AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅನಿಲ್ ಅಂಬಾನಿಗೆ ಇನ್ನಷ್ಟು ಕುಣಿಕೆ ಬಿಗಿದ ಇಡಿ; 3,000 ಕೋಟಿ ರೂ ಮೌಲ್ಯದ ವಿವಿಧ ಆಸ್ತಿಗಳು ಮುಟ್ಟುಗೋಲು

ED seizes Anil Ambani's Rs 3,000 crore assets: ಸಾವಿರಾರು ಕೋಟಿ ರೂ ಮೊತ್ತದ ಅಕ್ರಮ ಹಣ ವರ್ಗಾವಣೆ ಆರೋಪ ಎದುರಿಸುತ್ತಿರುವ ಅನಿಲ್ ಅಂಬಾನಿ ವಿರುದ್ಧ ಇಡಿ ಕ್ರಮ ತೀವ್ರಗೊಂಡಿದೆ. ಮುಂಬೈನಲ್ಲಿರುವ ಮನೆ ಸೇರಿದಂತೆ ಅಂಬಾನಿಯ ವಿವಿಧ ಆಸ್ತಿಗಳನ್ನು ಇಡಿ ಜಫ್ತಿ ಮಾಡಿದೆ. ದೆಹಲಿ, ಹೈದರಾಬಾದ್ ಮೊದಲಾದ ಹಲವು ನಗರಗಳಲ್ಲಿ ಮುಟ್ಟುಗೋಲು ಮಾಡಿಕೊಳ್ಳಲಾಗಿರುವ ಅಂಬಾನಿಯ ಆಸ್ತಿಗಳ ಮೌಲ್ಯ 3,000 ಕೋಟಿ ರೂ.

ಅನಿಲ್ ಅಂಬಾನಿಗೆ ಇನ್ನಷ್ಟು ಕುಣಿಕೆ ಬಿಗಿದ ಇಡಿ; 3,000 ಕೋಟಿ ರೂ ಮೌಲ್ಯದ ವಿವಿಧ ಆಸ್ತಿಗಳು ಮುಟ್ಟುಗೋಲು
ಅನಿಲ್ ಅಂಬಾನಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 03, 2025 | 2:57 PM

Share

ನವದೆಹಲಿ, ನವೆಂಬರ್ 3: ಉದ್ಯಮಿ ಅನಿಲ್ ಅಂಬಾನಿ (Anil Ambani) ಅವರಿಗೆ ಬ್ಯಾಂಕ್ ಸಾಲ ವಂಚನೆ ಪ್ರಕರಣ ಉರುಳಾಗಿ ಪರಿಣಮಿಸುತ್ತಿದೆ. 20,000 ಕೋಟಿ ರೂ ಮೊತ್ತದ ಈ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯವು ಅನಿಲ್ ಅಂಬಾನಿ ಅವರ ಕೆಲ ಆಸ್ತಿಗಳನ್ನು ಮುಟ್ಟುಗೋಲು (ED attachment) ಹಾಕಿದೆ. ವರದಿ ಪ್ರಕಾರ, ಮುಂಬೈನ ಪಾಲಿ ಹಿಲ್​ನಲ್ಲಿರುವ (Pali Hill) ಅನಿಲ್ ಅಂಬಾನಿ ಅವರ ನಿವಾಸ ಸೇರಿದಂತೆ 3,084 ಕೋಟಿ ರೂ ಮೌಲ್ಯದ ಆಸ್ತಿಗಳನ್ನು ಇಡಿ ಜಫ್ತಿ ಮಾಡಿದೆ.

ಮುಂಬೈ, ದೆಹಲಿ, ನೋಯ್ಡಾ, ಗೋವಾ, ಪುಣೆ, ಹೈದರಾಬಾದ್, ಚೆನ್ನೈ ಮೊದಲಾದ ನಗರಗಳಲ್ಲಿರುವ, ರಿಲಾಯನ್ಸ್ ಕಮ್ಯೂನಿಕೇಶನ್ಸ್ ಮತ್ತು ರಿಲಾಯನ್ಸ್ ಇನ್​ಫ್ರಾಸ್ಟ್ರಕ್ಚರ್ ಸಂಸ್ಥೆಗಳಿಗೆ ಸೇರಿದ್ದಾಗ ಫ್ಲ್ಯಾಟ್, ನಿವೇಶನ, ಕಚೇರಿ ಸ್ಥಳ ಇತ್ಯಾದಿಗಳು ಇಡಿ ಅಟ್ಯಾಚ್ಮೆಂಟ್​ಗಳ ಪೈಕಿ ಇವೆ. ಸೆಂಟ್ರಲ್ ಡೆಲ್ಲಿಯಲ್ಲಿರುವ ಹೋಟೆಲ್ ರಂಜಜಿತ್​ನಲ್ಲಿರುವ ಅನಿಲ್ ಅಂಬಾನಿ ಅವರ ರಿಲಾಯನ್ಸ್ ಸೆಂಟರ್ ಆಫೀಸ್ ಅನ್ನೂ ಇಡಿ ಮುಟ್ಟುಗೋಲು ಹಾಕಿರುವುದು ತಿಳಿದುಬಂದಿದೆ.

ಇದನ್ನೂ ಓದಿ: ಮತ್ತಷ್ಟು ಗಣಿಗಾರಿಕೆಯಿಂದ ಭಾರತಕ್ಕೆ ತಗ್ಗುತ್ತೆ 100 ಬಿಲಿಯನ್ ಡಾಲರ್ ಹೊರೆ: ಸಿಎಸ್​ಇಪಿ ವರದಿ

ಅನಿಲ್ ಅಂಬಾನಿ ವಿರುದ್ಧದ ಪ್ರಕರಣವೇನು?

ಬ್ಯಾಂಕ್​ಗಳಿಂದ ಪಡೆದ ಕಾರ್ಪೊರೇಟ್ ಸಾಲದ ಹಣವನ್ನು ವಿವಿಧ ಶೆಲ್ ಕಂಪನಿಗಳಿಗೆ ಹಾಗೂ ತನ್ನ ಅಂಗ ಸಂಸ್ಥೆಗಳಿಗೆ ಅಕ್ರಮವಾಗಿ ವರ್ಗಾಯಿಸಿ, ಲಪಟಾಯಿಸಲು ಯತ್ನಿಸಲಾಗಿದೆ ಎಂಬುದು ಅನಿಲ್ ಅಂಬಾನಿ ವಿರುದ್ಧ ಕೇಳಿಬಂದಿರುವ ಪ್ರಮುಖ ಆರೋಪವಾಗಿದೆ.

2017ರಿಂದ 2019ರ ಅವಧಿಯಲ್ಲಿ ಅನಿಲ್ ಅಂಬಾನಿ ಅವರಿಗೆ ಸೇರಿದ ರಿಲಾಯನ್ಸ್ ಹೋಮ್ ಫೈನಾನ್ಸ್ ಲಿಮಿಟೆಡ್ (ಆರ್​ಎಚ್​ಎಫ್​ಎಲ್) ಮತ್ತು ರಿಲಾಯನ್ಸ್ ಕಮರ್ಷಿಯಲ್ ಫೈನಾನ್ಸ್ ಲಿಮಿಟೆಡ್ (ಆರ್​ಸಿಎಫ್​ಎಲ್) ಸಂಸ್ಥೆಗಳಿಗೆ ಯೆಸ್ ಬ್ಯಾಂಕ್ ಫಂಡ್​ಗಳನ್ನು ಒದಗಿಸಿತ್ತು. ಆರ್​ಎಚ್​ಎಫ್​​ಎಲ್​ನ ಯೋಜನೆಗಳಲ್ಲಿ 2,965 ಕೋಟಿ ರೂ, ಆರ್​ಸಿಎಫ್​ಎಲ್ ಯೋಜನೆಗಳಲ್ಲಿ 2,045 ಕೋಟಿ ರೂ ಹೂಡಿಕೆ ಮಾಡಿತ್ತು ಯೆಸ್ ಬ್ಯಾಂಕ್.

ಇದನ್ನೂ ಓದಿ: ಟ್ಯಾರಿಫ್ ಹುಚ್ಚಾಟ, ಭಾರತಕ್ಕೆ ಸಂಕಟ; ಮೇನಿಂದ ಸೆಪ್ಟೆಂಬರ್​ವರೆಗೆ ಅಮೆರಿಕಕ್ಕೆ ಭಾರತದ ರಫ್ತು ಶೇ. 37ರಷ್ಟು ಕುಸಿತ

ಆದರೆ, 2019ರ ಡಿಸೆಂಬರ್​​ನಲ್ಲಿ ಯೆಸ್ ಬ್ಯಾಂಕ್​ನ ಆ ಹೂಡಿಕೆಗಳು ಅನುತ್ಪಾದಕವೆನಿಸಿದ್ದವು. ಅಂದರೆ, ಆ ಹಣ ಮರಳಿ ಬರುವುದು ಕಷ್ಟವಾಗಿತ್ತು. ಆರ್​ಎಚ್​ಎಫ್​ಎಲ್​ನಿಂದ 1,353.50 ಕೋಟಿ ರೂ, ಆರ್​ಸಿಎಫ್​ಎಲ್​ನಿಂದ 1,984 ಕೋಟಿ ರೂ ಹಣ ಬಾಕಿ ಉಳಿದಿತ್ತು. ರಿಲಾಯನ್ಸ್ ಕಂಪನಿಗಳು ಈ ಹಣವನ್ನು ಅಕ್ರಮವಾಗಿ ಬೇರೆಡೆ ಸಾಗಿಸಿದ್ದವು ಎನ್ನಲಾಗಿದೆ. ರಿಲಾಯನ್ಸ್ ಗ್ರೂಪ್​ಗೆ ಸೇರಿದ ವಿವಿಧ ಕಂಪನಿಗಳು ಈ ರೀತಿ ಸಾಲಗಳನ್ನು ಅಕ್ರಮವಾಗಿ ವರ್ಗಾಯಿಸಿಕೊಂಡಿದ್ದು ಒಟ್ಟು ಮೌಲ್ಯ 20,000 ಕೋಟಿ ರೂ ಎನ್ನಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ