ಪಿಂಚಣಿ ಯೋಜನೆಗಳಾದ ಎನ್​ಪಿಎಸ್, ಎಪಿಐಗಳಲ್ಲಿ ಹಣದ ಮೊತ್ತ 10 ಲಕ್ಷ ಕೋಟಿ ರೂ: ಸರ್ಕಾರ ಮಾಹಿತಿ

|

Updated on: Sep 01, 2023 | 6:04 PM

NPS, APY Data: ಕೇಂದ್ರ ಸರ್ಕಾರ ರೂಪಿಸಿರುವ ಎನ್​ಪಿಎಸ್ ಮತ್ತು ಎಪಿವೈ ಪಿಂಚಣಿ ಸ್ಕೀಮ್​ಗಳನ್ನು ಪಡೆಯುವವರ ಸಂಖ್ಯೆ ಹೆಚ್ಚುತ್ತಿದೆ. ಸರ್ಕಾರ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ 2023ರ ಆಗಸ್ಟ್ 25ರವರೆಗೆ ಈ ಎರಡು ಯೋಜನೆಗಳನ್ನು ಪಡೆದವರ ಸಂಖ್ಯೆ 6.62 ಕೋಟಿಗೂ ಹೆಚ್ಚಿದೆ. ಒಟ್ಟು ಇದರಲ್ಲಿರುವ ಹಣ 10 ಲಕ್ಷ ಕೋಟಿ ರೂ ಆಗಿದೆ. ಕೇಂದ್ರ ಸರ್ಕಾರದ ಪಿಐಬಿ ಈ ದತ್ತಾಂಶವನ್ನು ಬಿಡುಗಡೆ ಮಾಡಿದೆ.

ಪಿಂಚಣಿ ಯೋಜನೆಗಳಾದ ಎನ್​ಪಿಎಸ್, ಎಪಿಐಗಳಲ್ಲಿ ಹಣದ ಮೊತ್ತ 10 ಲಕ್ಷ ಕೋಟಿ ರೂ: ಸರ್ಕಾರ ಮಾಹಿತಿ
ಪೆನ್ಷನ್
Follow us on

ನವದೆಹಲಿ, ಸೆಪ್ಟೆಂಬರ್ 1: ಮಾರುಕಟ್ಟೆ ಜೋಡಿತ ಪಿಂಚಣಿ ಸ್ಕೀಮ್​ಗಳಾದ ನ್ಯಾಷನಲ್ ಪೆನ್ಷನ್ ಸಿಸ್ಟಂ (NPS) ಮತ್ತು ಅಟಲ್ ಪೆನ್ಷನ್ ಯೋಜನೆ (APY) ದಿನೇ ದಿನೇ ಜನಪ್ರಿಯತೆ ಹೆಚ್ಚಿಸಿಕೊಳ್ಳುತ್ತಿವೆ. ಇವೆರಡರಲ್ಲೂ ಇರುವ ಒಟ್ಟು ಸದಸ್ಯರ ಸಂಖ್ಯೆ 6.62 ಕೋಟಿಗೂ ಹೆಚ್ಚಾಗಿದೆ. ಇಷ್ಟೂ ಮಂದಿ ಈ ಸ್ಕೀಮ್​​ಗಳಲ್ಲಿ ತೊಡಗಿಸಿರುವ ಹಣ (AUM- ಅಸೆಟ್ ಅಂಡರ್ ಮ್ಯಾನೇಜ್ಮೆಂಟ್) 10 ಲಕ್ಷ ಕೋಟಿ ರೂ ಎನ್ನಲಾಗಿದೆ. ಪಿಐಬಿ ಪ್ರಕಟಿಸಿರುವ ಇದು 2023ರ ಆಗಸ್ಟ್ 25ರವರೆಗಿನ ಮಾಹಿತಿಯಾಗಿದೆ. ಭಾರತದ ಅತಿದೊಡ್ಡ ಮ್ಯೂಚುವಲ್ ಫಂಡ್​ಗಳು ನಿರ್ವಹಿಸುವ ಹಣಕ್ಕಿಂತ ಹೆಚ್ಚಿನ ಮೊತ್ತದ ಹಣ ಪೆನ್ಷನ್ ಸ್ಕೀಮ್​ಗಳಲ್ಲಿವೆ.

ಭಾರತದ ಪ್ರಮುಖ ಎಯುಎಂ ಕಂಪನಿಗಳಲ್ಲಿ ಎಸ್​ಬಿಐ ಮ್ಯೂಚುವಲ್ ಫಂಡ್​ ಮೊದಲಿಗ ಎನಿಸಿದೆ. ಇದು ನಿರ್ವಹಿಸುವ ಹಣದ ಮೊತ್ತ 7 ಲಕ್ಷ ಕೋಟಿ ರೂ. ಇನ್ನು, ಐಸಿಐಸಿಐ ಪ್ರುಡೆನ್ಷಿಯಲ್ ಮ್ಯುಚುವಲ್ ಫಂಡ್ ನಿರ್ವಹಿಸುವ ಹಣದ ಒತ್ತ 5 ಲಕ್ಷ ಕೋಟಿ ರೂ.

ನ್ಯಾಷನಲ್ ಪೆನ್ಷನ್ ಸಿಸ್ಟಂ ಮತ್ತು ಅಟಲ್ ಪೆನ್ಷನ್ ಸ್ಕೀಮ್, ಇವೆರಡೂ ಸೇರಿ ನಿರ್ವಹಿಸುವ ಹಣದ ಮೊತ್ತ 10 ಲಕ್ಷ ಕೋಟಿ ರೂ ಎಂಬುದು ಗಮನಾರ್ಹ. ಇದರಲ್ಲಿ ಹೆಚ್ಚನ ಪಿಂಚಣಿ ಸದಸ್ಯರು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಉದ್ಯೋಗಿಗಳೇ ಹೆಚ್ಚು.

ಇದನ್ನೂ ಓದಿ: ಆಗಸ್ಟ್ ತಿಂಗಳಲ್ಲಿ 15.76 ಲಕ್ಷಕೋಟಿ ರೂ ಮೊತ್ತದಷ್ಟು ಡಿಜಿಟಲ್ ವಹಿವಾಟು; ಯುಪಿಐ ಸಾಧನೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹೆಮ್ಮೆ

ಏನಿದು ಎನ್​ಪಿಎಸ್ ಯೋಜನೆ?

ಎನ್​ಪಿಎಸ್ ಎಂದರೆ ನ್ಯಾಷನಲ್ ಪೆನ್ಷನ್ ಸಿಸ್ಟಂ. ಸೇನಾ ಪಡೆಯ ಸಿಬ್ಬಂದಿ ಹೊರತಪಡಿಸಿ ಎಲ್ಲಾ ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ನ್ಯಾಷನಲ್ ಪೆನ್ಷನ್ ಸಿಸ್ಟಂ ಅನ್ವಯ ಆಗುತ್ತದೆ. ಬಹುತೇಕ ರಾಜ್ಯ ಸರ್ಕಾರಗಳ ನೌಕರರನ್ನೂ ಈ ಪಿಂಚಣಿ ವ್ಯವಸ್ಥೆಯ ವ್ಯಾಪ್ತಿಗೆ ತರಲಾಗಿದೆ. 2009ರಿಂದ ಈ ಸ್ಕೀಮ್ ಎಲ್ಲಾ ನಾಗರಿಕರಿಗೂ ಮುಕ್ತವಾಗಿದೆ. ಯಾರು ಬೇಕಾದರೂ ಈ ಸ್ಕೀಮ್ ಪಡೆಯಬಹುದು.

ಅಟಲ್ ಪೆನ್ಷನ್ ಯೋಜನೆ ಏನು?

2015ರಲ್ಲಿ ಅಟಲ್ ಪೆನ್ಷನ್ ಸ್ಕೀಮ್ ಅನ್ನು ಜಾರಿಗೆ ತರಲಾಯಿತು. ತೆರಿಗೆ ಪಾವತಿದಾರನಲ್ಲದ ಬಡ ವರ್ಗದ 18 ರಿಂದ 40 ವರ್ಷ ವಯಸ್ಸಿನ ವ್ಯಕ್ತಿಗಳು ಈ ಸ್ಕೀಮ್ ಪಡೆಯಬಹುದು. ನಿವೃತ್ತಿ ವಯಸ್ಸಾದ 60 ವರ್ಷದ ಬಳಿಕ ತಿಂಗಳಿಗೆ 1,000 ರೂನಿಂದ 5,000 ರೂವರೆಗೆ ಪಿಂಚಣಿ ಪಡೆಯಲು ಸಾಧ್ಯವಾಗುವಂತೆ ಹಣದ ಹೂಡಿಕೆ ಮಾಡುವ ಯೋಜನೆ ಇದು.

ಇದನ್ನೂ ಓದಿ: ಬಿಲ್ ಪಡೆದು ಅಪ್​ಲೋಡ್ ಮಾಡಿ, ಬಹುಮಾನ ಗೆಲ್ಲಿ; ಮೇರಾ ಬಿಲ್ ಮೇರಾ ಅಧಿಕಾರ್ ಸ್ಕೀಮ್ ಇವತ್ತಿನಿಂದ

ಈ ಮೇಲಿನ ಎರಡೂ ಯೋಜನೆಗಳಲ್ಲಿ ತೊಡಗಿಸುವ ಹಣವನ್ನು ಈಕ್ವಿಟಿ ಇತ್ಯಾದಿ ಮಾರುಕಟ್ಟೆಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಹೀಗಾಗಿ, ಈ ಯೋಜನೆಗಳು ಸಾಕಷ್ಟು ಜನಪ್ರಿಯತೆ ಗಳಿಸುತ್ತಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ