PM Kisan Update: ಪಿಎಂ ಕಿಸಾನ್ ಅಪ್ಡೇಟ್; 14ನೇ ಕಂತು ಬಿಡುಗಡೆಗೆ ಮುನ್ನ ಈ 3 ಸಂಗತಿ ಖಚಿತಪಡಿಸಿಕೊಳ್ಳಿ
3 Matters To Remember For PM Kisan Beneficiaries: ಪಿಎಂ ಕಿಸಾನ್ ಯೋಜನೆಯ 14ನೇ ಕಂತಿನ ಹಣ ಸಿಗಲು ದಿನಗಣನೆ ಇದೆ. ಇಕೆವೈಸಿ ಮಾಡುವುದೂ ಸೇರಿದಂತೆ ಫಲಾನುಭವಿಗಳು 3 ಸಂಗತಿ ಸರಿಯಾಗಿರುವುದನ್ನು ಖಾತ್ರಿಪಡಿಸಿಕೊಳ್ಳಬೇಕು. ಈ ಬಗ್ಗೆ ವಿವರ ಇಲ್ಲಿದೆ...
ಬೆಂಗಳೂರು: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 14ನೇ ಕಂತಿನ ಹಣಕ್ಕೆ (PM Kisan Yojana 14th Installment) ಕೋಟ್ಯಂತರ ರೈತರು ಕಾಯುತ್ತಿದ್ದಾರೆ. ಫೆಬ್ರುವರಿ ಕೊನೆಯ ವಾರದಲ್ಲಿ 13ನೇ ಕಂತು ಬಿಡುಗಡೆ ಆಗಿತ್ತು. ಈಗ ಐದನೇ ತಿಂಗಳು ನಡೆಯುತ್ತಿದೆ. ಜುಲೈ ಅಂತ್ಯದೊಳಗೆ 14ನೇ ಕಂತಿನ 2,000 ರೂ ಹಣ ಬಿಡುಗಡೆ ಆಗುವ ನಿರೀಕ್ಷೆ ಇದೆ. 13ನೇ ಕಂತಿನ ಹಣ ಹಲವು ಮಂದಿಗೆ ಸಿಕ್ಕಿರಲಿಲ್ಲ. ಅದಕ್ಕೆ ಬಹುತೇಕ ಕಾರಣ ಕೆವೈಸಿ ಅಪ್ಡೇಟ್ ಮಾಡದೇ ಇದ್ದುದು. ಅದರ ಜೊತೆಗೆ ಇನ್ನೂ ಕೆಲವಿಷ್ಟು ಕಾರಣಕ್ಕೆ ಕಿಸಾನ್ ಯೋಜನೆಯ ಕಂತಿನ ಹಣ ಬಿಡುಗಡೆ ಆಗಿಲ್ಲ. ಯೋಜನೆಯ ಹಣ ಸುಲಭವಾಗಿ ಖಾತೆಗೆ ವರ್ಗವಾಗುವಂತಾಗಲು ಕೆಲವೊಂದಿಷ್ಟು ದಾಖಲೆಗಳು ಸರಿಯಾಗಿ ಸಲ್ಲಿಕೆಯಾಗಿವೆಯಾ, ಜೋಡಣೆ ಆಗಿವೆಯಾ ಎಂಬುದನ್ನು ಖಚಿತಪಡಿಸಿಕೊಳ್ಳಿ. ಈ ನಿಟ್ಟಿನಲ್ಲಿ 4 ಸಂಗತಿಗಳ ಬಗ್ಗೆ ಗಮನ ವಹಿಸಿ.
ಪಿಎಂ ಕಿಸಾನ್ ಯೋಜನೆಯ 14ನೇ ಕಂತಿನ ಹಣಕ್ಕೆ ನೀವು ಮಾಡಬೇಕಾದ ಬಂದೋಬಸ್ತ್
- ನೀವು ಯೋಜನೆಯ ಫಲಾನುಭವಿ ಆಗಿದ್ದು ಇಕೆವೈಸಿ ಮಾಡಿಲ್ಲದಿದ್ದರೆ ಮೊದಲು ಅದನ್ನು ಮುಗಿಸಿ
- ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಜೋಡಿತವಾಗಿದೆಯಾ ಎಂಬುದನ್ನು ಖಚಿತಪಡಿಸಿಕೊಳ್ಳಿ
- ಆಧಾರ್ಗೆ ಜೋಡಿತವಾದ ಬ್ಯಾಂಕ್ ಖಾತೆಯಲ್ಲಿ ಡಿಬಿಟಿ ಅವಕಾಶ ಎನೇಬಲ್ ಮಾಡಿದ್ದೀರಾ ವಿಚಾರಿಸಿ.
ಆಧಾರ್ ಸೀಡಿಂಗ್ ಆಗಿರುವುದನ್ನು ಆನ್ಲೈನ್ನಲ್ಲೇ ಪರಿಶೀಲಿಸಿ
ಬ್ಯಾಂಕ್ ಖಾತೆಗೆ ಆಧಾರ್ ನಂಬರ್ ಸೀಡಿಂಗ್ ಅಥವಾ ಜೋಡಣೆ ಆಗಿದೆಯಾ ಎಂಬುದನ್ನು ಆನ್ಲೈನ್ನಲ್ಲೆ ಪರಿಶೀಲಿಸಬಹುದು. ಯುಐಡಿಎಐನ ವೆಬ್ಸೈಟ್ಗೆ ಹೋಗಿ ಅಲ್ಲಿ ಬ್ಯಾಂಕ್ ಮ್ಯಾಪರ್ ಮೂಲಕ ನೀವು ಕೆಲಸ ಮಾಡಬಹುದು. ಅದರ ನೇರ ಲಿಂಕ್ ಇಲ್ಲಿದೆ: resident.uidai.gov.in/bank-mapper
ನೀವು ಈ ಪುಟದಲ್ಲಿ ನಿಮ್ಮ ಆಧಾರ್ ನಂಬರ್ ಅನ್ನು ನಮೂದಿಸಿ ಪರೀಕ್ಷಿಸಬಹುದು. ಈ ನಂಬರ್ ಯಾವುದಾದರೂ ಬ್ಯಾಂಕ್ ಖಾತೆಗೆ ಸೀಡಿಂಗ್ ಆಗಿದೆಯಾ, ಇಲ್ಲವಾ ಎಂಬುದನ್ನು ತೋರಿಸುತ್ತದೆ.
ಇಕೆವೈಸಿ ಮಾಡುವುದು ಹೇಗೆ?
- ಪಿಎಂ ಕಿಸಾನ್ ವೆಬ್ಸೈಟ್ಗೆ ಹೋಗಿ pmkisan.gov.in
- ಅಲ್ಲಿ ಫಾರ್ಮರ್ಸ್ ಸೆಕ್ಷನ್ ಅಡಿಯಲ್ಲಿ ಇಕೆವೈಸಿ ಆಪ್ಷನ್ ಮೇಲೆ ಕ್ಲಿಕ್ ಮಾಡಿ
- ಆಧಾರ್ ನಂಬರ್ ಹಾಕಿ ಸರ್ಚ್ ಕ್ಲಿಕ್ ಮಾಡಿ
- ಆಧಾರ್ಗೆ ಜೋಡಿತವಾದ ನಿಮ್ಮ ಮೊಬೈಲ್ ನಂಬರ್ ಹಾಕಿರಿ
- ಒಟಿಪಿ ಪಡೆದು ಅದನ್ನು ನಮೂದಿಸಿ.
- ಇಲ್ಲಿಗೆ ಇಕೆವೈಸಿ ಮುಗಿಯುತ್ತದೆ.
ಆಫ್ಲೈನ್ನಲ್ಲಿ ಇಕೆವೈಸಿ ಮಾಡುವ ಕ್ರಮ
- ಸಮೀಪದ ಸಿಎಸ್ಸಿ ಸೆಂಟರ್ಗೆ ಹೋಗಿ
- ನಿಮ್ಮ ಬಯೋಮೆಟ್ರಿಕ್ ಮೂಲಕ ಲಾಗಿನ್ ಮಾಡಲಾಗುತ್ತದೆ
- ಆಧಾರ್ ನಂಬರ್ ಅಪ್ಡೇಟ್ ಮಾಡಿ, ಫಾರ್ಮ್ ಸಬ್ಮಿಟ್ ಮಾಡಿ
ಆಧಾರ್ ನಂಬರ್ಗೆ ಮೊಬೈಲ್ ನಂಬರ್ ಜೋಡಿತವಾಗದ ಫಲಾನುಭವಿಗಳಿಗೆ ಬೇರೆ ಒಂದು ಅವಕಾಶವನ್ನು ಸರ್ಕಾರ ಕೊಟ್ಟಿದೆ. ಪಿಎಂ ಕಿಸಾನ್ನ ಆ್ಯಪ್ನಲ್ಲಿ ಫೇಸ್ ಅಥೆಂಟಿಕೇಟರ್ ಫೀಚರ್ ಬಳಸಬಹುದು. ಇದರಲ್ಲಿ ನಿಮ್ಮ ಮುಖದ ಸ್ಕ್ಯಾನ್ ಮಾಡಬೇಕು. ಕಣ್ಣಿನ ಪೊರೆಯ ಬಯೋಮೆಟ್ರಿಕ್ ಮಾಹಿತಿಯನ್ನು ಆಧಾರ್ ಜೊತೆ ದೃಢೀಕರಿಸಿ, ಅದನ್ನು ದಾಖಲೆಯಾಗಿ ಸ್ವೀಕರಿಸಲಾಗುತ್ತದೆ. ಆ ಮೂಲಕ ಇಕೆವೈಸಿ ಪೂರ್ಣಗೊಳ್ಳುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 5:38 pm, Wed, 5 July 23