ಚಿನ್ನದ ಮೇಲೆ ಆಮದು ಸುಂಕ ಏರಿಕೆಯಾಗುತ್ತಾ? ಆಭರಣ ಪ್ರಿಯರಿಗೆ ನಿರಾಳ ತರುವ ಸುದ್ದಿ

No plans to increase import duties on gold and silver, says Govt source: ಚಿನ್ನ ಮತ್ತು ಬೆಳ್ಳಿಯ ಮೇಲಿನ ಆಮದು ಸುಂಕವನ್ನು ಹೆಚ್ಚಿಸುವ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಸರ್ಕಾರದ ಮೂಲಗಳು ಹೇಳಿವೆ ಎಂದು ವರದಿಯಾಗಿದೆ. ಬಜೆಟ್‌ನಲ್ಲಿ ಸುಂಕ ಕಡಿತಗೊಳಿಸಿದ ನಂತರ ಆಮದು ಪ್ರಮಾಣ ಹೆಚ್ಚಿದ್ದರೂ, ಸದ್ಯಕ್ಕೆ ಸುಂಕ ಬದಲಾವಣೆಯ ಆಲೋಚನೆ ಇಲ್ಲದಿರುವುದು ಗ್ರಾಹಕರಿಗೆ ಮತ್ತು ಆಭರಣ ಮಾರುಕಟ್ಟೆಗೆ ಸಮಾಧಾನ ತಂದಿದೆ.

ಚಿನ್ನದ ಮೇಲೆ ಆಮದು ಸುಂಕ ಏರಿಕೆಯಾಗುತ್ತಾ? ಆಭರಣ ಪ್ರಿಯರಿಗೆ ನಿರಾಳ ತರುವ ಸುದ್ದಿ
ಚಿನ್ನ
Image Credit source: Shutterstock

Updated on: May 11, 2026 | 3:47 PM

ನವದೆಹಲಿ, ಮೇ 11: ದೇಶದಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಗಗನಕ್ಕೇರುತ್ತಿರುವ ನಡುವೆಯೇ ಕೇಂದ್ರ ಸರ್ಕಾರದ ವತಿಯಿಂದ ಮಹತ್ವದ ಸ್ಪಷ್ಟನೆಯೊಂದು ಬಂದಿದೆ. ಸದ್ಯಕ್ಕೆ ಚಿನ್ನ ಮತ್ತು ಬೆಳ್ಳಿಯ ಮೇಲಿನ ಆಮದು ಸುಂಕವನ್ನು (Import Duty on Gold) ಹೆಚ್ಚಿಸುವ ಯಾವುದೇ ಯೋಜನೆ ಸರ್ಕಾರದ ಮುಂದಿಲ್ಲ ಎಂದು ಉನ್ನತ ಸರ್ಕಾರಿ ಮೂಲಗಳು ತಿಳಿಸಿದ್ದಾಗಿ ಮನಿಕಂಟ್ರೋಲ್ ವರದಿ ಮಾಡಿದೆ.

ಕಳೆದ ಬಜೆಟ್‌ನಲ್ಲಿ ಸರ್ಕಾರವು ಚಿನ್ನ ಮತ್ತು ಬೆಳ್ಳಿಯ ಮೇಲಿನ ಆಮದು ಸುಂಕವನ್ನು ಶೇ. 15ರಿಂದ ಶೇ. 6ಕ್ಕೆ ಗಣನೀಯವಾಗಿ ಇಳಿಸಿತ್ತು. ಇದರಿಂದಾಗಿ ದೇಶೀಯ ಮಾರುಕಟ್ಟೆಯಲ್ಲಿ ಬೆಲೆ ಇಳಿಕೆಯಾಗಿ ಗ್ರಾಹಕರಿಗೆ ಅನುಕೂಲವಾಗಿತ್ತು. ಆದರೆ, ಇತ್ತೀಚಿನ ತಿಂಗಳುಗಳಲ್ಲಿ ಆಮದು ಪ್ರಮಾಣ ಹೆಚ್ಚಾಗುತ್ತಿರುವುದರಿಂದ ಸರ್ಕಾರ ಮತ್ತೆ ಸುಂಕ ಏರಿಸಬಹುದು ಎಂಬ ಆತಂಕ ಮಾರುಕಟ್ಟೆಯಲ್ಲಿ ಮನೆಮಾಡಿದೆ.

ಇದನ್ನೂ ಓದಿ: ಚಿನ್ನ ಕೊಳ್ಳಬೇಡಿ, ವರ್ಕ್ ಫ್ರಂ ಹೋಮ್ ಮಾಡಿ, ಎಣ್ಣೆ ಹೆಚ್ಚು ಬಳಸದಿರಿ ಎಂದೆಲ್ಲಾ ಮೋದಿ ಅಂದಿದ್ದು ಯಾಕೆ? ಇಲ್ಲಿದೆ ನಿಜ ಕಾರಣ

ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ನಿನ್ನೆ ಕಾರ್ಯಕ್ರಮವೊಂದರಲ್ಲಿ ಭಾಷಣ ಮಾಡುವಾಗ, ಚಿನ್ನದ ಖರೀದಿ ಮಾಡಬೇಡಿ ಎಂದು ನೇರವಾಗಿಯೇ ಜನತೆಯಲ್ಲಿ ಕೇಳಿಕೊಂಡಿದ್ದರು. ಇದು ಚಿನ್ನದ ಮೇಲಿನ ಸುಂಕವನ್ನು ಸರ್ಕಾರ ಏರಿಸಬಹುದು ಎನ್ನುವ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿರುವುದು ಹೌದು.

ಅತಿಹೆಚ್ಚು ಚಿನ್ನ ಆಮದು ಮಾಡಿಕೊಳ್ಳುವ ದೇಶಗಳ ಪಟ್ಟಿಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ಕಳೆದ ಹಣಕಾಸು ವರ್ಷದಲ್ಲಿ ಭಾರತ 72 ಬಿಲಿಯನ್ ಡಾಲರ್​ನಷ್ಟು ಮೌಲ್ಯದ ಚಿನ್ನದ ಆಮದು ಮಾಡಿಕೊಂಡಿದೆ. ಇದರಿಂದ ಫಾರೆಕ್ಸ್ ನಿಧಿ ಸಂಗ್ರಹದ ಮೇಲೆ ಒತ್ತಡ ಬೀರಬಹುದು. ಇದೇ ಹಿನ್ನೆಲೆಯಲ್ಲಿ ಮೋದಿ ಅವರು ಚಿನ್ನದ ಖರೀದಿ ಕಡಿಮೆ ಮಾಡಿ ಎಂದು ಜನರಿಗೆ ಕರೆ ಕೊಟ್ಟಿರುವುದು.

ಇದನ್ನೂ ಓದಿ: ಜಾಗತಿಕ ತೈಲ ಸಂಕಷ್ಟದ ನಡುವೆ ಇಂಧನ ಬಳಕೆ ಕಡಿತಕ್ಕೆ ಮೋದಿ ಕರೆ: ಚಿನ್ನ ಖರೀದಿ ತಪ್ಪಿಸುವಂತೆಯೂ ಮನವಿ

ಆದರೆ, ಚಿನ್ನದ ಮೇಲೆ ಆಮದು ಸುಂಕ ಏರಿಸುವ ಇರಾದೆ ಇಲ್ಲ ಎಂದು ಸರ್ಕಾರದ ಮೂಲಗಳು ಹೇಳಿರುವುದು ಗಮನಾರ್ಹ. ಆದರೆ, ಅಧಿಕೃತವಾಗಿ ಸರ್ಕಾರದಿಂದ ಹೇಳಿಕೆ ಬರುವವರೆಗೂ ಅಂದಾಜಿಸುವುದು ಕಷ್ಟ. ಸರ್ಕಾರ ಈ ಮುಂಚೆ ಇದ್ದ ಮಟ್ಟಕ್ಕೆ ಆಮದು ಸುಂಕ ಏರಿಸಿದರೆ ಅಶ್ಚರ್ಯ ಪಡುವಂಥದ್ದು ಇಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us