
ನವದೆಹಲಿ, ಅಕ್ಟೋಬರ್ 22: ದೇಶದಲ್ಲಿ ಹಬ್ಬದ ಸೀಸನ್‌ನ ಆರಂಭಿಕ ಹಂತವಾದ ನವರಾತ್ರಿ ಅವಧಿಯಲ್ಲಿ ಆಟೋಮೊಬೈಲ್ ಕ್ಷೇತ್ರವು ಭರ್ಜರಿ ಮಾರಾಟವನ್ನು ದಾಖಲಿಸಿದೆ. ಫೆಡರೇಷನ್ ಆಫ್ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ (FADA) ದತ್ತಾಂಶದ ಪ್ರಕಾರ, ಈ ಬಾರಿಯ ನವರಾತ್ರಿ ಉತ್ಸವದ ಅವಧಿಯಲ್ಲಿ ದೇಶಾದ್ಯಂತ ಒಟ್ಟು 11.23 ಲಕ್ಷ ವಾಹನಗಳ ಚಿಲ್ಲರೆ ಮಾರಾಟ (Auto Retail) ದಾಖಲಾಗಿದೆ. ಕಳೆದ ವರ್ಷದ (2025) ನವರಾತ್ರಿ ವೇಳೆ 12 ಲಕ್ಷ ವಾಹನಗಳ ಮಾರಾಟವಾಗಿತ್ತು. ಅದಕ್ಕೆ ಹೋಲಿಸಿದರೆ ಈ ಬಾರಿ ಕಡಿಮೆ ರೀಟೇಲ್ ಸೇಲ್ ಆದರೂ 2024ರ ನವರಾತ್ರಿಯದಕ್ಕಿಂತಲೂ ಶೇ. 27ರಷ್ಟು ಹೆಚ್ಚು ಮಾರಾಟ ದಾಖಲಾಗಿದೆ.
ಕಾರ್‌ಗಳು, ದ್ವಿಚಕ್ರ ವಾಹನಗಳು ಮತ್ತು ವಾಣಿಜ್ಯ ವಾಹನಗಳೆರಡರಲ್ಲೂ ಉತ್ತಮ ಬೇಡಿಕೆ ಕಂಡುಬಂದಿದೆ. ಹೊಸ ಮಾಡೆಲ್‌ಗಳ ಬಿಡುಗಡೆ ಹಾಗೂ ಹಬ್ಬದ ಆಫರ್‌ಗಳು ಗ್ರಾಹಕರನ್ನು ಶೋರೂಮ್‌ಗಳತ್ತ ಸೆಳೆಯುವಲ್ಲಿ ಯಶಸ್ವಿಯಾಗಿವೆ.
ನವರಾತ್ರಿಯ ಯಶಸ್ಸಿನ ಬೆನ್ನಲ್ಲೇ, ಮುಂಬರುವ ದೀಪಾವಳಿ ಹಬ್ಬದ ವೇಳೆಗೆ ವಾಹನಗಳ ಬೇಡಿಕೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಮಾರುತಿ ಸುಜುಕಿ, ಟಾಟಾ ಮೋಟರ್ಸ್, ಮಹೀಂದ್ರಾ ಮತ್ತು ಹ್ಯುಂಡೈ ಸೇರಿದಂತೆ ಪ್ರಮುಖ ಆಟೋಮೋಟಿವ್ ದಿಗ್ಗಜರು ಡೀಲರ್‌ಶಿಪ್‌ಗಳಲ್ಲಿ ಸ್ಟಾಕ್ ಹೆಚ್ಚಿಸಿಕೊಳ್ಳುವುದು ಮತ್ತು ಗ್ರಾಹಕರಿಗೆ ವಿಶೇಷ ರಿಯಾಯಿತಿಗಳನ್ನು ಘೋಷಿಸುವ ಮೂಲಕ ದೀಪಾವಳಿ ಸುಗ್ಗಿಗೆ ಸಜ್ಜಾಗುತ್ತಿವೆ.
ಇದನ್ನೂ ಓದಿ: ಕೊಲ್ಲಿ ನಾಡಾದ ದುಬೈಗಿಂತಲೂ ಭಾರತದಲ್ಲೇ ಪೆಟ್ರೋಲ್ ಬೆಲೆ ಕಡಿಮೆ
ವಿಶೇಷವಾಗಿ ದ್ವಿಚಕ್ರ ವಾಹನಗಳು ಮತ್ತು ಕಾರು ವಿಭಾಗದಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟವು ಹಬ್ಬದ ಸೀಸನ್‌ನಲ್ಲಿ ಗಮನಾರ್ಹ ಬೆಳವಣಿಗೆಯನ್ನು ಕಾಣುತ್ತಿದ್ದು, ಒಟ್ಟಾರೆ ಆಟೋ ಮಾರಾಟದ ಅಂಕಿಅಂಶಗಳಿಗೆ ಇದು ಬಲ ತುಂಬಿದೆ.
ವಾಹನಗಳ ಒಟ್ಟು ರೀಟೇಲ್ ಮಾರಾಟ: 11.23 ಲಕ್ಷ
ಒಟ್ಟು ಮಾರಾಟವಾದ ಇವಿಗಳು: 1.17 ಲಕ್ಷ
ಇದನ್ನೂ ಓದಿ: ಈ ವರ್ಷ ಮಧ್ಯಪ್ರಾಚ್ಯ, ಪಾಕಿಸ್ತಾನ, ಉತ್ತರ ಆಫ್ರಿಕನ್ ದೇಶಗಳಲ್ಲಿ ಆರ್ಥಿಕ ಕುಸಿತ: ಐಎಂಎಫ್ ವರದಿ
2026ರ ನವರಾತ್ರಿ ಹಬ್ಬದ ಸಂದರ್ಭದಲ್ಲಿ ಕಾರುಗಳ ನೊಂದಣಿ ಇಳಿಮುಖವಾಗಿದೆ. ಜಾಟೊ ಡೈನಾಕ್ಸ್ ದತ್ತಾಂಶದ ಪ್ರಕಾರ, ಪೆಟ್ರೋಲ್, ಡೀಸಲ್, ಸಿಎನ್ಜಿ ಕಾರುಗಳ ನೊಂದಣಿ ಶೇ. 5.2ರಷ್ಟು ಕಡಿಮೆ ಇದೆ. 1.69 ಲಕ್ಷ ಕಾರುಗಳಿಗೆ ನೊಂದಣಿ ಆಗಿದೆ. ವಿವಿಧ ಕಂಪನಿಗಳ ಕಾರು ನೊಂದಣಿ ವಿವರ ಇಂತಿದೆ:
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ