AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಲ್ಲಿ ನಾಡಾದ ದುಬೈಗಿಂತಲೂ ಭಾರತದಲ್ಲೇ ಪೆಟ್ರೋಲ್ ಬೆಲೆ ಕಡಿಮೆ

ತೈಲ ರಾಷ್ಟ್ರವಾದ ಯುಎಇಯಲ್ಲಿ ಪೆಟ್ರೋಲ್, ಡೀಸಲ್ ಬೆಲೆಗಳು ಭಾರತದಕ್ಕಿಂತಲೂ ಹೆಚ್ಚಿನ ಮಟ್ಟದಲ್ಲಿವೆ. ದುಬೈನಲ್ಲಿ ಪೆಟ್ರೋಲ್ ಬೆಲೆ ಭಾರತೀಯ ಕರೆನ್ಸಿಯಲ್ಲಿ 110 ರೂ ಇದೆ. ದೆಹಲಿಯಲ್ಲಿ ಇದೇ ಒಂದು ಲೀಟರ್ ಬೆಲೆ 103 ರೂನಷ್ಟು ಇದೆ. ಅಮೆರಿಕದಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 115 ರೂನಷ್ಟು ಇದೆ. ಈ ತೈಲ ದೇಶಗಳಿಗಿಂತ ಭಾರತದಲ್ಲೇ ಪೆಟ್ರೋಲ್ ಬೆಲೆ ಕಡಿಮೆ ಇದ್ದಂತಾಗಿದೆ.

ಕೊಲ್ಲಿ ನಾಡಾದ ದುಬೈಗಿಂತಲೂ ಭಾರತದಲ್ಲೇ ಪೆಟ್ರೋಲ್ ಬೆಲೆ ಕಡಿಮೆ
ಪೆಟ್ರೋಲ್Image Credit source: PTI
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 22, 2026 | 4:02 PM

Share

ನವದೆಹಲಿ, ಅಕ್ಟೋಬರ್ 22: ತೈಲ ಸಮೃದ್ಧವಾಗಿರುವ ಕೊಲ್ಲಿ ದೇಶಗಳಲ್ಲಿ ಪೆಟ್ರೋಲ್, ಡೀಸಲ್​ಗಳು ಅಗ್ಗ ಇರುತ್ತವೆ ಎನ್ನುವಂತಹ ಕಲ್ಪನೆಗಳಿಗೆ ತದ್ವಿರುದ್ಧವೆಂಬಂತೆ, ಅಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಬಹಳ ಅಧಿಕ ಮಟ್ಟದಲ್ಲಿದೆ. ಯುಎಇ ದೇಶದ ಸರ್ಕಾರ ದುಬೈನಲ್ಲಿ ಪೆಟ್ರೋಲ್ ಮತ್ತು ಡೀಸಲ್ ಬೆಲೆಗಳನ್ನು ಹೆಚ್ಚಿಸಿದೆ. ಅಕ್ಟೋಬರ್ 1ರಿಂದಲೇ ಇದು ಜಾರಿಗೆ ಬಂದಿದ್ದು, ಒಂದು ಲೀಟರ್​ಗೆ 4.28 ಡಿರ್ಹಾಮ್ ಬೆಲೆ ಇದೆ. ಭಾರತದ ಕರೆನ್ಸಿಯಲ್ಲಿ ಇದು 110 ರೂ ಆಗುತ್ತದೆ.

ಇದಕ್ಕೆ ಹೋಲಿಸಿದರೆ ಭಾರತದಲ್ಲಿ ಹಲವು ನಗರಗಳಲ್ಲಿ ಪೆಟ್ರೋಲ್ ಬೆಲೆ 110 ರೂಗಿಂತಲೂ ಕಡಿಮೆ ಇದೆ. ಇನ್ನು, ಡೀಸಲ್ ಬೆಲೆ ದುಬೈಗೆ ಹೋಲಿಸಿದರೆ ಭಾರತದಲ್ಲಿ ಒಂದು ಲೀಟರ್​ಗೆ 28 ರೂ ಕಡಿಮೆ ಇದೆ. ದುಬೈನಲ್ಲಿ ಡೀಸಲ್ ಬೆಲೆ ಒಂದು ಲೀಟರ್​ಗೆ 4.30 ಎಇಡಿಯಿಂದ 4.80 ಎಇಡಿವರೆಗೆ ಬೆಲೆ ಇದೆ.

ಇದನ್ನೂ ಓದಿ: ಈ ವರ್ಷ ಮಧ್ಯಪ್ರಾಚ್ಯ, ಪಾಕಿಸ್ತಾನ, ಉತ್ತರ ಆಫ್ರಿಕನ್ ದೇಶಗಳಲ್ಲಿ ಆರ್ಥಿಕ ಕುಸಿತ: ಐಎಂಎಫ್ ವರದಿ

ದುಬೈನಲ್ಲಿ ಬೆಲೆ ನಿರ್ಧಾರ ಭಾರತದಕ್ಕಿಂತ ಭಿನ್ನ ವ್ಯವಸ್ಥೆ

ಭಾರತದಲ್ಲಿ ತೈಲ ಮಾರುಕಟ್ಟೆ ಕಂಪನಿಗಳು ಮಾರುಕಟ್ಟೆ ಬೇಡಿಕೆ ಮತ್ತು ಪೂರೈಕೆಗೆ ಅನುಗುಣವಾಗಿ ಪೆಟ್ರೋಲಿಯಂ ಉತ್ಪನ್ನಗಳ ದರಗಳನ್ನು ಪರಿಷ್ಕರಿಸುತ್ತವೆ. ಕೆಲವೊಮ್ಮೆ ಸರ್ಕಾರದ ಸಲಹೆಗಳು ಮತ್ತು ನಿರ್ದೇಶನಗಳು ಪ್ರಭಾವ ಹೊಂದಿರುತ್ತವೆ.

ಇನ್ನೊಂದೆಡೆ, ಯುಎಇಯಲ್ಲಿ 2015ರವರೆಗೂ ಸರ್ಕಾರದಿಂದ ಸಬ್ಸಿಡಿ ದರದಲ್ಲಿ ಪೆಟ್ರೋಲ್, ಡೀಸಲ್ ವಿತರಣೆ ಆಗುತ್ತಿತ್ತು. ಆ ಬಳಿಕ ಪೆಟ್ರೋಲ್, ಡೀಸಲ್ ಬೆಲೆಗಳನ್ನು ತಿಂಗಳಿಗೊಮ್ಮೆ ಪರಿಷ್ಕರಿಸಲು ಒಂದು ನಿಗದಿತ ಸಮಿತಿ ಇರುತ್ತದೆ. ಅಂತರರಾಷ್ಟ್ರೀಯ ಮಾರುಕಟ್ಟೆ ದರಗಳನ್ನು ಆಧರಿಸಿ, ದರ ಪರಿಷ್ಕರಣೆ ಮಾಡಲಾಗುತ್ತದೆ. ಹೀಗಾಗಿ, ದುಬೈನಲ್ಲಿ ಪೆಟ್ರೋಲ್, ಡೀಸಲ್ ಬೆಲೆ ಅಧಿಕ ಮಟ್ಟದಲ್ಲೇ ಇದೆ.

ಇದನ್ನೂ ಓದಿ: ಕರೆನ್ಸಿ ಹರಿವನ್ನು ಮುಕ್ತವಾಗಿ ಬಿಡಿ: ಭಾರತಕ್ಕೆ ಐಎಂಎಫ್ ಸಲಹೆ; ರುಪಾಯಿ ಕುಸಿತ ತಡೆದರೆ ಆರ್ಥಿಕತೆಗೆ ಅಪಾಯ ಸಾಧ್ಯತೆ

ಅಮೆರಿಕದಲ್ಲೂ ಪೆಟ್ರೋಲ್ ಬೆಲೆ ದುಬಾರಿ…

ಅಮೆರಿಕ ಕೂಡ ತೈಲ ಉತ್ಪಾದಿಸುವ ದೇಶವಾಗಿದೆ. ಆದರೆ, ಅಲ್ಲಿ ಒಂದು ಲೀಟರ್ ಗ್ಯಾಸೊಲಿನ್ (ಪೆಟ್ರೋಲ್) ಬೆಲೆ 1.22 ಡಾಲರ್ ಇದೆ. ಅಂದರೆ, 115 ರೂ ಬೆಲೆ ಇದೆ.

ಇನ್ನು, ಪಾಕಿಸ್ತಾನದಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 380 ರುಪಾಯಿ (ಪಿಕೆಆರ್) ಇದೆ. ಭಾರತೀಯ ಕರೆನ್ಸಿಯಲ್ಲಿ ಇದು 130 ರೂ ಆಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
'ಪ್ರೇಮದ ಊರಲಿ' ಕ್ರೇಜ್: ಟಿಕೆಟ್​​​ಗಾಗಿ ಪರಸ್ಪರ ಬಡಿದಾಡಿಕೊಂಡ ಮಹಿಳೆಯರು!
'ಪ್ರೇಮದ ಊರಲಿ' ಕ್ರೇಜ್: ಟಿಕೆಟ್​​​ಗಾಗಿ ಪರಸ್ಪರ ಬಡಿದಾಡಿಕೊಂಡ ಮಹಿಳೆಯರು!
ದಸರಾ ಮುಗಿಯುತ್ತಿದ್ದಂತೆಯೇ ಭುಗಿಲೆದ್ದ ಯತೀಂದ್ರ ಸಿದ್ದರಾಮಯ್ಯ ಫೋಟೋ ವಿವಾದ!
ದಸರಾ ಮುಗಿಯುತ್ತಿದ್ದಂತೆಯೇ ಭುಗಿಲೆದ್ದ ಯತೀಂದ್ರ ಸಿದ್ದರಾಮಯ್ಯ ಫೋಟೋ ವಿವಾದ!
ತುಮಕೂರು ಶಿರಾದಲ್ಲಿ ಸಾಲಕ್ಕೆ ಚಹಾ ನೀಡಿಲ್ಲವೆಂದು ಬಿಹಾರದ ಯುವಕರ ಅಟ್ಟಹಾಸ
ತುಮಕೂರು ಶಿರಾದಲ್ಲಿ ಸಾಲಕ್ಕೆ ಚಹಾ ನೀಡಿಲ್ಲವೆಂದು ಬಿಹಾರದ ಯುವಕರ ಅಟ್ಟಹಾಸ
ವಿಧಾನ ಪರಿಷತ್ ಶಿಕ್ಷಕರ ಕ್ಷೇತ್ರದ ಚುನಾವಣೆ: ಕಾಂಗ್ರೆಸ್​​ನಿಂದ ಆಮಿಷ ಆರೋಪ
ವಿಧಾನ ಪರಿಷತ್ ಶಿಕ್ಷಕರ ಕ್ಷೇತ್ರದ ಚುನಾವಣೆ: ಕಾಂಗ್ರೆಸ್​​ನಿಂದ ಆಮಿಷ ಆರೋಪ
ದಸರಾ ಮುಕ್ತಾಯ, ಇಂದೇ ಕಾಡಿಗೆ ವಾಪಸಾಗುತ್ತಾ ಗಜಪಡೆ?
ದಸರಾ ಮುಕ್ತಾಯ, ಇಂದೇ ಕಾಡಿಗೆ ವಾಪಸಾಗುತ್ತಾ ಗಜಪಡೆ?
ತುಮಕೂರು ವಿಶ್ವವಿದ್ಯಾಲಯದ ಜ್ಞಾನಸಿರಿ ಕ್ಯಾಂಪಸ್ ಬಳಿ ಚಿರತೆ ಪ್ರತ್ಯಕ್ಷ
ತುಮಕೂರು ವಿಶ್ವವಿದ್ಯಾಲಯದ ಜ್ಞಾನಸಿರಿ ಕ್ಯಾಂಪಸ್ ಬಳಿ ಚಿರತೆ ಪ್ರತ್ಯಕ್ಷ
ಯೂಟ್ಯೂಬ್ ನೋಡಿ ಮೊಬೈಲ್ ಕಳವು ಮಾಡುತ್ತಿದ್ದ ಕಳ್ಳ ಅರೆಸ್ಟ್
ಯೂಟ್ಯೂಬ್ ನೋಡಿ ಮೊಬೈಲ್ ಕಳವು ಮಾಡುತ್ತಿದ್ದ ಕಳ್ಳ ಅರೆಸ್ಟ್
ಸಿಎಂ ದೆಹಲಿ ಭೇಟಿಯ ಹಿಂದಿರುವ ಅಸಲಿ ಕಾರಣ ಬಿಚ್ಚಿಟ್ಟ ಡಿಸಿಎಂ ಪರಮೇಶ್ವರ್
ಸಿಎಂ ದೆಹಲಿ ಭೇಟಿಯ ಹಿಂದಿರುವ ಅಸಲಿ ಕಾರಣ ಬಿಚ್ಚಿಟ್ಟ ಡಿಸಿಎಂ ಪರಮೇಶ್ವರ್
ಅ. 26ಕ್ಕೆ ಕಬ್ಬು ಬೆಳೆಗಾರರು, ಸಕ್ಕರೆ ಕಾರ್ಖಾನೆ ಮಾಲೀಕರ ಸಭೆ: ಸಿಎಂ
ಅ. 26ಕ್ಕೆ ಕಬ್ಬು ಬೆಳೆಗಾರರು, ಸಕ್ಕರೆ ಕಾರ್ಖಾನೆ ಮಾಲೀಕರ ಸಭೆ: ಸಿಎಂ
ಓಕಳಿಪುರಂ ಅಂಡರ್‌ಪಾಸ್‌ನಲ್ಲಿ ಕೊಳಚೆ ನೀರು, ಗುಂಡಿಗಳ ಸಮಸ್ಯೆ
ಓಕಳಿಪುರಂ ಅಂಡರ್‌ಪಾಸ್‌ನಲ್ಲಿ ಕೊಳಚೆ ನೀರು, ಗುಂಡಿಗಳ ಸಮಸ್ಯೆ