AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದಲ್ಲಿ ಜನವರಿಯಲ್ಲಿ ಶೇ. 5ರಷ್ಟು ಹೆಚ್ಚಿದ ಚಿಲ್ಲರೆ ಮಾರಾಟ; ಆಹಾರ, ದಿನಸಿ ವಸ್ತುಗಳ ಸೇಲ್ಸ್ ಗರಿಷ್ಠ ಹೆಚ್ಚಳ

Retail sales in India rose 5pc in January: 2024ರ ಜನವರಿಗೆ ಹೋಲಿಸಿದರೆ, 2025ರ ಜನವರಿಯಲ್ಲಿ ರೀಟೇಲ್ ಸೇಲ್ಸ್ ಶೇ. 5ರಷ್ಟು ಹೆಚ್ಚಳ ಆಗಿದೆ. ಪಶ್ಚಿಮ ಭಾರತದಲ್ಲಿ ಶೇ. 7ರಷ್ಟು ಹೆಚ್ಚಳವಾದರೆ, ಪೂರ್ವ ಭಾರತದಲ್ಲಿ ಸರಾಸರಿಗಿಂತ ಕಡಿಮೆ ರೀಟೇಲ್ ಬಿಸಿನೆಸ್ ಆಗಿದೆ. ಆಹಾರ ಮತ್ತು ದಿನಸಿ ವಸ್ತುಗಳ ಚಿಲ್ಲರೆ ಮಾರಾಟ ಶೇ. 13ರಷ್ಟು ಏರಿಕೆ ಆಗಿದೆ. ಕ್ಯುಎಸ್​ಆರ್ ಮತ್ತು ಸಿಡಿಐಟಿ ವಿಭಾಗಗಳಲ್ಲೂ ರೀಟೇಲ್ ಸೇಲ್ಸ್ ಸರಾಸರಿಗಿಂತ ಹೆಚ್ಚಿದೆ.

ಭಾರತದಲ್ಲಿ ಜನವರಿಯಲ್ಲಿ ಶೇ. 5ರಷ್ಟು ಹೆಚ್ಚಿದ ಚಿಲ್ಲರೆ ಮಾರಾಟ; ಆಹಾರ, ದಿನಸಿ ವಸ್ತುಗಳ ಸೇಲ್ಸ್ ಗರಿಷ್ಠ ಹೆಚ್ಚಳ
ರೀಟೇಲ್ ಮಾರಾಟ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 27, 2025 | 5:38 PM

Share

ನವದೆಹಲಿ, ಫೆಬ್ರುವರಿ 27: ಜನವರಿ ತಿಂಗಳಲ್ಲಿ ಭಾರತದಲ್ಲಿ ರೀಟೇಲ್ ಸೇಲ್ಸ್ ಹೆಚ್ಚಾಗಿದೆ. ಭಾರತೀಯ ಚಿಲ್ಲರೆ ವ್ಯಾಪಾರಿಗಳ ಸಂಘ (RAI- Retailers Association of India) ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ ಜನವರಿಯಲ್ಲಿ ಚಿಲ್ಲರೆ ವ್ಯಾಪಾರ (retail sales) ಶೇ. 5ರಷ್ಟು ಹೆಚ್ಚಾಗಿದೆ. 2024ರ ಜನವರಿಗೆ ಹೋಲಿಸಿದರೆ ಈ ಬಾರಿ ರೀಟೇಲ್ ಸೇಲ್ಸ್​ನಲ್ಲಿ ಆದ ಹೆಚ್ಚಳ ಇದು. ಆಹಾರ ಮತ್ತು ದಿನಸಿ ವಸ್ತುಗಳ ರೀಟೇಲ್ ಮಾರಾಟದಲ್ಲಿ ಶೇ 13ರಷ್ಟು ಏರಿಕೆ ಆಗಿದೆ ಎಂದು 58ನೇ ರೀಟೇಲ್ ಬಿಸಿನೆಸ್ ಸರ್ವೆಯಿಂದ ತಿಳಿದುಬಂದಿದೆ.

‘ಜನವರಿಯಲ್ಲಿ ಶೇ. 5ರಷ್ಟು ರೀಟೇಲ್ ಮಾರಾಟ ಹೆಚ್ಚಿರುವುದು ಸಮೀಕ್ಷೆಯಿಂದ ತಿಳಿದುಬಂದಿದೆ. ಆಹಾರ ಮತ್ತು ದಿನಸಿ ವಸ್ತುಗಳ ಚಿಲ್ಲರೆ ಮಾರಾಟ ಶೇ. 13ರಷ್ಟು ಹೆಚ್ಚಿದೆ. ಕ್ಯುಎಸ್​ಆರ್ (ಕ್ವಿಕ್ ಸರ್ವಿಸ್ ರೆಸ್ಟೋರೆಂಟ್), ಸಿಡಿಐಟಿ (ಗೃಹೋಪಕರಣ ಇತ್ಯಾದಿ) ವಿಭಾಗದಲ್ಲಿ ರೀಟೇಲ್ ಸೇಲ್ಸ್ ಶೇ. 6ರಷ್ಟು ಹೆಚ್ಚಾಗಿದೆ. ಈ ವಿಭಾಗದಲ್ಲಿ ಗ್ರಾಹಕರ ವೆಚ್ಚ ಹೆಚ್ಚಿರುವುದು ಈ ಸಮೀಕ್ಷೆಯಿಂದ ತಿಳಿಯುತ್ತದೆ. ಈಗ ಕೇಂದ್ರ ಬಜೆಟ್​ನಲ್ಲಿ ಸರ್ಕಾರ ತೆರಿಗೆ ವಿನಾಯಿತಿ ನೀಡಿರುವುದರಿಂದ ರೀಟೇಲ್ ಉದ್ಯಮಗಳಿಗೆ ಮತ್ತಷ್ಟು ರಿಲೀಫ್ ಸಿಕ್ಕಿದಂತಾಗಿದೆ,’ ಎಂದು ರೀಟೇಲರ್ಸ್ ಅಸೋಸಿಯೇಶನ್​ನ ಸಿಇಒ ಕುಮಾರ್ ರಾಜಗೋಪಾಲನ್ ಹೇಳಿದ್ದಾರೆ.

ಇದನ್ನೂ ಓದಿ: 21,000 ಕಿಮೀ ಕಂಬಗಳು, 100 ಕಿಮೀ ಬಟ್ಟೆಗಳು; ವಾಟರ್ ಡ್ರೋನ್, ಎಐ ಕ್ಯಾಮರಾಗಳು… ಅಬ್ಬಬ್ಬ ಅನಿಸುವಂತಿತ್ತು ಮಹಾಕುಂಭಕ್ಕೆ ಮಾಡಿದ ವ್ಯವಸ್ಥೆ

ಇದನ್ನೂ ಓದಿ
Image
ನೀರೊಳಗೆ ಡ್ರೋನ್, ಎಐ ಕ್ಯಾಮರಾಗಳು... ಮೈನವಿರೇಳಿಸಿತ್ತು ಮಹಾಕುಂಭ
Image
ಭಾರತದ ಬಗ್ಗೆ ಸಕಾರಾತ್ಮಕವಾಗಿರುವ ವಿಶ್ವಬ್ಯಾಂಕ್, ಸಿಟಿ, ಜೆಫರೀಸ್
Image
ಭಾರತ, ಅಮೆರಿಕ ಆರ್ಥಿಕತೆಗಳಲ್ಲಿ ಇರುವ ಸಾಮ್ಯತೆಗಳಿವು...
Image
ಮದ್ದುಗುಂಡುಗಳ ತಯಾರಿಕೆಯಲ್ಲಿ ಭಾರತದ ಸ್ವಾವಲಂಬನೆ

ಸಿಡಿಐಟಿ ಎಂದರೆ ಕನ್ಸೂಮರ್ ಡುರಬಲ್ ಮತ್ತು ಐಟಿ ಉತ್ಪನ್ನಗಳು. ಸ್ಮಾರ್ಟ್​ಫೋನ್, ಮ್ಯೂಸಿಕ್, ಗೇಮ್, ಎಲೆಕ್ಟ್ರಾನಿಕ್ ವಸ್ತುಗಳು ಇತ್ಯಾದಿ ಉತ್ಪನ್ನಗಳು ಈ ವಿಭಾಗಕ್ಕೆ ಸೇರುತ್ತವೆ. ಕ್ಯೂಎಸ್​ಆರ್ ಎಂದರೆ ಕ್ವಿಕ್ ಸರ್ವಿಸ್ ರೆಸ್ಟೋರೆಂಟ್​ಗಳು. ಫಾಸ್ಟ್ ಫೂಡ್ ಹೋಟೆಲ್ಸ್, ಸ್ಟಾರ್ ಬಕ್ಸ್, ಮೆಕ್​ಡೊನಾಲ್ಡ್ಸ್, ಕೆಎಫ್​ಸಿ, ಪೀಜಾ ಇತ್ಯಾದಿ ಮಳಿಗೆಗಳು ಕ್ಯುಎಸ್​ಆರ್​ಗೆ ಸೇರುತ್ತವೆ.

ಪಶ್ಚಿಮ ಭಾರತದಲ್ಲಿ ಹೆಚ್ಚು ಮಾರಾಟ ಹೆಚ್ಚಳ

ರೀಟೇಲ್ ಮಾರಾಟ ವಿಚಾರದಲ್ಲಿ ವಿವಿಧ ಪ್ರದೇಶಗಳನ್ನು ಹೋಲಿಕೆ ಮಾಡಿದರೆ, ಪಶ್ಚಿಮ ಭಾರತದ ಪ್ರದೇಶಗಳು ಮುಂದಿವೆ. ಇಲ್ಲಿ ರೀಟೇಲ್ ಮಾರಾಟ ಶೇ. 7ರಷ್ಟು ಹೆಚ್ಚಳ ಆಗಿದೆ. ಉತ್ತರ ಭಾರತ ಮತ್ತು ದಕ್ಷಿಣ ಭಾರತದಲ್ಲಿ ಶೇ. 5ರಷ್ಟು ರೀಟೇಲ್ ಸೇಲ್ಸ್ ಹೆಚ್ಚಿದೆ. ಪೂರ್ವ ಭಾರತದಲ್ಲಿ ಶೇ. 4 ಹೆಚ್ಚಳ ಆಗಿದೆ.

ಇದನ್ನೂ ಓದಿ: ಭಾರತದಲ್ಲಿ ಐಷಾರಾಮಿ ಸರಕುಗಳಿಗೆ ಹೆಚ್ಚಿದ ಬೇಡಿಕೆ; ಕಾರಣವೇನು? ಬೆಚ್ಚಿಬೀಳಿಸುತ್ತದೆ ಈ ವರದಿ

ರೀಟೇಲ್ ಮಾರಾಟಗಾರರು ಗ್ರಾಹಕರ ಆದ್ಯತೆಗಳು ಹೇಗಿವೆ ಎಂಬುದನ್ನು ಗಮನಿಸಿ, ಅದಕ್ಕೆ ತಕ್ಕಂತೆ ತಮ್ಮ ಬಿಸಿನೆಸ್ ರೂಪಿಸಬೇಕು. ಸರಿಯಾದ ಬಿಸಿನೆಸ್ ಮಾಡಲ್ ಅಳವಡಿಸಿಕೊಂಡರೆ ಸ್ಪರ್ಧಾತ್ಮಕವಾಗಿ ನಿಲ್ಲಬಹುದು ಎಂದು ಚಿಲ್ಲರೆ ಮಾರಾಟಗಾರರ ಸಂಸ್ಥೆಯ ಅಧ್ಯಕ್ಷರು ಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ