ಎನ್ವಿಡಿಯಾ
Image Credit source: Benjamin Fanjoy/Getty Images
ನವದೆಹಲಿ, ನವೆಂಬರ್ 13: ಅನೈತಿಕ ಸಂಬಂಧಗಳನ್ನು ಹೊಂದಿದ ಆರೋಪ ಎದುರಿಸುತ್ತಿರುವ ಜೆನ್ಸೆನ್ ಹುವಾಂಗ್ ಅವರು ಎನ್ವಿಡಿಯಾದ ಸಿಇಒ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೊರನಡೆದಿದ್ದಾರೆ. ಹಂಗಾಮಿ ಸಿಇಒ ಆಗಿ ಕೊಲೆಟ್ಟೆ ಕ್ರೆಸ್ ಅವರನ್ನು ಹೆಸರಿಸಲಾಗಿದೆ. ಕಳೆದ 12 ವರ್ಷಗಳಿಂದ ಎನ್ವಿಡಿಯಾದಲ್ಲಿ ಸಿಎಫ್ಒ ಆಗಿದ್ದ ಕ್ರೆಸ್ ಸೇರಿದಂತೆ 10ಕ್ಕೂ ಹೆಚ್ಚು ಜನರು ಸಿಇಒ ಸ್ಥಾನದ ರೇಸ್ನಲ್ಲಿ ಅಥವಾ ಪರಿಗಣನೆಯಲ್ಲಿ ಇದ್ದಾರೆ ಎಂದು ಹೇಳಲಾಗುತ್ತಿದೆ. ಈ ಪಟ್ಟಿಯಲ್ಲಿ ಭಾರತ ಮೂಲದ ಮೂವರು ದಿಗ್ಗಜರೂ ಇರುವುದು ಗಮನಾರ್ಹ.
ಎನ್ವಿಡಿಯಾದ ಸಿಇಒ ರೇಸ್ನಲ್ಲಿ ಇರುವ ಭಾರತ ಮೂಲದವರು ಇವರು…
- ಸಂಜಯ್ ಮೆಹ್ರೋತ್ರಾ: ಇವರು ಮೆಮೊರಿ ಚಿಪ್ ತಯಾರಿಸುವ ಮೈಕ್ರಾನ್ ಟೆಕ್ನಾಲಜೀಸ್ನ ಸಿಇಒ ಆಗಿದ್ದಾರೆ. ಮೈಕ್ರಾನ್ನ ಉತ್ಪನ್ನಗಳು ಎನ್ವಿಡಿಯಾಗೆ ಸರಬರಾಜಾಗುತ್ತವೆ. ಹೀಗಾಗಿ, ಎನ್ವಿಡಿಯಾ ಕಂಪನಿ ಜೊತೆ ಸಂಜಯ್ ಮೆಹ್ರೋತ್ರಾ ನಿಕಟ ಸಂಪರ್ಕದಲ್ಲಿರುತ್ತಾ ಬಂದಿದ್ದಾರೆ. ಸೆಮಿಕಂಡಕ್ಟರ್ ಚಿಪ್ ತಯಾರಿಕಾ ಕ್ಷೇತ್ರದಲ್ಲಿ ಹಲವು ವರ್ಷಗಳ ಅನುಭವ ಹೊಂದಿರುವ ಸಂಜಯ್ ಮೆಹ್ರೋತ್ರಾ ಹೆಸರು ಎನ್ವಿಡಿಯ ಸಿಇಒ ಸ್ಥಾನಕ್ಕೆ ಸಹಜವಾಗಿ ಕೇಳಿಬರುತ್ತದೆ.
- ನಿಕೇಶ್ ಅರೋರಾ: ಪಾಲೊ ಆಲ್ಟೋ ನೆಟ್ವರ್ಕ್ಸ್ ಸಿಇಒ ಆಗಿರುವ ನಿಕೇಶ್ ಅರೋರಾ ಹೆಸರು ಎನ್ವಿಡಿಯಾ ಸಿಇಒ ರೇಸ್ನಲ್ಲಿ ಕಾಣಿಸಿದೆ. ಗೂಗಲ್, ಸಾಫ್ಟ್ಬ್ಯಾಂಕ್ ಇತ್ಯಾದಿ ಕಂಪನಿಗಳಲ್ಲೂ ಕೆಲಸ ಮಾಡಿದ್ದಾರೆ. ಅವರು ಸೈಬರ್ಸೆಕ್ಯೂರಿಟಿ ಕ್ಷೇತ್ರದಲ್ಲಿ ಹೆಚ್ಚಿನ ಅನುಭವಿಯಾಗಿದ್ದಾರೆ.
- ಥಾಮಸ್ ಕುರಿಯನ್: ಗೂಗಲ್ ಕ್ಲೌಡ್ನ ಸಿಇಒ ಆಗಿರುವ ಥಾಮಸ್ ಕುರಿಯನ್ ಅವರ ಹೆಸರೂ ಕೂಡ ರೇಸ್ನಲ್ಲಿದೆ. ಕ್ಲೌಡ್ ಇನ್ಫ್ರಾಸ್ಟ್ರಕ್ಚರ್, ಎಂಟರ್ಪ್ರೈಸ್ ಸಾಫ್ಟ್ವೇರ್, ಎಐ ಸರ್ವಿಸ್ಗಳನ್ನು ನೋಡಿಕೊಳ್ಳುವ ಕುರಿಯನ್ ಅವರು ಜಾಗತಿಕವಾಗಿ ದೊಡ್ಡ ಗ್ರಾಹಕರೊಂದಿಗೆ ಒಡನಾಟ ಹೊಂದಿದ್ದಾರೆ. ಅವರ ಅನುಭವವು ಎನ್ವಿಡಿಯಾಗೆ ನೆರವಾಗಬಹುದು ಎನ್ನಲಾಗುತ್ತಿದೆ.
ಇದನ್ನೂ ಓದಿ: ‘ನಮ್ಮ ಬಾಸ್ ಬೇಕು’: ಜೆನ್ಸೆನ್ ಹುವಾಂಗ್ ಪರ ನಿಂತ ಎನ್ವಿಡಿಯಾದ 1,600ಕ್ಕೂ ಹೆಚ್ಚು ಉದ್ಯೋಗಿಗಳು
Loading...
{{{html}}}
ಎನ್ವಿಡಿಯಾ ಸಿಇಒ ರೇಸ್ನಲ್ಲಿ ಕಂಡಿರುವ ಇತರ ಹೆಸರುಗಳು
- ಕೊಲೆಟ್ಟೆ ಕ್ರೆಸ್: ಎನ್ವಿಡಿಯಾದಲ್ಲಿ 2013ರಿಂದ ಸಿಎಫ್ಒ ಆಗಿರುವ ಇವರು (Colette Kress) ಸದ್ಯ ಹಂಗಾಮಿ ಸಿಇಒ ಆಗಿದ್ದಾರೆ. ಇದೂ ಒಳಗೊಂಡಂತೆ ಹಲವು ಟೆಕ್ ಕಂಪನಿಗಳಲ್ಲಿ ಕೆಲಸ ಮಾಡಿದ ಅನುಭವಿ ಇವರು.
- ಇಯಾನ್ ಬಕ್: ಎನ್ವಿಡಿಯಾದ ಹೈಪರ್ಸ್ಕೇಲ್ ಮತ್ತು ಹೈಪರ್ಫಾರ್ಮೆನ್ಸ್ ಕಂಪ್ಯೂಟಿಂಗ್ ವಿಭಾಗದಲ್ಲಿ ವೈಸ್ ಪ್ರೆಸಿಡೆಂಟ್ ಆಗಿರುವ ಇಯಾನ್ ಬಕ್ ಅವರು ಟೆಕ್ ಜೀನಿಯಸ್ ಎನ್ನುವವರಿದ್ದಾರೆ. ವಿಡಿಯೋ ಗೇಮ್ ಚಿಪ್ಗಳನ್ನು ಮಾಡುತ್ತಿದ್ದ ಕಂಪನಿಯು ಎಐ ಹಾರ್ಡ್ವೇರ್ಗೆ ಕಡೆಗೆ ಗಮನ ಹೊರಳಿಸಲು ಇವರ ಪಾತ್ರ ದೊಡ್ಡದಂತೆ.
- ಟಿಮ್ ಕುಕ್: ಆ್ಯಪಲ್ ಕಂಪನಿಯ ಮಾಜಿ ಸಿಇಒ ಟಿಮ್ ಕುಕ್ ಅವರ ಹೆಸರು ಎನ್ವಿಡಿಯಾಗೆ ಕೇಳಿಬರುತ್ತಿದೆ. ಸ್ಟೀವ್ ಜಾಬ್ಸ್ ಸಾವಿನ ಬಳಿಕ ಆ್ಯಪಲ್ ಕಂಪನಿಯ ಮಾರುಕಟ್ಟೆಯನ್ನು ಹೆಚ್ಚಿಸಿದ ಶ್ರೇಯಸ್ಸು ಇವರದ್ದು.
- ರೆನೆ ಹಾಸ್: ಇವರು 2013ರಲ್ಲಿ ಆರ್ಮ್ ಎನ್ನುವ ಬ್ರಿಟನ್ ದೇಶದ ಚಿಪ್ ತಯಾರಕ ಕಂಪನಿ ಸಿಇಒ ಆಗಿದ್ದಾರೆ. ಅದಕ್ಕೆ ಮುನ್ನ ಇವರು ಎನ್ವಿಡಿಯದಲ್ಲಿ ಕೆಲಸ ಮಾಡಿದ ಅನುಭವಿ.
- ಪ್ಯಾಟ್ ಗೆಲ್ಸಿಂಗರ್: ಎನ್ವಿಡಿಯಾದ ಪ್ರತಿಸ್ಪರ್ಧಿ ಕಂಪನಿಯಾದ ಇಂಟೆಲ್ನಲ್ಲಿ ಸಿಇಒ ಆಗಿದ್ದವರು ಪ್ಯಾಟ್ ಗೆಲ್ಸಿಂಗರ್. ಚಿಪ್ ಡಿಸೈನ್ ಮತ್ತು ಮ್ಯಾನುಫ್ಯಾಕ್ಚರಿಂಗ್, ಎರಡರಲ್ಲೂ ಪಳಗಿದವರು ಅವರು.
- ಲೀಸಾ ಸು: ಎನ್ವಿಡಿಯಾದ ಮತ್ತೊಂದು ಪ್ರತಿಸ್ಪರ್ಧಿ ಕಂಪನಿಯಾದ ಎಎಂಡಿ ಮುಖ್ಯಸ್ಥೆ ಲೀಸಾ ಸು. ಎನ್ವಿಡಿಯಾ ಸಂಸ್ಥಾಪಕ ಜೆನ್ಸೆನ್ ಹುವಾಂಗ್ ಅವರಂತೆ ಇವರೂ ಕೂಡ ತೈವಾನ್ ಮೂಲದವರು. ಇಬ್ಬರೂ ದೂರದ ಸಂಬಂಧಿ. ಆದರೆ, ಹುವಾಂಗ್ಗಿಂತ ಭಿನ್ನ ವ್ಯಕ್ತಿತ್ವದವರು.
ಇದನ್ನೂ ಓದಿ: ಪ್ರೇಮ ಪ್ರಕರಣದ ವಿವಾದ: ಜೆನ್ಸನ್ ಹುವಾಂಗ್ ಮಾತ್ರವಲ್ಲ,ಈ 4 ಕಂಪನಿಗಳ ಸಿಇಒಗಳೂ ಹುದ್ದೆ ಕಳೆದುಕೊಂಡಿದ್ದರು
ಹಾಗೆಯೇ, ಮಾರ್ವೆಲ್ ಟೆಕ್ನಾಲಜಿಯ ಮ್ಯಾಟ್ ಮರ್ಫಿ, ಆ್ಯಪಲ್ನ ಚೀಫ್ ಹಾರ್ಡ್ವೇರ್ ಆಫೀಸರ್ ಜಾನಿ ಸ್ರೂಜಿ ಅವರ ಹೆಸರೂ ಕೇಳಿಬರುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ