‘ನಗ್ನ ಷೇರು ಮಾರಾಟ’- ಹಾಂಕಾಂಗ್​ನ ಎರಡು ಬ್ಯಾಂಕುಗಳ ಮೇಲೆ ಸೌತ್ ಕೊರಿಯಾ ದಂಡ ಸಾಧ್ಯತೆ; ಏನಿದು ನೇಕೆಡ್ ಶಾರ್ಟ್ ಸೆಲ್ಲಿಂಗ್?

|

Updated on: Oct 16, 2023 | 11:41 AM

Naked Short-selling: ರಾಯ್ಟರ್ಸ್ ವರದಿ ಪ್ರಕಾರ, ಹಾಂಕಾಂಗ್​ನ ಎರಡು ಇನ್ವೆಸ್ಟ್​ಮೆಂಟ್ ಬ್ಯಾಂಕುಗಳಿಂದ 40 ಬಿಲಿಯನ್ ವೋನ್ ಮತ್ತು 16 ಬಿಲಿಯನ್ ವೋನ್ ಮೊತ್ತದಷ್ಟು ಷೇರುಗಳನ್ನು ಶಾರ್ಟ್ ಸೆಲ್ಲಿಂಗ್ ಮಾಡಿದೆ ಎಂದು ಸೌತ್ ಕೊರಿಯಾದ ಫೈನಾನ್ಷಿಯಲ್ ಸೂಪರ್​ವೈಸರಿ ಸರ್ವಿಸ್ ಹೇಳಿದೆ. ಈ ಎರಡು ಬ್ಯಾಂಕುಗಳಲ್ಲಿ ಒಂದು 2022ರ ಮೇ ತಿಂಗಳಿಂದ ಶುರುವಾಗಿ 9 ತಿಂಗಳ ಕಾಲದವರೆಗೂ ನೇಕೆಡ್ ಶಾರ್ಟ್ ಸೆಲ್ಲಿಂಗ್​ನಲ್ಲಿ ತೊಡಗಿತ್ತು. ಮತ್ತೊಂದು ಬ್ಯಾಂಕು ಡಿಸೆಂಬರ್ 2021ರಿಂದ ಶುರುವಾಗಿ 5 ತಿಂಗಳ ಕಾಲ ಈ ಅಕ್ರಮ ವಹಿವಾಟು ನಡೆಸಿರುವುದು ಬಳಕಿಗೆ ಬಂದಿದೆ.

‘ನಗ್ನ ಷೇರು ಮಾರಾಟ’- ಹಾಂಕಾಂಗ್​ನ ಎರಡು ಬ್ಯಾಂಕುಗಳ ಮೇಲೆ ಸೌತ್ ಕೊರಿಯಾ ದಂಡ ಸಾಧ್ಯತೆ; ಏನಿದು ನೇಕೆಡ್ ಶಾರ್ಟ್ ಸೆಲ್ಲಿಂಗ್?
ಸೌತ್ ಕೊರಿಯಾ
Follow us on

ಸೋಲ್, ಅಕ್ಟೋಬರ್ 16: ಹಾಂಕಾಂಗ್ ಮೂಲದ ಎರಡು ಇನ್ವೆಸ್ಟ್​ಮೆಂಟ್ ಬ್ಯಾಂಕುಗಳ ಮೇಲೆ ಸೌತ್ ಕೊರಿಯಾದ ಷೇರುಪೇಟೆ ಪ್ರಾಧಿಕಾರವು (stock market watchdog) ದಂಡ ವಿಧಿಸಲು ಆಲೋಚಿಸುತ್ತಿದೆ. ಅಕ್ರಮವಾಗಿ ಷೇರು ಮಾರಾಟ (naked short selling) ಮಾಡಿದ ಕಾರಣಕ್ಕೆ ದಕ್ಷಿಣ ಕೊರಿಯಾದ ಫೈನಾನ್ಷಿಯಲ್ ಸೂಪರ್​ವೈಸರಿ ಸರ್ವಿಸ್ (FSS) ಎಂಬ ವಾಚ್​ಡಾಗ್ ಸಂಸ್ಥೆ ಈ ಎರಡು ಬ್ಯಾಂಕುಗಳಿಗೆ ಪೆನಾಲ್ಟಿ ವಿಧಿಸುವ ಸಾಧ್ಯತೆ ಇದೆ. ಆದರೆ, ಯಾವ ಬ್ಯಾಂಕುಗಳು ಎಂಬುದು ಗೊತ್ತಾಗಿಲ್ಲ, ಎಷ್ಟು ದಂಡ ಎಂಬುದೂ ನಿರ್ಧಾರವಾಗಿಲ್ಲ.

ರಾಯ್ಟರ್ಸ್ ವರದಿ ಪ್ರಕಾರ, ಹಾಂಕಾಂಗ್​ನ ಎರಡು ಇನ್ವೆಸ್ಟ್​ಮೆಂಟ್ ಬ್ಯಾಂಕುಗಳಿಂದ 40 ಬಿಲಿಯನ್ ವೋನ್ (245 ಕೋಟಿ ರೂ) ಮತ್ತು 16 ಬಿಲಿಯನ್ ವೋನ್ (100 ಕೋಟಿ ರೂ) ಮೊತ್ತದಷ್ಟು ಷೇರುಗಳನ್ನು ಶಾರ್ಟ್ ಸೆಲ್ಲಿಂಗ್ ಮಾಡಿದೆ ಎಂದು ಫೈನಾನ್ಷಿಯಲ್ ಸೂಪರ್​ವೈಸರಿ ಸರ್ವಿಸ್ ನಿನ್ನೆ ಭಾನುವಾರ (ಅ. 15) ಹೇಳಿಕೆ ನೀಡಿದೆ.

ಈ ಎರಡು ಜಾಗತಿಕ ಇನ್ವೆಸ್ಟ್​​ಮೆಂಟ್ ಬ್ಯಾಂಕುಗಳಲ್ಲಿ ಒಂದು 2022ರ ಮೇ ತಿಂಗಳಿಂದ ಶುರುವಾಗಿ 9 ತಿಂಗಳ ಕಾಲದವರೆಗೂ ಬೆತ್ತಲೆ ಶಾರ್ಟ್ ಸೆಲ್ಲಿಂಗ್​ನಲ್ಲಿ (naked short selling) ತೊಡಗಿತ್ತು. ಮತ್ತೊಂದು ಬ್ಯಾಂಕು ಡಿಸೆಂಬರ್ 2021ರಿಂದ ಶುರುವಾಗಿ 5 ತಿಂಗಳ ಕಾಲ ಈ ಅಕ್ರಮ ವಹಿವಾಟು ನಡೆಸಿರುವುದು ಬಳಕಿಗೆ ಬಂದಿದೆ.

ಇದನ್ನೂ ಓದಿ: Oil Prices Down: ಇಸ್ರೇಲ್-ಹಮಾಸ್ ಸಂಘರ್ಷ; ಕಳೆದ ವಾರ ಭರ್ಜರಿ ಏರಿಕೆ ಆಗಿದ್ದ ತೈಲ ಬೆಲೆ ಇಂದು ಅಲ್ಪ ಇಳಿಕೆ

ಸೌತ್ ಕೊರಿಯಾದ ಕ್ಯಾಪಿಟಲ್ ಮಾರ್ಕೆಟ್ಸ್ ಕಾಯ್ದೆ ಅಡಿಯಲ್ಲಿ ನೇಕೆಡ್ ಶಾರ್ಟ್ ಸೆಲ್ಲಿಂಗ್ ಅನ್ನು ನಿಷೇಧಿಸಲಾಗಿದೆ. ವರದಿ ಪ್ರಕಾರ ಈ ಎರಡು ಬ್ಯಾಂಕುಗಳಿಗೆ ದೊಡ್ಡ ಮೊತ್ತದ ದಂಡ ಬೀಳುವ ಸಾಧ್ಯತೆ ಇದೆ.

ಏನಿದು ನೇಕೆಡ್ ಶಾರ್ಟ್ ಸೆಲ್ಲಿಂಗ್?

ಶಾರ್ಟ್ ಸೆಲ್ಲಿಂಗ್​ನಲ್ಲಿ ಹೂಡಿಕೆದಾರನು (Trader) ಷೇರುಗಳನ್ನು ಖರೀದಿಸಿ, ಅದನ್ನು ಮಾರುತ್ತಾನೆ. ಅದೇ ವೇಳೆ, ಷೇರಿನ ಬೆಲೆ ಇಳಿಮುಖ ಆಗಬಹುದು ಎಂದು ಅಂದಾಜು (speculate) ಮಾಡಿ ಬೆಟ್ ಕಟ್ಟುತ್ತಾನೆ. ಆದರೆ, ಷೇರುಬೆಲೆ ಇಳಿಯಲಿ ಅಥವಾ ಏರಲಿ ಆತ ಷೇರುಗಳನ್ನು ವಾಪಸ್ ಖರೀದಿಸಬೇಕಾಗುತ್ತದೆ. ಅದೇ ಶಾರ್ಟ್ ಸೆಲ್ಲಿಂಗ್ ಎನ್ನುವುದು. ಷೇರುಬೆಲೆ ಕುಸಿತ ಕಂಡರೆ ಶಾರ್ಟ್ ಸೆಲ್ಲರ್​ಗೆ ಭರ್ಜರಿ ಲಾಭವಾಗುತ್ತದೆ. ಒಂದು ವೇಳೆ ಷೇರುಬೆಲೆ ಹೆಚ್ಚಾದರೆ ನಷ್ಟವಾಗುತ್ತದೆ.

ಇದನ್ನೂ ಓದಿ: ನಾಮಿನಿ ಎನ್ನುವುದು ನಾಮಕಾವಸ್ತೆಯಾ? ವಾರಸುದಾರಿಕೆ ಸಿಗುವುದು ಖಚಿತವಲ್ಲವಾ? ಏನನ್ನುತ್ತದೆ ಕಾನೂನು?

ಷೇರುಮಾರುಕಟ್ಟೆಯಲ್ಲಿ ಷೇರುವಹಿವಾಟು ನಡೆಸಬೇಕೆಂದರೆ ಷೇರುಗಳನ್ನು ಹೊಂದಿರಬೇಕು. ಶಾರ್ಟ್ ಸೆಲ್ಲಿಂಗ್​ನಲ್ಲೂ ಹೂಡಿಕೆದಾರ ಮೊದಲು ಷೇರು ಖರೀದಿಸಿ ಬಳಿಕ ಅದನ್ನು ಮಾರುತ್ತಾನೆ. ಆದರೆ, ನೇಕೆಡ್ ಶಾರ್ಟ್ ಸೆಲ್ಲಿಂಗ್ ವಿಧಾನದಲ್ಲಿ ಹೂಡಿಕೆದಾರನು ಬ್ರೋಕರ್​ನಿಂದ ಷೇರುಗಳನ್ನು ಖರೀದಿ ಮಾಡದೆಯೇ ಪಡೆದು ಅದನ್ನು ಮಾರುತ್ತಾನೆ. ಅದನ್ನೇ ನೇಕೆಡ್ ಶಾರ್ಟ್ ಸೆಲ್ಲಿಂಗ್ ಎನ್ನುವುದು. ಒಂದು ರೀತಿಯಲ್ಲಿ ಹೂಡಿಕೆದಾರನು ನಿರ್ದಿಷ್ಟ ಅವಧಿಯವರೆಗೆ ಬ್ರೋಕರ್​ನಿಂದ ಷೇರುಗಳನ್ನು ಸಾಲವಾಗಿ ಪಡೆದಿರುತ್ತಾನೆಂದು ಭಾವಿಸಬಹುದು. ಆದರೆ, ಷೇರುಬೆಲೆ ಇಳಿಕೆಯಾಗಲೀ, ಏರಿಕೆಯಾಗಲೀ ಹೂಡಿಕೆದಾರ ತಾನು ಪಡೆದ ಷೇರುಗಳಿಗೆ ಹಣ ಪಾವತಿಸಲೇಬೇಕು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ