Bank FD vs PPF: ಬ್ಯಾಂಕ್ ಎಫ್​ಡಿ ವರ್ಸಸ್ ಪಿಪಿಎಫ್ ಅಕೌಂಟ್- ಯಾವುದು ಉತ್ತಮ; ಬಡ್ಡಿ ದರ, ತೆರಿಗೆ ಹೋಲಿಕೆ

Comparison of Savings Schemes: ಪಿಪಿಎಫ್ ಯೋಜನೆ ಸರ್ಕಾರ ನಡೆಸುವ ಸ್ಮಾಲ್ ಸೇವಿಂಗ್ಸ್ ಸ್ಕೀಮ್​ಗಳ ವರ್ಗಕ್ಕೆ ಸೇರುತ್ತದೆ. ಬ್ಯಾಂಕುಗಳ ಎಫ್​ಡಿಯಷ್ಟು ಬಡ್ಡಿ ಸಿಗುವುದಿಲ್ಲವಾದರೂ ದೀರ್ಘಕಾಲದ ಹೂಡಿಕೆಗೆ ಉತ್ತಮ ಆಯ್ಕೆ ಪಿಪಿಎಫ್.

Bank FD vs PPF: ಬ್ಯಾಂಕ್ ಎಫ್​ಡಿ ವರ್ಸಸ್ ಪಿಪಿಎಫ್ ಅಕೌಂಟ್- ಯಾವುದು ಉತ್ತಮ; ಬಡ್ಡಿ ದರ, ತೆರಿಗೆ ಹೋಲಿಕೆ
ಹೂಡಿಕೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 07, 2023 | 5:35 PM

ಹಣ ಉಳಿತಾಯಕ್ಕೆ ಮತ್ತು ಹೂಡಿಕೆಗಳಿಗೆ ಬಹಳಷ್ಟು ಅಯ್ಕೆಗಳು ನಮ್ಮ ಮುಂದಿವೆ. ಕೆಲ ಹೂಡಿಕೆ ಯೋಜನೆಗಳು (Savings) ನಿಶ್ಚಿತ ದರದಲ್ಲಿ ರಿಟರ್ನ್ ಕೊಡುತ್ತವೆ. ಇನ್ನೂ ಕೆಲ ಯೋಜನೆಗಳು ಮಾರುಕಟ್ಟೆ ಏರಿಳಿಕೆಯೊಂದಿಗೆ ಜೋಡಿತವಾಗಿರುತ್ತವೆ. ಈ ಎರಡನೇ ವರ್ಗದ ಯೋಜನೆಗಳಲ್ಲಿ ಭರ್ಜರಿ ಲಾಭ ಬರಬಹುದು ಅಥವಾ ನಷ್ಟವೂ ಆಗಬಹುದು. ಅದೆಲ್ಲವೂ ರಿಸ್ಕ್ ವಿಚಾರ. ಇನ್ನು, ಮೊದಲನೇ ವರ್ಗದ ಹೂಡಿಕೆಗಳು ಬಹಳ ಸುರಕ್ಷಿತವಾಗಿದೆ. ಇದರಲ್ಲಿ ಬ್ಯಾಂಕ್ ಎಫ್​ಡಿ, ಗವರ್ನ್ಮೆಂಟ್ ಬಾಂಡ್, ಪಿಪಿಎಫ್ ಇತ್ಯಾದಿ ಠೇವಣಿ ಯೋಜನೆಗಳಿವೆ. ಬಡ್ಡಿ ಸಿಗುವುದು ಸ್ವಲ್ಪ ಕಡಿಮೆ ಆದರೂ ಸುಲಭ ನಿರ್ವಹಣೆ ಹಾಗೂ ನಿಶ್ಚಿತ ಆದಾಯ ಕಾರಣ ಇವು ಜನಪ್ರಿಯವಾಗಿವೆ. ಸಾಕಷ್ಟು ಸಂಖ್ಯೆಯಲ್ಲಿರುವ ಈ ಯೋಜನೆಗಳಲ್ಲಿ ಯಾವುದರಲ್ಲಿ ಹೂಡಿಕೆ ಮಾಡಬಹುದು ಎಂಬ ಪ್ರಶ್ನೆ ಎದುರಾಗಬಹುದು. ಬ್ಯಾಂಕ್ ಎಫ್​ಡಿ ಮತ್ತು ಪಿಪಿಎಫ್ ಯೋಜನೆಯ ಲಾಭ, ತೆರಿಗೆ ಇತ್ಯಾದಿ ಸಂಗತಿಗಳ ಒಂದು ಹೋಲಿಕೆ ಇಲ್ಲಿದೆ

ಪಿಪಿಎಫ್ ಯೋಜನೆ ಸರ್ಕಾರ ನಡೆಸುವ ಸ್ಮಾಲ್ ಸೇವಿಂಗ್ಸ್ ಸ್ಕೀಮ್​ಗಳ ವರ್ಗಕ್ಕೆ ಸೇರುತ್ತದೆ. ಬ್ಯಾಂಕುಗಳ ಎಫ್​ಡಿಯಷ್ಟು ಬಡ್ಡಿ ಸಿಗುವುದಿಲ್ಲವಾದರೂ ದೀರ್ಘಕಾಲದ ಹೂಡಿಕೆಗೆ ಉತ್ತಮ ಆಯ್ಕೆ ಪಿಪಿಎಫ್.

ಬ್ಯಾಂಕ್ ಎಫ್​ಡಿ ವಿಶೇಷತೆ

ಬ್ಯಾಂಕುಗಳಲ್ಲಿ ನೀವು ಎಫ್​ಡಿ ಇಟ್ಟರೆ ಸಿಗುವ ಬಡ್ಡಿ ಶೇ. 3ರಿಂದ ಶೇ. 9ರವರೆಗೂ ಇದೆ. ಸಹಕಾರಿ ಬ್ಯಾಂಕ್ ಇತ್ಯಾದಿ ಸಣ್ಣ ಬ್ಯಾಂಕುಗಳಿಗೆ ಹೋಲಿಸಿದರೆ ಎಚ್​ಡಿಎಫ್​ಸಿ, ಎಸ್​ಬಿಐ ಇತ್ಯಾದಿ ಪ್ರಮುಖ ಬ್ಯಾಂಕುಗಳಲ್ಲಿ ಎಫ್​ಡಿ ದರ ತುಸು ಕಡಿಮೆಯೇ. 1 ವರ್ಷದ ಠೇವಣಿಗೆ ಶೇ. 6ರಿಂದ 7 ರವರೆಗೂ ಇರುತ್ತದೆ. ಇಲ್ಲಿ ಗರಿಷ್ಠ ಬಡ್ಡಿ ದರ ಶೇ. 8ಕ್ಕಿಂತ ಹೆಚ್ಚಿರುವುದಿಲ್ಲ. ಹಿರಿಯ ನಾಗರಿಕರಿಗೆ ಶೇ. 0.5ರಷ್ಟು ಹೆಚ್ಚು ಬಡ್ಡಿ ಸಿಗಬಹುದು.

ಎಫ್​ಡಿಯಲ್ಲಿ ನಿಮಗೆ ಸಿಗುವ ಬಡ್ಡಿ ಹಣಕ್ಕೆ ಟಿಡಿಎಸ್ ಕಡಿತ ಆಗುತ್ತದೆ. ಈ ಟಿಡಿಎಸ್ ಅನ್ನು ಐಟಿ ರಿಟರ್ನ್ ಫೈಲ್ ಮಾಡುವಾಗ ಕ್ಲೈಮ್ ಮಾಡಲು ಸಾಧ್ಯ.

ಇದನ್ನೂ ಓದಿInvestment Options: ಭೂಮಿ ಮತ್ತು ಚಿನ್ನ; ಯಾವುದರ ಮೇಲೆ ಹೂಡಿಕೆ ಉತ್ತಮ? ಸಾಧಕ, ಬಾಧಕ ತಿಳಿದಿರಿ

ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಯೋಜನೆ ಬಗ್ಗೆ

ಪಿಪಿಎಫ್ ಸೇರಿದಂತೆ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರವನ್ನು ಸರ್ಕಾರ 3 ತಿಂಗಳಿಗೊಮ್ಮೆ ಪರಿಷ್ಕರಿಸುತ್ತದೆ. ಇತ್ತೀಚೆಗೆ ನಡೆಸಲಾದ ದರಪರಿಷ್ಕರಣೆ ಪ್ರಕಾರ ಪಿಪಿಎಫ್ ಬಡ್ಡಿ ದರ ಶೇ. 7.1ರಲ್ಲೇ ಮುಂದುವರಿಸಲಾಗಿದೆ.

ಭಾರತದ ಯಾವುದೇ ನಿವಾಸಿಯೂ ಪಿಪಿಎಫ್ ಯೋಜನೆ ಪಡೆಯಬಹುದು. ಅಪ್ರಾಪ್ತರ ಹೆಸರಿನಲ್ಲೂ ಖಾತೆ ಆರಂಭಿಸಬಹುದು. ವರ್ಷಕ್ಕೆ 500 ರೂನಿಂದ ಆರಂಭಿಸಿ 1,50,000 ರೂವರೆಗೂ ಹೂಡಿಕೆ ಮಾಡಬಹುದು. 15 ವರ್ಷ ಎಂದು ಈ ಸ್ಕೀಮ್ ಇದ್ದರೂ ಬೇಕೆಂದರೆ ಇನ್ನೂ ಹೆಚ್ಚು ವರ್ಷ ಸ್ಕೀಮ್ ಮುಂದುವರಿಸಬಹುದು.

ಎಫ್​ಡಿಯಂತೆ ಪಿಪಿಎಫ್​ನಲ್ಲಿ ತೆರಿಗೆ ಕಡಿತ ಎಂಬುದು ಇರುವುದಿಲ್ಲ. ಅಸಲು ಹಣಕ್ಕಾಗಲೀ, ಬಡ್ಡಿಗಾಗಲೀ ತೆರಿಗೆ ಅನ್ವಯ ಆಗುವುದಿಲ್ಲ. ಹೀಗಾಗಿ, ಲೆಕ್ಕಾಚಾರದ ಪ್ರಕಾರ ಪೂರ್ಣ ಲಾಭವನ್ನು ಕೊಡುತ್ತದೆ ಪಿಪಿಎಫ್.

ಇದನ್ನೂ ಓದಿMSS Certificate: ಬ್ಯಾಂಕ್ ಎಫ್​ಡಿಗಿಂತಲೂ ಹೆಚ್ಚು ಬಡ್ಡಿ ಕೊಡುವ ಸ್ಕೀಮ್ ಎಂಎಸ್​ಎಸ್ ಸರ್ಟಿಫಿಕೇಟ್

ಗಮನಿಸಬೇಕಾದ ಸಂಗತಿ ಎಂದರೆ ಪಿಪಿಎಫ್​ನಲ್ಲಿ ಅವಧಿಗೆ ಮುನ್ನ ಹಣ ಹಿಂಪಡೆಯಲು ನಿರ್ಬಂಧಗಳಿಗೆ. ಬ್ಯಾಂಕ್ ಎಫ್​ಡಿಯಾದರೆ ಒಂದಷ್ಟು ಕ್ಯಾನ್ಸಲೇಶನ್ ಚಾರ್ಜಸ್ ಕಟ್ಟಿ ಠೇವಣಿ ಮುಕ್ತಾಯಗೊಳಿಸಬಹುದು. ಆದರೆ, ಪಿಪಿಎಫ್​ನಲ್ಲಿ 15 ವರ್ಷದಲ್ಲಿ ಒಮ್ಮೆ ಮಾತ್ರ ಹಣ ಹಿಂಪಡೆಯುವ ಅವಕಾಶ ಇರುತ್ತದೆ. ಅದೂ ಪಾಲಿಸಿ ಆರಂಭವಾಗಿ ಆರನೇ ವರ್ಷದ ಬಳಿಕ ಇದು ಸಾಧ್ಯ. ಅದರಲ್ಲೂ ನಾಲ್ಕು ವರ್ಷ ಹಿಂದಿನ ಅವಧಿಯಲ್ಲಿ ಜಮೆಯಾಗಿದ್ದ ಠೇವಣಿಯ ಅರ್ಧ ಭಾಗ ಮಾತ್ರ ವಿತ್​ಡ್ರಾ ಮಾಡಲು ಸಾಧ್ಯ.

ಉದಾಹರಣೆಗೆ, ನೀವು ಪಿಪಿಎಫ್ ಯೋಜನೆಯನ್ನು ವರ್ಷಕ್ಕೆ 1 ಲಕ್ಷ ರೂನಂತೆ 10 ವರ್ಷ ಕಾಲ ಕಟ್ಟಿರುತ್ತೀರಿ. ನಿಮಗೆ ತುರ್ತಾಗಿ ಹಣ ಬೇಕಾಗಿಬರುತ್ತದೆ. ಪ್ರೀಮೆಚ್ಯೂರ್ ವಿತ್​​ಡ್ರಾಯಲ್ ಮಾಡಿದಾಗ ನಿಮಗೆ 6ನೇ ವರ್ಷದ ಅಂತ್ಯದಲ್ಲಿ ಜಮೆಯಾದ ಹಣದ ಅರ್ಧಭಾಗ ಮಾತ್ರ ಸಿಗುತ್ತದೆ. 6 ಲಕ್ಷ ರೂನಲ್ಲಿ 3 ಲಕ್ಷವನ್ನು ಮಾತ್ರ ನೀವು ಪಡೆಯಬಹುದು. ಇನ್ನುಳಿದಂತೆ ಯೋಜನೆ ಮುಂದುವರಿಯುತ್ತದೆ. 15 ವರ್ಷ ಮುಗಿದ ಬಳಿಕ ಪೂರ್ಣ ಹಣವನ್ನು ಹಿಂಪಡೆಯಲು ಸಾಧ್ಯ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ