
ನವದೆಹಲಿ, ನವೆಂಬರ್ 5: ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಎನಿಸಿರುವ ಮುಕೇಶ್ ಅಂಬಾನಿ ವೈಯಕ್ತಿಕವಾಗಿ ಅದ್ಧೂರಿ ವೇಷಭೂಷಣ ಧರಿಸುವಂಥವರಲ್ಲ. ಆದರೆ, ಅವರ ಪತ್ನಿ ನೀತಾ ಅಂಬಾನಿ (Nita Ambani) ಅವರದ್ದು ಬಹಳ ಆಕರ್ಷಕ, ವೈಭವದ ಜೀವನಶೈಲಿ. ಉತ್ಕೃಷ್ಟ ಅಭಿರುಚಿಗೆ ಹೆಸರಾದವರು. ತಮ್ಮ ಕೊನೆಯ ಮಗನ ಮದುವೆಯಲ್ಲಿ ನೀತಾ ಅಂಬಾನಿ ಅವರು ಧರಿಸಿದ್ದ ಒಡವೆ ವಸ್ತ್ರಗಳು ಬೆರಗಾಗಿಸುವಂತಿದ್ದವು. ಇದೇ ವೇಳೆ, ನೀತಾ ಅಂಬಾನಿ ಅವರು ಹೊಂದಿರುವ ಕಾರುಗಳು ಎಲ್ಲರ ಕಣ್ಣು ಕುಕ್ಕುತ್ತಿವೆ. ಕಳೆದ ವರ್ಷ ನೀತಾ ಅಂಬಾನಿ ತಮ್ಮ ಪತಿಯಿಂದ ಗಿಫ್ಟ್ ಆಗಿ ಪಡೆದಿದ್ದ ಎರಡನೇ ರೋಲ್ಸ್ ರಾಯ್ಸ್ ಕಾರು ಈಗ ವೈರಲ್ ಆಗುತ್ತಿದೆ.
ಮುಕೇಶ್ ಅಂಬಾನಿ ಅವರು ತಮ್ಮ ಪತ್ನಿ ನೀತಾ ಅವರಿಗೆ 2023ರ ದೀಪಾವಳಿಗೆ ರೋಲ್ಸ್ ರಾಯ್ಸ್ ಕಲಿನನ್ ಕಾರನ್ನು (Rolls Royce Cullinan) ಉಡುಗೊರೆಯಾಗಿ ಕೊಟ್ಟಿದ್ದರು. ಅದು ಎಲ್ಲರ ಗಮನ ಸೆಳೆದಿತ್ತು. ಈಗ ನೀತಾ ಅವರ ಬಳಿ ಹೊಸ ರೋಲ್ಸ್ ರಾಯ್ಸ್ ಫಾಂಟಂ-8 ಇಡಬ್ಲ್ಯುಬಿ (Rolls Royce Phantom VIII EWB- Extended Wheel Base) ಕಾರು ಇದೆ. ಇದನ್ನು ಮುಕೇಶ್ ಅಂಬಾನಿ 2024ರಲ್ಲಿ ನೀತಾಗೆ ಗಿಫ್ಟ್ ಆಗಿ ಕೊಟ್ಟಿರುವ ಕಾರು ಎನ್ನಲಾಗುತ್ತಿದೆ.
ಇದನ್ನೂ ಓದಿ: ಸ್ವರ್ಗಸ್ಥ ಅಮ್ಮನ ಆಸೆ ತೀರಿಸಿದ ಮಗ; ಊರಿನ ಎಲ್ಲ ರೈತರ ಸಾಲ ತೀರಿಸಿದ ಉದ್ಯಮಿ
ನೀತಾ ಅಂಬಾನಿ ಬಳಿ ಇರುವ ರೋಲ್ಸ್ ರಾಯ್ಸ್ ಫಾಂಟಂ-8 ಕಾರು ಬಹಳ ವಿಶೇಷ ಎನಿಸಿದೆ. ರೋಲ್ಸ್ ರಾಯ್ಸ್ ಬ್ರ್ಯಾಂಡ್ನ ಕಾರುಗಳು ಸಾಮಾನ್ಯವಾಗಿ ಕಪ್ಪು ಮತ್ತು ಬಿಳಿ ಮಿಶ್ರಿತ ಬಣ್ಣದ್ದಾಗಿರುತ್ತವೆ. ಆದರೆ ಫಾಂಟಮ್-8 ಕಾರು ಪಿಂಕ್ ಶೇಡ್ನ ಬಣ್ಣದ್ದಾಗಿದೆ. ಬಹಳ ಆಕರ್ಷಕವಾಗಿ ಕಾಣುತ್ತಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಜನರು ಮೆಚ್ಚಿಕೊಂಡಿದ್ದಾರೆ.
ರೋಲ್ಸ್ ರಾಯ್ಸ್ ಫಾಂಟಮ್-8 ಇಡಬ್ಲ್ಯುಬಿ ಕಾರಿನ ಎಂಜಿನ್ ಬರೋಬ್ಬರಿ 571 ಬಿಎಚ್ಪಿ ಶಕ್ತಿ ಹೊಂದಿದೆ. ಈ ಪ್ರಬಲ ಎಂಜಿನ್ ಶಕ್ತಿಯಿಂದಾಗಿ ಗಾಡಿ ಬಹಳ ಅದ್ಭುತ ರೈಡಿಂಗ್ ಅನುಭವ ಕೊಡುತ್ತದೆ.
ಇದನ್ನೂ ಓದಿ: ಅನಿಲ್ ಅಂಬಾನಿಗೆ ಇನ್ನಷ್ಟು ಕುಣಿಕೆ ಬಿಗಿದ ಇಡಿ; 3,000 ಕೋಟಿ ರೂ ಮೌಲ್ಯದ ವಿವಿಧ ಆಸ್ತಿಗಳು ಮುಟ್ಟುಗೋಲು
ನೀತಾ ಅಂಬಾನಿ ಅವರು ಗೃಹಿಣಿ ಅಷ್ಟೇ ಅಲ್ಲ, ರಿಲಾಯನ್ಸ್ ಇಂಡಸ್ಟ್ರೀಸ್ ಉದ್ಯಮದಲ್ಲಿ ಬೇರೆ ಬೇರೆ ರೀತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಐಪಿಎಲ್ ಫ್ರಾಂಚೈಸಿ, ರಿಲಾಯನ್ಸ್ ಫೌಂಡೇಶನ್ ಇತ್ಯಾದಿಗಳ ಮುಖ್ಯಸ್ಥೆಯಾಗಿದ್ದಾರೆ. ಇವರ ಒಟ್ಟು ಆಸ್ತಿ ಮೌಲ್ಯ ಸುಮಾರು 2,500 ಕೋಟಿ ರೂ ಆಸುಪಾಸು ಇರಬಹುದು.
ಬಹಳಷ್ಟು ವಜ್ರ, ಚಿನ್ನ, ಬೆಳ್ಳಿ, ಪ್ಲಾಟಿನಂ ಆಭರಣಗಳನ್ನು ನೀತಾ ಅಂಬಾನಿ ಹೊಂದಿದ್ದಾರೆ. ತಮ್ಮ ಮಗ ಅನಂತ್ ಅಂಬಾನಿ ಮದುವೆಯಲ್ಲಿ ಇದರ ವೈಭವ ಕಾಣಸಿಕ್ಕಿತ್ತು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ