ಕತಾರ್ ಏರ್ವೇಸ್ ಸಂಸ್ಥೆ ಇಲಾನ್ ಮಸ್ಕ್ ಮಾಲಕತ್ವದ ಸ್ಪೇಸ್ ಎಕ್ಸ್ (SpaceX) ಜೊತೆ ಒಪ್ಪಂದಕ್ಕೆ ಸಹಿಹಾಕಿದೆ. ಸ್ಪೇಸ್ ಎಕ್ಸ್ನ ಸ್ಟಾರ್ಲಿಂಕ್ ವೈಫೈ ಅನ್ನು ಬಳಸಲು ಈ ಒಪ್ಪಂದ ಕೈಗೊಳ್ಳಲಾಗಿದೆ. ಇದರೊಂದಿಗೆ ಕತಾರ್ ಏರ್ವೇಸ್ ವಿಮಾನದೊಳಗೆ (Qatar Airways flight) ಬ್ರಾಡ್ಬ್ಯಾಂಡ್ನಷ್ಟು ವೇಗದ ವೈಫೈ ಇಂಟರ್ನೆಟ್ ಸಿಗಲಿದೆ. ವರದಿಗಳ ಪ್ರಕಾರ 350 ಎಂಬಿಪಿಎಸ್ನಷ್ಟು ವೇಗದ ಇಂಟರ್ನೆಟ್ ಅನ್ನು ವಿಮಾನ ಪ್ರಯಾಣಿಕರು ಉಚಿತವಾಗಿ ಪಡೆಯಬಹುದಾಗಿದೆ. ಇದರೊಂದಿಗೆ ಕತಾರ್ ಏರ್ವೇಸ್ ಇಲಾನ್ ಮಸ್ಕ್ ಅವರ ಸ್ಟಾರ್ಲಿಂಕ್ಗೆ ಅತಿದೊಡ್ಡ ಏರ್ಲೈನ್ ಪಾರ್ಟ್ನರ್ ಸಂಸ್ಥೆ ಎನಿಸಿದೆ.
ಸದ್ಯ, ಕತಾರ್ ಏರ್ವೇಸ್ನ ಫ್ಲೈಟ್ಗಳಲ್ಲಿ ಪ್ರಯಾಣಿಕರು ಗರಿಷ್ಠ 10 ಎಂಬಿಪಿಎಸ್ ವೇಗದವರೆಗೂ ಇಂಟರ್ನೆಟ್ ಪಡೆಯಬಹುದು. ಈಗ ಸ್ಟಾರ್ಲಿಂಕ್ ಸೌಲಭ್ಯ ಸಿಕ್ಕರೆ 350 ಎಂಬಿಪಿಎಸ್ನಷ್ಟು ವೇಗದ ವೈಫೈ ಇಂಟರ್ನೆಟ್ ಸಿಗಲಿದೆ. ಬ್ರಾಡ್ಬ್ಯಾಂಡ್ಗಳಲ್ಲಿ ಸಿಗುವಷ್ಟೆ ವೇಗದ ಇಂಟರ್ನೆಟ್ ಇದು.
ಕತಾರ್ ಏರ್ವೇಸ್ ಈಗಷ್ಟೇ ಸ್ಟಾರ್ಲಿಂಕ್ ಜೊತೆ ಒಪ್ಪಂದ ಮಾಡಿಕೊಂಡಿದೆ. ಯಾವಾಗ ಈ ಸರ್ವಿಸ್ ಶುರುವಾಗುತ್ತದೆ ಎಂಬುದು ಗೊತ್ತಿಲ್ಲ. 350 ಎಂಬಿಪಿಎಸ್ ವೇಗದ ಇಂಟರ್ನೆಟ್ ಸಿಕ್ಕರೆ ಮೊಬೈಲ್ಗಳಲ್ಲಿ ಆನ್ಲೈನ್ ಗೇಮಿಂಗ್ ಇತ್ಯಾದಿ ಆಡಲು ಸಾಧ್ಯವಾಗುತ್ತದೆ.
ಇದನ್ನೂ ಓದಿ: ಹಬ್ಬದ ಸೀಸನ್ನಲ್ಲಿ ಶಾಪಿಂಗ್ ಟಿಪ್ಸ್; ಡಿಸ್ಕೌಂಟ್, ಕ್ಯಾಶ್ಬ್ಯಾಕ್, ಕೂಪನ್ ಇವೆಲ್ಲವನ್ನೂ ಸರಿಯಾಗಿ ಬಳಸುವುದು ಹೇಗೆ?
ಕತಾರ್ ಏರ್ವೇಸ್ ಬೆಂಗಳೂರು ಸೇರಿದಂತೆ ಭಾರತದ 13 ನಗರಗಳಿಗೆ ಫ್ಲೈಟ್ ಸೇವೆ ಒದಗಿಸುತ್ತದೆ. ದೋಹಾದಿಂದ ಬೆಂಗಳೂರಿಗೆ ಬರಲು ಪ್ರಯಾಣ ಅವಧಿ ಸುಮಾರು 4 ಗಂಟೆ ಇರುತ್ತದೆ. ಇಷ್ಟು ಹೊತ್ತು ಸಮಯ ಕಳೆಯಲು ಉತ್ತಮ ಇಂಟರ್ನೆಟ್ ಅವಶ್ಯಕವಾಗಿದೆ.
ಹಿಂದೆಲ್ಲಾ ಫ್ಲೈಟ್ಗಳಲ್ಲಿ ಮೊಬೈಲ್ಗಳನ್ನು ಸ್ವಿಚ್ ಆಫ್ ಮಾಡಬೇಕಿತ್ತು, ಅಥವಾ ಫ್ಲೈಟ್ ಮೋಡ್ನಲ್ಲಿಡಬೇಕಿತ್ತು. ಈಗ ಅನೇಕ ವಿಮಾನಗಳೊಳಗೆ ವೈಫೈ ಕನೆಕ್ಟಿವಿಟಿ ಕೊಡಲಾಗುತ್ತಿದೆ. ಭಾರತೀಯ ಏರ್ಲೈನ್ಸ್ ಕಂಪನಿಗಳೂ ಇನ್-ಫ್ಲೈಟ್ ಇಂಟರ್ನೆಟ್ ಸೌಲಭ್ಯ ನೀಡುತ್ತವೆ.
ಇದನ್ನೂ ಓದಿ: Oil Prices Down: ಇಸ್ರೇಲ್-ಹಮಾಸ್ ಸಂಘರ್ಷ; ಕಳೆದ ವಾರ ಭರ್ಜರಿ ಏರಿಕೆ ಆಗಿದ್ದ ತೈಲ ಬೆಲೆ ಇಂದು ಅಲ್ಪ ಇಳಿಕೆ
ವಿಮಾನ ಪ್ರಯಾಣಿಸುವಾಗ ವಿವಿಧ ಸ್ಟೇಷನ್ಗಳಿಂದ ಅದಕ್ಕೆ ಸಿಗ್ನಲ್ಗಳು ಸಿಗುತ್ತಿರುತ್ತವೆ. ಫ್ಲೈಟ್ನೊಳಗೆ ಯಾರಾದರೂ ಮೊಬೈಲ್ ಬಳಸಿದರೆ ಅದರಿಂದ ವಿಮಾನದ ಕಮ್ಯೂನಿಕೇಶನ್ ಸಿಸ್ಟಂಗೆ ಅಡಚಣೆ ಆಗಬಹುದು. ಹೀಗಾಗಿ, ಫ್ಲೈಟ್ನಲ್ಲಿ ಮೊಬೈಲ್ ಆಫ್ ಮಾಡಲು ಸೂಚಿಸಲಾಗುತ್ತದೆ.
ಈಗೆಲ್ಲಾ ವಿಮಾನದ ಕಮ್ಯೂನಿಕೇಶನ್ ಸಿಸ್ಟಂಗಳು ಸುಧಾರಣೆ ಆಗಿದ್ದು, ಇಂಟರ್ನೆಟ್ ಬಳಕೆಗೆ ಅವಕಾಶ ಮಾಡಿಕೊಡಲಾಗುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ