UPI LITE- ಪೇಟಿಎಂನ ಯುಪಿಐ ಲೈಟ್- 200 ರೂ ಒಳಗಿನ ಸಣ್ಣ ಪಾವತಿಗೆ ಬೇಕಿಲ್ಲ ಪಿನ್; ಸುಲಭ, ಕ್ಷಿಪ್ರ ಸೇವೆಯ ಹೊಸ ಫೀಚರ್

|

Updated on: Mar 10, 2023 | 3:31 PM

New Feature In Paytm: ಪೇಟಿಎಂ ಇದೀಗ UPI LITE ಫೀಚರ್ ಅನ್ನು ಬಿಡುಗಡೆ ಮಾಡಿದೆ. 200 ರೂ ಒಳಗಿನ ಪಾವತಿಗಳನ್ನು ಒಮ್ಮೆಗೇ ಹಲವು ಬಾರಿ ಮಾಡಲು ಸಾಧ್ಯವಾಗುತ್ತದೆ. ಬಹಳ ತ್ವರಿತವಾಗಿ ಪೇಮೆಂಟ್ ಮಾಡಬಹುದು.

UPI LITE- ಪೇಟಿಎಂನ ಯುಪಿಐ ಲೈಟ್- 200 ರೂ ಒಳಗಿನ ಸಣ್ಣ ಪಾವತಿಗೆ ಬೇಕಿಲ್ಲ ಪಿನ್; ಸುಲಭ, ಕ್ಷಿಪ್ರ ಸೇವೆಯ ಹೊಸ ಫೀಚರ್
ಪೇಟಿಎಂ
Follow us on

ಯುಪಿಐ ವ್ಯವಸ್ಥೆ ಬಂದ ಬಳಿಕ ಭಾರತದಲ್ಲಿ ಪೇಮೆಂಟ್ ಸಿಸ್ಟಮ್​ನಲ್ಲಿ (UPI Payment System) ದೊಡ್ಡ ಕ್ರಾಂತಿಯೇ ಆಗಿಹೋಗಿದೆ. ನಗದು, ಚಿಲ್ಲರೆ ಕೊಡುವ ತಲೆನೋವು ಕಡಿಮೆ ಆಗಿದೆ. ಸ್ಮಾರ್ಟ್​ಫೋನ್ ಹೊಂದಿರುವ ಬಹುತೇಕ ಮಂದಿ ಯುಪಿಐ ಪೇಮೆಂಟ್ ವ್ಯವಸ್ಥೆಗೆ ಒಳಪಟ್ಟಿದ್ದಾರೆ. ಫೋನ್ ಪೇ, ಪೇಟಿಎಂ, ಗೂಗಲ್ ಪೇ ಇತ್ಯಾದಿ ವ್ಯಾಲಟ್ ಆ್ಯಪ್​ಗಳಿಂದ ಸ್ಕ್ಯಾನ್ ಮಾಡಿ, ಹಣ ನಮೂದಿಸಿ, ಬ್ಯಾಂಕ್ ಕೋಡ್ ಹಾಕಿ, ಪಾವತಿ ಮಾಡಿ. ಇದು ಅಷ್ಟು ಸರಳವಾಗಿದೆ. ವ್ಯಾಲಟ್​ಗೆ ಹಣ ತುಂಬಿಸಿದರೆ ಇದು ಇನ್ನೂ ಸುಲಭಪೇಟಿಎಂ ಇದೀಗ ಯುಪಿಐ ಲೈಟ್ ಫೀಚರ್ (UPI LITE) ಅನ್ನು ಬಿಡುಗಡೆ ಮಾಡಿದೆ. 200 ರೂ ಒಳಗಿನ ಪಾವತಿಗಳನ್ನು ಒಮ್ಮೆಗೇ ಹಲವು ಬಾರಿ ಮಾಡಲು ಸಾಧ್ಯವಾಗುತ್ತದೆ. ಈ ಯುಪಿಐ ಲೈಟ್​ಗೆ ದಿನಕ್ಕೆ ಎರಡು ಬಾರಿ 2 ಸಾವಿರ ರೂ ತುಂಬಿಸಬಹುದು. ದಿನಕ್ಕೆ ಒಟ್ಟು 4 ಸಾವಿರ ರೂಗಳಷ್ಟು ಹಣವನ್ನು ಯುಪಿಐ ಲೈಟ್ ಖಾತೆಗೆ ಹಾಕಬಹುದು. ಅಂದರೆ ಯುಪಿಐ ಲೈಟ್​ನಲ್ಲಿ ದಿನದ ಪಾವತಿ ಮಿತಿ 4,000 ಇರುತ್ತದೆ. ಈ ಮಿತಿಯವರೆಗೂ ನೀವು 200 ರೂ ಒಳಗಿನ ಹಲವು ಹಣ ಪಾವತಿಗಳನ್ನು ಲೈಟ್ ಮೂಲಕ ಮಾಡಬಹುದು.

ಪೇಟಿಎಂನ ಯುಪಿಐ ಲೈಟ್​ನಿಂದ ಹಣ ಪಾವತಿಸುವಾಗ ಪಿನ್ ನಂಬರ್ ಕೇಳಲಾಗುವುದಿಲ್ಲ. ಹೀಗಾಗಿ, ತ್ವರಿತವಾಗಿ ಪೇಮೆಂಟ್ ಮಾಡಬಹುದು. ಪೇಮೆಂಟ್ ಮೊತ್ತ 200 ರೂ ಮೀರಬಾರದು.

ಯುಪಿಐ ಲೈಟ್ ವ್ಯವಸ್ಥೆಯನ್ನು ಸದ್ಯಕ್ಕೆ ಪೇಟಿಎಂನಲ್ಲಿ ಅಳವಡಿಸಲಾಗಿದೆ. ಫೋನ್ ಪೇ ಹಾಗೂ ಇತರ ಆ್ಯಪ್​ಗಳಲ್ಲೂ ಶೀಘ್ರದಲ್ಲೇ ಈ ಫೀಚರ್ ಲಭ್ಯ ಇರಲಿದೆ. ಸದ್ಯ ಕೆಲ ಬ್ಯಾಂಕುಗಳಷ್ಟೇ ಯುಪಿಐ ಲೈಟ್​ಗೆ ಬೆಂಬಲ ಕೊಡುತ್ತಿವೆ. ಮುಂದೆ ಯುಪಿಐ ವ್ಯವಸ್ಥೆ ಇರುವ ಎಲ್ಲಾ ಬ್ಯಾಂಕುಗಳೂ ಯುಪಿಐ ಲೈಟ್​ಗೂ ತೆರೆದುಕೊಳ್ಳಬಹುದು.

ಇದನ್ನೂ ಓದಿBSNL Recharge Plans: 269 ರೂ, 769 ರೂ; ಬಿಎಸ್​ಎನ್​ಎಲ್​ನಿಂದ 2 ಹೊಸ ರೀಚಾರ್ಜ್ ಪ್ಲಾನ್​ಗಳು

ಯುಪಿಐ ಲೈಟ್ ಹೆಚ್ಚೂಕಡಿಮೆ ಪೇಮೆಂಟ್ ಆ್ಯಪ್​ಗಳ ವ್ಯಾಲಟ್ ಅಕೌಂಟ್ ರೀತಿ ಕಾರ್ಯನಿರ್ವಹಿಸುತ್ತವೆ. ಯುಪಿಐ ವ್ಯಾಲಟ್​ಗಳಲ್ಲಿ ನೀವು ಎಷ್ಟು ಬೇಕಾದರೂ ಹಣ ಹಾಕಬಹುದು. ಹೆಚ್ಚು ಮೊತ್ತದ ಹಣದ ಪಾವತಿ ಮಾಡಬಹುದು. ಆದರೆ, ಯುಪಿಐ ಲೈಟ್ ವ್ಯಾಲಟ್​ಗೆ ನೀವು ಒಮ್ಮೆಗೆ ಗರಿಷ್ಠ 2 ಸಾವಿರ ರೂ ಮಾತ್ರ ತುಂಬಿಸಬಹುದು. ದಿನದಲ್ಲಿ ಒಟ್ಟು 4 ಸಾವಿರ ರೂ ಮಾತ್ರ ಈ ವ್ಯಾಲಟ್​ಗೆ ಭರ್ತಿ ಮಾಡಬಹುದು. 200 ರೂಗಿಂತ ಅಧಿಕ ಮೊತ್ತದ ಪೇಮೆಂಟ್ ಮಾಡಲಾಗುವುದಿಲ್ಲ.

ನೀವು ಪೇಟಿಎಂ ಆ್ಯಪ್ ತೆರೆದರೆ ಅಲ್ಲಿ ಮಧ್ಯದಲ್ಲಿ ಯುಪಿಐ ಲೈಟ್ ಫೀಚರ್ ಕಾಣಬಹುದು. ನೀವು ಆ್ಯಪ್​ನ ಇತ್ತೀಚಿನ ಆವೃತ್ತಿಗೆ ಅಪ್​ಡೇಟ್ ಮಾಡಿದರೆ ಯುಪಿಐ ಲೈಟ್ ಆಕ್ಟಿವೇಶನ್​ಗೆ ಕೇಳಲಾಗುತ್ತದೆ. ಸುಲಭವಾಗಿ ಆ್ಯಕ್ಟಿವೇಟ್ ಮಾಡಬಹುದು.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:08 pm, Tue, 28 February 23