ಷೇರುಪೇಟೆಯಲ್ಲಿ ಭರ್ಜರಿಯಾಗಿ ಪ್ರವೇಶ ಮಾಡಿತು. ಐಪಿಒದಲ್ಲಿ 87 ರೂ ಬೆಲೆ ಹೊಂದಿದ್ದ ಗ್ರೀನ್​ಚೆಫ್​ನ ಷೇರು ಎನ್​ಎಸ್​ಇ ಎಮರ್ಜ್ ಪ್ಲಾಟ್​ಫಾರ್ಮ್​ನಲ್ಲಿ (NSE Emerge) 104 ರೂನಂತೆ ಲಿಸ್ಟ್ ಆಯಿತು. ಷೇರುಪೇಟೆ ವ್ಯವಹಾರ ಅಂತ್ಯಗೊಂಡ ಅಂದು ಸಂಜೆ ಅದರ ಷೇರುಬೆಲೆ ಇನ್ನೂ ಹೆಚ್ಚಾಗಿ 109.20 ರೂಗೆ ಹೋಗಿದೆ.

ಗ್ರೀನ್​ಚೆಫ್ ಅಪ್ಲಾಯನ್ಸಸ್ ಲಿ ಸಂಸ್ಥೆ ಐಪಿಒಗೆ ಹೋಗಿದ್ದು ಇದೇ ಮೊದಲು. 2023ರ ಜೂನ್ 23ರಿಂದ 27ರವರೆಗೂ ಐಪಿಒ ಆಫರ್ ಇತ್ತು. ಶೇ 60ರಷ್ಟು ಹೆಚ್ಚು ಮಂದಿ ಐಪಿಒ ಆಫರ್​ಗೆ ಮುಗಿಬಿದ್ದಿದ್ದರು. ಅಷ್ಟರಮಟ್ಟಿಗೆ ಗ್ರೀನ್​ಚೆಫ್ ಸಂಸ್ಥೆಯ ಷೇರಿಗೆ ಬೇಡಿಕೆ ಸೃಷ್ಟಿಯಾಗುವ ಸೂಚನೆ ಅದಾಗಿತ್ತು. ನಿರೀಕ್ಷಿಸಿದಂತೆ ಮೊದಲ ದಿನವೇ ಅದರ ಷೇರಿನ ಮೌಲ್ಯ ಗಣನೀಯವಾಗಿ ಹೆಚ್ಚಾಗಿದೆ. ಎನ್​ಎಸ್​ಇ ವಿನಿಮಯ ಕೇಂದ್ರದ ಎಮರ್ಜ್ ಪ್ಲಾಟ್​ಫಾರ್ಮ್​ನಲ್ಲಿ ಗ್ರೀನ್​ಚೆಫ್ ಲಿಸ್ಟ್ ಆಗಿದೆ.

ಇದನ್ನೂ ಓದಿGST Share: ಕೇಂದ್ರದಿಂದ ಕರ್ನಾಟಕಕ್ಕೆ ತೆರಿಗೆ ಪಾಲು ಯಾಕೆ ಕಡಿಮೆ? ಜಿಎಸ್​ಟಿ ಹಂಚಿಕೆ ಸೂತ್ರ ಏನು? ಇಲ್ಲಿದೆ ಡೀಟೇಲ್ಸ್

ಗ್ರೀನ್​ಚೆಫ್ ಅಪ್ಲಾಯನ್ಸಸ್ ಸಂಸ್ಥೆಯ ಉತ್ಪನ್ನಗಳೇನು?

ಪೀಣ್ಯದಲ್ಲಿ ಮುಖ್ಯ ಘಟಕ ಹೊಂದಿರುವ ಗ್ರೀನ್​ಟೆಕ್ ಅಪ್ಲಾಯನ್ಸಸ್ ಲಿಮಿಟೆಡ್ ಸಂಸ್ಥೆ ಹಲವು ಗೃಹೋಪಯೋಗಿ ವಸ್ತುಗಳನ್ನು ತಯಾರಿಸುತ್ತದೆ. ಗ್ಯಾಸ್ ಸ್ಟೌವ್, ಮಿಕ್ಸರ್ ಗ್ರೈಂಡರ್, ಪ್ರೆಷರ್ ಕುಕರ್, ಇಂಡಕ್ಷನ್ ಕುಕ್​ಟಾಪ್, ರೈಸ್ ಕುಕರ್, ವೆಟ್ ಗ್ರೈಂಡರ್, ಸ್ಟೈನ್​ಲೆಸ್ ಸ್ಟೀಲ್ ಉಪಕರಣಗಳು ಮೊದಲಾದ ಉತ್ಪನ್ನಗಳನ್ನು ಅದು ತಯಾರಿಸುತ್ತದೆ.

ಬೆಂಗಳೂರಿನಲ್ಲಿ 3 ಫ್ಯಾಕ್ಟರಿಗಳನ್ನು ಹೊಂದಿದೆ. ಹಿಮಾಚಲಪ್ರದೇಶದಲ್ಲಿ ಒಂದು ಫ್ಯಾಕ್ಟರಿ ಇದೆ. ಉತ್ತರಪ್ರದೇಶ, ಮಧ್ಯಪ್ರದೇಶ, ಛತ್ತೀಸಗಡ್ ಮತ್ತು ಬಿಹಾರ ರಾಜ್ಯಗಳಿಗೆ ತನ್ನ ಕಾರ್ಯಚಟುವಟಿಕೆ ವಿಸ್ತರಿಸುವ ಆಲೋಚನೆಯಲ್ಲಿ ಗ್ರೀನ್​ಟೆಕ್ ಇದೆ.

ತುಮಕೂರಿನ ವಸಂತನರಸಾಪುರದಲ್ಲಿ ಹೊಸ ಗ್ರೀನ್​ಟೆಕ್ ಫ್ಯಾಕ್ಟರಿ

ತುಮಕೂರಿನ ವಸಂತನರಸಾಪುರದಲ್ಲಿ 15 ಎಕರೆಯಷ್ಟು ವಿಶಾಲ ಜಮೀನಿನಲ್ಲಿ ಗ್ರೀನ್​ಚೆಫ್ ಸಂಸ್ಥೆಯ ಹೊಸ ಕಾರ್ಖಾನೆಯ ನಿರ್ಮಾಣ ಕಾರ್ಯ ನಡೆಯುತ್ತಿದೆ. ಐಪಿಒದಲ್ಲಿ ಸಂಗ್ರಹವಾದ ಹೂಡಿಕೆಯ ಕೆಲ ಭಾಗವನ್ನು ತುಮಕೂರಿನ ಫ್ಯಾಕ್ಟರಿಗೆ ವ್ಯಯಿಸಲು ಸಂಸ್ಥೆ ನಿರ್ಧರಿಸಿದೆ. ಆ ಕಾರ್ಖಾನೆ 2023ರ ಡಿಸೆಂಬರ್​ನಿಂದ 2024ರ ಮಾರ್ಚ್​ನೊಳಗೆ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 10:51 am, Sun, 9 July 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ