ಹೊಸ ವಿಳಾಸಕ್ಕೆ ಹೋಗ್ತಿದ್ದೀರಾ? ನಿಮ್ಮ ಎಲ್​ಪಿಜಿ ಸಂಪರ್ಕವನ್ನು ವರ್ಗಾಯಿಸುವುದು ಹೇಗೆ? ಇಲ್ಲಿದೆ ಮಾಹಿತಿ

How To Transfer Your LPG Connection: ನೀವು ಆನ್‌ಲೈನ್ ಮೂಲಕ ಹೊಸ ಎಲ್‌ಪಿಜಿ ಸಂಪರ್ಕಕ್ಕೆ ಅರ್ಜಿ ಸಲ್ಲಿಕೆ ಮಾಡುವುದಾದರೆ ನೀವು ನಿಮಗೆ ಸಮೀಪದ ಎಲ್‌ಪಿಜಿ ಸಿಲಿಂಡರ್ ವಿತರಕರ ಸಂಪರ್ಕ ಲಭ್ಯವಾಗಲಿದೆ. ನೀವು ಆನ್‌ಲೈನ್ ಬ್ಯಾಂಕಿಂಗ್ ಮೂಲಕ ಪಾವತಿ ಮಾಡಿದ ಬಳಿಕ, ವಿತರಕರು ನಿಮ್ಮ ಮನೆಗೆ ಆಗಮಿಸಿ, ಹೊಸ ಸಂಪರ್ಕವನ್ನು ಮಾಡಲಿದ್ದಾರೆ. ನೀವು ಹೊಸ ಸಂಪರ್ಕ ಪಡೆಯಲು ಆಧಾರ್, ಪಾಸ್‌ಪೋರ್ಟ್‌ನಂತಹ ಗುರುತಿನ ಚೀಟಿ, ಪಡಿತರ ಚೀಟಿ, ವಿದ್ಯುತ್ ಬಿಲ್‌ನಂತಹ ವಿಳಾಸ ಮಾಹಿತಿ ಬೇಕಾಗುತ್ತದೆ. ಆಫ್​ಲೈನ್​ನಲ್ಲಿ ಮಾಡುವುದಾದರೆ ಹೊಸ ವಿಳಾಸದ ಪುರಾವೆಯೊಂದಿಗೆ ಆಧಾರ್​ನಂತಹ ಗುರುತಿನ ದಾಖಲೆಗಳನ್ನು ಸಲ್ಲಿಸಬೇಕು. ನೀವು ವಿತರಕರಿಗೆ ಅರ್ಜಿಯನ್ನು ಬರೆಯಬಹುದು ಅಥವಾ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಬಹುದು ಮತ್ತು ಅಗತ್ಯ ವಿವರಗಳನ್ನು ಭರ್ತಿ ಮಾಡಿ ಮತ್ತು ಬೇಕಾದ ದಾಖಲೆಗಳನ್ನು ಲಗತ್ತಿಸಬಹುದು.

ಹೊಸ ವಿಳಾಸಕ್ಕೆ ಹೋಗ್ತಿದ್ದೀರಾ? ನಿಮ್ಮ ಎಲ್​ಪಿಜಿ ಸಂಪರ್ಕವನ್ನು ವರ್ಗಾಯಿಸುವುದು ಹೇಗೆ? ಇಲ್ಲಿದೆ ಮಾಹಿತಿ
ಸಿಲಿಂಡರ್

Updated on: Jan 13, 2025 | 2:14 PM

ನೀವು ಹೊಸ ವಿಳಾಸಕ್ಕೆ ಹೋಗಲು ಯೋಜಿಸುತ್ತಿದ್ದೀರಾ? ಎಲ್​​ಪಿಜಿ ಸಂಪರ್ಕವನ್ನು ಹೇಗೆ ವರ್ಗಾಯಿಸುವುದು ಎನ್ನುವ ಚಿಂತೆಯಲ್ಲಿದ್ದೀರಾ ಹಾಗಾದರೆ ಈ ಲೇಖನ ಓದಿ. ಸ್ವಂತ ಮನೆಯಾಗಿರಬಹುದು ಅಥವಾ ಬಾಡಿಗೆಗೆಂದು ಬೇರೆಡೆಗೆ ಸ್ಥಳಾಂತರಗೊಂಡಾಗ ಮನೆಯ ವಸ್ತುಗಳನ್ನು ಸಾಗಿಸುವುದಕ್ಕಿಂತ ಸಿಲಿಂಡರ್ ಕನೆಕ್ಷನ್ ತೆಗೆದುಕೊಳ್ಳುವುದೇ ಕಷ್ಟವೆನಿಸಬಹುದು. ಯಾವುದೇ ಹೊಸ ಸ್ಥಳಕ್ಕೆ ಹೋದರೂ ನಿಮ್ಮ ವಿಳಾಸವನ್ನು ಗ್ಯಾಸ್ ಏಜೆನ್ಸಿಗೆ ಸಲ್ಲಿಸಬೇಕು.

ನೀವು ಆಫ್‌ಲೈನ್ ಮೂಲಕವು ಎಲ್‌ಪಿಜಿ ಸಿಲಿಂಡರ್ ಹೊಸ ಸಂಪರ್ಕವನ್ನು ಪಡೆಯಬಹುದು. ನಿಮ್ಮ ಸಮೀಪದ ಎಲ್‌ಪಿಜಿ ಸಿಲಿಂಡರ್ ವಿತರಕರ ಕಚೇರಿಗೆ ಭೇಟಿ ನೀಡಿ. ಅರ್ಜಿಯನ್ನು ಭರ್ತಿ ಮಾಡಿ. ದಾಖಲೆಯನ್ನು ಸಲ್ಲಿಕೆ ಮಾಡಿ. ನಿಮಗೆ ರಶೀದಿ ಜೊತೆಗೆ ರಿಜಿಸ್ಟ್ರೇಸನ್ ಹಾಗೂ ಬುಕ್ಕಿಂಗ್ ನಂಬರ್ ಲಭ್ಯವಾಗಲಿದೆ. ಹಾಗೆಯೇ ಪಾಸ್‌ಬುಕ್ ಕೂಡಾ ಲಭ್ಯವಾಗಲಿದೆ.
ನೀವು ಹೊಸ ನಗರ ಅಥವಾ ವಿತರಕರ ವ್ಯಾಪ್ತಿಯಿಂದ ಹೊರ ಹೋಗುತ್ತಿದ್ದರೆ ಏನು ಮಾಡಬೇಕು? ನೀವು ಭಾರತದಲ್ಲಿ ಬೇರೆ ಪ್ರದೇಶ ಅಥವಾ ಹೊಸ ನಗರಕ್ಕೆ ಶಿಫ್ಟ್​ ಆಗುತ್ತಿದ್ದರೆ ಹೀಗೆ ಮಾಡಿ.

ಹಂತ 1: ವಿತರಕರ ಕಚೇರಿಗೆ ಭೇಟಿ ನೀಡಿ

ಸಂಪರ್ಕವನ್ನು ವರ್ಗಾಯಿಸಲು ನೀವು ನೋಂದಾಯಿಸಿರುವ ನಿಮ್ಮ ಎಲ್​ಪಿಜಿ ವಿತರಕರ ಕಚೇರಿಗೆ ಭೇಟಿ ನೀಡಿ. ವಿತರಕರಿಂದ ಉಳಿದ ಕ್ರೆಡಿಟ್ ಪಡೆಯಲು ಗ್ಯಾಸ್ ಸಿಲಿಂಡರ್ ಹಾಗೂ ರೆಗ್ಯುಲೇಟರ್​ನ್ನು ಕೊಟ್ಟುಬಿಡಿ.

ಹಂತ 2: ಇ-ಗ್ರಾಹಕ ವರ್ಗಾವಣೆ ಸಲಹೆ(e-CTA) ಸಂಗ್ರಹಿಸಿ

ಸಿಲಿಂಡರ್ ಮತ್ತು ರೆಗ್ಯುಲೇಟರ್ ಸಲ್ಲಿಸಿದ ನಂತರ ನಿಮಗೆ ಇ-ಗ್ರಾಹಕ ವರ್ಗಾವಣೆ ಸಲಹೆಯನ್ನು ನೀಡಲಾಗುತ್ತದೆ. e-CTA ಎಂಬುದು ಒಂದು ಅಧಿಕೃತ ಕೋಡ್ ಆಗಿದ್ದು, ಅದನ್ನು ಒದಗಿಸಲಾಗುತ್ತದೆ. ಇದು ಸಬ್​ಸ್ಕ್ರಿಪ್ಷನ್ ವೋಚರ್(ಎಸ್​ವಿ) ಉತ್ಪಾದನೆಯಲ್ಲಿ ಸಹಾಯ ಮಾಡುತ್ತದೆ. ನೀವು ಅದೇ ನಗರಕ್ಕೆ ಹೋಗುತ್ತಿದ್ದರೆ ಇದು ಅನ್ವಯಿಸುತ್ತದೆ. ಹೊಸ ನಗರಕ್ಕೆ ಸ್ಥಳಾಂತರಗೊಂಡರೆ , ವಿತರಕರು ನಿಮಗೆ ಟರ್ಮಿನೇಷನ್ ವೋಚರ್(TV) ನೀಡುತ್ತಾರೆ.

ಹಂತ 3: ಹೊಸ ವಿತರಕರ ಕಚೇರಿಗೆ ಭೇಟಿ ನೀಡಿ

ನಿಮ್ಮ ಹೊಸ ಪ್ರದೇಶದಲ್ಲಿ ಗ್ಯಾಸ್ ವಿತರಕರ ಕಚೇರಿಗೆ ಭೇಟಿ ನೀಡಿ, ವಿಳಾಸ ಪುರಾವೆ, ಗುರುತಿನ ಪುರಾವೆ, ಸಬ್​ಸ್ಕ್ರಿಪ್ಷನ್ ವೋಚರ್ ಹಾಗೂ ಟರ್ಮಿನೇಷನ್ ವೋಚರ್​ನ್ನು ಸಂಸ್ಥೆಗೆ ಸಲ್ಲಿಸಿ.

ಹಂತ 4: ವರ್ಗಾವಣೆ ವೋಚರ್​ನಲ್ಲಿ ಉಲ್ಲೇಖಿಸಲಾದ ಹಣ ಪಾವತಿಸಿ

ಹೊಸ ಸಂಪರ್ಕಕ್ಕಾಗಿ ವರ್ಗಾವಣೆ ಚೀಟಿಯಲ್ಲಿ ನಮೂದಿಸಿದ ಮೊತ್ತವನ್ನು ಠೇವಣಿ ಮಾಡಿ. ಹೊಸ ಖಾಸಗಿ ಗ್ಯಾಸ್ ಏಜೆನ್ಸಿಯಿಂದ ನಿಮ್ಮ ಹೊಸ ಚಂದಾದಾರಿಕೆ ವೋಚರ್​ನ್ನು ಸಂಗ್ರಹಿಸಿ ಮತ್ತು ನಿಮ್ಮ ಹೆಸರಿನಲ್ಲಿ ಎಲ್​ಪಿಜಿ ಸಂಪರ್ಕವನ್ನು ಪಡೆಯಿರಿ.

ಮತ್ತಷ್ಟು ಓದಿ: LPG Cylinder Price: ವಾಣಿಜ್ಯ ಬಳಕೆಯ 19 ಕೆಜಿ ಸಿಲಿಂಡರ್ ಬೆಲೆ ಹೆಚ್ಚಳ, ಯಾವ್ಯಾವ ನಗರದಲ್ಲಿ ಎಷ್ಟಿದೆ ತಿಳಿಯಿರಿ

ಎಲ್​ಪಿಜಿ ಸಂಪರ್ಕದ ವರ್ಗಾವಣೆಗೆ ಅಗತ್ಯವಿರುವ ದಾಖಲೆಗಳು
ಗುರುತಿನ ಪುರಾವೆ(ಆಧಾರ್/ಮತದಾನ ಗುರುತಿನ ಚೀಟಿ)
ವಿಳಾಸದ ಪುರಾವೆ
ಗ್ಯಾಸ್ ಬುಕ್
ಗ್ಯಾಸ್ ರೆಗ್ಯೂಲೇಟರ್
ಗ್ಯಾಸ್ ಸಂಪರ್ಕ ಚೀಟಿ

ಸಬ್ಸಿಡಿ ವರ್ಗಾವಣೆಗೆ ಅರ್ಹರಾಗುವುದು ಹೇಗೆ?

ವಿಳಾಸವನ್ನು ಬದಲಾಯಿಸುವಾಗ ನೀವು ಸಬ್ಸಿಡಿ ವರ್ಗಾವಣೆಯನ್ನು ಮಾಡಬಹುದು. ನೀವು ಈಗಾಗಲೇ ಸಬ್ಸಿಡಿಯನ್ನು ಹೊಂದಿದ್ದರೆ ಮತ್ತು ನಿಮ್ಮ ಆಧಾರ್​ಕಾರ್ಡ್​ ಅನ್ನು ಗ್ಯಾಸ್​ ಸಂಪರ್ಕ ಮತ್ತು ಬ್ಯಾಂಕ್​ನೊಂದಿಗೆ ಲಿಂಕ್ ಮಾಡಿದ್ದರೆ ನೀವು ಇದರಿಂದ ಹೊರಗುಳಿಯಬಹುದು. ಆದಾಗ್ಯೂ ನೀವು ಸಬ್ಸಿಡಿ ಸಂಪರ್ಕ ಹೊಂದಿಲ್ಲದಿದ್ದರೆ ಮತ್ತು ಹೊಂದಲು ಬಯಸಿದರೆ

ಸಬ್ಸಿಡಿ ವರ್ಗಾವಣೆ ಪ್ರಕ್ರಿಯೆ ಇಲ್ಲಿದೆ

LPG ಖಾತೆಯೊಂದಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿದ ಜನರಿಗೆ ನೇರ ಲಾಭ ವರ್ಗಾವಣೆ

ನಿಮ್ಮ ಬಳಿ ಆಧಾರ್ ಕಾರ್ಡ್ ಇಲ್ಲದಿದ್ದರೆ mylpg [dot]in ಗೆ ಲಾಗ್ ಇನ್ ಮಾಡಿ

ನಿಮ್ಮ LPG ವಿತರಕ ಮತ್ತು ಸೇವಾ ಪೂರೈಕೆದಾರರನ್ನು ಆಯ್ಕೆಮಾಡಿಸೇವಾ ಪೂರೈಕೆದಾರರ ಪೋರ್ಟಲ್‌ಗೆ ಸೇರಲು DBT ಲಿಂಕ್ ಅನ್ನು ಕ್ಲಿಕ್ ಮಾಡಿ

ನಿಮ್ಮ ಬಳಿ ಆಧಾರ್ ಸಂಖ್ಯೆ ಇಲ್ಲದಿದ್ದರೆ DBTL ಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ” ಎಂದು ಹೇಳುವ ಆಯ್ಕೆಯನ್ನು ಕ್ಲಿಕ್ ಮಾಡಿ.

LPG ವಿತರಕರಿಗೆ ಫಾರ್ಮ್ 4 ಅಥವಾ ಫಾರ್ಮ್ 3 ನಲ್ಲಿ ವಿವರಗಳನ್ನು ಸಲ್ಲಿಸಿ

ನೀವು ಫಾರ್ಮ್ 3 ಅಥವಾ ಫಾರ್ಮ್ 4 ರ ಬದಲಿಗೆ PAHAL ಫಾರ್ಮ್ ಅನ್ನು ಸಹ ಭರ್ತಿ ಮಾಡಿ ಸಲ್ಲಿಸಬಹುದು. PAHAL ಫಾರ್ಮ್ ಆಧಾರ್ ಮತ್ತು ಆಧಾರ್ ಇಲ್ಲದ ಗ್ರಾಹಕರಿಬ್ಬರಿಗೂ  ಅನುಕೂಲವಾಗಲಿದೆ.

 

ವಾಣಿಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ