AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ace Pro: ಕೇವಲ 3.99 ಲಕ್ಷ ರೂ ಬೆಲೆಯ ಟಾಟಾ ಏಸ್ ಪ್ರೋ; ಬೆಂಗಳೂರು, ಮಂಗಳೂರು, ಹುಬ್ಬಳ್ಳಿ ಸೇರಿ ಎಲ್ಲೆಡೆ ಭಾರೀ ಬೇಡಿಕೆ

TATA ACE Pro Showcased in Bengaluru: Driving Growth, Fuelling Ambition: ಬೆಂಗಳೂರಿನಲ್ಲಿ ಮೊನ್ನೆ ಅನಾವರಣಗೊಂಡ ಟಾಟಾ ಏಸ್ ಪ್ರೋ ಸರಕು ಸಾಗಣೆ ವಾಹನಕ್ಕೆ ರಾಜ್ಯಾದ್ಯಂತ ಬೇಡಿಕೆ ಇದೆ. ಪೆಟ್ರೋಲ್, ಇವಿ, ಬೈ-ಫುಯಲ್ ವೇರಿಯೆಂಟ್​​ಗಳ ಏಸ್ ಪ್ರೋ ವಾಹನಗಳ ಬೆಲೆ ಕೇವಲ 3.99 ಲಕ್ಷ ರೂ ಇದೆ.

Ace Pro: ಕೇವಲ 3.99 ಲಕ್ಷ ರೂ ಬೆಲೆಯ ಟಾಟಾ ಏಸ್ ಪ್ರೋ; ಬೆಂಗಳೂರು, ಮಂಗಳೂರು, ಹುಬ್ಬಳ್ಳಿ ಸೇರಿ ಎಲ್ಲೆಡೆ ಭಾರೀ ಬೇಡಿಕೆ
ಟಾಟಾ ಏಸ್ ಪ್ರೋ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 03, 2025 | 2:30 PM

Share

ಬೆಂಗಳೂರು, ಜುಲೈ 3: ಉದ್ಯಾನನಗರಿಯಲ್ಲಿ ಅನಾವರಣಗೊಂಡ ಟಾಟಾ ಮೋಟಾರ್ಸ್ ನಿರ್ಮಿತ ಏಸ್ ಪ್ರೋ ವಾಹನಕ್ಕೆ (Tata ACE Pro) ರಾಜ್ಯಾದ್ಯಂತ ಬೇಡಿಕೆ ಕುದುರುತ್ತಿದೆ. ಕೇವಲ 3.99 ಲಕ್ಷಕ್ಕೆ ಸಿಗುವ ಈ ನಾಲ್ಕು ಚಕ್ರಗಳ ಸರಕು ಸಾಗಣೆ ವಾಹನ ತನ್ನ ಸೆಗ್ಮೆಂಟ್​​ನಲ್ಲಿ ಬೆಸ್ಟ್ ಎನಿಸಿದೆ. ವಾಹನದ ಗುಣಮಟ್ಟಕ್ಕೆ ಈ ಬೆಲೆಗೆ ಸರಿಸಾಟಿ ಈ ಮಾರುಕಟ್ಟೆಯಲ್ಲಿ ಇಲ್ಲ ಎಂದು ಹೇಳಲಾಗುತ್ತಿದೆ.

ಅಪಘಾತ ಪರೀಕ್ಷೆಗೆ ಒಳಪಟ್ಟ ಕ್ಯಾಬಿನ್, ಡಿ+1 ಸೀಟಿಂಗ್, ಸೀಟ್​ಬೆಲ್ಟ್ ಇತ್ಯಾದಿ ಪ್ರಬಲ ಫೀಚರ್​​ಗಳು ಏಸ್ ಪ್ರೋನಲ್ಲಿ ಇವೆ. ಏಸ್ ಪ್ರೋ ಪೆಟ್ರೋಲ್, ಏಸ್ ಪ್ರೋ ಇವಿ, ಏಸ್ ಪ್ರೋ ಬೈ-ಫುಯಲ್ ವೇರಿಯೆಂಟ್​​ಗಳೂ ಲಭ್ಯ ಇವೆ.

ಏಸ್ ಪ್ರೋ ಬೈ-ಫುಯಲ್​​ಗೆ ಕರಾವಳಿ ಹಾಗೂ ಉತ್ತರ ಕರ್ನಾಟಕದ ಭಾಗಗಳಲ್ಲಿ ಭಾರೀ ಬೇಡಿಕೆ ಬರುತ್ತಿದೆ. ಇಲ್ಲೆಲ್ಲಾ ಸಿಎನ್​​ಜಿ ಲಭ್ಯತೆ ಉತ್ತಮವಾಗಿರುವುದು ಒಂದು ಕಾರಣ. ಹಾಗೆಯೇ, ಈ ಭಾಗದ ಮಾರ್ಕೆಟ್ ಲೋಡ್ ಆಪರೇಟರ್​​ಗಳಿಗೆ ಸಣ್ಣ ಸಣ್ಣ ಸಾಗಣೆ ವೆಚ್ಚವೂ ಮುಖ್ಯ ಎನಿಸುವುದರಿಂದ ಈ ವಾಹನ ಬಹಳ ಉಪಯುಕ್ತ ಎನಿಸುತ್ತದೆ. ನೀರು, ಪಾರ್ಸಲ್ ಇತ್ಯಾದಿ ನಾನಾ ರೀತಿಯ ಸರಕುಗಳನ್ನು ಕಡಿಮೆ ವೆಚ್ಚದಲ್ಲಿ ಸಾಗಿಸಲು ಸಾಧ್ಯವಿದೆ.

ಬೆಂಗಳೂರು ಇತ್ಯಾದಿ ಇತರ ಭಾಗಗಳಲ್ಲಿ ಏಸ್ ಪ್ರೋ ಪೆಟ್ರೋಲ್ ವೇರಿಯೆಂಟ್​​ಗೆ ಬೇಡಿಕೆ ಇದೆ. ಇಲ್ಲಿರುವ ತಳಮಟ್ಟದ ಉದ್ದಿಮೆದಾರರ ಕನಸು ಸಾಕಾರಗೊಳಿಸಲು ಈ ಗಾಡಿ ಹೇಳಿ ಮಾಡಿಸಿದ್ದಾಗಿದೆ.

ಟಾಟಾ ಸಂಸ್ಥೆ ನಡೆಸುತ್ತಿರುವ ‘ಅಬ್ ಮೇರಿ ಬಾರಿ’ (ಈಗ ನನ್ನ ಸರದಿ) ಆಂದೋಲನದ ಆಶಯಕ್ಕೆ ತಕ್ಕುದಾಗಿ ಏಸ್ ಪ್ರೋ ನಿರ್ಮಿತವಾಗಿದೆ. ಇದು ನೈಜ ಜಗತ್ತಿನ ಆಶಯಕ್ಕೆ ನಿರ್ಮಿತವಾದ ಯಂತ್ರ ಎನ್ನುವ ಸಂದೇಶ ನೀಡುತ್ತಿದೆ.

ಟಾಟಾ ಅವರ ಅಬ್ ಮೇರಿ ಬಾರಿ ಅಭಿಯಾನದ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ