
ಮೊದಲು ಅನಾರೋಗ್ಯ ಮತ್ತು ನಂತರ ಅದನ್ನು ಸರಿಪಡಿಸಲೆಂದು ಪ್ರತಿ ತಿಂಗಳು ದುಬಾರಿ ಅಲೋಪತಿ ಔಷಧಿಗಳು ನಮ್ಮ ಇಡೀ ಬಜೆಟ್ ಅನ್ನು ಹಾಳುಮಾಡುತ್ತವೆ. ಈ ವೆಚ್ಚದ ಹೊರೆಯನ್ನು ಹೇಗೆ ಕಡಿಮೆ ಮಾಡುವುದು? ಅನಾರೋಗ್ಯ ಉದ್ಭವಿಸಿದರೆ ಅದಕ್ಕೆ ಚಿಕಿತ್ಸೆಯಂತೂ ಬೇಕೇ ಬೇಕು. ದುಬಾರಿ ಔಷಧಗಳ ದಾರಿಗೆ ಹೋಗದೆ ಆಯುರ್ವೇದ ಪರ್ಯಾಯಗಳನ್ನು (Ayurvedic medicines) ಜನರು ಈಗ ಹುಡುಕತೊಡಗಿದ್ದಾರೆ. ಇವರ ಹುಡುಕಾಟಕ್ಕೆ ಸುಲಭ ಆಯ್ಕೆ ಪತಂಜಲಿ. ಸರಳವಾಗಿ ಹೇಳುವುದಾದರೆ, ಪತಂಜಲಿಯ (Patanjali) ಕಡಿಮೆ ಬೆಲೆಯ ಆಯುರ್ವೇದ ಔಷಧಗಳು ಜನರ ಬಜೆಟ್ ಮತ್ತು ಆರೋಗ್ಯ ಎರಡನ್ನೂ ‘ಫಿಟ್ ಅಂಡ್ ಫೈನ್’ ಆಗಿಡಲು ಸಹಾಯ ಮಾಡುತ್ತಿವೆ.
ಪತಂಜಲಿಯು ಆಯುರ್ವೇದ ಆಧಾರಿತ ಔಷಧಿಗಳು ಮತ್ತು ಆರೋಗ್ಯ ಉತ್ಪನ್ನಗಳನ್ನು ತಯಾರಿಸುತ್ತದೆ. ಇವು ಅಲೋಪತಿ ಔಷಧಿಗಳಿಗಿಂತ ಅಗ್ಗವಾಗಿದ್ದು, ರೋಗಗಳನ್ನು ಗುಣಪಡಿಸುವಲ್ಲಿಯೂ ಪರಿಣಾಮಕಾರಿಯಾಗಿದೆ. ಆಯುರ್ವೇದ ಔಷಧದ ಪ್ರಯೋಜನವೆಂದರೆ ಅದು ರೋಗಲಕ್ಷಣಗಳನ್ನು ನಿಗ್ರಹಿಸುವುದಷ್ಟೇ ಅಲ್ಲ, ದೇಹದಲ್ಲಿ ದೀರ್ಘಕಾಲೀನ ಸಮತೋಲನವನ್ನು ಕಾಪಾಡಿಕೊಳ್ಳಲು ಕೆಲಸ ಮಾಡುತ್ತದೆ.
ಇದನ್ನೂ ಓದಿ: ಷೇರುಪೆಟೆಯಲ್ಲಿ ಪತಂಜಲಿ ಫುಡ್ಸ್; ಹೂಡಿಕೆದಾರರಿಗೆ 3,900 ಕೋಟಿ ರೂ ಗಳಿಕೆ
ನೀವು ಆಯುರ್ವೇದ ಔಷಧಿ ಖರೀದಿಸುವ ಮೊದಲು ವೈದ್ಯರನ್ನು ಸಂಪರ್ಕಿಸಲು ಬಯಸಿದರೆ, ಪತಂಜಲಿ ಸ್ಟೋರ್ಗಳಲ್ಲೇ ವೈದ್ಯರು ಲಭ್ಯರಿರುತ್ತಾರೆ. ಅವರಿಗೆ ನೀವು ನಿಮ್ಮ ರೋಗದ ಬಗ್ಗೆ ಹೇಳಬಹುದು. ವೈದ್ಯರ ಸಲಹೆಯ ಮೇರೆಗೆ ಆಯುರ್ವೇದ ಔಷಧಿ ಸೇವನೆ ಪ್ರಾರಂಭಿಸಬಹುದು.
ಪತಂಜಲಿ ಆಯುರ್ವೇದ ಔಷಧಿಯನ್ನು ಆರ್ಡರ್ ಮಾಡಲು, ನೀವು ಮೊದಲು ಪತಂಜಲಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು (www.patanjaliayurved.net/). ನಂತರ, ಮೇಲ್ಭಾಗದಲ್ಲಿರುವ ಮೆಡಿಸಿನ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
Photo: patanjaliayurved.net
ನಂತರ, ನೀವು ವಿವಿಧ ಕಾಯಿಲೆಗಳಿಗೆ ವಿವಿಧ ಔಷಧಿಗಳು ನಮೂದಾಗಿರುವುದನ್ನು ನೋಡುತ್ತೀರಿ. ನಿಮಗೆ ಬೇಕಾದ ಔಷಧಿಯ ಹೆಸರಿನ ಮೇಲೆ ಕ್ಲಿಕ್ ಮಾಡಿ. ಎಷ್ಟು ಬೇಕೆಂದು ಪ್ರಮಾಣವನ್ನು ಆಯ್ಕೆ ಮಾಡಿ, ನಿಮ್ಮ ವಿಳಾಸವನ್ನು ನಮೂದಿಸಿ ಮತ್ತು ಪಾವತಿ ಮಾಡಿ. ಈ ರೀತಿಯಾಗಿ, ನೀವು ನಿಮ್ಮ ಮನೆಯಿಂದಲೇ ಸುಲಭವಾಗಿ ಆರ್ಡರ್ ಮಾಡಬಹುದು. ಆ ಔಷಧಗಳನ್ನು ನಿಮ್ಮ ವಿಳಾಸಕ್ಕೆ ತಲುಪಿಸಲಾಗುತ್ತದೆ.
Photo: patanjaliayurved.net
ಇದನ್ನೂ ಓದಿ: ಡೇಂಜರ್ ಮಾಲಿನ್ಯ, ಎಲ್ಲೆಲ್ಲೂ ಶೀತ, ಉಸಿರಾಟದ ತೊಂದರೆ; ಇಗೋ ಇಲ್ಲಿದೆ ಆಯುರ್ವೇದ ಪರಿಹಾರ
ಜನರ ಬಜೆಟ್ ಇತಿಮಿತಿಯನ್ನೂ ಸಹ ಎಚ್ಚರಿಕೆಯಿಂದ ಪರಿಗಣಿಸಲಾಗಿದೆ. ಅದಕ್ಕಾಗಿಯೇ ಔಷಧಗಳು ಕಡಿಮೆ ಬೆಲೆ ಮಾತ್ರವಲ್ಲ, ಹೆಚ್ಚುವರಿ ರಿಯಾಯಿತಿ ಕೂಡ ಹೊಂದಿವೆ. ಉದಾಹರಣೆಗೆ, ದಿವ್ಯ ಮಧುನಾಶಿನಿ ವಟಿ ಎಕ್ಸ್‌ಟ್ರಾ ಪವರ್ (Divya Madhunashini Vati Extra Power), ದಿವ್ಯ ಇಮ್ಯುನೊಗ್ರಿಟ್ (Divya Immunogrit) ಮತ್ತು ದಿವ್ಯ ಮೆಮೊರಿಗ್ರಿಟ್ (Divya Memorygrit) ಸೇರಿದಂತೆ ಇತರ ಉತ್ಪನ್ನಗಳ ಮೇಲೆ 4.13% ವರೆಗೆ ರಿಯಾಯಿತಿಗಳು ಲಭ್ಯವಿದೆ. ಅಂದರೆ ಹೆಚ್ಚುವರಿ ಉಳಿತಾಯಕ್ಕೆ ಉತ್ತಮ ಅವಕಾಶವಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ