Multibagger Share: ಈ ಸ್ಟಾಕ್​ ಮೇಲೆ ಮಾಡಿದ ರೂ. 1 ಲಕ್ಷ ಹೂಡಿಕೆ 20 ತಿಂಗಳಲ್ಲಿ 18 ಲಕ್ಷ ರೂಪಾಯಿ

| Updated By: Srinivas Mata

Updated on: Feb 06, 2022 | 8:29 AM

ಈ ಮಲ್ಟಿಬ್ಯಾಗರ್ ಸ್ಟಾಕ್​ನಲ್ಲಿ ಹೂಡಿಕೆ ಮಾಡಿದ 1 ಲಕ್ಷ ರೂಪಾಯಿ ಕೇವಲ 20 ತಿಂಗಳಲ್ಲಿ 18 ಲಕ್ಷ ರೂಪಾಯಿ ಆಗಿದೆ. ಯಾವುದು ಆ ಸ್ಟಾಕ್ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

Multibagger Share: ಈ ಸ್ಟಾಕ್​ ಮೇಲೆ ಮಾಡಿದ ರೂ. 1 ಲಕ್ಷ ಹೂಡಿಕೆ 20 ತಿಂಗಳಲ್ಲಿ 18 ಲಕ್ಷ ರೂಪಾಯಿ
ಸಾಂದರ್ಭಿಕ ಚಿತ್ರ
Follow us on

2021ರಲ್ಲಿ ಕೊವಿಡ್​-19 ಬಿಕ್ಕಟ್ಟಿನ ನಂತರ ದೊಡ್ಡ ಸಂಖ್ಯೆಯಲ್ಲಿ ಮಲ್ಟಿಬ್ಯಾಗರ್​ ಸ್ಟಾಕ್​ಗಳು (Multibagger Stocks) ಕಾಣಿಸಿಕೊಂಡಿವೆ. ಕೊವಿಡ್​ ಎರಡನೇ ಅಲೆಯಿಂದ ಮಾರ್ಕೆಟ್​ ಚೇತರಿಸಿಕೊಂಡ ನಂತರ ಉತ್ತಮ ಸಂಖ್ಯೆಯ ಮಲ್ಟಿಬ್ಯಾಗರ್ ಸ್ಟಾಕ್‌ಗಳು ಮತ್ತು ಮಲ್ಟಿಬ್ಯಾಗರ್ ಪೆನ್ನಿ ಸ್ಟಾಕ್‌ಗಳು ಅದ್ಭುತವಾದ ರಿಟರ್ನ್ಸ್ ನೀಡಿವೆ. ಭಾರತೀಯ ಷೇರು ಮಾರುಕಟ್ಟೆಯ ಮಲ್ಟಿಬ್ಯಾಗರ್ ಸ್ಟಾಕ್‌ಗಳ ಪೈಕಿ ಅದಾರ್​ ಪೂನವಾಲಾ ಅವರ (ಸೈರಸ್ ಪೂನವಾಲಾ ಗ್ರೂಪ್ ಪ್ರಮೋಟೆಡ್) ಪುಣೆ ಮೂಲದ ಎನ್​ಬಿಎಫ್​ಸಿ ಪೂನವಾಲಾ ಫಿನ್‌ಕಾರ್ಪ್ ಲಿಸ್ಟ್​ ಮಾಡಲಾದ ಮಲ್ಟಿಬ್ಯಾಗರ್ ಸ್ಟಾಕ್‌ಗಳಲ್ಲಿ ಒಂದಾಗಿದೆ. ಪೂನವಾಲಾ ಫಿನ್‌ಕಾರ್ಪ್ ಲಿಮಿಟೆಡ್ ಷೇರಿನ ಬೆಲೆಯು ಎನ್​ಎಸ್​ಇನಲ್ಲಿ ಜೂನ್ 5, 2020ರಂದು ಪ್ರತಿ ಷೇರಿಗೆ ರೂ. 16.40ರಂತೆ ಮುಕ್ತಾಯ ಆಗಿತ್ತು. ಆ ಷೇರಿನ ಬೆಲೆ 4ನೇ ಫೆಬ್ರವರಿ 2022 ರಂದು ಎನ್​ಎಸ್​ಇಯಲ್ಲಿ ದಿನದ ಮುಕ್ತಾಯಕ್ಕೆ ರೂ. 264.80 ಆಗಿದೆ. ಅಂದರೆ ಈ ಎನ್​ಬಿಎಫ್​ಸಿ ಷೇರು ಈ 20 ತಿಂಗಳಲ್ಲಿ ಶೇ 1700ರಷ್ಟು ಏರಿಕೆಯಾಗಿದೆ.

ಪೂನವಾಲಾ ಫಿನ್​ಕಾರ್ಪ್ ಷೇರು ಬೆಲೆ ಇತಿಹಾಸ
ಕಳೆದ ಒಂದು ತಿಂಗಳಲ್ಲಿ ಈ ಮಲ್ಟಿಬ್ಯಾಗರ್ ಷೇರಿನ ಬೆಲೆ ರೂ. 228.40 ರಿಂದ ರೂ. 264.80ಕ್ಕೆ ಏರಿಕೆಯಾಗಿ, ಈ ಸಮಯದಲ್ಲಿ 16ರಷ್ಟು ಹೆಚ್ಚಳವಾಗಿದೆ. ಆದರೆ ಕಳೆದ 6 ತಿಂಗಳಲ್ಲಿ ಈ ಎನ್​ಬಿಎಫ್​ಸಿ ಸ್ಟಾಕ್ ಸುಮಾರು ಶೇ 60ರಷ್ಟು ಮೇಲೇರಿದೆ. ಈ ವರ್ಷದ ಆರಂಭದಿಂದ ಇಲ್ಲಿಯವರೆಗೆ (YTD) ಈ ಎನ್​ಬಿಎಫ್​ಸಿ ಸ್ಟಾಕ್ ರೂ. 220.75ರಿಂದ ರೂ. 264.80ಕ್ಕೆ ತಲುಪಿದ್ದು, 2022ರಲ್ಲಿ ಶೇ 20ರಷ್ಟು ರಿಟರ್ನ್ ನೀಡಿದೆ. ಕಳೆದ ಒಂದು ವರ್ಷದಲ್ಲಿ ಸುಮಾರು ರೂ. 60ರ ಹಂತದಿಂದ ರೂ. 264.80ರ ಮಟ್ಟಕ್ಕೆ ಏರಿ, ಈ ಅವಧಿಯಲ್ಲಿ ಸುಮಾರು ಶೇ 350ರಷ್ಟು ಹೆಚ್ಚಳವಾಗಿದೆ. ಅದೇ ರೀತಿ, 5ನೇ ಜೂನ್ 2020ರಿಂದ 4ನೇ ಫೆಬ್ರವರಿ 2022ರವರೆಗೆ ರೂ. 14.60ರಿಂದ ರೂ. 264.80 ಮಟ್ಟಕ್ಕೆ ತಲುಪಿದ್ದು, ಈ 20 ತಿಂಗಳಲ್ಲಿ ಸುಮಾರು 18 ಪಟ್ಟು ಮೇಲೇರಿದೆ.

ಹೂಡಿಕೆ ಮೇಲೆ ಪರಿಣಾಮ
ಪೂನವಾಲಾ ಫಿನ್‌ಕಾರ್ಪ್ ಲಿಮಿಟೆಡ್ ಷೇರು ಬೆಲೆ ಇತಿಹಾಸದಿಂದ ಹೇಳುವುದಾದರೆ, ಒಂದು ತಿಂಗಳ ಹಿಂದೆ ಹೂಡಿಕೆದಾರರು ಈ ಮಲ್ಟಿಬ್ಯಾಗರ್ ಸ್ಟಾಕ್‌ನಲ್ಲಿ ರೂ. 1 ಲಕ್ಷ ಹೂಡಿಕೆ ಮಾಡಿದ್ದರೆ ಆ 1 ಲಕ್ಷ ಇಂದು 1.16 ಲಕ್ಷಕ್ಕೆ ಆಗಿರುತ್ತಿತ್ತು. ಇನ್ನು ಕಳೆದ 6 ತಿಂಗಳಲ್ಲಿ ರೂ. 1.60 ಲಕ್ಷ ತಲುಪಿರುತ್ತಿತ್ತು. ಹೂಡಿಕೆದಾರರು ಒಂದು ವರ್ಷದ ಹಿಂದೆ ಈ ಎನ್‌ಬಿಎಫ್‌ಸಿ ಷೇರಿನಲ್ಲಿ 1 ಲಕ್ಷ ಹೂಡಿದ್ದರೆ ಇವತ್ತಿಗೆ ರೂ. 4.50 ಲಕ್ಷ ಆಗುತ್ತಿತ್ತು. ಅದೇ ರೀತಿ ಹೂಡಿಕೆದಾರರು 20 ತಿಂಗಳ ಹಿಂದೆ ಈ ಮಲ್ಟಿಬ್ಯಾಗರ್ ಸ್ಟಾಕ್‌ನಲ್ಲಿ ರೂ. 1 ಲಕ್ಷ ಹೂಡಿಕೆ ಮಾಡಿದ್ದರೆ, ಅಂದರೆ ಒಂದು ಸ್ಟಾಕ್ ಅನ್ನು ಪ್ರತಿ ರೂ. 14.60ರಂತೆ ಖರೀದಿಸಿ, ಇವತ್ತಿಗೂ ಹಾಗೇ ಉಳಿಸಿಕೊಂಡಿದ್ದಲ್ಲಿ ಆ 1 ಲಕ್ಷ ಇಂದು 18 ಲಕ್ಷಕ್ಕೆ ಬದಲಾಗುತ್ತಿತ್ತು.

ಪೂನವಾಲಾ ಫಿನ್‌ಕಾರ್ಪ್ ಸ್ಟಾಕ್ ಕುರಿತು ಇನ್ನಷ್ಟು
ಪೂನವಾಲಾ ಫಿನ್‌ಕಾರ್ಪ್ ಲಿಮಿಟೆಡ್‌ನ ಮಾರುಕಟ್ಟೆ ಬಂಡವಾಳ ರೂ. 20,200 ಕೋಟಿ. ಅದರ 52-ವಾರದ ಗರಿಷ್ಠ ಮೌಲ್ಯವು ರೂ. 302.90 ಆಗಿದ್ದರೆ, ಅದರ 52 ವಾರಗಳ ಕನಿಷ್ಠ ಮಟ್ಟ ಪ್ರತಿ ಷೇರಿಗೆ ರೂ. 55.60 ಆಗಿದೆ. ಪ್ರತಿ ಷೇರಿಗೆ ಕಂಪೆನಿಯ ಪುಸ್ತಕ ಮೌಲ್ಯ 73.90 ರೂಪಾಯಿ ಇದೆ.

ಇದನ್ನೂ ಓದಿ: Multibagger penny stocks: ಈ ಮಲ್ಟಿಬ್ಯಾಗರ್ ಪೆನ್ನಿ ಸ್ಟಾಕ್​ನಲ್ಲಿ ಹೂಡಿದ 1 ಲಕ್ಷ ರೂಪಾಯಿ 10 ವರ್ಷಗಳಲ್ಲಿ ರೂ. 4 ಕೋಟಿಗೆ