ಕೇಂದ್ರ ಬಜೆಟ್ 2022-23ರಲ್ಲಿ (Union Budget 2022) ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೃಷಿಯೇತರ ಸ್ಥಿರಾಸ್ತಿಗೆ ಸಂಬಂಧಿಸಿದಂತೆ ತೆರಿಗೆಯೊಂದರ ಪ್ರಸ್ತಾವ ಮಾಡಿದ್ದಾರೆ. ಅದರ ಪ್ರಕಾರವಾಗಿ, 50 ಲಕ್ಷ ಮೇಲ್ಪಟ್ಟ ಆಸ್ತಿ ಅಥವಾ ಮನೆ ಖರೀದಿಸುವಾಗ ಆಸ್ತಿಯ ಮಾರಾಟ ಬೆಲೆ ಅಥವಾ ಮುದ್ರಾಂಕ ಶುಲ್ಕ ಮೌಲ್ಯದ ಮೇಲೆ ಇವೆರಡರಲ್ಲಿ ಯಾವುದು ಹೆಚ್ಚೋ ಅದರ ಆಧಾರದಲ್ಲಿ ಶೇ 1ರ ಟಿಡಿಎಸ್ ಕಡಿತ ಮಾಡಲಾಗುವುದು. ಇದಕ್ಕಾಗಿ ಆದಾಯ ತೆರಿಗೆ ಕಾಯ್ದೆಯಲ್ಲಿ ಇದಕ್ಕಾಗಿಯೇ ತಿದ್ದುಪಡಿ ಬರಲಿದೆ. ಈ ತಿದ್ದುಪಡಿಯು ಏಪ್ರಿಲ್ 1, 2022ರಿಂದ ಜಾರಿಗೆ ಬರಲಿದೆ. “ಸದ್ಯಕ್ಕೆ ಹೇಗಿದೆ ಅಂದರೆ ಆಸ್ತಿ ವರ್ಗಾವಣೆ ಮಾಡಿಸಿಕೊಳ್ಳುವವರು ವರ್ಗಾವಣೆ ಮಾಡುವವರಿಗೆ ಪಾವತಿಸುವ ಮೊತ್ತದ ಮೇಲೆ ಟಿಡಿಎಸ್ ಪಾವತಿಸಬೇಕಾಗುತ್ತದೆ. ಆದರೆ ಸ್ಥಿರಾಸ್ತಿಯ ಮಾರಾಟದ ಮೇಲೆ ಕ್ಯಾಪಿಟಲ್ ಗೇಯ್ನ್ ತೆರಿಗೆ ಲೆಕ್ಕ ಹಾಕುವಾಗ ಮಾರಾಟದ ಮೊತ್ತ ಮತ್ತು ಮುದ್ರಾಂಕದ ನೋಂದಣಿ ಮೌಲ್ಯ ಇವೆರಡರಲ್ಲಿ ಯಾವುದು ಹೆಚ್ಚೋ ಅದನ್ನು ಪರಿಗಣಿಸಲಾಗುತ್ತದೆ,” ಎಂದು ವಿಶ್ಲೇಷಕರು ಹೇಳುತ್ತಾರೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಭಾಷಣದಲ್ಲಿ ಪ್ರಸ್ತಾವ ಮಾಡಿದಂತೆ, ಕಾನೂನು ತೊಡಕುಗಳು ದೂರಾಗಲು ತಿದ್ದುಪಡಿ ತರಲಾಗಿದೆ. ಈ ತಿದ್ದುಪಡಿಯ ಮೂಲಕವಾಗಿ ಅಂಥ ವಹಿವಾಟುಗಳನ್ನು ಸ್ಪಷ್ಟವಾಗಿ ಗುರುತಿಸಲು ಸರ್ಕಾರದ ನೆರವಿಗೆ ಬರುತ್ತದೆ. ಎಲ್ಲಿ ಮುದ್ರಾಂಕ ಮೌಲ್ಯಕ್ಕಿಂತ ಕಡಿಮೆಗೆ ಯಾವುದೇ ಆಸ್ತಿಯನ್ನು ಖರೀದಿ ಮಾಡಿದಲ್ಲಿ ಗಮನಕ್ಕೆ ಬರುತ್ತದೆ. “ಏಕರೂಪವನ್ನು ನಿರ್ವಹಣೆ ಮಾಡುವುದಕ್ಕೆ ಸ್ಥಿರಾಸ್ತಿ ವರ್ಗಾವಣೆಗೆ ಸಂಬಂಧಿಸಿದಂತೆ ಪ್ರಸ್ತಾವ ಮಾಡಲಾಗಿದ್ದು (ಕೃಷಿ ಭೂಮಿಯನ್ನು ಹೊರತುಪಡಿಸಿ), ನಿವಾಸಿಗೆ ಪಾವತಿಸುವ ಮೊತ್ತದಲ್ಲಿ ಶೇ 1ರಷ್ಟು ಟಿಡಿಎಸ್ ಕಡಿತ ಅಥವಾ ಅಂಥ ಆಸ್ತಿಯ ಮುದ್ರಾಂಕ ಶುಲ್ಕ (ಎರಡೂ 50 ಲಕ್ಷಕ್ಕೂ ಹೆಚ್ಚು), ಯಾವುದು ಹೆಚ್ಚೋ ಅದು,” ಎಂದು ಸಚಿವಾಲಯದಿಂದ ವಿವರಿಸಲಾಗಿದೆ.
ಮಾರಾಟ ಮೊತ್ತ ಅಥವಾ ಮುದ್ರಾಂಕ ಶುಲ್ಕ ಯಾವುದು ಹೆಚ್ಚೋ ಅದು
2022ರ ಬಜೆಟ್ ಪ್ರಸ್ತಾವದ ಪ್ರಕಾರ, ಸೆಕ್ಷನ್ 194-IA ತಿದ್ದುಪಡಿಗೆ ಪ್ರಸ್ತಾಪಿಸಲಾಗಿದೆ. ಟಿಡಿಎಸ್ ಮೊತ್ತವನ್ನು ಲೆಕ್ಕ ಹಾಕುವುದಕ್ಕೆ ಜತೆಗೆ ಮುದ್ರಾಂಕ ಶುಲ್ಕವನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಪ್ರಸ್ತಾವದ ಪ್ರಕಾರ, ಶೇ 1ರಷ್ಟು ಟಿಡಿಎಸ್ ಅನ್ನು ಮಾರಾಟದ ಬೆಲೆ ಮೇಲೆ ಅಥವಾ ಆ ಆಸ್ತಿಯ ಮುದ್ರಾಂಕ ಶುಲ್ಕ, ಇವೆರಡರಲ್ಲಿ ಯಾವುದು ಹೆಚ್ಚೋ ಅದರ ಮೇಲೆ ಹಾಕಲಾಗುತ್ತದೆ. ಒಂದು ವೇಳೆ ಆಸ್ತಿಯ ಮುದ್ರಾಂಕ ಶುಲ್ಕವು ಮಾರಾಟದ ಮೊತ್ತಕ್ಕೆ ಹೋಲಿಸಿದರೆ ಹೆಚ್ಚಾದಲ್ಲಿ, ಅಂಥ ಆಸ್ತಿಯ ಮುದ್ರಾಂಕ ಶುಲ್ಕ ಮೌಲ್ಯದ ಮೇಲೆ ಕಡಿತ ಮಾಡಲಾಗುತ್ತದೆ.
“ಆಸ್ತಿ ಖರೀದಿಗಾಗಿ ಮಾರಾಟಗಾರರಿಗೆ ಪಾವತಿ ಮಾಡುವ ಮೊತ್ತದ ಶೇ 1ರಷ್ಟು ಟಿಡಿಎಸ್ ಅನ್ವಯಿಸುತ್ತದೆ. ಖರೀದಿ ಮಾಡುವವರು ಈ ಟಿಡಿಎಸ್ ಕಡಿತ ಮಾಡಬೇಕು. ಇಲ್ಲಿ ನೋಂದಣಿ ಶುಲ್ಕವನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಆದರೆ ಎಲ್ಲಿ ವ್ಯವಹಾರ ಅಥವಾ ಉದ್ಯಮದ ಆದಾಯವನ್ನು ಲೆಕ್ಕ ಹಾಕುವಾಗ ಅಥವಾ ಕ್ಯಾಪಿಟಲ್ ಗೇಯ್ನ್ಸ್ ಲೆಕ್ಕ ಹಾಕುವಾಗ ವಹಿವಾಟು ಮೌಲ್ಯವು ಮುದ್ರಾಂಕ ಶುಲ್ಕಕ್ಕಿಂತ ಕಡಿಮೆ ಶುಲ್ಕ ಇದ್ದಲ್ಲಿ ಹೆಚ್ಚಿನ ಮೌಲ್ಯವನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಇದೇ ಟಿಡಿಎಸ್ಗೂ ಅನ್ವಯ ಆಗುತ್ತದೆ. ಮುದ್ರಾಂಕ ಶುಲ್ಕ ಹೆಚ್ಚಾಗಿದ್ದಲ್ಲಿ ಟಿಡಿಎಸ್ ಶೇ 1ರಷ್ಟು ಅನ್ವಯ ಆಗಲಿದೆ. ಒಟ್ಟಾರೆ ತೆರಿಗೆ ಪಾವತಿಸುವುದರ ವಿರುದ್ಧ ತೆರಿಗೆದಾರರಿಗೆ (ಮಾರಾಟಗಾರರು) ಟಿಡಿಎಸ್ ಹೊಂದಾಣಿಕೆ ಮಾಡುವುದಕ್ಕೆ ಸಾಧ್ಯವಿದ್ದರೂ ಈ ನಡೆ ತೆಗೆದುಕೊಳ್ಳಲಾಗುತ್ತದೆ. ಕ್ಯಾಪಿಟಲ್ ಗೇಯ್ನ್ಸ್ ಹೂಡಿಕೆ ಮಾಡಿದ್ದಲ್ಲಿ ಇಂಥ ಟಿಡಿಎಸ್ ರೀಫಂಡ್ ಮಾಡಲಾಗುತ್ತದೆ,” ಎಂದು ವಿಶ್ಲೇಷಕರು ಹೇಳುತ್ತಾರೆ.
ಲೆಕ್ಕಾಚಾರ ಹೇಗೆ?
ಒಬ್ಬ ವ್ಯಕ್ತಿ ಬಿಲ್ಡರ್ನಿಂದ 2 ಕೋಟಿ ರೂಪಾಯಿಗೆ ಆಸ್ತಿ ಖರೀದಿಸಿದ್ದು, ಆ ಆಸ್ತಿಯ ಮುದ್ರಾಂಕ ಶುಲ್ಕ ಮೌಲ್ಯ 2.5 ಕೋಟಿ ರೂಪಾಯಿ ಅಂದುಕೊಳ್ಳಿ. ಈ ಹಿಂದೆ ಆ ವ್ಯಕ್ತಿ 2 ಕೋಟಿ ರೂಪಾಯಿಯ ಮೇಲೆ ಶೇ 1ರಷ್ಟು ಲೆಕ್ಕ ಹಾಕಿ, 2 ಲಕ್ಷ ರೂಪಾಯಿ ಪಾವತಿಸಬಹುದಿತ್ತು. ಆದರೆ ಈಗ 2.5 ಕೋಟಿ ಮೇಲೆ ಶೇ 1ರಷ್ಟು ತೆರಿಗೆ ಪಾವತಿಸಬೇಕು, ಏಕೆಂದರೆ ಇದು ಹೆಚ್ಚಿನ ಮೊತ್ತ. ಆದ್ದರಿಂದ 2.5 ಕೋಟಿ ರೂಪಾಯಿಯ ಮೇಲೆ 2.5 ಲಕ್ಷ ರೂಪಾಯಿಯನ್ನು ಟಿಡಿಎಸ್ ಎಂದು ಕಟ್ಟಬೇಕು.
ಹೂಡಿಕೆ ತಜ್ಞರು ಅಭಿಪ್ರಾಯ ಪಡುವಂತೆ, ಈ ನಡೆಯಿಂದ ತೆರಿಗೆ ಕಳುವು ತಪ್ಪಿಸಬಹುದು. ಏಕೆಂದರೆ ಖರೀದಿದಾರರು ಮತ್ತು ಮಾರಾಟಗಾರರು ಇಬ್ಬರ 26ASನಲ್ಲಿ ಇದು ಕಾಣಿಸುತ್ತದೆ. ಒಂದು ವೇಳೆ ತಾಳೆ ಆಗುತ್ತಿಲ್ಲ ಎಂದಾದಲ್ಲಿ ಆದಾಯ ತೆರಿಗೆ ಇಲಾಖೆಯು ಮಧ್ಯಪ್ರವೇಶಿಸಿ, ತಪ್ಪಿತಸ್ಥರು ಯಾರು ಎಂದು ಕಂಡುಹಿಡಿಯಲಿದೆ. “ಇದರಿಂದ ಹೆಚ್ಚಿನ ತೆರಿಗೆ ಸಂಗ್ರಹ ಆಗುತ್ತದೆ- ಆ ನಂತರ ಅದನ್ನು ತೆರಿಗೆ ಬಾಕಿ ಜತೆ ಹೊಂದಾಣಿಕೆ ಮಾಡಲಾಗುತ್ತದೆ ಅಥವಾ ಕ್ಯಾಪಿಟಲ್ ಗೇಯ್ನ್ಸ್ ಅನ್ನು ವಿನಾಯಿತಿ ಅಂತ ಕ್ಲೇಮ್ ಮಾಡಿದಲ್ಲಿ ರೀಫಂಡ್ ಮಾಡಲಾಗುತ್ತದೆ,” ಎನ್ನುತ್ತಾರೆ ವಿಶ್ಲೇಷಕರು.
ಒಂದು ವೇಳೆ ವರ್ಗಾವಣೆ ಮಾಡಬೇಕಾದ ಸ್ಥಿರಾಸ್ತಿಗೆ ಪಾವತಿಸುವ ಮೊತ್ತ ಮತ್ತು ಅಂಥ ಆಸ್ತಿಯ ಮುದ್ರಾಂಕ ಶುಲ್ಕ ಎರಡೂ 50 ಲಕ್ಷಕ್ಕಿಂತ ಕಡಿಮೆ ಇದ್ದಲ್ಲಿ 194-IA ಅಡಿಯಲ್ಲಿ ಯಾವುದೇ ಶುಲ್ಕ ಕಡಿತ ಆಗುವುದಿಲ್ಲ, ಎಂದು ಸೇರಿಸಲಾಗಿದೆ ಎಂಬುದಾಗಿ ಬಜೆಟ್ ಸುತ್ತೋಲೆಯಲ್ಲಿ ಗಮನ ಸೆಳೆಯಲಾಗಿದೆ.
ಇದನ್ನೂ ಓದಿ: Income Tax: ಕೇಂದ್ರ ಬಜೆಟ್ 2022ರ ನಂತರ ಹಿರಿಯ ನಾಗರಿಕರ ಆದಾಯ ತೆರಿಗೆ ಲೆಕ್ಕಾಚಾರ ಹೇಗೆ?
Published On - 9:04 pm, Sat, 5 February 22