AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎನ್​ವಿಡಿಯಾದ ಭಾರತೀಯ ಉದ್ಯೋಗಿಗಳಿಗೆ ಭರ್ಜರಿ ಕೊಡಗೆ; ಒಂದು ಕೋಟಿ ರೂವರೆಗೆ ಸ್ಟಾಕ್ ಗ್ರಾಂಟ್

Nvidia's Rs 1 Cr Stock Grant for Indian Employees: ಎನ್ವಿಡಿಯಾ ಕಂಪನಿಯು ತನ್ನ ಭಾರತೀಯ ಉದ್ಯೋಗಿಗಳಿಗೆ ₹5 ಲಕ್ಷದಿಂದ ₹1 ಕೋಟಿ ಮೌಲ್ಯದ ಒನ್-ಟೈಮ್ 'ಸ್ಪೆಷಲ್ ಸ್ಟಾಕ್ ಗ್ರಾಂಟ್' ಘೋಷಿಸಿದೆ. ಸುಮಾರು 10,000 ಉದ್ಯೋಗಿಗಳಿಗೆ ಅನುಕೂಲವಾಗುವ ಈ 'ಜೆನ್ಸನ್ ಸ್ಪೆಷಲ್ ಗ್ರಾಂಟ್', AI ಮತ್ತು ಚಿಪ್ ಡಿಸೈನಿಂಗ್ ಕ್ಷೇತ್ರದಲ್ಲಿನ ಪ್ರತಿಭೆಗಳನ್ನು ಉಳಿಸಿಕೊಳ್ಳುವ ಗುರಿ ಹೊಂದಿದೆ. ಷೇರುಗಳು 2024 ರಿಂದ 2028 ರವರೆಗೆ ಕಂತುಗಳಲ್ಲಿ ವಿತರಣೆಯಾಗಲಿವೆ, ಇದು ಭಾರತೀಯ ಟೆಕ್ ವಲಯದಲ್ಲಿ ಷೇರು ಆಧಾರಿತ ವೇತನದ ಮಹತ್ವವನ್ನು ಒತ್ತಿಹೇಳುತ್ತದೆ.

ಎನ್​ವಿಡಿಯಾದ ಭಾರತೀಯ ಉದ್ಯೋಗಿಗಳಿಗೆ ಭರ್ಜರಿ ಕೊಡಗೆ; ಒಂದು ಕೋಟಿ ರೂವರೆಗೆ ಸ್ಟಾಕ್ ಗ್ರಾಂಟ್
ಎನ್ವಿಡಿಯಾImage Credit source: Shutterstock
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Apr 14, 2026 | 6:32 PM

Share

ಬೆಂಗಳೂರು, ಏಪ್ರಿಲ್ 14: ಕೃತಕ ಬುದ್ಧಿಮತ್ತೆ (AI) ಮತ್ತು ಚಿಪ್ ಡಿಸೈನಿಂಗ್ ಕ್ಷೇತ್ರದಲ್ಲಿ ಜಾಗತಿಕ ಮುಂಚೂಣಿಯಲ್ಲಿರುವ ಎನ್​ವಿಡಿಯಾ (Nvidia) ಕಂಪನಿಯು ತನ್ನ ಭಾರತೀಯ ಉದ್ಯೋಗಿಗಳಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ. ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಭಾರತ ಮೂಲದ ಹೆಚ್ಚಿನ ಉದ್ಯೋಗಿಗಳಿಗೆ ಒನ್ ಟೈಮ್ ಸ್ಪೆಷಲ್ ‘ಸ್ಟಾಕ್ ಗ್ರಾಂಟ್’ (ಷೇರುಗಳ ಹಂಚಿಕೆ) ಘೋಷಿಸಲಾಗಿದೆ. ಇದರ ಮೌಲ್ಯ 5 ಲಕ್ಷ ರೂನಿಂದ 1 ಕೋಟಿ ರೂವರೆಗಿದೆ ಎನ್ನಲಾಗಿದೆ.

ಏನಿದು ‘ಜೆನ್ಸನ್ ಸ್ಪೆಷಲ್ ಗ್ರಾಂಟ್’?

ಎನ್​ವಿಡಿಯಾದ ಸಿಇಒ ಜೆನ್ಸನ್ ಹುವಾಂಗ್ ಅವರು 2024 ರಲ್ಲಿ ಈ ವಿಶೇಷ ಯೋಜನೆಯನ್ನು ಪರಿಚಯಿಸಿದ್ದಾರೆ. ಇದರ ಅಡಿಯಲ್ಲಿ ಉದ್ಯೋಗಿಗಳಿಗೆ ಅವರ ಮೂಲ ‘ರೆಸ್ಟ್ರಿಕ್ಟೆಡ್ ಸ್ಟಾಕ್ ಯೂನಿಟ್ಸ್’ (RSUs) ಮೇಲೆ ಹೆಚ್ಚುವರಿ 25% ರಷ್ಟು ಷೇರುಗಳನ್ನು ನೀಡಲಾಗುತ್ತಿದೆ. ಭಾರತದಲ್ಲಿರುವ ಸುಮಾರು 10,000 ಉದ್ಯೋಗಿಗಳು ಈ ಯೋಜನೆಯ ಲಾಭ ಪಡೆಯಲಿದ್ದಾರೆ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: ಒತ್ತಡದ ನಡುವೆಯೂ ಏರದ ಪೆಟ್ರೋಲ್ ಬೆಲೆ; ಪೆಟ್ರೋಲಿಯಂ ಕಂಪನಿಗಳಿಗೆ ಒಂದು ಲೀಟರ್ ಪೆಟ್ರೋಲ್​ಗೆ ಆಗುತ್ತಿರುವ ನಷ್ಟವೆಷ್ಟು ಗೊತ್ತಾ?

ಷೇರು ಹಂಚಿಕೆಯ ಪ್ರಮುಖಾಂಶಗಳು

ಈ ಷೇರುಗಳು ಒಮ್ಮೆಗೆ ಕೈ ಸೇರುವುದಿಲ್ಲ. ಸೆಪ್ಟೆಂಬರ್ 2024 ರಿಂದ ಆರಂಭಗೊಂಡು 2028 ರವರೆಗೆ ಪ್ರತಿ ಮೂರು ತಿಂಗಳಿಗೊಮ್ಮೆ ಕಂತುಗಳಲ್ಲಿ ಉದ್ಯೋಗಿಗಳಿಗೆ ಹಸ್ತಾಂತರವಾಗಲಿವೆ. ಉದಾಹರಣೆಗೆ, ಮಧ್ಯಮ ಹಂತದ ಉದ್ಯೋಗಿಯೊಬ್ಬರು ವಾರ್ಷಿಕ ವೇತನದ ಹೊರತಾಗಿ ಸುಮಾರು 5.3 ಲಕ್ಷ ರೂ ಮೌಲ್ಯದ ಹೆಚ್ಚುವರಿ ಷೇರುಗಳನ್ನು ಪಡೆದಿದ್ದಾರೆ. ಅನುಭವೀ ಎಂಜಿನಿಯರ್‌ಗಳ ವಿಷಯದಲ್ಲಿ ಈ ಮೊತ್ತ 1 ಕೋಟಿ ರೂ ದಾಟಿದೆ.

ಈ ಹಂಚಿಕೆಯ ಒಟ್ಟು ಮೌಲ್ಯವು ಎನ್ವಿಡಿಯಾ ಕಂಪನಿಯ ಷೇರು ಮಾರುಕಟ್ಟೆ ಬೆಲೆ ಮತ್ತು ಡಾಲರ್ ವಿನಿಮಯ ದರದ ಮೇಲೆ ಆಧಾರಿತವಾಗಿರುತ್ತದೆ.

ಪ್ರತಿಭೆ ಉಳಿಸಿಕೊಳ್ಳಲು ಹೊಸ ತಂತ್ರ

ತಂತ್ರಜ್ಞಾನ ಕ್ಷೇತ್ರದಲ್ಲಿ, ವಿಶೇಷವಾಗಿ AI ಮತ್ತು ಸೆಮಿಕಂಡಕ್ಟರ್ ವಿಭಾಗದಲ್ಲಿ ನುರಿತ ಉದ್ಯೋಗಿಗಳನ್ನು ಉಳಿಸಿಕೊಳ್ಳಲು ಕಂಪನಿಗಳು ಈಗ ಕೇವಲ ಸಂಬಳವನ್ನಷ್ಟೇ ನಂಬಿಲ್ಲ. ಎನ್​ವಿಡಿಯಾದಲ್ಲಿ ಹಿರಿಯ ಎಂಜಿನಿಯರ್‌ಗಳ ಒಟ್ಟು ವೇತನದ ಶೇ 50 ರಿಂದ ಶೇ 75 ರಷ್ಟು ಭಾಗ ಈ ಷೇರುಗಳ ರೂಪದಲ್ಲೇ ಇರುತ್ತದೆ.

ಇದನ್ನೂ ಓದಿ: ಬ್ಯಾಟರಿ ಸ್ವಾವಲಂಬನೆಗೆ 3.5 ಲಕ್ಷ ಕೋಟಿ ರೂ ಯೋಜನೆ; ಬ್ಯಾಟರಿ ತಯಾರಕರ ಪಟ್ಟಿ ರೂಪಿಸಲು ಸರ್ಕಾರ

ಭಾರತವು AI ಮತ್ತು ಚಿಪ್ ವಿನ್ಯಾಸದ ಪ್ರಮುಖ ಕೇಂದ್ರವಾಗಿ ಬೆಳೆಯುತ್ತಿರುವುದರಿಂದ, ಉನ್ನತ ಮಟ್ಟದ ಎಂಜಿನಿಯರ್‌ಗಳಿಗೆ ವರ್ಷಕ್ಕೆ 2 ರಿಂದ 3 ಕೋಟಿ ರೂವರೆಗಿನ ಪ್ಯಾಕೇಜ್ ನೀಡುವುದು ಈಗ ಸಾಮಾನ್ಯವಾಗುತ್ತಿದೆ. ಇಷ್ಟು ದೊಡ್ಡ ಮೊತ್ತದ ವೇತನಕ್ಕೆ ಕಂಪನಿಗಳು ನೀಡುವ ಈ ಸ್ಟಾಕ್ ಇನ್ಸೆಂಟಿವ್‌ಗಳೇ ಪ್ರಮುಖ ಕಾರಣ.

ಒಟ್ಟಾರೆಯಾಗಿ, ಎನ್ವಿಡಿಯಾದ ಈ ನಡೆ ಭಾರತೀಯ ಟೆಕ್ ವಲಯದಲ್ಲಿ ಷೇರು ಆಧಾರಿತ ವೇತನ ಪದ್ಧತಿಯ ಮಹತ್ವವನ್ನು ಸಾರುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:32 pm, Tue, 14 April 26

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಬಾಗಲಕೋಟೆ ಜೋಡೆತ್ತುಗಳ ಕಮಾಲ್‌.. 10 ಗಂಟೆಗಳಲ್ಲಿ 20 ಎಕರೆ ಬಿತ್ತನೆ!
ಬಾಗಲಕೋಟೆ ಜೋಡೆತ್ತುಗಳ ಕಮಾಲ್‌.. 10 ಗಂಟೆಗಳಲ್ಲಿ 20 ಎಕರೆ ಬಿತ್ತನೆ!
ಮಹಿಳೆಯ ಸಾಲು ಸಾಲು ಕಷ್ಟ ಕೇಳಿ ಕಣ್ಣೀರಿಟ್ಟ ಸಂಸದ ಶ್ರೇಯಸ್ ಪಟೇಲ್
ಮಹಿಳೆಯ ಸಾಲು ಸಾಲು ಕಷ್ಟ ಕೇಳಿ ಕಣ್ಣೀರಿಟ್ಟ ಸಂಸದ ಶ್ರೇಯಸ್ ಪಟೇಲ್
ಇಂಡಸ್ಟ್ರಿಗೆ ಅಪ್ಪ ಆಗಿ ಬಿಟ್ಟಿದ್ದಾರಂಂತೆ ರಂಗಾಯಣ ರಘು: ವಿಡಿಯೋ ನೋಡಿ
ಇಂಡಸ್ಟ್ರಿಗೆ ಅಪ್ಪ ಆಗಿ ಬಿಟ್ಟಿದ್ದಾರಂಂತೆ ರಂಗಾಯಣ ರಘು: ವಿಡಿಯೋ ನೋಡಿ
ಹೆಣ್ಮಕ್ಕಳು ಬೇಕು ಸರ್.. ಸಿಎಂ ಮುಂದೆ ಅಳಲು ತೋಡಿಕೊಂಡ ಯುವಕ
ಹೆಣ್ಮಕ್ಕಳು ಬೇಕು ಸರ್.. ಸಿಎಂ ಮುಂದೆ ಅಳಲು ತೋಡಿಕೊಂಡ ಯುವಕ
ನಟಿಸೋದು ಇಷ್ಟ, ಡ್ಯಾನ್ಸ್ ಮಾಡೋದು ಕಷ್ಟ: ಹಿರಿಯ ನಟ ಅನಂತ್ ನಾಗ್
ನಟಿಸೋದು ಇಷ್ಟ, ಡ್ಯಾನ್ಸ್ ಮಾಡೋದು ಕಷ್ಟ: ಹಿರಿಯ ನಟ ಅನಂತ್ ನಾಗ್
ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದ ದಿನಗಳ ನೆನಪಿಸಿಕೊಂಡ ಅನಂತ್
ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದ ದಿನಗಳ ನೆನಪಿಸಿಕೊಂಡ ಅನಂತ್
‘ದಾದಾ ಸಾಹೇಬ್ ಫಾಲ್ಕೆ’ ಘೋಷಣೆಯಾದ ದಿನ ಮಾಡಿದ್ದೇನು? ಅನಂತ್ ನಾಗ್ ಉತ್ತರ
‘ದಾದಾ ಸಾಹೇಬ್ ಫಾಲ್ಕೆ’ ಘೋಷಣೆಯಾದ ದಿನ ಮಾಡಿದ್ದೇನು? ಅನಂತ್ ನಾಗ್ ಉತ್ತರ
ರಂಗಭೂಮಿ ಹಾಗೂ ಬದುಕಿನ ಪಯಣ ಬಿಚ್ಚಿಟ್ಟ ಅನಂತ್ ನಾಗ್
ರಂಗಭೂಮಿ ಹಾಗೂ ಬದುಕಿನ ಪಯಣ ಬಿಚ್ಚಿಟ್ಟ ಅನಂತ್ ನಾಗ್
ಬದಲಾಗುತ್ತಿರುವ ಇಂದಿನ ರಾಜಕೀಯ ವ್ಯವಸ್ಥೆ ಬಗ್ಗೆ ಅನಂತ್ ನಾಗ್ ನೇರ ಮಾತು
ಬದಲಾಗುತ್ತಿರುವ ಇಂದಿನ ರಾಜಕೀಯ ವ್ಯವಸ್ಥೆ ಬಗ್ಗೆ ಅನಂತ್ ನಾಗ್ ನೇರ ಮಾತು
ಸಿಗಂದೂರು ರಸ್ತೆಯಲ್ಲಿ ನಿಗೂಢ ಪೂಜೆ, ಮಾಟಮಂತ್ರದಿಂದ ಬೆಚ್ಚಿಬಿದ್ದ ಜನ
ಸಿಗಂದೂರು ರಸ್ತೆಯಲ್ಲಿ ನಿಗೂಢ ಪೂಜೆ, ಮಾಟಮಂತ್ರದಿಂದ ಬೆಚ್ಚಿಬಿದ್ದ ಜನ