ಕ್ಷೇತ್ರದ ಕುಡಿಯುವ ನೀರಿನ ಸಮಸ್ಯೆಯೊಂದಿಗೆ ಡಿಕೆ ಶಿವಕುಮಾರ್ ಮನೆ ಕದ ತಟ್ಟಿದ ಎಂಬಿ ಪಾಟೀಲ್
ಸಚಿವ ಸಂಪುಟ ಸಭೆಯನ್ನು ಬೇರೆ ಬೇರೆ ಸ್ಥಳಗಳಲ್ಲಿ ನಡೆಸುವ ಸರ್ಕಾರದ ನಿರ್ಧಾರ ಸಾಧುವೋ ಅಥವಾ ಅದು ಸರ್ಕಾರೀ ಬೊಕ್ಕಸದ ಮೇಲೆ ಹೊರೆಯೋ ಅಂತ ಸರ್ಕಾರದ ಪ್ರತಿನಿಧಿಗಳು ಹೇಳಬೇಕು. ಅಭಿವೃದ್ಧಿ ಕಾರ್ಯಗಳಿಗೆ ಹಣವಿಲ್ಲ ಅಂತ ಪರಮೇಶ್ವರ್ರಂಥ ನಾಯಕರೇ ಮುಖ್ಯಮಂತ್ರಿ ಇರುವ ವೇದಿಕೆಯಲ್ಲಿ ಹೇಳುತ್ತಾರೆಂದರೆ ಸರ್ಕಾರದ ಹಣಕಾಸು ಸ್ಥಿತಿ ಹೇಗಿದೆ ಅಂತ ಗೊತ್ತಾಗುತ್ತದೆ.
ಬೆಂಗಳೂರು, ಜುಲೈ 3: ಬೃಹತ್ ಕೈಗಾರಿಕೆಗಳ ಸಚಿವ ಎಂಬಿ ಪಾಟೀಲ್ ನಗರದಲ್ಲಿ ಇಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರನ್ನು ಭೇಟಿಯಾಗಿ ಅಚ್ಚರಿ ಮೂಡಿಸಿದರು. ನಂತರ ಮಾಧ್ಯಮಗಳೊಂದಿಗೆ ಮಾತಾಡಿದ ಅವರು ಮುಂದಿನ ಸಚಿವ ಸಂಪುಟ ಸಭೆ ವಿಜಯಪುರದಲ್ಲಿ ನಡೆಯಲಿದೆ, ತನ್ನ ಕ್ಷೇತ್ರದ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಪ್ರಸ್ತಾಪವೊಂದನ್ನು ನೀರಾವರಿ ಸಚಿವರೂ ಆಗಿರುವ ಶಿವಕುಮಾರ್ ಅವರಿಗೆ ಸಲ್ಲಿಸಬೇಕಿತ್ತು, ಅದಕ್ಕಾಗಿ ಬಂದೆ ಎಂದು ಹೇಳಿದರು. ಬಬಲೇಶ್ವರದಲ್ಲಿ ಒಂದು ನೈಸರ್ಗಿಕ ಜಲಪಾತವಿದೆ, ಅದರ ಬಳಿ ಜಲಾಶಯವೊಂದನ್ನು ನಿರ್ಮಿಸಿದರೆ ಕ್ಷೇತ್ರದ ಜನರಿಗೆ 6.8 ಟಿಎಂಸಿ ಕುಡಿಯುವ ನೀರು ಸಿಗಲಿದೆ ಎಂದು ಪಾಟೀಲ್ ಹೇಳಿದರು.
ಇದನ್ನೂ ಓದಿ: ಬೆಂಗಳೂರು-ವಿಜಯಪುರ ರೈಲು ಪ್ರಯಾಣ 15ರಿಂದ 10 ಗಂಟೆಗೆ ಇಳಿಕೆ: ಎಂಬಿ ಪಾಟೀಲ್ ಮಹತ್ವದ ಚರ್ಚೆ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

ಸಂಜು ಬಸಯ್ಯ ಪತ್ನಿಗೆ ಯುವಕನಿಂದ ಅಶ್ಲೀಲ ಸಂದೇಶ; ಬುದ್ಧಿ ಕಲಿಸಿದ ನಟ

ಆಲ್ಕೋಹಾಲ್ ಬಾಟಲಿ ಕದಿಯಲು ಹೋಗಿ ಕಿಟಕಿ ಸರಳಲ್ಲಿ ತಲೆ ಸಿಲುಕಿಸಿಕೊಂಡ ಕುಡುಕ

ಮಳೆನೀರು ತುಂಬಿದ್ದ ಗುಂಡಿಗೆ ಬಿದ್ದ ಮೊಬೈಲ್; ಬಿಕ್ಕಿ ಬಿಕ್ಕಿ ಅತ್ತ ಯುವಕ

ಐಎಎಫ್ ಪೈಲಟ್ ಲೋಕೇಂದ್ರ ಸಿಂಧುಗೆ 1 ತಿಂಗಳ ಮಗನಿಂದ ಅಂತಿಮನಮನ
