
ನವದೆಹಲಿ, ಅಕ್ಟೋಬರ್ 30: ಸಾಗರ ಕ್ಷೇತ್ರದಲ್ಲಿ ಸರ್ಕಾರ ತೆಗೆದುಕೊಂಡಿರುವ ವಿವಿಧ ಕ್ರಮ ಮತ್ತು ಸುಧಾರಣೆಗಳಿಂದಾಗಿ ಭಾರತವು ಹಡಗು ನಿರ್ಮಾಣ ಮತ್ತು ಸಾಗರ ನಾವೀನ್ಯತೆಯಲ್ಲಿ ಜಾಗತಿಕ ನಾಯಕರ ಸಾಲಿಗೆ ಸೇರಲು ಸಾಧ್ಯವಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದ್ದಾರೆ. ಮುಂಬೈನಲ್ಲಿ ನಡೆದ ಇಂಡಿಯಾ ಮ್ಯಾರಿಟೈಮ್ ವೀಕ್ನಲ್ಲಿ (India Maritime Week) ನಿನ್ನೆ (ಬುಧವಾರ) ಪಾಲ್ಗೊಂಡು ಮಾತನಾಡಿದ್ದ ನರೇಂದ್ರ ಮೋದಿ, ಇಂದು ತಮ್ಮ ಲಿಂಕ್ಡ್ ಇನ್ ಪೋಸ್ಟ್ನಲ್ಲಿ ಭಾರತದ ಸಾಗರೋದ್ಯಮದ ಶಕ್ತಿಯ ಬಗ್ಗೆ ವಿವರವಾಗಿ ಬರೆದಿದ್ದಾರೆ.
ಲೇಡಿಂಗ್ ಬಿಲ್ನಿಂದ ಹಿಡಿದು ಇಂಡಿಯನ್ ಪೋರ್ಟ್ಸ್ ಬಿಲ್ವರೆಗೆ ಭಾರತ ಐದು ಮಹತ್ವದ ಮಸೂದೆಗಳನ್ನು ತಂದಿದೆ. ಇದರಿಂದ ಸಾಗರ ವ್ಯಾಪಾರವನ್ನು ಸಲೀಸು ಮಾಡಲಾಗಿದೆ. ರಾಜ್ಯಗಳನ್ನು ಸಬಲೀಕರಿಸಲಾಗಿದೆ. ಸಾಗರ ಪ್ರದೇಶದ ಆಡಳಿತವನ್ನು ಆಧುನೀಕರಣಗೊಳಿಸಲಾಗಿದೆ. ಜಾಗತಿಕ ದರ್ಜೆಗೆ ಏರಿಸಲಾಗಿದೆ ಎಂದು ನರೇಂದ್ರ ಮೋದಿ ತಮ್ಮ ಪೋಸ್ಟ್ನಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ಭಾರತದ ಹಡಗು ಕ್ಷೇತ್ರದ ಹೂಡಿಕೆಗೆ ಇದು ಸೂಕ್ತ ಸಮಯ; ಮುಂಬೈನಲ್ಲಿ ಪ್ರಧಾನಿ ಮೋದಿ
ಸಾಗರ ಕ್ಷೇತ್ರದ ಬೆಳವಣಿಗೆಗೆ ಚುರುಕು ಮುಟ್ಟಿಸಲು ಸರಕಾರವು 70,000 ಕೋಟಿ ರೂ ಸಮಗ್ರ ಪ್ಯಾಕೇಜ್ಗೆ ಅನುಮೋದನೆ ನೀಡಿದೆ. ಈ ಪ್ಯಾಕೇಜ್ ಅಡಿಯಲ್ಲಿ ವಿವಿಧ ಸ್ಕೀಮ್ಗಳಿಂದ 4.5 ಲಕ್ಷ ಕೋಟಿ ರೂ ಮೊತ್ತದ ಹೂಡಿಕೆ ಹರಿದುಬರಬಹುದು. 2,500ಕ್ಕೂ ಅಧಿಕ ಹಡಗುಗಳನ್ನು ನಿರ್ಮಿಸಲು ಸಾಧ್ಯವಾಗಬಹುದು. ಈ ಕ್ರಮದಿಂದ ಹಡಗು ನಿರ್ಮಾಣ ಮತ್ತು ಸಾಗರ ನಾವೀನ್ಯತೆಯಲ್ಲಿ ಜಾಗತಿಕ ನಾಯಕರ ಸಾಲಿಗೆ ಭಾರತವೂ ಸೇರಬಲ್ಲುದು ಎಂದು ಪ್ರಧಾನಿಗಳು ತಮ್ಮ ಸೋಷಿಯಲ್ ಮೀಡಿಯಾ ಪೋಸ್ಟ್ನಲ್ಲಿ ವಿವರಿಸಿದ್ದಾರೆ.
ನರೇಂದ್ರ ಮೋದಿ ತಮ್ಮ ಲಿಂಕ್ಡ್ಇನ್ ಪೋಸ್ಟ್ನಲ್ಲಿ ಭಾರತದ ಐತಿಹಾಸಿಕ ನೌಕಾಶಕ್ತಿ ಪ್ರಾಬಲ್ಯವನ್ನು ಉಲ್ಲೇಖಿಸಿದ್ದಾರೆ. ಪ್ರಬಲ ನೌಕಾಶಕ್ತಿಯನ್ನು ಹೊಂದಿದ್ದ ಚೋಳರು ಮತ್ತು ಮರಾಠರ ನಾಡು ನಮ್ಮದು. ಸಾಗರಗಳು ಅವಕಾಶಗಳಿಗೆ ಸೇತುವೆಯಾಗಬಲ್ಲುವು ಎಂಬುದನ್ನು ಇವರು ತೋರಿಸಿಕೊಟ್ಟಿದ್ದಾರೆ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ.
2014ರಲ್ಲಿ ತಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಭಾರತದ ಸಾಗರ ಮತ್ತು ನೌಕಾಶಕ್ತಿಯಲ್ಲಿ ಗಣನೀಯ ಹೆಚ್ಚಳ ಆಗಿರುವುದನ್ನು ಅಂಕಿ ಅಂಶ ಸಮೇತವಾಗಿ ಪ್ರಧಾನಿಗಳು ವಿವರಿಸಿದ್ದಾರೆ. ಅವರು ಪ್ರಸ್ತಾಪಿಸಿದ ಕೆಲ ಮಹತ್ವದ ಅಂಕಿ ಅಂಶಗಳು ಈ ಕೆಳಕಾಣಿಸಿದಂತಿವೆ:
ಇದನ್ನೂ ಓದಿ: ಅಸ್ಸಾಮ್ಗೆ ಒಂದೇ ಒಂದು ಇಂಡಸ್ಟ್ರಿ ಬಂದಿದ್ದಕ್ಕೆ ಹೀಗಾಡ್ತಿದಾರೆ; ಖರ್ಗೆಗೆ ಶರ್ಮಾ ತರಾಟೆ
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ