AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ವಾಂಟ್​ನಿಂದ ಭಾರತದ ಮೊದಲ ಈಕ್ವಿಟಿ ಲಾಂಗ್-ಶಾರ್ಟ್ ಎಸ್​ಐಎಫ್; ಮ್ಯುಚುವಲ್ ಫಂಡ್​ಗಿಂತ ಇದು ಲಾಭದಾಯಕವಾ?

Quant MF launches India’s first equity long-short SIF: ಕ್ವಾಂಟ್ ಮ್ಯುಚುವಲ್ ಫಂಡ್​ನಿಂದ ಕ್ಯುಎಸ್​ಐಎಫ್ ಈಕ್ವಿಟಿ ಲಾಂಗ್-ಶಾರ್ಟ್ ಫಂಡ್​ನ ಎನ್​ಎಫ್​ಒ ಆಫರ್ ಮಾಡಿದೆ. ಈ ಕೆಟಗರಿಯಲ್ಲಿ ಭಾರತದಲ್ಲಿ ಇದು ಮೊದಲ ಎಸ್​ಐಎಫ್ ಆಗಿದೆ. ಮ್ಯೂಚುವಲ್ ಫಂಡ್ ಹಾಗೂ ಪಿಎಂಎಸ್ ಅಂಶಗಳನ್ನು ಹೊಂದಿರುವ ಎಸ್​ಐಎಫ್, ಹೆಚ್ಚು ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತದೆ. ಹೆಚ್ಚು ರಿಟರ್ನ್ಸ್ ತರಬಲ್ಲುದು.

ಕ್ವಾಂಟ್​ನಿಂದ ಭಾರತದ ಮೊದಲ ಈಕ್ವಿಟಿ ಲಾಂಗ್-ಶಾರ್ಟ್ ಎಸ್​ಐಎಫ್; ಮ್ಯುಚುವಲ್ ಫಂಡ್​ಗಿಂತ ಇದು ಲಾಭದಾಯಕವಾ?
ಹೂಡಿಕೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 19, 2025 | 1:28 PM

Share

ನವದೆಹಲಿ, ಸೆಪ್ಟೆಂಬರ್ 19: ಕ್ವಾಂಟ್ ಮ್ಯುಚುವಲ್ ಫಂಡ್ ಸಂಸ್ಥೆ (Mutual Fund) ಭಾರತದ ಮೊದಲ ಈಕ್ವಿಟಿ ಲಾಂಗ್-ಶಾರ್ಟ್ ಸ್ಪೆಷಲೈಸ್ಡ್ ಇನ್ವೆಸ್ಟ್​ಮೆಂಟ್ ಫಂಡ್ ಅನ್ನು (Specialized Investment Fund) ಆರಂಭಿಸಿದೆ. ಕ್ಯುಎಸ್​ಐಎಫ್ ಈಕ್ವಿಟಿ ಲಾಂಗ್-ಶಾರ್ಟ್ ಫಂಡ್ (QSIF Equity Long-short Fund) ಎಂದು ಹೆಸರಿಲಾಗಿರುವ ಈ ಫಂಡ್​ನ ಎನ್​ಎಫ್​ಒ ಆಫರ್ ಅಕ್ಟೋಬರ್ 1ರವರೆಗೂ ಇದೆ. ಅಲಾಟ್ಮೆಂಟ್ ಆದ ಐದು ಕಾರ್ಯದಿನಗಳೊಳಗೆ ಈ ಫಂಡ್​ನ ಯುನಿಟ್​ಗಳು ಮಾರಾಟ ಮತ್ತು ಮರುಖರೀದಿಗೆ (repurchase) ಲಭ್ಯ ಇರುತ್ತವೆ.

ಸಂದೀಪ್ ಟಂಡನ್, ಲೋಕೇಶ್ ಗರ್ಗ್, ಸಮೀರ್ ಕಾಟೆ, ಅಂಕಿತ್ ಪಾಂಡೆ ಮತ್ತು ಸಂಜೀವ್ ಶರ್ಮಾ ಅವರಿರುವ ತಂಡವು ಈ ಫಂಡ್ ಅನ್ನು ನಿರ್ವಹಿಸುತ್ತದೆ.

ಕ್ವಾಂಟ್​ನ ಈ ಹೊಸ ಫಂಡ್ ಶೇ. 65ಕ್ಕಿಂತ ಹೆಚ್ಚಿನ ಹಣವನ್ನು ಈಕ್ವಿಟಿಗಳಲ್ಲಿ ಇರಿಸುತ್ತದೆ. ಇದರ ಜೊತೆಗೆ ಡಿರೈವೇಟಿವ್, ಹೆಡ್ಜಿಂಗ್, ಬಾಂಡ್, ಟ್ರೆಷರಿ ಬಿಲ್ ಇತ್ಯಾದಿಗಳಲ್ಲಿ ನಿರ್ದಿಷ್ಟ ತಂತ್ರಾತ್ಮವಾಗಿ ಹೂಡಿಕೆ ಮಾಡುತ್ತದೆ. ನಿಫ್ಟಿ500 ಟೋಟಲ್ ರಿಟರ್ನ್ ಇಂಡೆಕ್ಸ್ ಇದರ ಬೆಂಚ್ ಮಾರ್ಕ್ ಆಗಿದೆ.

ಇದನ್ನೂ ಓದಿ: Income Tax Refund Delay: ಇನ್ನೂ ರೀಫಂಡ್ ಬಂದಿಲ್ಲವಾ? ಏನು ಕಾರಣ? ಬಡ್ಡಿ ಸಮೇತ ಸಿಗುತ್ತಾ ಹಣ?

ಏನಿದು ಎಸ್​ಐಎಫ್, ಅಥವಾ ಸ್ಪೆಷಲೈಸ್ಡ್ ಇನ್ವೆಸ್ಟ್​ಮೆಂಟ್ ಫಂಡ್?

ಇದು ಮ್ಯುಚುವಲ್ ಫಂಡ್ ಮತ್ತು ಪಿಎಂಎಸ್ (ಪೋರ್ಟ್​ಫೋಲಿಯೋ ಮ್ಯಾನೇಜ್ಮೆಂಟ್ ಸರ್ವಿಸಸ್) ಅಂಶಗಳನ್ನು ಹೊಂದಿರುವ ಒಂದು ರೀತಿಯ ಫಂಡ್. ಹೆಚ್ಚು ರಿಸ್ಕ್ ತೆಗೆದುಕೊಂಡು ಹೆಚ್ಚು ರಿಟರ್ನ್ ಬಯಸುವ ಹೂಡಿಕೆದಾರರಿಗೆ ಸೂಕ್ತವಾದುದು.

ಮ್ಯುಚುವಲ್ ಫಂಡ್​ಗಳು ವಿವಿಧ ನಿಯಮಗಳಿಗೆ ಕಟ್ಟುಬಿದ್ದಿರುತ್ತವೆ. ಇಂತಿಷ್ಟ ಪ್ರಮಾಣದಲ್ಲಿ ಈಕ್ವಿಟಿ, ಡೆಟ್ ಇತ್ಯಾದಿಯಲ್ಲಿ ಹೂಡಿಕೆ ಮಾಡಬೇಕು ಎಂಬ ಪೂರ್ವನಮೂದಿತ ನಿಯಮಗಳಿರುತ್ತವೆ. ಆ ಕಟ್ಟುಪಾಡುಗಳಲ್ಲೇ ಫಂಡ್​ಗಳು ಹೂಡಿಕೆ ಮಾಡುತ್ತಿರುತ್ತವೆ.

ಇದಕ್ಕೆ ವ್ಯತಿರಿಕ್ತವಾಗಿ, ಪಿಎಂಎಸ್​ಗಳು ಮುಕ್ತವಾಗಿ ಕೆಲಸ ಮಾಡುತ್ತವೆ. ಎಲ್ಲೆಲ್ಲಿ ಹೂಡಿಕೆ ಮಾಡಲಾಗುತ್ತದೆ ಎಂಬುದನ್ನು ಇವು ಬಹಿರಂಗಪಡಿಸಬೇಕಿಲ್ಲ. ಇದರಲ್ಲಿ ಕನಿಷ್ಠ ಹೂಡಿಕೆಯೇ 50 ಲಕ್ಷ ರೂ ಇರುತ್ತದೆ. ಶ್ರೀಮಂತರು ಮತ್ತು ಮೇಲ್ಮಧ್ಯಮ ವರ್ಗದವರಿಗೆ ಇದು ಬಹುತೇಕ ಸೀಮಿತವಾಗಿದೆ.

ಇದನ್ನೂ ಓದಿ: ಇಪಿಎಫ್​ಒನಲ್ಲಿ ಹೊಸ ಫೀಚರ್ಸ್; ಪಾಸ್​ಬುಕ್ ಲೈಟ್, ಟ್ರಾನ್ಸ್ಫರ್ ಸರ್ಟಿಫಿಕೇಟ್, ತ್ವರಿತ ಅನುಮೋದನೆ

ಆದರೆ, ಎಸ್​ಐಎಫ್ ಅಥವಾ ಸ್ಪೆಷಲೈಸ್ಡ್ ಇನ್ವೆಸ್ಟ್​ಮೆಂಟ್ ಫಂಡ್​ಗಳಲ್ಲಿ ಕನಿಷ್ಠ ಹೂಡಿಕೆ 10 ಲಕ್ಷ ರೂ ಮಾತ್ರವೇ. ಇದು ಬಹುತೇಕ ಪಿಎಂಎಸ್ ರೀತಿಯ ಸ್ವಾತಂತ್ರ್ಯ ಹೊಂದಿರುತ್ತದೆ. ಕನಿಷ್ಠ ಹೂಡಿಕೆಯು ಕಡಿಮೆ ಇರುವುದರಿಂದ ಹೆಚ್ಚು ಜನರನ್ನು ಇದು ಆಕರ್ಷಿಸಬಲ್ಲುದು. ಫ್ಯೂಚರ್ಸ್ ಮತ್ತು ಆಪ್ಷನ್ಸ್ ಟ್ರೇಡಿಂಗ್​ನಲ್ಲೂ ಪಾಲ್ಗೊಂಡು ಒಂದಷ್ಟು ರಿಸ್ಕ್ ಮ್ಯಾನೇಜ್ಮೆಂಟ್ ಮಾಡುವ ಪ್ರಯತ್ನ ಇದೆ.

ಪಿಎಂಎಸ್​ನಲ್ಲಿ ಹೂಡಿಕೆದಾರರು ಇಷ್ಟಬಂದಂತೆ ಹೂಡಿಕೆ ಹಿಂಪಡೆಯಲು ಆಗುವುದಿಲ್ಲ. ನಿರ್ದಿಷ್ಟ ಲಾಕಿನ್ ಪೀರಿಯಡ್ ಇರುತ್ತದೆ. ಎಸ್​ಐಎಫ್​ನಲ್ಲಿ ಹೂಡಿಕೆದಾರರಿಗೆ ಆ ಸ್ವಾತಂತ್ರ್ಯ ಇರುತ್ತದೆ. ಹೀಗಾಗಿ, ಮುಂಬರುವ ದಿನಗಲ್ಲಿ ಎಸ್​ಐಎಫ್​ಗಳ ಜನಪ್ರಿಯತೆ ಹೆಚ್ಚಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ