2025-26ರಲ್ಲಿ ಪ್ರಯಾಣಿಕ ವಾಹನಗಳ ಮಾರಾಟ ಶೇ. 7ರಷ್ಟು ಹೆಚ್ಚಳ; ದ್ವಿಚಕ್ರ ವಾಹನಗಳು ಶೇ. 6-9 ಹೆಚ್ಚು ಸೇಲ್: ಇಕ್ರ ಅಂದಾಜು

Automobile industry in India: ಭಾರತದಲ್ಲಿ 2025-26ರಲ್ಲಿ ಪ್ಯಾಸೆಂಜರ್ ವಾಹನಗಳ ಮಾರಾಟ ಶೇ. 4-7ರಷ್ಟು ಹೆಚ್ಚಬಹುದು ಎಂದು ರೇಟಿಂಗ್ ಏಜೆನ್ಸಿ ಐಸಿಆರ್​ಎ ಅಭಿಪ್ರಾಯಪಟ್ಟಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಈ ವಾಹನಗಳ ಮಾರಾಟಕ್ಕೆ ಹೆಚ್ಚಿನ ಉತ್ಸಾಹ ಕಂಡು ಬಂದಿಲ್ಲ. ಆದರೆ, ಮುಂದಿನ ವರ್ಷ ಮಾರಾಟ ಚುರುಕು ಪಡೆಯಬಹುದು ಎಂಬುದು ಇಕ್ರಾ ಅಂದಾಜು.

2025-26ರಲ್ಲಿ ಪ್ರಯಾಣಿಕ ವಾಹನಗಳ ಮಾರಾಟ ಶೇ. 7ರಷ್ಟು ಹೆಚ್ಚಳ; ದ್ವಿಚಕ್ರ ವಾಹನಗಳು ಶೇ. 6-9  ಹೆಚ್ಚು ಸೇಲ್: ಇಕ್ರ ಅಂದಾಜು
ಕಾರು

Updated on: Feb 27, 2025 | 7:18 PM

ನವದೆಹಲಿ, ಫೆಬ್ರುವರಿ 27: ಮುಂಬರುವ ಹಣಕಾಸು ವರ್ಷದಲ್ಲಿ (2025-26) ಭಾರತದಲ್ಲಿ ಪ್ಯಾಸೆಂಜರ್ ವಾಹನಗಳ ಮಾರಾಟ ಶೇ. 4-7ರಷ್ಟು ಹೆಚ್ಚಾಗಬಹುದು. ದ್ವಿಚಕ್ರ ವಾಹನಗಳ ಮಾರಾಟ (passenger vehicle sales) ಶೇ. 6-9ರಷ್ಟು ಹೆಚ್ಚಾಗಬಹುದು ಎಂದು ಐಸಿಆರ್​ಎ (ICRA) ರೇಟಿಂಗ್ ಸಂಸ್ಥೆ ಅಂದಾಜು ಮಾಡಿದೆ.

2023-24ರ ಹಣಕಾಸು ವರ್ಷದಲ್ಲಿ ಪ್ರಯಾಣಿಕ ವಾಹನ ಉದ್ಯಮ ಗರಿಷ್ಠ ಬ್ಯುಸಿನೆಸ್ ಕಂಡಿತ್ತು. ಆ ವರ್ಷ 42 ಲಕ್ಷ ಪಿವಿಗಳ ಮಾರಾಟವಾಗಿದ್ದುವು. ಅದು ಹೊಸ ದಾಖಲೆಯಾಗಿತ್ತು. ಆದರೆ, ಪ್ರಸಕ್ತ ಹಣಕಾಸು ವರ್ಷದಲ್ಲಿ (2024-25) ಪ್ಯಾಸೆಂಜರ್ ವಾಹನಗಳ ಮಾರಾಟದಲ್ಲಿ ಇಲ್ಲಿಯವರೆಗೆ ಶೇ. 2ರಷ್ಟು ಮಾತ್ರವೇ ಹೆಚ್ಚಳವಾಗಿದೆ. ಆದರೆ, ಮುಂದಿನ ಹಣಕಾಸು ವರ್ಷದಲ್ಲಿ ವಾಹನಗಳ ಸೇಲ್ಸ್ ಪರವಾಗಿಲ್ಲವೆನ್ನುವ ಮಟ್ಟದಲ್ಲಿ ಹೆಚ್ಚಬಹುದು ಎಂದು ಐಸಿಆರ್​ಎ ಹೇಳಿದೆ.

ಇದನ್ನೂ ಓದಿ: ಭಾರತದಲ್ಲಿ ಜನವರಿಯಲ್ಲಿ ಶೇ. 5ರಷ್ಟು ಹೆಚ್ಚಿದ ಚಿಲ್ಲರೆ ಮಾರಾಟ; ಆಹಾರ, ದಿನಸಿ ವಸ್ತುಗಳ ಸೇಲ್ಸ್ ಗರಿಷ್ಠ ಹೆಚ್ಚಳ

ಈ ವರ್ಷ ಪಿವಿ ಮಾರಾಟ ಯಾಕೆ ಕಡಿಮೆ?

ವಾಹನ ಉದ್ಯಮಕ್ಕೆ ಬೇಡಿಕೆ ಹೆಚ್ಚಿಸುವ ಅಂಶಗಳು ಈ ವರ್ಷ ದುರ್ಬಲವಾಗಿವೆ. ಜನರ ಕೈಯಲ್ಲಿ ಹಣ ಇಲ್ಲದಿರುವುದು, ಹೊಸ ಮಾಡಲ್​ಗಳ ಬಿಡುಗಡೆ ಕಡಿಮೆ ಇರುವುದು, ಕಾರುಗಳ ಬೆಲೆ ಹೆಚ್ಚಿರುವುದು ಇವು ವಾಹನಗಳ ಮಾರಾಟ ಮಂದಗೊಳ್ಳುವಂತೆ ಮಾಡಿವೆ ಎಂಬುದು ಈ ಏಜೆನ್ಸಿಯ ಅನಿಸಿಕೆ.

ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಹೆಚ್ಚಳ

ಪ್ಯಾಸೆಂಜರ್ ವಾಹನಗಳಿಗೆ ಹೋಲಿಸಿದರೆ ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಹೆಚ್ಚು ಏರಿಕೆ ಆಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಇಲ್ಲಿಯವವರೆಗೆ ಶೇ. 10ರಷ್ಟು ಹೆಚ್ಚಾಗಿದೆ. ಒಟ್ಟಾರೆ ಈ ವರ್ಷ ಶೇ. 11-14ರಷ್ಟು ಹೆಚ್ಚು ಬಿಸಿನೆಸ್ ಆಗಬಹುದು. ಗ್ರಾಮೀಣ ಭಾಗದಲ್ಲಿ ಈ ವಾಹನಗಳಿಗೆ ಬೇಡಿಕೆ ಹೆಚ್ಚಿದೆ.

ಇದನ್ನೂ ಓದಿ: ಭಾರತದಲ್ಲಿ ಐಷಾರಾಮಿ ಸರಕುಗಳಿಗೆ ಹೆಚ್ಚಿದ ಬೇಡಿಕೆ; ಕಾರಣವೇನು? ಬೆಚ್ಚಿಬೀಳಿಸುತ್ತದೆ ಈ ವರದಿ

ಬಜೆಟ್ ಕ್ರಮಗಳಿಂದ ಪುಷ್ಟಿ ಸಾಧ್ಯತೆ

ಈ ಬಾರಿಯ ಬಜೆಟ್​ನಲ್ಲಿ ಆದಾಯ ತೆರಿಗೆಯಲ್ಲಿ ರಿಯಾಯಿತಿಗಳನ್ನು ನೀಡಿರುವ ಕ್ರಮದಿಂದ ಜನರ ಜೇಬಿನಲ್ಲಿ ಹೆಚ್ಚು ಹಣ ಉಳಿಯುವಂತೆ ಮಾಡಬಹುದು. ಇದರಿಂದ ದ್ವಿಚಕ್ರ ವಾಹನಗಳ ಬಿಸಿನೆಸ್​ಗೆ ಪುಷ್ಟಿ ನೀಡಬಹುದು. 2025-26ರಲ್ಲಿ ಒಟ್ಟಾರೆ ವಾಹನ ಮಾರಾಟ ತುಸು ಮಂದಗೊಂಡರೂ ದ್ವಿಚಕ್ರ ವಾಹನಗಳು ಶೇ. 6-9ರಷ್ಟು ಹೆಚ್ಚಳ ಆಗಬಹುದು ಎಂದು ಐಸಿಆರ್​ಎ ನಿರೀಕ್ಷಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 7:17 pm, Thu, 27 February 25

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us