Good News: ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್; ಭಾರತದಲ್ಲಿ 30,000 ಉದ್ಯೋಗ ಸೃಷ್ಟಿಸಲಿದೆ ಪಿಡಬ್ಲ್ಯುಸಿ

ಮುಂದಿನ 5 ವರ್ಷಗಳಲ್ಲಿ ಭಾರತದಲ್ಲಿ 30,000 ಉದ್ಯೋಗ ಸೃ ಪಿಡಬ್ಲ್ಯುಸಿ ಉದ್ದೇಶಿಸಿದೆ. 2028ರ ವೇಳೆಗೆ ಭಾರತದಲ್ಲಿನ ಒಟ್ಟು ಉದ್ಯೋಗಿಗಳ ಸಂಖ್ಯೆಯನ್ನು 80,000ಕ್ಕೆ ಹೆಚ್ಚಿಸಲು ಚಿಂತನೆ ನಡೆಸಿದೆ ಎಂದು ವರದಿಯಾಗಿದೆ.

Good News: ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್; ಭಾರತದಲ್ಲಿ 30,000 ಉದ್ಯೋಗ ಸೃಷ್ಟಿಸಲಿದೆ ಪಿಡಬ್ಲ್ಯುಸಿ
ಸಾಂದರ್ಭಿಕ ಚಿತ್ರ
Follow us
Ganapathi Sharma
|

Updated on: Feb 06, 2023 | 4:56 PM

ನವದೆಹಲಿ: ಜಾಗತಿಕವಾಗಿ ದೊಡ್ಡ ಕಂಪನಿಗಳು ಉದ್ಯೋಗ ಕಡಿತದ ಮೊರೆ ಹೋಗುತ್ತಿರುವ ಸಂದರ್ಭದಲ್ಲೇ ಭಾರತದಲ್ಲಿ 30,000 ಉದ್ಯೋಗ ಸೃಷ್ಟಿಸಲು (Job Creation) ಪಿಡಬ್ಲ್ಯುಸಿ (PwC) ಉದ್ದೇಶಿಸಿದ ಎಂದು ವರದಿಯಾಗಿದೆ. ಮುಂದಿನ 5 ವರ್ಷಗಳಲ್ಲಿ ಭಾರತದಲ್ಲಿ 30,000 ಉದ್ಯೋಗ ಸೃ ಪಿಡಬ್ಲ್ಯುಸಿ ಉದ್ದೇಶಿಸಿದೆ. 2028ರ ವೇಳೆಗೆ ಭಾರತದಲ್ಲಿನ ಒಟ್ಟು ಉದ್ಯೋಗಿಗಳ ಸಂಖ್ಯೆಯನ್ನು 80,000ಕ್ಕೆ ಹೆಚ್ಚಿಸಲು ಚಿಂತನೆ ನಡೆಸಿದೆ ಎಂದು ‘ಎಕನಾಮಿಕ್ ಟೈಮ್ಸ್’ ವರದಿ ಮಾಡಿದೆ. ಭಾರತದಲ್ಲಿ ಪಿಡಬ್ಲ್ಯುಸಿ ಯುಎಸ್​ ಜಾಗತಿಕ ಕೇಂದ್ರಗಳನ್ನು ಉದ್ದೇಶಿಸಿರುವ ಬೆನ್ನಲ್ಲೇ ಉದ್ಯೋಗ ಸೃಷ್ಟಿಯ ಬಗ್ಗೆಯೂ ವರದಿಯಾಗಿದೆ. ಪ್ರಸ್ತುತ ಕಂಪನಿಯು ಭಾರತದಲ್ಲಿ 50,000 ಉದ್ಯೋಗಿಗಳನ್ನು ಹೊಂದಿದೆ.

ಪಿಡಬ್ಲ್ಯುಸಿ ಇಂಡಿಯಾ ಮತ್ತು ಪಿಡಬ್ಲ್ಯುಸಿ ಯುಎಸ್​​ ಜತೆಗಿನ ನಮ್ಮ ಹೆಚ್ಚಿದ ಸಹಭಾಗಿತ್ವವು ಕಂಪನಿಯ ಜಾಗತಿಕ ಬೆಳವಣಿಗೆಯ ವೇಗವನ್ನು ವೃದ್ಧಿಸಲಿದೆ. ಜತೆಗೆ ಗ್ರಾಹಕರಿಗೆ ಉತ್ತಮ ಮೌಲ್ಯದ ಸೇವೆ ಒದಗಿಸಲು ನೆರವಾಗಲಿದೆ. ತಾಂತ್ರಿಕವಾಗಿ ಉತ್ತಮ ನಿರ್ಧಾರಗಳನ್ನು ಕೈಗೊಳ್ಳಲು ಹಾಗೂ ಗುಣಮಟ್ಟದ ಸೇವೆ ಒದಗಿಸಲು ನೆರವಾಗಲಿದೆ ಎಂದು ಪಿಡಬ್ಲ್ಯುಸಿ ಯುಎಸ್​​ನ ಹಿರಿಯ ಪಾಲುದಾರ ಟಿಮ್ ರ್ಯಾನ್​​ ತಿಳಿಸಿದ್ದಾರೆ.

ಭಾರತದ ಘಟಕದ ಬೆಳವಣಿಗೆಯಲ್ಲಿ ಅರ್ಥಪೂರ್ಣವಾದ ಪಾತ್ರ ನಿರ್ವಹಿಸಲು ಬದ್ಧರಾಗಿದ್ದೇವೆ. ಗ್ರಾಹಕರು ಮತ್ತು ಬಂಡವಾಳಗಾರರ ಜತೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ. ಮಹತ್ವದ ಸಮಸ್ಯೆಗಳನ್ನು ಬಗೆಹರಿಸಿ ನಮ್ಮ ದೇಶದ ಉತ್ತಮ ಭವಿಷ್ಯ ರೂಪಿಸುವಲ್ಲಿ ಬದ್ಧರಾಗಿದ್ದೇವೆ ಎಂದು ಪಿಡಬ್ಲ್ಯುಸಿ ಇಂಡಿಯಾ ಅಧ್ಯಕ್ಷ ಸಂಜೀವ್ ಕೃಷ್ಣನ್ ತಿಳಿಸಿದ್ದಾರೆ.

ಇದನ್ನೂ ಓದಿ: Layoffs: ಬೇಡಿಕೆ ಕುಸಿತ; 6,650 ಉದ್ಯೋಗಿಗಳ ವಜಾಗೊಳಿಸಲಿದೆ ಡೆಲ್

ಜಾಗತಿಕವಾಗಿ ಉದ್ಯೋಗ ಕಡಿತ ತೀವ್ರಗೊಂಡಿರುವ ಬೆನ್ನಲ್ಲೇ ಪಿಡಬ್ಲ್ಯುಸಿ ಉದ್ಯೋಗ ಸೃಷ್ಟಿಯ ಭರವಸೆ ನೀಡಿರುವುದು ದೇಶದ ಮಟ್ಟಿಗೆ ಆಶಾದಾಯಕ ಬೆಳವಣಿಗೆಯಾಗಿ ಗೋಚರಿಸಿದೆ. ಕಳೆದ ಕೆಲವು ತಿಂಗಳುಗಳಲ್ಲಿ ಜಾಗತಿಕವಾಗಿ ತಂತ್ರಜ್ಞಾನ ಕ್ಷೇತ್ರದ ಉದ್ಯಮಗಳು 1,50,000 ಉದ್ಯೋಗಿಗಳನ್ನು ವಜಾಗೊಳಿಸಿವೆ. ಗೂಗಲ್, ಅಮೆಜಾನ್, ಮೆಟಾ, ಟ್ವಿಟರ್, ಎಚ್​ಪಿ, ಡೆಲ್, ಫಿಲಿಪ್ಸ್ ಸೇರಿದಂತೆ ಹತ್ತಾರು ಕಂಪನಿಗಳು ಸಾವಿರ ಸಾವಿರ ಸಂಖ್ಯೆಯಲ್ಲಿ ಉದ್ಯೋಗಿಗಳನ್ನು ವಜಾಗೊಳಿಸುತ್ತಿವೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ