GST Share: ಕೇಂದ್ರದಿಂದ ಕರ್ನಾಟಕಕ್ಕೆ ತೆರಿಗೆ ಪಾಲು ಯಾಕೆ ಕಡಿಮೆ? ಜಿಎಸ್​ಟಿ ಹಂಚಿಕೆ ಸೂತ್ರ ಏನು? ಇಲ್ಲಿದೆ ಡೀಟೇಲ್ಸ್

Know Why Karnataka Gets Less GST Share: ಅತಿಹೆಚ್ಚು ತೆರಿಗೆ ಸಂಗ್ರಹ ಕಾಣುವ ರಾಜ್ಯಗಳಲ್ಲಿ ಒಂದಾಗಿರುವ ಕರ್ನಾಟಕಕ್ಕೆ ಜಿಎಸ್​ಟಿ ಪರಿಹಾರ ತೀರಾ ಕಡಿಮೆ ಬರುತ್ತದೆ ಎಂಬ ಟೀಕೆ ಕೇಳಿಬರುತ್ತಲೇ ಇರುತ್ತದೆ. ಆದರೆ, ವಾಸ್ತವದಲ್ಲಿ ರಾಜ್ಯಗಳಿಗೆ ಕೇಂದ್ರವು ಯಾವ ಮಾನದಂಡದಲ್ಲಿ ಜಿಎಸ್​ಟಿ ಹಂಚಿಕೆ ಮಾಡುತ್ತದೆ?

GST Share: ಕೇಂದ್ರದಿಂದ ಕರ್ನಾಟಕಕ್ಕೆ ತೆರಿಗೆ ಪಾಲು ಯಾಕೆ ಕಡಿಮೆ? ಜಿಎಸ್​ಟಿ ಹಂಚಿಕೆ ಸೂತ್ರ ಏನು? ಇಲ್ಲಿದೆ ಡೀಟೇಲ್ಸ್
ಜಿಎಸ್​ಟಿ
Follow us
|

Updated on:Jul 12, 2023 | 3:43 PM

ಸಿದ್ದರಾಮಯ್ಯ ತಮ್ಮ 14ನೇ ಬಜೆಟ್ ಮಂಡನೆ (Karnataka Budget 2023) ವೇಳೆ ಜಿಎಸ್​ಟಿ ಪಾಲು ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯ ಆಗುತ್ತಿದೆ ಎಂದು ಬಾರಿಬಾರಿ ಪ್ರತಿಪಾದಿಸಿದ್ದಾರೆ. ರಾಜ್ಯದಲ್ಲಿ ಬಿಜೆಪಿಯೇತರ ಪಕ್ಷಗಳ ಈ ಟೀಕೆ ಸರ್ವೇಸಾಮಾನ್ಯ. ದೇಶದಲ್ಲಿ ಅತಿಹೆಚ್ಚು ತೆರಿಗೆ ಸಂಗ್ರಹ ಮಾಡುವ ರಾಜ್ಯಗಳಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಮಹಾರಾಷ್ಟ್ರ, ಕರ್ನಾಟಕ, ಗುಜರಾತ್ ಮತ್ತಿತರ ಕೆಲ ರಾಜ್ಯಗಳು ಅತಿಹೆಚ್ಚು ತೆರಿಗೆ ಸಂಗ್ರಹ ಮಾಡುತ್ತವೆ. ಆದರೆ, ತೆರಿಗೆ ಪಾಲು ವಿಚಾರಕ್ಕೆ ಬಂದರೆ ಕೇಂದ್ರದಿಂದ ಅತಿಹೆಚ್ಚು ಪಾಲು ಹಂಚಿಕೆಯಾಗುವುದು (GST Share) ಉತ್ತರಪ್ರದೇಶ, ಬಿಹಾರ ಮತ್ತಿತರ ರಾಜ್ಯಗಳಿಗೆ. ನಮ್ಮ ಪಾಲಿನ ತೆರಿಗೆ ಹಣವನ್ನು ಬೇರೆ ರಾಜ್ಯಗಳಿಗೆ ವಿತರಿಸುವುದು ಯಾಕೆ ಎಂದು ಕರ್ನಾಟಕ ಸೇರಿದಂತೆ ಕೆಲ ರಾಜ್ಯಗಳು ಕೇಳುವುದರಲ್ಲಿ ನ್ಯಾಯ ಇದೆ ಎಂದನಿಸಬಹುದು. ಆದರೆ, ಅಸಲು ವಿಚಾರ ಬೇರೆ. ಇದನ್ನು ತಿಳಿಯಲು ಜಿಎಸ್​ಟಿ ತೆರಿಗೆ ಏನು, ಅದರ ಹಂಚಿಕೆ ಹೇಗೆ ಆಗುತ್ತದೆ ಎಂಬುದನ್ನು ತಿಳಿಯುವುದು ಉತ್ತಮ.

ಜಿಎಸ್​ಟಿ ಎಂದರೇನು?

ಕೇಂದ್ರ ಸರ್ಕಾರ 2015ರಲ್ಲಿ ಜಾರಿಗೆ ತಂದ ಏಕರೂಪದ ಪರೋಕ್ಷ ತೆರಿಗೆ ಪದ್ಧತಿಯೇ ಜಿಎಸ್​ಟಿ. ಹಿಂದೆ ಇದ್ದ 17 ಇನ್​ಡೈರೆಕ್ಟ್ ಟ್ಯಾಕ್ಸ್​ಗಳ ಬದಲಿಗೆ ಜಿಎಸ್​ಟಿ ಬಂದಿತು. ಇದರಲ್ಲಿ ನಾಲ್ಕು ಭಾಗಗಳಿವೆ. ಸಿಜಿಎಸ್​ಟಿ, ಎಸ್​ಜಿಎಸ್​ಟಿ, ಐಜಿಎಸ್​ಟಿ ಮತ್ತು ಯುಜಿಎಸ್​ಟಿ. ಈಗ ಒಂದು ರಾಜ್ಯದೊಳಗೆ ನಡೆಯುವ ಒಂದು ವಹಿವಾಟಿನಲ್ಲಿ ಶೇ. 18ರಷ್ಟು ಜಿಎಸ್​ಟಿ ಇದೆ ಎಂದಾದರೆ ಅದಕ್ಕೆ ಸಿಜಿಎಸ್​ಟಿ ಮತ್ತು ಎಸ್​ಜಿಎಸ್​ಟಿಗೆ ತಲಾ ಶೇ. 9ರಷ್ಟು ತೆರಿಗೆ ಹೋಗುತ್ತದೆ. ಇಲ್ಲಿ ಸಿಜಿಎಸ್​ಟಿ ಎಂಬುದು ಕೇಂದ್ರದ ಪಾಲು. ಎಸ್​ಜಿಎಸ್​ಟಿ ಎಂಬುದು ರಾಜ್ಯದ ಪಾಲು. ಎಸ್​ಜಿಎಸ್​ಟಿ ತೆರಿಗೆ ಹಣ ನೇರವಾಗಿ ರಾಜ್ಯ ಸರ್ಕಾರಕ್ಕೆ ಸಂದಾಯವಾಗುತ್ತದೆ.

ಕೇಂದ್ರವು ರಾಜ್ಯಕ್ಕೆ ಹಂಚುವ ತೆರಿಗೆ ಪಾಲು ಯಾವುದು?

ಇಲ್ಲಿ ಐಜಿಎಸ್​ಟಿ ಎಂಬ ಜಿಎಸ್​ಟಿಯ ಮತ್ತೊಂದು ಭಾಗ ಇದೆ. ಇಂಟರ್​ಸ್ಟೇಟ್ ವ್ಯವಹಾರದಲ್ಲಿ, ಅಂದರೆ ಅಂತರ್​ರಾಜ್ಯ ವ್ಯವಹಾರದಲ್ಲಿ ಅನ್ವಯ ಆಗುವ ತೆರಿಗೆ. ಉದಾಹರಣೆಗೆ, ಬೆಂಗಳೂರಿನಲ್ಲಿ ಉತ್ಪಾದಕರೊಬ್ಬರು ಆಂಧ್ರದ ಚಿತ್ತೂರಿನಲ್ಲಿರುವವರಿಗೆ ಒಂದು ವಸ್ತು ಮಾರಿದಾಗ ಶೇ. 18ರಷ್ಟು ಜಿಎಸ್​ಟಿ ಕಟ್ಟಬೇಕು. ಇದರಲ್ಲಿ ಅರ್ಧಭಾಗವು ಕೇಂದ್ರಕ್ಕೆ ಹೋಗುತ್ತದೆ. ಇನ್ನರ್ಧ ಭಾಗವನ್ನು ಕೇಂದ್ರ ಸರ್ಕಾರ ಪ್ರತ್ಯೇಕವಾಗಿ ಎತ್ತಿ ಇಡುತ್ತದೆ. ಈ ಹಣವೇ ಜಿಎಸ್​ಟಿ ಕಾಂಪೆನ್ಸೇಶನ್ ರೂಪದಲ್ಲಿ ರಾಜ್ಯಗಳಿಗೆ ಹಂಚಿಕೆ ಆಗುವುದು.

ಇದನ್ನೂ ಓದಿOriginal Documents: ಬ್ಯಾಂಕ್​ನವರು ನಿಮ್ಮ ಮೂಲಪತ್ರ ಹಿಂದಿರುಗಿಸದಿದ್ದರೆ ಏನು ಮಾಡಬೇಕು? ಇಲ್ಲಿವೆ ಮಾರ್ಗೋಪಾಯಗಳು

ಜಿಎಸ್​ಟಿ ಕಾಂಪೆನ್ಸೇಶನ್ ಎಲ್ಲಾ ರಾಜ್ಯಗಳಿಗೂ ಸರಿಪ್ರಮಾಣದಲ್ಲಿ ಹಂಚಿಕೆ ಆಗುವುದಿಲ್ಲವೇಕೆ?

ಸರ್ಕಾರಗಳ ಸಾಮಾಜಿಕ ನ್ಯಾಯದ ಸೂತ್ರ ಪರೋಕ್ಷವಾಗಿ ಜಿಎಸ್​ಟಿ ಹಂಚಿಕೆಯಲ್ಲಿ ಅಳವಡಿಕೆ ಆಗಿದೆ. ಹೆಚ್ಚು ತೆರಿಗೆ ಕಟ್ಟುವ ರಾಜ್ಯಗಳು ಹೆಚ್ಚು ತಯಾರಿಕಾ ಶಕ್ತಿ ಹೊಂದಿದವಾಗಿದ್ದು, ಅವುಗಳನ್ನು ಹೆಚ್ಚು ಸಿರಿವಂತ ರಾಜ್ಯಗಳೆಂದು ಪರಿಗಣಿಸಲಾಗುತ್ತದೆ. ಕಡಿಮೆ ತೆರಿಗೆ ಕಟ್ಟಲಾಗುತ್ತಿದೆ ಎಂದರೆ ಅಲ್ಲಿ ಉತ್ಪಾದನೆ ಪ್ರಮಾಣ ಕಡಿಮೆ ಆಗಿದ್ದು, ಅಂಥ ರಾಜ್ಯಗಳನ್ನು ಬಡ ರಾಜ್ಯಗಳೆಂದು ಪರಿಗಣಿಸಲಾಗುತ್ತದೆ. ಮಾರಾಟಕ್ಕಿಂತ ಖರೀದಿ ಹೆಚ್ಚು ಮಾಡುವ ಇಂಥ ಬಡ ರಾಜ್ಯಗಳಿಗೆ ಜಿಎಸ್​ಟಿ ಪರಿಹಾರ ಕೊಡುವ ಒಂದು ಸೂತ್ರ ರಚಿಸಲಾಗಿದೆ. ಅದೇ ಜಿಎಸ್​ಟಿ ಕಾಂಪೆನ್ಸೇಶನ್ ಹಂಚಿಕೆ.

ಕರ್ನಾಟಕ ಮಾತ್ರವಲ್ಲ ಮಹಾರಾಷ್ಟ್ರ, ಗುಜರಾತ್​ಗೂ ಕಡಿಮೆ ಜಿಎಸ್​ಟಿ ಹಂಚಿಕೆ

ಅತಿಹೆಚ್ಚು ಜಿಎಸ್​ಟಿ ಸಂಗ್ರಹವಾಗುವುದು ಮಹಾರಾಷ್ಟ್ರದಲ್ಲಿ. ಜೂನ್ ತಿಂಗಳಲ್ಲಿ 26,098 ಕೋಟಿ ರೂ ಜಿಎಸ್​ಟಿ ಸಂಗ್ರಹ ಮಾಡಿತ್ತು ಮಹಾರಾಷ್ಟ್ರ. ಕರ್ನಾಟಕ 11,193; ಗುಜರಾತ್ 10,119; ತಮಿಳುನಾಡು 9,600 ಕೋಟಿ ರೂ ಜಿಎಸ್​ಟಿ ಕಲೆಕ್ಷನ್ ಮಾಡಿವೆ. ಒಟ್ಟು ಅ ತಿಂಗಳು ಆದ ಜಿಎಸ್​ಟಿ ಸಂಗ್ರಹ 1,61,497 ಕೋಟಿ ರೂ. ಇದರಲ್ಲಿ ಕೇಂದ್ರ ಪಾಲು, ರಾಜ್ಯ ಪಾಲು ಬಿಟ್ಟು ಐಜಿಎಸ್​​ಟಿ ಸಂಗ್ರಹ ಆಗಿದ್ದು 80,292 ಕೋಟಿ ರೂ. ಈ ಐಜಿಎಸ್​ಟಿ ಮೊತ್ತದಲ್ಲಿ ಕೇಂದ್ರದ ಪಾಲು 36,224 ಕೋಟಿ ರೂ ಆದರೆ, ರಾಜ್ಯಗಳ ಪಾಲು 30,269 ಕೋಟಿ ರೂ.

ಇದನ್ನೂ ಓದಿFD: ಫಿಕ್ಸೆಡ್ ಡೆಪಾಸಿಟ್​ನಿಂದ ಬರೋ ಬಡ್ಡಿಗೆ ಎಷ್ಟು ಟ್ಯಾಕ್ಸ್ ಕಟ್ ಆಗುತ್ತೆ? ಟಿಡಿಎಸ್ ಕಡಿತಗೊಳ್ಳದಿರಲು ಏನು ಮಾಡಬೇಕು? ಇಲ್ಲಿದೆ ಡೀಟೇಲ್ಸ್

ಐಜಿಎಸ್​ಟಿಯ ರಾಜ್ಯಗಳ ಪಾಲಾದ 30,269 ಕೋಟಿ ರೂ ಹಣವನ್ನು ಹಂಚಿಕೆ ಮಾಡಲಾಗಿದೆ. ಅದರ ಪ್ರಕಾರ 11,193 ಕೋಟಿ ತೆರಿಗೆ ಸಂಗ್ರಹಿಸಿರುವ ಕರ್ನಾಟಕ್ಕೆ ಸಿಕ್ಕಿರುವ ಐಜಿಎಸ್​ಟಿ ಪರಿಹಾರ 2,688 ಕೋಟಿ ರೂ. 26 ಸಾವಿರ ಕೋಟಿ ರೂ ಜಿಎಸ್​ಟಿ ಸಂಗ್ರಹಿಸಿದ ಮಹಾರಾಷ್ಟ್ರಕ್ಕೆ ಸಿಕ್ಕಿದ್ದು 3484 ಕೋಟಿ ರೂ ಮಾತ್ರವೇ. ಇನ್ನು, 8,104 ರೂನಷ್ಟು ಜಿಎಸ್​ಟಿ ಸಂಗ್ರಹಿಸಿದ ಉತ್ತರಪ್ರದೇಶಕ್ಕೆ ಸಿಕ್ಕ ಪರಿಹಾರ 3,236 ರೂ.

ಗಮನಿಸಿ, ಈ ಮೇಲಿನ ಜಿಎಸ್​ಟಿ ಪರಿಹಾರವು ಕೇವಲ ಐಜಿಎಸ್​ಟಿಯದ್ದು ಮಾತ್ರ. ರಾಜ್ಯದ ಪಾಲಿನ ಎಸ್​ಜಿಎಸ್​ಟಿ ತೆರಿಗೆ ಆಯಾ ರಾಜ್ಯಗಳಿಗೆ ಸರಿಪ್ರಮಾಣದಲ್ಲಿ ಸಂದಾಯವಾಗಿರುತ್ತದೆ. ಅಂತಾರಾಜ್ಯ ವಹಿವಾಟಿನ ತೆರಿಗೆಯಲ್ಲಿನ ಪಾಲು ಹಂಚಿಕೆಯಲ್ಲಿ ಈ ವ್ಯತ್ಯಯ ಇರುವುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:41 pm, Fri, 7 July 23

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ