2025-26ರಲ್ಲಿ ಪ್ರಯಾಣಿಕ ವಾಹನಗಳ ಮಾರಾಟ ಶೇ. 7ರಷ್ಟು ಹೆಚ್ಚಳ; ದ್ವಿಚಕ್ರ ವಾಹನಗಳು ಶೇ. 6-9 ಹೆಚ್ಚು ಸೇಲ್: ಇಕ್ರ ಅಂದಾಜು
Automobile industry in India: ಭಾರತದಲ್ಲಿ 2025-26ರಲ್ಲಿ ಪ್ಯಾಸೆಂಜರ್ ವಾಹನಗಳ ಮಾರಾಟ ಶೇ. 4-7ರಷ್ಟು ಹೆಚ್ಚಬಹುದು ಎಂದು ರೇಟಿಂಗ್ ಏಜೆನ್ಸಿ ಐಸಿಆರ್ಎ ಅಭಿಪ್ರಾಯಪಟ್ಟಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಈ ವಾಹನಗಳ ಮಾರಾಟಕ್ಕೆ ಹೆಚ್ಚಿನ ಉತ್ಸಾಹ ಕಂಡು ಬಂದಿಲ್ಲ. ಆದರೆ, ಮುಂದಿನ ವರ್ಷ ಮಾರಾಟ ಚುರುಕು ಪಡೆಯಬಹುದು ಎಂಬುದು ಇಕ್ರಾ ಅಂದಾಜು.

ನವದೆಹಲಿ, ಫೆಬ್ರುವರಿ 27: ಮುಂಬರುವ ಹಣಕಾಸು ವರ್ಷದಲ್ಲಿ (2025-26) ಭಾರತದಲ್ಲಿ ಪ್ಯಾಸೆಂಜರ್ ವಾಹನಗಳ ಮಾರಾಟ ಶೇ. 4-7ರಷ್ಟು ಹೆಚ್ಚಾಗಬಹುದು. ದ್ವಿಚಕ್ರ ವಾಹನಗಳ ಮಾರಾಟ (passenger vehicle sales) ಶೇ. 6-9ರಷ್ಟು ಹೆಚ್ಚಾಗಬಹುದು ಎಂದು ಐಸಿಆರ್ಎ (ICRA) ರೇಟಿಂಗ್ ಸಂಸ್ಥೆ ಅಂದಾಜು ಮಾಡಿದೆ.
2023-24ರ ಹಣಕಾಸು ವರ್ಷದಲ್ಲಿ ಪ್ರಯಾಣಿಕ ವಾಹನ ಉದ್ಯಮ ಗರಿಷ್ಠ ಬ್ಯುಸಿನೆಸ್ ಕಂಡಿತ್ತು. ಆ ವರ್ಷ 42 ಲಕ್ಷ ಪಿವಿಗಳ ಮಾರಾಟವಾಗಿದ್ದುವು. ಅದು ಹೊಸ ದಾಖಲೆಯಾಗಿತ್ತು. ಆದರೆ, ಪ್ರಸಕ್ತ ಹಣಕಾಸು ವರ್ಷದಲ್ಲಿ (2024-25) ಪ್ಯಾಸೆಂಜರ್ ವಾಹನಗಳ ಮಾರಾಟದಲ್ಲಿ ಇಲ್ಲಿಯವರೆಗೆ ಶೇ. 2ರಷ್ಟು ಮಾತ್ರವೇ ಹೆಚ್ಚಳವಾಗಿದೆ. ಆದರೆ, ಮುಂದಿನ ಹಣಕಾಸು ವರ್ಷದಲ್ಲಿ ವಾಹನಗಳ ಸೇಲ್ಸ್ ಪರವಾಗಿಲ್ಲವೆನ್ನುವ ಮಟ್ಟದಲ್ಲಿ ಹೆಚ್ಚಬಹುದು ಎಂದು ಐಸಿಆರ್ಎ ಹೇಳಿದೆ.
ಇದನ್ನೂ ಓದಿ: ಭಾರತದಲ್ಲಿ ಜನವರಿಯಲ್ಲಿ ಶೇ. 5ರಷ್ಟು ಹೆಚ್ಚಿದ ಚಿಲ್ಲರೆ ಮಾರಾಟ; ಆಹಾರ, ದಿನಸಿ ವಸ್ತುಗಳ ಸೇಲ್ಸ್ ಗರಿಷ್ಠ ಹೆಚ್ಚಳ
ಈ ವರ್ಷ ಪಿವಿ ಮಾರಾಟ ಯಾಕೆ ಕಡಿಮೆ?
ವಾಹನ ಉದ್ಯಮಕ್ಕೆ ಬೇಡಿಕೆ ಹೆಚ್ಚಿಸುವ ಅಂಶಗಳು ಈ ವರ್ಷ ದುರ್ಬಲವಾಗಿವೆ. ಜನರ ಕೈಯಲ್ಲಿ ಹಣ ಇಲ್ಲದಿರುವುದು, ಹೊಸ ಮಾಡಲ್ಗಳ ಬಿಡುಗಡೆ ಕಡಿಮೆ ಇರುವುದು, ಕಾರುಗಳ ಬೆಲೆ ಹೆಚ್ಚಿರುವುದು ಇವು ವಾಹನಗಳ ಮಾರಾಟ ಮಂದಗೊಳ್ಳುವಂತೆ ಮಾಡಿವೆ ಎಂಬುದು ಈ ಏಜೆನ್ಸಿಯ ಅನಿಸಿಕೆ.
ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಹೆಚ್ಚಳ
ಪ್ಯಾಸೆಂಜರ್ ವಾಹನಗಳಿಗೆ ಹೋಲಿಸಿದರೆ ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಹೆಚ್ಚು ಏರಿಕೆ ಆಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಇಲ್ಲಿಯವವರೆಗೆ ಶೇ. 10ರಷ್ಟು ಹೆಚ್ಚಾಗಿದೆ. ಒಟ್ಟಾರೆ ಈ ವರ್ಷ ಶೇ. 11-14ರಷ್ಟು ಹೆಚ್ಚು ಬಿಸಿನೆಸ್ ಆಗಬಹುದು. ಗ್ರಾಮೀಣ ಭಾಗದಲ್ಲಿ ಈ ವಾಹನಗಳಿಗೆ ಬೇಡಿಕೆ ಹೆಚ್ಚಿದೆ.
ಇದನ್ನೂ ಓದಿ: ಭಾರತದಲ್ಲಿ ಐಷಾರಾಮಿ ಸರಕುಗಳಿಗೆ ಹೆಚ್ಚಿದ ಬೇಡಿಕೆ; ಕಾರಣವೇನು? ಬೆಚ್ಚಿಬೀಳಿಸುತ್ತದೆ ಈ ವರದಿ
ಬಜೆಟ್ ಕ್ರಮಗಳಿಂದ ಪುಷ್ಟಿ ಸಾಧ್ಯತೆ
ಈ ಬಾರಿಯ ಬಜೆಟ್ನಲ್ಲಿ ಆದಾಯ ತೆರಿಗೆಯಲ್ಲಿ ರಿಯಾಯಿತಿಗಳನ್ನು ನೀಡಿರುವ ಕ್ರಮದಿಂದ ಜನರ ಜೇಬಿನಲ್ಲಿ ಹೆಚ್ಚು ಹಣ ಉಳಿಯುವಂತೆ ಮಾಡಬಹುದು. ಇದರಿಂದ ದ್ವಿಚಕ್ರ ವಾಹನಗಳ ಬಿಸಿನೆಸ್ಗೆ ಪುಷ್ಟಿ ನೀಡಬಹುದು. 2025-26ರಲ್ಲಿ ಒಟ್ಟಾರೆ ವಾಹನ ಮಾರಾಟ ತುಸು ಮಂದಗೊಂಡರೂ ದ್ವಿಚಕ್ರ ವಾಹನಗಳು ಶೇ. 6-9ರಷ್ಟು ಹೆಚ್ಚಳ ಆಗಬಹುದು ಎಂದು ಐಸಿಆರ್ಎ ನಿರೀಕ್ಷಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 7:17 pm, Thu, 27 February 25