AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತಷ್ಟು ಗಣಿಗಾರಿಕೆಯಿಂದ ಭಾರತಕ್ಕೆ ತಗ್ಗುತ್ತೆ 100 ಬಿಲಿಯನ್ ಡಾಲರ್ ಹೊರೆ: ಸಿಎಸ್​ಇಪಿ ವರದಿ

India can save 100 billion USD by using untapped mines: ತನ್ನಲ್ಲೇ ಲಭ್ಯ ಇರುವ ಖನಿಜ ಸಂಪನ್ಮೂಲಗಳನ್ನು ಬಳಸಿದರೆ ಸಾಕಷ್ಟು ಭಾರತಕ್ಕೆ ಸಾಕಷ್ಟು ಆಮದು ವೆಚ್ಚು ಉಳಿಯುತ್ತದಂತೆ. ಸೆಂಟರ್ ಫಾರ್ ಸೋಷಿಯಲ್ ಅಂಡ್ ಎಕನಾಮಿಕ್ ಪ್ರೋಗ್ರೆಸ್​ನ (ಸಿಎಸ್​ಇಪಿ) ವರದಿ ಪ್ರಕಾರ ಭಾರತ ಈ ರೀತಿ ವರ್ಷಕ್ಕೆ 100 ಬಿಲಿಯನ್ ಡಾಲರ್ ಆಮದು ತಪ್ಪಿಸಬಹುದು. ಭಾರತದಲ್ಲಿ ಶೇ. 30ರಷ್ಟು ಮಾತ್ರ ಖನಿಜಗಳನ್ನು ಬಳಸಲಾಗುತ್ತಿದೆ. ಇನ್ನೂ ಬಹಳಷ್ಟು ಮೈನಿಂಗ್ ಅವಕಾಶ ಇದೆ ಎನ್ನಲಾಗಿದೆ.

ಮತ್ತಷ್ಟು ಗಣಿಗಾರಿಕೆಯಿಂದ ಭಾರತಕ್ಕೆ ತಗ್ಗುತ್ತೆ 100 ಬಿಲಿಯನ್ ಡಾಲರ್ ಹೊರೆ: ಸಿಎಸ್​ಇಪಿ ವರದಿ
ಗಣಿಗಾರಿಕೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 03, 2025 | 2:05 PM

Share

ನವದೆಹಲಿ, ನವೆಂಬರ್ 2: ತನ್ನ ನೆಲದಲ್ಲೇ ಲಭ್ಯ ಇರುವ ಹೇರಳ ಖನಿಜ ಸಂಪನ್ಮೂಲವನ್ನು (mineral resources) ಉಪಯೋಗಿಸಿಕೊಂಡರೆ ಭಾರತ ಸಾಕಷ್ಟು ಹಣ ಉಳಿಸಲು ಸಾಧ್ಯ ಎಂದು ಸೆಂಟರ್ ಫಾರ್ ಸೋಷಿಯಲ್ ಅಂಡ್ ಎಕನಾಮಿಕ್ ಪ್ರೋಗ್ರೆಸ್ (ಸಿಎಸ್​​ಇಪಿ) ವರದಿಯಲ್ಲಿ ಹೇಳಲಾಗಿದೆ. ಭಾರತಕ್ಕೆ ಖನಿಜಗಳ ಅವಶ್ಯಕತೆ ಕುರಿತು ಸಿಎಸ್​ಇಪಿ ತಯಾರಿಸುವ ವರದಿಯ ಪ್ರಕಾರ, ಖನಿಜ ಸಂಪನ್ಮೂಲಗಳನ್ನು ಹೆಚ್ಚುವರಿ ಮೈನಿಂಗ್ ಮೂಲಕ ಪಡೆದರೆ ಪ್ರತೀ ವರ್ಷ 100 ಬಿಲಿಯನ್ ಡಾಲರ್ (9 ಲಕ್ಷ ಕೋಟಿ ರೂ) ಆಮದು ವೆಚ್ಚವನ್ನು ತಪ್ಪಿಸಬಹುದು ಎಂದೆನ್ನಲಾಗಿದೆ.

ಭಾರತದಲ್ಲಿ ಸಮೃದ್ಧವಾಗಿರುವ ನೆಲ ಹೊಂದಿದೆ. ಇಲ್ಲಿ ಹೇರಳವಾದ ಮತ್ತು ವೈವಿಧ್ಯಮಯವಾದ ಖನಿಜಗಳ ಸಂಪನ್ಮಲ ಇದೆ. ಇಲ್ಲಿಯವರೆಗೆ ಶೇ. 30ರಷ್ಟನ್ನು ಮಾತ್ರ ಗುರುತಿಸಲಾಗಿದೆ. ಇತರ ಪ್ರಮುಖ ದೇಶಗಳಿಗೆ ಹೋಲಿಸಿದರೆ ಭಾರತವು ಹೆಚ್ಚಿನ ಗಣಿಗಾರಿಕೆ ನಡೆಸಿಲ್ಲ. ಭಾರತದ ಜಿಡಿಪಿಗೆ ಮೈನಿಂಗ್ ಸೆಕ್ಟರ್​ನ ಕೊಡುಗೆ ಕೇವಲ 2 ಪ್ರತಿಶತ ಇದೆ. ಆಸ್​ಟ್ರೇಲಿಯಾ, ಸೌತ್ ಆಫ್ರಿಕಾದಂತಹ ದೇಶಗಳಲ್ಲಿ ಅಲ್ಲಿಯ ಮೈನಿಂಗ್ ಸೆಕ್ಟರ್​ಗಳು ಜಿಡಿಪಿಗೆ ಕೊಡುವ ಕೊಡುಗೆ ಶೇ. 7.5ರಿಂದ 12ರಷ್ಟಿದೆ ಎಂದು ಸಿಎಸ್​ಇಪಿಯ ವರದಿಯಲ್ಲಿ ಹೇಳಲಾಗಿದೆ.

ಇದನ್ನೂ ಓದಿ: ಟ್ಯಾರಿಫ್ ಹುಚ್ಚಾಟ, ಭಾರತಕ್ಕೆ ಸಂಕಟ; ಮೇನಿಂದ ಸೆಪ್ಟೆಂಬರ್​ವರೆಗೆ ಅಮೆರಿಕಕ್ಕೆ ಭಾರತದ ರಫ್ತು ಶೇ. 37ರಷ್ಟು ಕುಸಿತ

ಭಾರತದಲ್ಲಿ ಗುರುತಿಸಲಾಗದ ಸಂಪನ್ಮೂಲಗಳು ಬಹಳಷ್ಟಿವೆಯಾ?

ಭಾರತದ ನೆಲದೊಳಗೆ ವಿವಿಧ ಖನಿಜಗಳು, ಚಿನ್ನ, ತೈಲ ಇತ್ಯಾದಿ ಸಂಪನ್ಮೂಲಗಳು ಇವೆ. ಇವು ಎಲ್ಲೆಲ್ಲಿ ಲಭ್ಯ ಇವೆ ಎಂಬುದನ್ನು ನಿಖರವಾಗಿ ಪತ್ತೆ ಮಾಡಲು ಅನ್ವೇಷಣೆ ಅಗತ್ಯ. ಇದಕ್ಕೆ ಸಾಕಷ್ಟು ವೆಚ್ಚವಾಗುತ್ತದೆ. ಈ ಕಾರ್ಯ ಕೈಗೊಳ್ಳಲು ಖಾಸಗಿ ಕಂಪನಿಗಳು ಹಿಂದೇಟು ಹಾಕುತ್ತವೆ. ಸರ್ಕಾರದ ನೀತಿಯೇ ಇದಕ್ಕೆ ಕಾರಣ ಎಂಬುದನ್ನು ಸಿಇಎಸ್​ಪಿ ವರದಿಯಲ್ಲಿ ಗುರುತಿಸಲಾಗಿದೆ.

ಸರ್ಕಾರದ ನೀತಿಗಳು ಬದಲಾಗಬೇಕಾ?

ಸಾಕಷ್ಟು ವೆಚ್ಚ ಮಾಡಿ ಸಂಪನ್ಮೂಲವನ್ನು ಪತ್ತೆ ಮಾಡಿದರೂ, ಆ ನಿಕ್ಷೇಪಗಳ ಮೇಲೆ ಕಂಪನಿಗೆ ಹಕ್ಕು ಇರುವುದಿಲ್ಲ. ಸರ್ಕಾರವು ಹರಾಜುಗಳ ಮೂಲಕ ಮೈನಿಂಗ್ ಲೀಸ್​ಗಳನ್ನು ಹಂಚಿಕೆ ಮಾಡುತ್ತದೆ. ಇದರಿಂದಾಗಿ, ಸಂಪನ್ಮೂಲ ಅನ್ವೇಷಣೆಗೆ ಕಂಪನಿಗಳು ಹಿಂದೇಟು ಹಾಕುತ್ತವೆ ಎಂಬುದನ್ನು ಈ ವರದಿ ಒತ್ತಿ ಹೇಳುತ್ತಿದೆ.

ಇದನ್ನೂ ಓದಿ: ಒಂದು ತಿಂಗಳಲ್ಲಿ 2,070 ಕೋಟಿ, ಒಂದು ದಿನದಲ್ಲಿ 75 ಕೋಟಿ ಯುಪಿಐ ವಹಿವಾಟುಗಳು; ಇದು ಹೊಸ ದಾಖಲೆ

ಭಾರತದ ಆಮದಿನಲ್ಲಿ ಖನಿಜಗಳ ಪಾಲು ದೊಡ್ಡದು…

ಅಭಿವೃದ್ಧಿ ಹೊಂದುತ್ತಿರುವ ದೇಶವಾದ ಭಾರತಕ್ಕೆ ಸಾಕಷ್ಟು ಖನಿಜ ಮತ್ತು ಲೋಹಗಳ ಅವಶ್ಯಕತೆ ಇದೆ. 2022ರಲ್ಲಿ ಭಾರತವು ಈ ಖನಿಜ ಮತ್ತು ಲೋಹಗಳನ್ನು 157 ಬಿಲಿಯನ್ ಡಾಲರ್ ಮೌಲ್ಯದಷ್ಟು ಆಮದು ಮಾಡಿಕೊಂಡಿತ್ತು. ಆ ವರ್ಷ ಭಾರತದ ಒಟ್ಟು ಆಮದಿನಲ್ಲಿ ಇವುಗಳ ಪಾಲು ಶೇ. 20ಕ್ಕಿಂತಲೂ ಹೆಚ್ಚಿತ್ತು. ಅದರಲ್ಲೂ ಕ್ರಿಟಿಕಲ್ ಮಿನರಲ್ ಎನ್ನಲಾದ ಕಾಪರ್, ನಿಕಲ್, ಲಿಥಿಯಂ, ಕೊಬಾಲ್ಟ್ ಅನ್ನು ಭಾರತ ಹೆಚ್ಚಾಗಿ ಆಮದು ಮಾಡಿಕೊಳ್ಳುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ