AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ವರ್ಷ ಮಧ್ಯಪ್ರಾಚ್ಯ, ಪಾಕಿಸ್ತಾನ, ಉತ್ತರ ಆಫ್ರಿಕನ್ ದೇಶಗಳಲ್ಲಿ ಆರ್ಥಿಕ ಕುಸಿತ: ಐಎಂಎಫ್ ವರದಿ

ಐಎಂಎಫ್ ಅ. 22ರಂದು ಬಿಡುಗಡೆ ಮಾಡಿದ ವರದಿ ಪ್ರಕಾರ, 2026ರಲ್ಲಿ ಮಧ್ಯಪ್ರಾಚ್ಯ ಭಾಗದ ಆರ್ಥಿಕತೆ ಮೈನಸ್ ಶೇ. 1.3ರಷ್ಟು ಕುಸಿಯಲಿದೆ. ಪಾಕಿಸ್ತಾನ ಹಾಗೂ ಉತ್ತರ ಆಫ್ರಿಕನ್ ದೇಶಗಳ ಆರ್ಥಿಕತೆಗಳೂ ಕೂಡ ಭಾರೀ ಹಿನ್ನಡೆ ಕಾಣಲಿವೆ. 2027ರ ಶುರುವಿನಲ್ಲೇ ತೈಲ ಬಿಕ್ಕಟ್ಟು ಶಮನಗೊಂಡರೆ ಮಧ್ಯಪ್ರಾಚ್ಯ ಭಾಗದ ಆರ್ಥಿಕತೆ 2027ರಲ್ಲಿ ಶೇ. 6.6ಕ್ಕೆ ಪುಟಿದೇಳಬಹುದು ಎಂದೂ ಐಎಂಎಫ್ ಹೇಳಿದೆ.

ಈ ವರ್ಷ ಮಧ್ಯಪ್ರಾಚ್ಯ, ಪಾಕಿಸ್ತಾನ, ಉತ್ತರ ಆಫ್ರಿಕನ್ ದೇಶಗಳಲ್ಲಿ ಆರ್ಥಿಕ ಕುಸಿತ: ಐಎಂಎಫ್ ವರದಿ
ಸಾಂದರ್ಭಿಕ ಚಿತ್ರImage Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 22, 2026 | 3:03 PM

Share

ನವದೆಹಲಿ, ಅಕ್ಟೋಬರ್ 22: ಪಶ್ಚಿಮ ಏಷ್ಯಾದಲ್ಲಿ ನಿರಂತರವಾಗಿ ಬಿಕ್ಕಟ್ಟು ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ ಆ ಪ್ರದೇಶಗಳಲ್ಲಿ ತೀವ್ರ ಆರ್ಥಿಕ ಕುಸಿತದ ಸಾಧ್ಯತೆಯನ್ನು ಅಂತರರಾಷ್ಟ್ರೀಯ ಹಣಕಾಸು ನಿಧಿ ಎಚ್ಚರಿಸಿದೆ. ತೈಲ ಉತ್ಪಾದಿಸುವ ಮಧ್ಯಪ್ರಾಚ್ಯ ದೇಶಗಳಲ್ಲಿ 2026ರಲ್ಲಿ ಆರ್ಥಿಕ ಬೆಳವಣಿಗೆ ಮೈನಸ್ 1.3 ಪ್ರತಿಶತದಷ್ಟು ದಾಖಲಾಗಬಹುದು ಎಂದು ಐಎಂಎಫ್​ನ ವರದಿಯೊಂದು ಹೇಳಿದೆ. ಮೆನಾ ಗುಂಪಿನ ದೇಶಗಳಿಗೆ 2026ರ ವರ್ಷವು ಹರ್ಷದಾಯಕವಾಗಿರುವುದಿಲ್ಲ ಎನ್ನುತ್ತಿದೆ ಐಎಂಎಫ್.

ಉತ್ತರ ಆಫ್ರಿಕನ್ ದೇಶಗಳು ಹಾಗೂ ಪಾಕಿಸ್ತಾನದ ಆರ್ಥಿಕತೆಗಳು 2026ರಲ್ಲಿ ತೀವ್ರ ಹಿನ್ನಡೆ ಸಾಧಿಸುತ್ತವೆ. ಮಧ್ಯಪ್ರಾಚ್ಯದ ಆರ್ಥಿಕತೆ ಮೈನಸ್ ದಾಖಲಿಸಿದರೂ 2027ರಲ್ಲಿ ಶೇ. 6.6 ರ ದರಕ್ಕೆ ಪುಟಿದೇಳಬಹುದು ಎಂದು ಐಎಂಎಫ್ ಅಂದಾಜಿಸಿದೆ. ಆದರೆ, ಈ ಪುಟಿದೇಳುವಿಕೆಯು ತೈಲ ಬಿಕ್ಕಟ್ಟು ಎಷ್ಟು ವೇಗ ಶಮನಗೊಳ್ಳುತ್ತದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.

ಇದನ್ನೂ ಓದಿ: ಕರೆನ್ಸಿ ಹರಿವನ್ನು ಮುಕ್ತವಾಗಿ ಬಿಡಿ: ಭಾರತಕ್ಕೆ ಐಎಂಎಫ್ ಸಲಹೆ; ರುಪಾಯಿ ಕುಸಿತ ತಡೆದರೆ ಆರ್ಥಿಕತೆಗೆ ಅಪಾಯ ಸಾಧ್ಯತೆ

2027ರ ಆರಂಭದಲ್ಲೇ ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಕೊನೆಗೊಳ್ಳಬಹುದು ಎಂಬ ಅಂದಾಜಿನಲ್ಲಿ ಐಎಂಎಫ್ ಈ ಲೆಕ್ಕಾಚಾರ ಹಾಕಿದೆ. ಒಂದು ವೇಳೆ ಮುಂದಿನ ವರ್ಷವೂ ಬಿಕ್ಕಟ್ಟು ಮುಂದುವರಿದಲ್ಲಿ ಈ ಪ್ರದೇಶದ ಆರ್ಥಿಕತೆಗೆ ಹೆಚ್ಚಿನ ಆಘಾತವಾಗಲಿದೆ.

ಇದೇ ವೇಳೆ, ಮಧ್ಯ ಏಷ್ಯ (Central Asia) ಮತ್ತು ಕಾಕಸಸ್ (Caucasus) ಪ್ರದೇಶಗಳಲ್ಲಿ ಆರ್ಥಿಕ ಬೆಳವಣಿಗೆ ಶೇ. 5ರ ಆಸುಪಾಸಿನ ದರದಲ್ಲಿ ಸಾಗಲಿದೆ ಎಂದು ಐಎಂಎಫ್ ಅಂದಾಜು ಹಾಕಿದೆ. ಕಜಕಸ್ತಾನ, ಉಜ್ಬೆಕಿಸ್ತಾನ, ಟುರ್ಕ್​ಮೆನಿಸ್ತಾನ, ಕಿರ್ಗಿಸ್ತಾನ ಇತ್ಯಾದಿ ದೇಶಗಳು ಮಧ್ಯ ಏಷ್ಯಾ ಭಾಗಕ್ಕೆ ಸೇರುತ್ತವೆ. ಆರ್ಮೇನಿಯಾ, ಅಜರ್​ಬೈಜನ್, ಜಾರ್ಜಿಯಾ, ದಕ್ಷಿಣ ರಷ್ಯನ್ ದೇಶಗಳು ಕಾಕಸಸ್ ಪ್ರದೇಶದ ವ್ಯಾಪ್ತಿಗೆ ಬರುತ್ತವೆ.

ಇದನ್ನೂ ಓದಿ: 2027ರಲ್ಲಿ ಭಾರತದ್ದು 4.52 ಟ್ರಿಲಿಯನ್ ಡಾಲರ್ ಜಿಡಿಪಿ; ಜಪಾನ್ ಹಿಂದಿಕ್ಕಿ 4ನೇ ಸ್ಥಾನಕ್ಕೇರಲಿದೆ: ಐಎಂಎಫ್ ವರದಿ

ಕಳೆದ ವಾರ ಬಿಡುಗಡೆಯಾದ ಮತ್ತೊಂದು ಐಎಂಎಫ್ ವರದಿ ಪ್ರಕಾರ, ಪ್ರಮುಖ ಆರ್ಥಿಕತೆಗಳ ಪೈಕಿ ಭಾರತವೇ ಅತಿವೇಗದ ಬೆಳವಣಿಗೆ ಸಾಧಿಸಲಿದೆ. 2026 ಮತ್ತು 2027ರಲ್ಲಿ ಭಾರತ ಶೇ 7ರ ದರದಲ್ಲಿ ಅಭಿವೃದ್ಧಿ ಹೊಂದಬಹುದು ಎನ್ನುವುದು ಐಎಂಎಫ್ ಎಣಿಕೆ. ಉದಯೋನ್ಮುಖ ಆರ್ಥಿಕತೆಗಳ ದೇಶಗಳೂ ಕೂಡ ತಕ್ಕಮಟ್ಟಿಗೆ ಬೆಳವಣಿಗೆ ಹೊಂದುತ್ತವೆ. ಶ್ರೀಮಂತ ದೇಶಗಳು ತೀರ ಮಂದಗತಿಯಲ್ಲಿ ಬೆಳವಣಿಗೆ ಹೊಂದಲಿವೆ ಎನ್ನುತ್ತದೆ ಐಎಂಎಫ್ ವರದಿ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ತುಮಕೂರು ಶಿರಾದಲ್ಲಿ ಸಾಲಕ್ಕೆ ಚಹಾ ನೀಡಿಲ್ಲವೆಂದು ಬಿಹಾರದ ಯುವಕರ ಅಟ್ಟಹಾಸ
ತುಮಕೂರು ಶಿರಾದಲ್ಲಿ ಸಾಲಕ್ಕೆ ಚಹಾ ನೀಡಿಲ್ಲವೆಂದು ಬಿಹಾರದ ಯುವಕರ ಅಟ್ಟಹಾಸ
ವಿಧಾನ ಪರಿಷತ್ ಶಿಕ್ಷಕರ ಕ್ಷೇತ್ರದ ಚುನಾವಣೆ: ಕಾಂಗ್ರೆಸ್​​ನಿಂದ ಆಮಿಷ ಆರೋಪ
ವಿಧಾನ ಪರಿಷತ್ ಶಿಕ್ಷಕರ ಕ್ಷೇತ್ರದ ಚುನಾವಣೆ: ಕಾಂಗ್ರೆಸ್​​ನಿಂದ ಆಮಿಷ ಆರೋಪ
ದಸರಾ ಮುಕ್ತಾಯ, ಇಂದೇ ಕಾಡಿಗೆ ವಾಪಸಾಗುತ್ತಾ ಗಜಪಡೆ?
ದಸರಾ ಮುಕ್ತಾಯ, ಇಂದೇ ಕಾಡಿಗೆ ವಾಪಸಾಗುತ್ತಾ ಗಜಪಡೆ?
ತುಮಕೂರು ವಿಶ್ವವಿದ್ಯಾಲಯದ ಜ್ಞಾನಸಿರಿ ಕ್ಯಾಂಪಸ್ ಬಳಿ ಚಿರತೆ ಪ್ರತ್ಯಕ್ಷ
ತುಮಕೂರು ವಿಶ್ವವಿದ್ಯಾಲಯದ ಜ್ಞಾನಸಿರಿ ಕ್ಯಾಂಪಸ್ ಬಳಿ ಚಿರತೆ ಪ್ರತ್ಯಕ್ಷ
ಯೂಟ್ಯೂಬ್ ನೋಡಿ ಮೊಬೈಲ್ ಕಳವು ಮಾಡುತ್ತಿದ್ದ ಕಳ್ಳ ಅರೆಸ್ಟ್
ಯೂಟ್ಯೂಬ್ ನೋಡಿ ಮೊಬೈಲ್ ಕಳವು ಮಾಡುತ್ತಿದ್ದ ಕಳ್ಳ ಅರೆಸ್ಟ್
ಸಿಎಂ ದೆಹಲಿ ಭೇಟಿಯ ಹಿಂದಿರುವ ಅಸಲಿ ಕಾರಣ ಬಿಚ್ಚಿಟ್ಟ ಡಿಸಿಎಂ ಪರಮೇಶ್ವರ್
ಸಿಎಂ ದೆಹಲಿ ಭೇಟಿಯ ಹಿಂದಿರುವ ಅಸಲಿ ಕಾರಣ ಬಿಚ್ಚಿಟ್ಟ ಡಿಸಿಎಂ ಪರಮೇಶ್ವರ್
ಅ. 26ಕ್ಕೆ ಕಬ್ಬು ಬೆಳೆಗಾರರು, ಸಕ್ಕರೆ ಕಾರ್ಖಾನೆ ಮಾಲೀಕರ ಸಭೆ: ಸಿಎಂ
ಅ. 26ಕ್ಕೆ ಕಬ್ಬು ಬೆಳೆಗಾರರು, ಸಕ್ಕರೆ ಕಾರ್ಖಾನೆ ಮಾಲೀಕರ ಸಭೆ: ಸಿಎಂ
ಓಕಳಿಪುರಂ ಅಂಡರ್‌ಪಾಸ್‌ನಲ್ಲಿ ಕೊಳಚೆ ನೀರು, ಗುಂಡಿಗಳ ಸಮಸ್ಯೆ
ಓಕಳಿಪುರಂ ಅಂಡರ್‌ಪಾಸ್‌ನಲ್ಲಿ ಕೊಳಚೆ ನೀರು, ಗುಂಡಿಗಳ ಸಮಸ್ಯೆ
ಆಯುಧ ಪೂಜೆ ದಿನ ಗಾಳಿಯಲ್ಲಿ ಗುಂಡು ಹಾರಿಸಿದ ಕಾಂಗ್ರೆಸ್ ಮುಖಂಡ
ಆಯುಧ ಪೂಜೆ ದಿನ ಗಾಳಿಯಲ್ಲಿ ಗುಂಡು ಹಾರಿಸಿದ ಕಾಂಗ್ರೆಸ್ ಮುಖಂಡ
ಆನೆ ಸೋಮಣ್ಣನ ರಂಪಾಟಕ್ಕೆ ಮುರಿದು ಬಿದ್ದ ದೇವಿಯ ಕೈ
ಆನೆ ಸೋಮಣ್ಣನ ರಂಪಾಟಕ್ಕೆ ಮುರಿದು ಬಿದ್ದ ದೇವಿಯ ಕೈ