MSS Certificate: ಬ್ಯಾಂಕ್ ಎಫ್​ಡಿಗಿಂತಲೂ ಹೆಚ್ಚು ಬಡ್ಡಿ ಕೊಡುವ ಸ್ಕೀಮ್ ಎಂಎಸ್​ಎಸ್ ಸರ್ಟಿಫಿಕೇಟ್

Finance Ministry Scheme For Women: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮಹಿಳಾ ಸಮ್ಮಾನ್ ಸೇವಿಂಗ್ಸ್ ಸರ್ಟಿಫಿಕೇಟ್ ಯೋಜನೆಯಲ್ಲಿ ಶೇ. 7.5ರಷ್ಟು ಬಡ್ಡಿ ನೀಡಲಾಗುತ್ತದೆ. ಎರಡು ವರ್ಷಕ್ಕೆ ಮೆಚ್ಯೂರ್ ಆಗುವ ಈ ಸ್ಕೀಮ್ ಮಹಿಳೆಯರಿಗೆಂದು ರೂಪಿಸಲಾಗಿದೆ.

MSS Certificate: ಬ್ಯಾಂಕ್ ಎಫ್​ಡಿಗಿಂತಲೂ ಹೆಚ್ಚು ಬಡ್ಡಿ ಕೊಡುವ ಸ್ಕೀಮ್ ಎಂಎಸ್​ಎಸ್ ಸರ್ಟಿಫಿಕೇಟ್
ಮಹಿಳಾ ಸಮ್ಮಾನ್ ಸೇವಿಂಗ್ಸ್ ಸರ್ಟಿಫಿಕೇಟ್
Follow us
|

Updated on: Jul 05, 2023 | 6:18 PM

ಕೇಂದ್ರ ಹಣಕಾಸು ಸಚಿವಾಲಯ ಕಳೆದ ಬಜೆಟ್​ನಲ್ಲಿ ಘೋಷಿಸಿದ ಮಹಿಳಾ ಸಮ್ಮಾನ್ ಸೇವಿಂಗ್ಸ್ ಸರ್ಟಿಫಿಕೇಟ್ ಯೋಜನೆ (Mahila Samman Savings Certificate) ಒಳ್ಳೆಯ ರಿಟರ್ನ್ ಕೊಡುತ್ತದೆ. ಒಂದೆಡೆ ಇದಕ್ಕೆ ಆಕರ್ಷಕ ಬಡ್ಡಿ ಸಿಗುತ್ತದೆ. ಇನ್ನೊಂದೆಡೆ ಈ ಸ್ಕೀಮ್​ನಲ್ಲಿ ಮಾಡುವ ಹೂಡಿಕೆಗೆ ತೆರಿಗೆ ಕಡಿತ ಇರುವುದಿಲ್ಲ. ಈ ಯೋಜನೆಗೆ ಎರಡು ವರ್ಷ ಕಾಲಾವಕಾಶ ಕೊಡಲಾಗಿದೆ. 2025 ಮಾರ್ಚ್ 31ರವರೆಗೂ ಮಹಿಳಾ ಸಮ್ಮಾನ್ ಸೇವಿಂಗ್ಸ್ ಸ್ಕೀಮ್​ನಲ್ಲಿ ಹೂಡಿಕೆಗೆ ಅವಕಾಶ ಇದೆ.

ಹೆಸರೇ ಹೇಳುವಂತೆ ಮಹಿಳಾ ಸಮ್ಮಾನ್ ಸೇವಿಂಗ್ಸ್ ಸರ್ಟಿಫಿಕೇಟ್ ಅನ್ನು ಮಹಿಳೆಯರಿಗೆಂದೇ ಮಾಡಲಾಗಿದೆ. ಯಾವುದೇ ವಯಸ್ಸಿನ ಮಹಿಳೆಯರ ಹೆಸರಿನಲ್ಲಿ ಇದನ್ನು ಆರಂಭಿಸಬಹುದು. ಅಪ್ರಾಪ್ತೆಯರಾಗಿದ್ದರೆ ಆಕೆಯ ಪರವಾಗಿ ಪೋಷಕರು ಈ ಯೋಜನೆ ಆರಂಭಿಸಬಹುದು. ಗರಿಷ್ಠ 2 ಲಕ್ಷ ರೂವರೆಗೂ ಹಣವನ್ನು 2 ವರ್ಷದ ಅವಧಿಗೆ ಠೇವಣಿ ಇಡಬಹುದು.

ಬ್ಯಾಂಕ್ ಎಫ್​ಡಿಗಿಂತ ಉತ್ತಮ ಬಡ್ಡಿ ದರ

ಬ್ಯಾಂಕ್​ಗಳಲ್ಲಿ ಮತ್ತು ಅಂಚೆ ಕಚೇರಿಗಳಲ್ಲಿ 2 ವರ್ಷದ ಠೇವಣಿಗೆ ಶೇ. 6.5ರಿಂದ ಶೇ. 7.5ರವರೆಗೂ ಬಡ್ಡಿ ನೀಡಲಾಗುತ್ತದೆ. ಎಂಎಸ್​ಎಸ್​ಸಿ ಉಳಿತಾಪತ್ರ ಯೋಜನೆಯಲ್ಲಿ ವರ್ಷಕ್ಕೆ ಶೇ. 7.5ರಷ್ಟು ಬಡ್ಡಿ ಸಿಗುತ್ತದೆ. ತ್ರೈಮಾಸಿಕಕ್ಕೊಮ್ಮೆ ಬಡ್ಡಿ ಸೇರುತ್ತಾ ಹೋಗುತ್ತದೆ. ಒಟ್ಟಾರೆ ಠೇವಣಿ ಹಣ ವರ್ಷಕ್ಕೆ ಶೇ. 7.7ರಷ್ಟು ಹೆಚ್ಚಾಗುತ್ತದೆ.

ಇದನ್ನೂ ಓದಿ: PM Kisan Update: ಪಿಎಂ ಕಿಸಾನ್ ಅಪ್​ಡೇಟ್; 14ನೇ ಕಂತು ಬಿಡುಗಡೆಗೆ ಮುನ್ನ ಈ 3 ಸಂಗತಿ ಖಚಿತಪಡಿಸಿಕೊಳ್ಳಿ

ಬ್ಯಾಂಕ್ ಎಫ್​ಡಿಯಲ್ಲಿ ನಿಮ್ಮ ಬಡ್ಡಿ ಆದಾಯ ವರ್ಷಕ್ಕೆ 40,000 ರೂ ದಾಟಿದರೆ ಅದಕ್ಕೆ ಶೇ. 10ರಷ್ಟು ಟಿಡಿಎಸ್ ಅನ್ವಯ ಆಗುತ್ತದೆ. ಇದೇ ನಿಯಮ ಮಹಿಳಾ ಸಮ್ಮಾನ್ ಸೇವಿಂಗ್ಸ್ ಸ್ಕೀಮ್​ಗೂ ಅನ್ವಯ ಆಗುತ್ತದೆ. ಆದರೆ, 2 ಲಕ್ಷ ರೂಗೆ ಸಿಗುವ ಬಡ್ಡಿ ವರ್ಷಕ್ಕೆ 40,000 ರೂಗಿಂತ ಕಡಿಮೆ ಇರುವುದರಿಂದ ಯಾವುದೇ ಟಿಡಿಎಸ್ ಕಡಿತ ಇರುವುದಿಲ್ಲ.

ಈ ಸ್ಕೀಮ್​ನಲ್ಲಿ ಕನಿಷ್ಠ ಹೂಡಿಕೆ 1,000 ರೂ ಆಗಿದ್ದು, 2 ಲಕ್ಷ ರೂ ಗರಿಷ್ಠ ಮಿತಿ ಎಂದು ನಿಗದಿ ಮಾಡಲಾಗಿದೆ. ಒಬ್ಬರು ಒಂದಕ್ಕಿಂತ ಹೆಚ್ಚು ಸರ್ಟಿಫಿಕೇಟ್​ಗಳನ್ನು ಹೊಂದಬಹುದು. ಆದರೆ, ಎರಡರ ಮಧ್ಯೆ ಕನಿಷ್ಠ 3 ತಿಂಗಳು ಅಂತರವಾದರೂ ಇರಬೇಕು.

ಕೇಂದ್ರ ಸರ್ಕಾರದ ಈ ಯೋಜನೆಯನ್ನು ಸಾರ್ವಜನಿಕರು ಎಲ್ಲಾ ಸರ್ಕಾರಿ ಬ್ಯಾಂಕುಗಳಲ್ಲಿ ಪಡೆಯಬಹುದು. ಹಾಗೆಯೇ, ಆಯ್ದ ನಾಲ್ಕು ಖಾಸಗಿ ಬ್ಯಾಂಕುಗಳಲ್ಲೂ ಈ ಸ್ಕೀಮ್ ಲಭ್ಯ ಇದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್