AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೋಡಲು 1 ಲೀಟರ್ ಪ್ಯಾಕ್, ತೂಕ ಬೇರೆ ಬೇರೆ; ಗ್ರಾಹಕರನ್ನು ಯಾಮಾರಿಸುವ ಅಡುಗೆ ಎಣ್ಣೆ ಕಂಪನಿಗಳು; ಇದಕ್ಕೆ ಕಡಿವಾಣ ಹೇಗೆ?

ಒಂದು ಲೀಟರ್ ಪ್ಯಾಕ್ ಎಂದು ಖಾದ್ಯ ತೈಲವನ್ನು ಖರೀದಿ ತಂದು ನೋಡಿದರೆ ಅದರಲ್ಲಿ ಲೀಟರ್ ಬದಲು ತೂಕ ಬರೆದಿರುತ್ತದೆ. ಬೇರೆ ಬೇರೆ ಕಂಪನಿಗಳ ಎಣ್ಣೆ ಪ್ಯಾಕ್​ಗಳಲ್ಲಿರುವ ತೂಕವೂ ಬೇರೆ ಬೇರೆ ಇರುತ್ತದೆ. ಆದರೆ ನೋಡಲು ಎಲ್ಲವೂ ಲೀಟರ್​ ಪ್ಯಾಕ್​ಗಳೇ. ಎಲ್ಲಾ ಕಂಪನಿಗಳೂ ಲೀಟರ್ ಲೆಕ್ಕದಲ್ಲಿ ಪ್ಯಾಕ್ ಮಾಡುವ ನಿಯಮ ರೂಪಿಸಬೇಕು ಎಂದು ಉದ್ಯಮ ಸಂಘಟನೆಗಳು ಒತ್ತಾಯಿಸಿವೆ.

ನೋಡಲು 1 ಲೀಟರ್ ಪ್ಯಾಕ್, ತೂಕ ಬೇರೆ ಬೇರೆ; ಗ್ರಾಹಕರನ್ನು ಯಾಮಾರಿಸುವ ಅಡುಗೆ ಎಣ್ಣೆ ಕಂಪನಿಗಳು; ಇದಕ್ಕೆ ಕಡಿವಾಣ ಹೇಗೆ?
ಅಡುಗೆ ಎಣ್ಣೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 03, 2025 | 6:18 PM

Share

ನವದೆಹಲಿ, ನವೆಂಬರ್ 3: ನೀವು ಅಡುಗೆ ಎಣ್ಣೆಯ (cooking oil) ಪ್ಯಾಕ್​ಗಳನ್ನು ಗಮನಿಸಿ ನೋಡಿ… ನೋಡಲು ಅರ್ಧ ಲೀಟರ್ ಪ್ಯಾಕ್ ಅಥವಾ ಒಂದು ಲೀಟರ್ ಪ್ಯಾಕ್​ಗಳಂತೆ ಕಾಣುತ್ತವೆ. ನೀವು ಅರ್ಧ ಲೀಟರ್ ಪ್ಯಾಕ್ ಎಂದುಕೊಂಡಿದ್ದರೆ ಅದರ ತೂಕ 350 ಗ್ರಾಮ್​ನಿಂದ ಹಿಡಿದು 450 ಗ್ರಾಮ್ ಇರಬಹುದು. ಒಂದು ಲೀಟರ್ ಪ್ಯಾಕ್ ಎಂದುಕೊಂಡಿದ್ದು ವಾಸ್ತವವಾಗಿ 750 ಗ್ರಾಮ್​ನಿಂದ 950 ಗ್ರಾಮ್​ವರೆಗೂ ವ್ಯತ್ಯಾಸಗಳಿರುತ್ತವೆ. ಪ್ಯಾಕೆಟ್​ನಲ್ಲಿ ತೂಕವನ್ನು ಬರೆದಿರುತ್ತರಾದರೂ ಹೆಚ್ಚಿನ ಗ್ರಾಹಕರು ಒಂದು ಲೀಟರ್ ಎಣ್ಣೆ ಎಂದು ಭಾವಿಸಿ ಹಣ ತೆರುವುದುಂಟು.

ಅಡುಗೆ ಎಣ್ಣೆ ಉದ್ಯಮಗಳು ಹೆಚ್ಚಿನ ಲಾಭ ಪಡೆಯಲು ತೂಕ ಕಡಿಮೆ ಮಾಡುವುದುಂಟು. ಇದು ವಿವಿಧ ಕಂಪನಿಗಳ ನಡುವೆ ಬೆಲೆ ಇಳಿಕೆ ಸಮರದ ನೆವದಲ್ಲಿ ತೂಕ ಇಳಿಕೆ ಪೈಪೋಟಿ ಏರ್ಪಡುವಂತಾಗಿದೆ. 810 ಗ್ರಾಮ್ ತೂಕ ಇರುವ ಎಣ್ಣೆ ಪ್ಯಾಕೆಟ್ ಬೆಲೆ 900 ಗ್ರಾಮ್ ತೂಕದ ಪ್ಯಾಕ್​ಗಿಂತ ಕಡಿಮೆ ಇರುತ್ತದೆ. ಆದರೆ, ಜನರಿಗೆ ಎರಡೂ ಕೂಡ ಒಂದು ಲೀಟರ್ ಪ್ಯಾಕ್​ನಂತೆಯೇ ಭಾಸವಾಗುತ್ತದೆ. ಗ್ರಾಹಕ ಸಹಜವಾಗಿ ಬೆಲೆ ಕಡಿಮೆ ಇರುವ 810 ಗ್ರಾಮ್ ತೂಕದ ಪ್ಯಾಕ್ ಅನ್ನೇ ಖರೀದಿಸುವ ಅವಕಾಶ ಹೆಚ್ಚಿರುತ್ತದೆ.

ಇದನ್ನೂ ಓದಿ: ಮತ್ತಷ್ಟು ಗಣಿಗಾರಿಕೆಯಿಂದ ಭಾರತಕ್ಕೆ ತಗ್ಗುತ್ತೆ 100 ಬಿಲಿಯನ್ ಡಾಲರ್ ಹೊರೆ: ಸಿಎಸ್​ಇಪಿ ವರದಿ

ಲೀಟರ್ ಲೆಕ್ಕದಲ್ಲಿ ಪ್ಯಾಕ್ ಮಾಡುವಂತೆ ಆಗ್ರಹ

ತೂಕ ಲೆಕ್ಕದಲ್ಲಿ ಪ್ಯಾಕ್​ಗಳನ್ನು ಮಾಡಿ ಗ್ರಾಹಕರನ್ನು ಯಾಮಾರಿಸುವ ಕೆಲಸಕ್ಕೆ ಕಡಿವಾಣ ಹಾಕಬೇಕು. ಕಂಪನಿಗಳು ಲೀಟರ್ ಲೆಕ್ಕದಲ್ಲಿ ಎಣ್ಣೆಗಳನ್ನು ಪ್ಯಾಕ್ ಮಾಡುವಂತೆ ನಿಯಮ ಮಾಡಬೇಕು ಎಂದು ಈ ಉದ್ಯಮದ ಸಂಘಟನೆಯಾದ ಸಾಲ್ವೆಂಟ್ ಎಕ್ಸ್​ಟ್ರಾಕ್ಟರ್ಸ್ ಅಸೋಸಿಯೇಶನ್ (SEA- Solvent Extracters Association) ಇತ್ತೀಚೆಗೆ ಸರ್ಕಾರಕ್ಕೆ ಪತ್ರ ಬರೆದು ಆಗ್ರಹ ಮಾಡಿದೆ.

‘800 ಗ್ರಾಮ್, 810 ಗ್ರಾಮ್, 870 ಗ್ರಾಮ್ ಹೀಗೆ ಏಕರೀತಿಯಲ್ಲಿಲ್ಲದ (Non standardized) ಎಣ್ಣೆ ಪ್ಯಾಕ್​ಗಳ ಸಂಖ್ಯೆ ಹೆಚ್ಚುತ್ತಿದೆ. ಇದರಿಂದ ಗ್ರಾಹಕರಿಗೆ ಗೊಂದಲ ಆಗುತ್ತಿದೆ. ನೋಡಲು ಒಂದೇ ರೀತಿ ಕಾಣುವುದರಿಂದ ಗ್ರಾಹಕರು ಮೋಸ ಹೋಗಬಹುದು. ಬೆಲೆ ಹೋಲಿಕೆ ಸರಿಯಾಗಿ ಮಾಡಲು ವಿಫಲರಾಗಬಹುದು’ ಎಂದು ಎಸ್​ಇಎ ತನ್ನ ಪತ್ರದಲ್ಲಿ ಅಭಿಪ್ರಾಯಪಟ್ಟಿದೆ.

ಇದನ್ನೂ ಓದಿ: ಒಂದು ತಿಂಗಳಲ್ಲಿ 2,070 ಕೋಟಿ, ಒಂದು ದಿನದಲ್ಲಿ 75 ಕೋಟಿ ಯುಪಿಐ ವಹಿವಾಟುಗಳು; ಇದು ಹೊಸ ದಾಖಲೆ

ಬೇರೆ ಬೇರೆ ತೂಕ ಇದ್ದರೂ ಎಣ್ಣೆ ಪ್ಯಾಕೆಟ್​ಗಳು ನೋಡಲು ಒಂದು ಲೀಟರ್ ಪ್ಯಾಕ್​ನಂತೆ ಕಾಣುತ್ತವೆ. ಹೀಗಾಗಿ, ಗ್ರಾಹಕರು ಮೋಸ ಹೋಗಬಹುದು. ಆದ್ದರಿಂದ ಅಡುಗೆ ಎಣ್ಣೆಯನ್ನು ಲೀಟರ್ ಲೆಕ್ಕದಲ್ಲಿ ಪ್ಯಾಕ್ ಮಾಡುವುದನ್ನು ಸರ್ಕಾರ ಕಡ್ಡಾಯಗೊಳಿಸಲಿ ಎಂದು ಎಡಬ್ಲ್ಯುಎಲ್ ಅಗ್ರಿ ಬ್ಯುಸಿನೆಸ್ ಲಿಮಿಟೆಡ್ ಸಂಸ್ಥೆಯ ಸಿಇಒ ಅಂಶು ಮಾಲಿಕ್ ಒತ್ತಾಯಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ