
ದಕ್ಷಿಣ ಭಾರತದ ಪ್ರಮುಖ ರಿಯಲ್ ಎಸ್ಟೇಟ್ ಡೆವಲಪರ್ ಸಂಸ್ಥೆಯಾದ ಎನ್‌ಬಿಆರ್ ಗ್ರೂಪ್ ಬೆಂಗಳೂರಿನಲ್ಲಿನ ತನ್ನ ಹೊಸ ರೆಸಿಡೆನ್ಷಿಯಲ್ ಪ್ರಾಜೆಕ್ಟ್ ಆದ ಸೋಲ್ ಆಫ್ ದಿ ಸೀಸನ್ಸ್ (Soul of the Seasons) ಮೂಲಕ ಮತ್ತೆ ಸುದ್ದಿಯಲ್ಲಿದೆ. ಇತ್ತೀಚೆಗೆ, ಈ ಯೋಜನೆಗೆ 2025 ರ G.R.E.B.A. (Global Real Estate Brand Awards) ವತಿಯಿಂದ ‘ಅತ್ಯುತ್ತಮ ಥೀಮ್ಡ್ ರೆಸಿಡೆನ್ಷಿಯಲ್ ಪ್ರಾಜೆಕ್ಟ್’ ಪ್ರಶಸ್ತಿ ಲಭಿಸಿದೆ.
ಈ ಸೋಲ್ ಆಫ್ ದಿ ಸೀಸನ್ಸ್ ಪ್ರಾಜೆಕ್ಟ್ ಸರ್ಜಾಪುರ ರಸ್ತೆ – ಗುಂಜೂರು ಕಾರಿಡಾರ್ನಲ್ಲಿ ನಿರ್ಮಾಣವಾಗಿದೆ. ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಪ್ರದೇಶದಲ್ಲಿರುವ ಈ ಥೀಮ್ಡ್ ಪ್ರಾಜೆಕ್ಟ್ 9.65 ಎಕರೆ ವಿಸ್ತೀರ್ಣ ಹೊಂದಿದೆ. ಇದರಲ್ಲಿ 88% ಹಸಿರು ಪ್ರದೇಶಗಳು ಮತ್ತು ಮುಕ್ತ ಸ್ಥಳಗಳಿಗೆ ಮೀಸಲಾಗಿದೆ.
ಆಕಾಶ, ವಾಯು, ಅಗ್ನಿ, ಜಲ ಮತ್ತು ಭೂಮಿ ಇತ್ಯಾದಿ ಪ್ರಾಚೀನ ಪಂಚಮಹಾಭೂತ ತತ್ವ ಹಾಗೂ ಆಧುನಿಕ GAIA ತತ್ವದ ಸಮ್ಮಿಳನವಾಗಿರುವ ಈ ಯೋಜನೆಯು ಪ್ರಕೃತಿಯ ಸಮತೋಲನದ ನಡುವೆ ಐಷಾರಾಮಿ ಬದುಕನ್ನು ಕಲ್ಪಿಸುತ್ತದೆ.
22 ರಿಂದ 26 ಅಂತಸ್ತುಗಳವರೆಗೆ ಎತ್ತರ ಇರುವ ನಾಲ್ಕು ಕಟ್ಟಡಗಳಿವೆ. ಪ್ರತಿಯೊಂದು ಕಟ್ಟಡವು ಪ್ರಕೃತಿಯ ವಿಭಿನ್ನ ಅಂಶಗಳನ್ನು ಪ್ರತಿಬಿಂಬಿಸುತ್ತದೆ. ಸ್ಕೈಡೆಕ್ ಮತ್ತು ಸ್ಟಾರ್ಗೇಜಿಂಗ್ ಝೋನ್ಗಳು ಆಕಾಶವನ್ನು ಸಂಭ್ರಮಿಸುವಂತೆ ಮಾಡುತ್ತವೆ. ಕ್ರಾಸ್ ವೆಂಟಿಲೇಟೆಡ್ ಮನೆಗಳು ಗಾಳಿಯನ್ನು ಪ್ರತಿನಿಧಿಸುತ್ತವೆ. ಸೌರಶಕ್ತ ಪ್ರದೇಶಗಳು ಅಗ್ನಿಯನ್ನು ಸೂಚಿಸುತ್ತವೆ. ನೀರಿನ ಕೊಳ ಮತ್ತು ವಾಟರ್ ಗಾರ್ಡನ್ಗಳು ಜಲಶಕ್ತಿಯ ದ್ಯೋತಕವಾಗಿವೆ.
ವಿಶಾಲ 3 BHK ಅಪಾರ್ಟ್ಮೆಂಟ್ಗಳನ್ನು ಅಲೂಮಿನಿಯಮ್ ಫಾರ್ಮ್ವರ್ಕ್ ತಂತ್ರಜ್ಞಾನದಿಂದ ನಿರ್ಮಿಸಲಾಗಿದೆ ಇದರಿಂದ ಅತ್ಯುತ್ತಮ ಗುಣಮಟ್ಟ, ಬಾಳಿಕೆ ಶಕ್ತಿ ಕಟ್ಟಡಕ್ಕೆ ಇರುತ್ತದೆ. ಸರಿಯಾದ ಸಮಯಕ್ಕೆ ಮನೆ ಪೂರ್ಣಗೊಂಡು ಹಸ್ತಾಂತರಿಸುವಂತೆ ನೋಡಿಕೊಳ್ಳಲಾಗುತ್ತದೆ.
ಈ ವಸತಿ ಸಮುಚ್ಚಯದಲ್ಲಿ ಲಕ್ಷುರಿ ಕ್ಲಬ್ಹೌಸ್ ಇದೆ. ಯೋಗ ಪೆವಿಲಿಯನ್ಸ್, ಫಿಟ್ನೆಸ್ ಫೆಸಿಲಿಟಿ, ಸ್ವಿಮ್ಮಿಂಗ್ ಪೂಲ್, ಲಾಂಜಸ್ ಇತ್ಯಾದಿ ಸೌಕರ್ಯಗಳಿವೆ.
‘ಸೋಲ್ ಆಫ್ ದಿ ಸೀಸನ್ಸ್ ಕೇವಲ ರೆಸಿಡೆನ್ಷಿಯಲ್ ಕಾಂಪ್ಲೆಕ್ಸ್ ಮಾತ್ರವಲ್ಲ. ಅದು ಆರೋಗ್ಯಯುತ ಜೀವನಕ್ಕೆ ಪ್ರೇರೇಪಿಸುವ ಧಾಮವಾಗಿದೆ. ಖರೀದಿದಾರರಿಂದ ಸಿಗುತ್ತಿರುವ ಸ್ಪಂದನೆಯನ್ನು ನೋಡಿದರೆ ಇವತ್ತು ಜನರು ನಾಲ್ಕು ಗೋಡೆಗಳಿರುವ ಮನೆಗಳನ್ನು ಮಾತ್ರವೇ ನೋಡುತ್ತಿಲ್ಲ. ಅವರಿಗೆ ತಮ್ಮ ಯೋಗ ಕ್ಷೇಮ ಹೆಚ್ಚಿಸುವಂತಹ ಸಮುದಾಯಗಳ ಅವಶ್ಯಕತೆ ಇದೆ’ ಎಂದು ಎನ್‌ಬಿಆರ್ ಗ್ರೂಪ್ನ ಎಂಡಿ ನಾಗಭೂಷಣ ರೆಡ್ಡಿ ಹೇಳಿದ್ದಾರೆ.
ಎನ್‌ಬಿಆರ್ ಗ್ರೂಪ್ಗೆ 2025ರ ಟೈಮ್ಸ್ ಆಫ್ ಇಂಡಿಯಾ ಬ್ಯುಸಿನೆಸ್ ಅವಾರ್ಡ್ಸ್ನಲ್ಲಿ ಪ್ರೋಗ್ರೆಸಿವ್ ಡೆವಲಪರ್ ಆಫ್ ದಿ ಯಿಯರ್ ಪ್ರಶಸ್ತಿ ಕೂಡ ಸಿಕ್ಕಿತ್ತು.
ಬೆಂಗಳೂರು ಮೂಲದ ಎನ್‌ಬಿಆರ್ ಗ್ರೂಪ್ ಅನ್ನು ನಾಗಭೂಷಣ ರೆಡ್ಡಿ ಮತ್ತು ಅಶ್ವಥ್ ನಾರಾಯಣ ರೆಡ್ಡಿ ಅವರಿಬ್ಬರು 1998ರಲ್ಲಿ ಸ್ಥಾಪಿಸಿದ್ದಾರೆ. ಕಳೆದ ಎರಡು ದಶಕಗಳಲ್ಲಿ ಈ ಸಂಸ್ಥೆಯು 12 ಮಿಲಿಯನ್ ಚದರಡಿಯಷ್ಟು ವಾಸಸ್ಥಳಗಳನ್ನು ನಿರ್ಮಿಸಿದೆ.
ಹೆಚ್ಚಿನ ಮಾಹಿತಿಗಾಗಿ ಭೇಟಿ ನೀಡಿ: www.nbrgroup.in
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ