IND vs ENG: ಇನ್ನೊಂದು ಗೆಲುವು; ಆಂಗ್ಲರ ನೆಲದಲ್ಲಿ ಇತಿಹಾಸ ಸೃಷ್ಟಿಸಲಿದೆ ಟೀಂ ಇಂಡಿಯಾ
England Women vs India Women: ಭಾರತದ ಮಹಿಳಾ ಕ್ರಿಕೆಟ್ ತಂಡ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ 2-0 ಮುನ್ನಡೆಯಲ್ಲಿದೆ. ಮೂರನೇ ಪಂದ್ಯ ಗೆದ್ದರೆ ಭಾರತ ಇತಿಹಾಸ ನಿರ್ಮಿಸಲಿದೆ. ಮೊದಲ ಎರಡು ಪಂದ್ಯಗಳಲ್ಲಿ ಸ್ಮೃತಿ ಮಂಧಾನ, ಹರ್ಲೀನ್ ಡಿಯೋಲ್, ಅಮನ್‌ಜೋತ್ ಕೌರ್ ಮತ್ತು ಜೆಮಿಮಾ ರೊಡ್ರಿಗಸ್ ಅವರ ಅದ್ಭುತ ಪ್ರದರ್ಶನದಿಂದ ಭಾರತ ಗೆದ್ದಿದೆ. ಇಂಗ್ಲೆಂಡ್ ತನ್ನ ಅಗ್ರ ಕ್ರಮಾಂಕದ ಬ್ಯಾಟಿಂಗ್ ಸಮಸ್ಯೆಯನ್ನು ನಿವಾರಿಸಬೇಕಿದೆ.

ಭಾರತದ ಮಹಿಳಾ ಹಾಗೂ ಪುರುಷರ ತಂಡಗಳು ಪ್ರಸ್ತುತ ಇಂಗ್ಲೆಂಡ್ ಪ್ರವಾಸದಲ್ಲಿವೆ. ಒಂದೆಡೆ ಪುರುಷರ ತಂಡ ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡುತ್ತಿದ್ದರೆ, ಮತ್ತೊಂದೆಡೆ ಮಹಿಳಾ ತಂಡವು ಆತಿಥೇಯ ಮಹಿಳಾ ತಂಡದ ವಿರುದ್ಧ ಟಿ20 (T20I) ಸರಣಿಯನ್ನು ಆಡುತ್ತಿದೆ. ಭಾರತೀಯ ಮಹಿಳಾ ತಂಡದ (India Women’s Cricket) ಬಗ್ಗೆ ಹೇಳುವುದಾದರೆ, ಉಭಯ ತಂಡಗಳ ನಡುವೆ ಇಲ್ಲಿಯವರೆಗೆ ನಡೆದಿರುವ ಎರಡಕ್ಕೆ ಎರಡೂ ಟಿ20 ಪಂದ್ಯಗಳನ್ನು ಭಾರತ ತಂಡ ಗೆದ್ದುಕೊಂಡಿದೆ ಈಗ ಈ ಎರಡೂ ತಂಡಗಳ ನಡುವಿನ ಮೂರನೇ ಟಿ20 ಪಂದ್ಯ ಜುಲೈ 4 ರಂದು ಲಂಡನ್‌ನ ಕೆನ್ನಿಂಗ್ಟನ್ ಓವಲ್‌ನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ, ಟೀಂ ಇಂಡಿಯಾ ವಿಶೇಷ ಸಾಧನೆಯತ್ತ ಗಮನ ಹರಿಸಲಿದೆ. ಟೀಂ ಇಂಡಿಯಾ ಮೂರನೇ ಟಿ20 ಗೆದ್ದರೆ, ಅದು ಮೊದಲ ಬಾರಿಗೆ ಇಂಗ್ಲೆಂಡ್ ವಿರುದ್ಧ ಟಿ20 ಸರಣಿಯನ್ನು ಗೆದ ದಾಖಲೆ ಬರೆಯಲಿದೆ.
ಇತಿಹಾಸ ಸೃಷ್ಟಿಸುವತ್ತಾ ಗಮನ
ಇಲ್ಲಿಯವರೆಗೆ, ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ ಒಮ್ಮೆಯೂ ಟಿ20 ಸರಣಿಯನ್ನು ಗೆದ್ದಿಲ್ಲ. ಈ ಎರಡೂ ತಂಡಗಳ ನಡುವಿನ ಏಕೈಕ ಪಂದ್ಯ 2006 ರಲ್ಲಿ ಡರ್ಬಿಯಲ್ಲಿ ನಡೆದಿತ್ತು. ಆ ಪಂದ್ಯದಲ್ಲಿ ಇಂಗ್ಲೆಂಡ್ ಗೆಲುವು ಸಾಧಿಸಿತ್ತು. ಆ ಬಳಿಕ ಭಾರತದಲ್ಲಿ ನಡೆದಿದ್ದ ಸರಣಿ ಹಾಗೂ ಇಂಗ್ಲೆಂಡ್‌ನಲ್ಲಿ ನಡೆದಿದ್ದ ಟಿ20 ಸರಣಿಯಲ್ಲಿ ಭಾರತ ತಂಡ ಸೋಲನ್ನು ಅನುಭವಿಸಿದೆ. ಇದೀಗ ಈ ಸರಣಿಯನ್ನು ಗೆದ್ದು ಇತಿಹಾಸ ಸೃಷ್ಟಿಸುವ ತವಕದಲ್ಲಿ ಟೀಂ ಇಂಡಿಯಾ ಇದೆ. ಈ ಸರಣಿಯಲ್ಲಿ ಟೀಂ ಇಂಡಿಯಾದ ಎಲ್ಲಾ ಆಟಗಾರ್ತಿಯರು ಉತ್ತಮ ಫಾರ್ಮ್‌ನಲ್ಲಿರುವುದು ಒಳ್ಳೆಯ ವಿಷಯ. ಮೊದಲ ಎರಡು ಟಿ20ಗಳಲ್ಲಿ, ಟೀಂ ಇಂಡಿಯಾ ಮಾರಕ ಬ್ಯಾಟಿಂಗ್ ಮತ್ತು ಆಕ್ರಮಣಕಾರಿ ಬೌಲಿಂಗ್‌ನಿಂದಾಗಿ ಇಂಗ್ಲೆಂಡ್ ತಂಡವನ್ನು ಸೋಲಿಸಿದೆ.
ಸತತ 2 ಪಂದ್ಯ ಗೆದ್ದಿರುವ ಭಾರತ
ಮೊದಲ ಪಂದ್ಯದ ಬಗ್ಗೆ ಹೇಳುವುದಾದರೆ, ಭಾರತ ತಂಡದ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಅವರ 112 ರನ್‌ಗಳ ಇನ್ನಿಂಗ್ಸ್ನ ಆಧಾರದ ಮೇಲೆ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 20 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 210 ರನ್ ಗಳಿಸಿತು. ಈ ಪಂದ್ಯದಲ್ಲಿ ಸ್ಮೃತಿ ಮಂಧಾನ ಹೊರತುಪಡಿಸಿ, ಹರ್ಲೀನ್ ಡಿಯೋಲ್ 43 ರನ್‌ಗಳ ಇನ್ನಿಂಗ್ಸ್ ಆಡಿದರು. ಇದಕ್ಕೆ ಉತ್ತರವಾಗಿ, ಇಂಗ್ಲೆಂಡ್ ತಂಡ 113 ರನ್‌ಗಳಿಗೆ ಆಲೌಟ್ ಆಯಿತು. ನಾಯಕಿ ನ್ಯಾಟ್ ಸಿವರ್ ಬ್ರಂಟ್ 66 ರನ್ ಗಳಿಸಿದರಾದರೂ ತಮ್ಮ ತಂಡವನ್ನು ಗೆಲುವಿನತ್ತ ಕೊಂಡೊಯ್ಯುವಲ್ಲಿ ವಿಫಲರಾದರು. ಶ್ರೀ ಚರಣಿ ಭಾರತ ಪರ 4 ವಿಕೆಟ್ ಪಡೆದರು.
ಇದರ ನಂತರ ನಡೆದ ಎರಡನೇ ಟಿ20ಪಂದ್ಯದಲ್ಲಿವನ್ನು ಸಹ ಟೀಂ ಇಂಡಿಯಾ 24 ರನ್‌ಗಳಿಂದ ಗೆದ್ದುಕೊಂಡಿತ್ತು. ಈ ಪಂದ್ಯದಲ್ಲೂ ಮೊದಲು ಬ್ಯಾಟಿಂಗ್ ಮಾಡಿದ ಭಾರತ 181 ರನ್ ಕಲೆಹಾಕಿತು. ತಂಡದ ಪರ ಅಮನ್‌ಜೋತ್ ಕೌರ್ ಅಜೇಯ 63 ರನ್ ಬಾರಿಸಿದರೆ, ಜೆಮಿಮಾ ರೊಡ್ರಿಗಸ್ ಕೂಡ 63 ರನ್‌ಗಳ ಕಾಣಿಕೆ ನೀಡಿದರು. ಇದಕ್ಕೆ ಉತ್ತರವಾಗಿ ಆತಿಥೇಯ ಇಂಗ್ಲೆಂಡ್ ಕೇವಲ 157 ರನ್‌ಗಳನ್ನು ಮಾತ್ರ ಗಳಿಸಲು ಸಾಧ್ಯವಾಯಿತು.
ಟಿ20 ವಿಶ್ವಕಪ್ ಗೆಲುವಿನ ಬಗ್ಗೆ ಭಾವುಕರಾಗಿ ಮಾತನಾಡಿದ ಹಾರ್ದಿಕ್; ವಿಡಿಯೋ
ಗೆಲುವಿಗಾಗಿ ಇಂಗ್ಲೆಂಡ್ ತಂಡದ ಹುಡುಕಾಟ
ಈ ಸರಣಿಯಲ್ಲಿ ಇಂಗ್ಲೆಂಡ್ ತಂಡ ಮತ್ತೆ ಗೆಲುವು ಸಾಧಿಸಬೇಕಾದರೆ, ಮೂರನೇ ಟಿ20 ಗೆಲ್ಲುವುದು ಅವರಿಗೆ ಬಹಳ ಮುಖ್ಯ. ತಂಡದಲ್ಲಿ ಅತ್ಯುತ್ತಮ ಆಟಗಾರರಿದ್ದಾರಾದರೂ ಇಲ್ಲಿಯವರೆಗೆ ಅವರು ಛಾಪು ಮೂಡಿಸಲು ವಿಫಲರಾಗಿದ್ದಾರೆ. ಇಂಗ್ಲೆಂಡ್‌ಗೆ ದೊಡ್ಡ ಸಮಸ್ಯೆ ಎಂದರೆ ತಂಡದ ಅಗ್ರ ಬ್ಯಾಟಿಂಗ್ ಕ್ರಮಾಂಕ. ಸೋಫಿಯಾ ಡಂಕ್ಲಿ ಮತ್ತು ಡ್ಯಾನಿ ವ್ಯಾಟ್-ಹಾಡ್ಜ್ ಈ ಸರಣಿಯಲ್ಲಿ ಇಲ್ಲಿಯವರೆಗೆ ದೊಡ್ಡ ಸ್ಕೋರ್ ಗಳಿಸಲು ಸಾಧ್ಯವಾಗಿಲ್ಲ. ಅಷ್ಟೇ ಅಲ್ಲ, ಬೌಲರ್‌ಗಳು ಅದ್ಭುತ ಬೌಲಿಂಗ್ ಮಾಡುವ ಮೂಲಕ ಭಾರತೀಯ ಬ್ಯಾಟ್ಸ್‌ಮನ್‌ಗಳ ಮೇಲೆ ಒತ್ತಡ ಹೇರಬೇಕಾಗುತ್ತದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
