Job Creation: ಪಿಎಲ್​ಐ ಸ್ಕೀಮ್​ನಿಂದ 3 ಲಕ್ಷ ಉದ್ಯೋಗ; ನೀತಿ ಆಯೋಗ ಸಿಇಒ

|

Updated on: Feb 07, 2023 | 10:07 AM

ದೇಶೀಯ ಉತ್ಪಾದನೆಯನ್ನು ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕವಾಗಿಸುವ ಉದ್ದೇಶವನ್ನು ಪಿಎಲ್​ಐ ಯೋಜನೆ ಹೊಂದಿದೆ. 2 ಲಕ್ಷ ಕೋಟಿ ವೆಚ್ಚದೊಂದಿಗೆ ಆಟೊಮೊಬೈಲ್, ಆಟೊ ಕಾಂಪೊನೆಂಟ್ಸ್, ಫಾರ್ಮಾ, ಜವಳಿ, ಆಹಾರ ಉತ್ಪನ್ನಗಳು ಸೇರಿದಂತೆ 14 ಕ್ಷೇತ್ರಗಳನ್ನು ಒಳಗೊಂಡಂತೆ ಯೋಜನೆ ರೂಪಿಸಲಾಗಿದೆ.

Job Creation: ಪಿಎಲ್​ಐ ಸ್ಕೀಮ್​ನಿಂದ 3 ಲಕ್ಷ ಉದ್ಯೋಗ; ನೀತಿ ಆಯೋಗ ಸಿಇಒ
ಪರಮೇಶ್ವರನ್ ಐಯ್ಯರ್
Follow us on

ನವದೆಹಲಿ: ಉತ್ಪಾದನೆ ಸಂಯೋಜಿತ ಭತ್ಯೆ (PLI) ಯೋಜನೆ 45,000 ಕೋಟಿ ರೂ. ಹೂಡಿಕೆಯನ್ನು ಸೆಳೆದಿದ್ದು, ಪರಿಣಾಮವಾಗಿ 3 ಲಕ್ಷ ಉದ್ಯೋಗ ಸೃಷ್ಟಿಯಾಗಿದೆ ಎಂದು ನೀತಿ ಆಯೋಗ(NITI Aayog) ಸಿಇಒ ಪರಮೇಶ್ವರನ್ ಐಯ್ಯರ್ ಹೇಳಿದ್ದಾರೆ. ಉತ್ಪಾದನೆ ಸಂಯೋಜಿತ ಭತ್ಯೆ ಯೋಜನೆ ಈಗಾಗಲೇ ಫಲಿತಾಂಶ ನೀಡಲು ಆರಂಭಿಸಿದೆ. 800 ಕೋಟಿ ರೂ. ಭತ್ಯೆ ರೂಪದಲ್ಲಿ ನೀಡಲಾಗಿದೆ. ಮಾರ್ಚ್​​ ವೇಳೆಗೆ 3,000 ಕೋಟಿ ರೂ.ನಿಂದ 4,000 ಕೋಟಿ ರೂ. ನಿರೀಕ್ಷೆ ಇಟ್ಟುಕೊಂಡಿದ್ದೇವೆ ಎಂದು ಐಯ್ಯರ್ ‘ಪಿಟಿಐ’ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಯೋಜನೆಯು ಫಲಿತಾಂಶ ನೀಡುತ್ತಿದೆ. ಈಗಾಗಲೇ 45,000 ಕೋಟಿ ರೂ. ಹೂಡಿಕೆ ಸೆಳೆದಿದೆ. 3 ಲಕ್ಷ ಉದ್ಯೋಗ ಸೃಷ್ಟಿಯಾಗಿದ್ದು ಮಾತ್ರವಲ್ಲದೆ 2 ಲಕ್ಷ ಕೋಟಿ ರೂ. ಮೌಲ್ಯದ ಉತ್ಪಾದನೆಯಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ದೇಶೀಯ ಉತ್ಪಾದನೆಯನ್ನು ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕವಾಗಿಸುವ ಉದ್ದೇಶವನ್ನು ಪಿಎಲ್​ಐ ಯೋಜನೆ ಹೊಂದಿದೆ. 2 ಲಕ್ಷ ಕೋಟಿ ವೆಚ್ಚದೊಂದಿಗೆ ಆಟೊಮೊಬೈಲ್, ಆಟೊ ಕಾಂಪೊನೆಂಟ್ಸ್, ಫಾರ್ಮಾ, ಜವಳಿ, ಆಹಾರ ಉತ್ಪನ್ನಗಳು ಸೇರಿದಂತೆ 14 ಕ್ಷೇತ್ರಗಳನ್ನು ಒಳಗೊಂಡಂತೆ ಯೋಜನೆ ರೂಪಿಸಲಾಗಿದೆ.

ಇದನ್ನೂ ಓದಿ: Good News: ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್; ಭಾರತದಲ್ಲಿ 30,000 ಉದ್ಯೋಗ ಸೃಷ್ಟಿಸಲಿದೆ ಪಿಡಬ್ಲ್ಯುಸಿ

2020ರಲ್ಲಿ ಪಿಎಲ್​​ಐ ಯೋಜನೆ ಆರಂಭಿಸಲಾಗಿದೆ. ದೇಶದಲ್ಲಿ ಉತ್ಪಾದನೆಯಾದ ಸರಕುಗಳ ವಾರ್ಷಿಕ ಮಾರಾಟದ ಮೇಲೆ ನಗದು ರೂಪದ ಭತ್ಯೆಯನ್ನು ನೀಡಲಾಗುತ್ತದೆ. ನ್ಯಾಷನಲ್ ಮಾನಿಟೈಸೇಷನ್ ಪೈಪ್​ಲೈನ್ (NMP) ಯೋಜನೆಯ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಯೋಜನೆಯು ಉತ್ತಮವಾಗಿ ಸಾಗುತ್ತಿದ್ದು, ರಾಜ್ಯಗಳ ಮಟ್ಟದಲ್ಲಿ ಅನುಷ್ಠಾನಗೊಳಿಸಲಾಗುವುದು ಎಂದು ಹೇಳಿದ್ದಾರೆ.

ನ್ಯಾಷನಲ್ ಮಾನಿಟೈಸೇಷನ್ ಪೈಪ್​ಲೈನ್ ಅಡಿ ಖಾಸಗಿ ಬಂಡವಾಳ ಹರಿದುಬರುತ್ತಿದೆ. ಯೋಜನೆಯನ್ನು ರಾಜ್ಯಗಳ ಮಟ್ಟದಲ್ಲಿ ಜಾರಿಗೆ ತರಬೇಕಿದೆ. ಈ ಹಣಕಾಸು ವರ್ಷದಲ್ಲಿಯೂ ಯೋಜನೆ ಉತ್ತಮವಾಗಿ ಸಾಕಾರಗೊಳ್ಳುತ್ತಿದೆ. 2022ರ ನವೆಂಬರ್ 21ರ ವರೆಗೂ 33,422 ಕೋಟಿ ರೂ. ಮೌಲ್ಯದ ಸ್ವತ್ತುಗಳನ್ನು ಸರ್ಕಾರ ನಗದೀಕರಣಗೊಳಿಸಿದೆ ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ