BSNL Recharge Plans: 269 ರೂ, 769 ರೂ; ಬಿಎಸ್ಎನ್ಎಲ್ನಿಂದ 2 ಹೊಸ ರೀಚಾರ್ಜ್ ಪ್ಲಾನ್ಗಳು
BSNL STV Rs 269, Rs 769 Plans: ಬಿಎಸ್ಸೆನ್ನೆಲ್ ತಾನು ಇತ್ತೀಚೆಗೆ ಪರಿಚಯಿಸಿದ್ದ 71 ರೂ, 104 ರೂ, 135 ರೂ ಮತ್ತು 395 ರೂಗಳ ರೀಚಾರ್ಜ್ ಪ್ಯಾಕುಗಳನ್ನು ಹಿಂಪಡೆದುಕೊಂಡಿದೆ. ರೀಚಾರ್ಜ್ ಲಿಸ್ಟ್ನಲ್ಲಿ 269 ಮತ್ತು 769 ರೂಗಳ ಎರಡು ಹೊಸ ಪ್ಲಾನ್ಗಳನ್ನು ಸೇರಿಸಲಾಗಿದೆ.
ಬೆಂಗಳೂರು: ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿ (BSNL) ಸಂಸ್ಥೆ ಎರಡು ಹೊಸ ರೀಚಾರ್ಜ್ ಪ್ಲಾನ್ಗಳನ್ನು ಪರಿಚಯಿಸಿದೆ. ಹಿಂದೆ ಇದ್ದ ನಾಲ್ಕು ಹೊಸ ರೀಚಾರ್ಜ್ ಪ್ಯಾಕ್ಗಳನ್ನು ನಿಲ್ಲಿಸಿ, ಈಗ 269 ಮತ್ತು 769 ರೂಗಳ ಎರಡು ಹೊಸ ರೀಚಾರ್ಜ್ ಪ್ಯಾಕುಗಳನ್ನು (BSNL New Recharge Packs) ಗ್ರಾಹಕರಿಗೆ ಆಫರ್ ಮಾಡಿದೆ. ಜಿಯೋ, ಏರ್ಟೆಲ್, ವೊಡಾಫೋನ್ ಕಂಪನಿಗಳ ಪೈಪೋಟಿಯಲ್ಲಿ ಹಿಂದುಳಿದಿರುವ ಬಿಎಸ್ಎನ್ಎಲ್ ಇದೀಗ ಮೈಕೊಡವಿ ರೇಸ್ಗೆ ಕುದುರಿಕೊಳ್ಳುತ್ತಿರುವಂತೆ ತೋರುತ್ತಿದೆ. ಇನ್ನೂ 3ಜಿಯಲ್ಲಿರುವ ಬಿಎಸ್ಎನ್ಎಲ್ ಈ ವರ್ಷ ದೇಶಾದ್ಯಂತ 4ಜಿ ನೆಟ್ವರ್ಕ್ ಅಳವಡಿಸಲು ಮುಂದಾಗಿದೆ.
ಇದೇ ವೇಳೆ ಬಿಎಸ್ಸೆನ್ನೆಲ್ ತಾನು ಇತ್ತೀಚೆಗೆ ಪರಿಚಯಿಸಿದ್ದ 71 ರೂ, 104 ರೂ, 135 ರೂ ಮತ್ತು 395 ರೂಗಳ ರೀಚಾರ್ಜ್ ಪ್ಯಾಕುಗಳನ್ನು ಹಿಂಪಡೆದುಕೊಂಡಿದೆ ಎಂದು ವರದಿಗಳು ಹೇಳುತ್ತಿವೆ. ಬಿಎಸ್ಸೆನ್ನೆಲ್ನಿಂದ ಅಧಿಕೃತ ಮಾಹಿತಿ ಪ್ರಕಟವಾಗಿಲ್ಲವಾದರೂ ಅದರ ರೀಚಾರ್ಜ್ ಲಿಸ್ಟ್ನಲ್ಲಿ ಈ ನಾಲ್ಕು ಪ್ಯಾಕುಗಳು ಇಲ್ಲ. ಅದಕ್ಕೆ ಬದಲಾಗಿ 269 ಮತ್ತು 769 ರೂಗಳ ಎರಡು ಹೊಸ ರೀಚಾರ್ಜ್ ಪ್ಲಾನ್ಗಳನ್ನು ಪಟ್ಟಿಗೆ ಸೇರಿಸಲಾಗಿದೆ.
269 ರೂ ಪ್ಲಾನ್ ವಿಶೇಷತೆ
ಹಬ್ಬದ ಧಮಾಕ ಆಫರ್ ಆಗಿ ಬಿಎಸ್ಸೆನ್ನೆಲ್ ಎಸ್ಟಿವಿ 269 ರೂ ಮತ್ತು ಎಸ್ಟಿವಿ 769 ರೂ ರೀಚಾರ್ಜ್ ಪ್ಲಾನ್ಗಳನ್ನು ತಂದಿದೆ. 269 ರೂ ಪ್ಲಾನ್ನಲ್ಲಿ ದಿನಕ್ಕೆ 2ಜಿಬಿ ಡಾಟಾ, ದಿನಕ್ಕೆ 100 ಮೆಸೇಜ್ಗಳನ್ನು ಬಳಸಬಹುದು. ಇದರ ಜೊತೆಗೆ ಬಿಎಸ್ಎನ್ಎಲ್ ಟ್ಯೂನ್, ಜಿಂಗ್ ಆ್ಯಪ್, ಎರೋಸ್ ನೌ ಆ್ಯಪ್ ಇತ್ಯಾದಿ ಸೌಲಭ್ಯಗಳೂ ಒಳಗೊಂಡಿವೆ. ಇದರ ವ್ಯಾಲಿಡಿಟಿ 30 ದಿನಗಳಿವೆ.
ಇದನ್ನೂ ಓದಿ: Apple Jobs: ಆ್ಯಪಲ್ ಕರಾಮತ್ತು; ಕರ್ನಾಟಕ ಸೇರಿ ವಿವಿಧೆಡೆ 19 ತಿಂಗಳಲ್ಲಿ 1 ಲಕ್ಷ ನೇರ ಉದ್ಯೋಗ
769 ರೂ ಪ್ಲಾನ್:
ಬಿಎಸ್ಎನ್ಎಲ್ ಎಸ್ಟಿವಿ 769 ರೂ ರೀಚಾರ್ಜ್ ಪ್ಲಾನ್ನ ವ್ಯಾಲಿಡಿಟಿ 90 ದಿನಗಳಾಗಿದ್ದು, ಇದರಲ್ಲಿಯೂ ದಿನಕ್ಕೆ 2ಜಿಬಿ, 100 ಮೆಸೇಜ್ಗಳ ಸೌಲಭ್ಯ ಇರುತ್ತದೆ. ಬಿಎಸ್ಎನ್ಎಲ್ ಟ್ಯೂನ್, ಲೋಕ್ಧನ್ ಅಪ್ಲಿಕೇಶನ್, ಜಿಂಗ್ ಆ್ಯಪ್, ಎರೋಸ್ ನೌ ಮೊದಲಾದವನ್ನೂ ಬಳಸಬಹುದು.
ನಾಲ್ಕು ಪ್ಲಾನ್ ಕೈಬಿಟ್ಟಿದ್ದು ಯಾಕೆ?
71 ರೂ 104 ರೂ, 135 ರೂ ಮತ್ತು 395 ರೂಗಳ ರೀಚಾರ್ಜ್ ಪ್ಲಾನ್ಗಳನ್ನು ಬಿಎಸ್ಎನ್ಎಲ್ ಕೈಬಿಟ್ಟಿದ್ದಕ್ಕೆ ಕಾರಣ ಗೊತ್ತಾಗಿಲ್ಲ. ಇವು ಅಷ್ಟು ಜನಪ್ರಿಯತೆ ಮತ್ತು ಬೇಡಿಕೆ ಹೊಂದಿರಲಿಲ್ಲ ಎನ್ನಲಾಗಿದೆ. 4ಜಿ ನೆಟ್ವರ್ಕ್ ಅಳವಡಿಕೆ ಪೂರ್ಣವಾದ ಬಳಿಕ ಬಿಎಸ್ಎನ್ಎಲ್ ಇನ್ನಷ್ಟು ಆಕರ್ಷಕ ರೀಚಾರ್ಜ್ ಪ್ಲಾನ್ಗಳನ್ನು ಹೊರತರುವ ನಿರೀಕ್ಷೆ ಇದೆ. ಮುಂದಿನ ವರ್ಷ ಬಿಎಸ್ಸೆನ್ನೆಲ್ 5ಜಿ ನೆಟ್ವರ್ಕ್ ಅಳವಡಿಕೆ ಮಾಡುತ್ತಿದೆ. ಅಷ್ಟರಲ್ಲಿ ತನ್ನ ಹಿಂದಿನ ಮಾರುಕಟ್ಟೆ ಸ್ವಾಮ್ಯವನ್ನು ಮರಳಿ ಕಂಡುಕೊಳ್ಳುವುದು ಬಿಎಸ್ಸೆನ್ನೆಲ್ನ ಗುರಿಯಾಗಿದೆ.