Aadhaar Enabled Payment System: ಇನ್ನು ಆಧಾರ್ ಸಂಖ್ಯೆ ಬಳಸಿಕೊಂಡು ಹಣ ಕಳುಹಿಸಬಹುದು; ಹೇಗೆಂಬುದು ಇಲ್ಲಿದೆ ನೋಡಿ

|

Updated on: Jan 25, 2023 | 12:37 PM

ಕೇವಲ ಆಧಾರ್ ಸಂಖ್ಯೆ ಬಳಸಿಕೊಂಡು ಹಣ ಕಳುಹಿಸಲು, ಬ್ಯಾಂಕಿಂಗ್ ಸೇವೆ ಪಡೆಯಲು ಸಾಧ್ಯವಿದೆ. ಆಧಾರ್ ಸಂಖ್ಯೆ ಬಳಸಿಕೊಂಡು ಬ್ಯಾಂಕಿಂಗ್ ಸೇವೆ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ

Aadhaar Enabled Payment System: ಇನ್ನು ಆಧಾರ್ ಸಂಖ್ಯೆ ಬಳಸಿಕೊಂಡು ಹಣ ಕಳುಹಿಸಬಹುದು; ಹೇಗೆಂಬುದು ಇಲ್ಲಿದೆ ನೋಡಿ
ಆಧಾರ್ (ಸಾಂದರ್ಭಿಕ ಚಿತ್ರ)
Follow us on

ಒಂದು ಬ್ಯಾಂಕ್ ಖಾತೆಯಿಂದ ಮತ್ತೊಂದು ಬ್ಯಾಂಕ್ ಖಾತೆಗೆ ಹಣ ಕಳುಹಿಸಲು ಹಲವಾರು ವಿಧಾನಗಳಿವೆ. ಇದೀಗ ಕೇವಲ ಆಧಾರ್ ಸಂಖ್ಯೆ ಬಳಸಿಕೊಂಡು ಹಣ ಕಳುಹಿಸುವ ವ್ಯವಸ್ಥೆಯೂ ಜಾರಿಗೆ ಬಂದಿದ್ದು, ಗ್ರಾಹಕರಿಗೆ ಮತ್ತಷ್ಟು ಅನುಕೂಲ ಕಲ್ಪಿಸಿದೆ. ಆಧಾರ್ ಎನೇಬಲ್ಡ್ ಪೇಮೆಂಟ್ ಸಿಸ್ಟಂಸ್ (Aadhaar Enabled Payment Systems) ಅಥವಾ ಎಇಪಿಎಸ್ (AePS) ಮೂಲಕ ಹಣ ಕಳುಹಿಸುವುದು ಬಹಳ ಸುಲಭವಾಗಿದೆ. ಈ ವ್ಯವಸ್ಥೆಯನ್ನು ರಾಷ್ಟ್ರೀಯ ಪಾವತಿ ನಿಗಮ (NPCI) ಅಭಿವೃದ್ಧಿಪಡಿಸಿದೆ. ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡಿದ್ದವರು ಸುಲಭವಾಗಿ ಸೇವೆ ಪಡೆಯಬಹುದಾಗಿದೆ. ಆಧಾರ್ ಸಂಖ್ಯೆ ಮೂಲಕ ಹಣ ಕಳುಹಿಸುವುದು ಸಂಪೂರ್ಣ ಸುರಕ್ಷಿತವಾಗಿದೆ ಎಂದು ಎನ್​ಪಿಸಿಐ ತಿಳಿಸಿದೆ.

ಆಧಾರ್ ಸಂಖ್ಯೆ ಮೂಲಕ ಯಾರು ಹಣ ಕಳುಹಿಸಬಹುದು?

ಬ್ಯಾಂಖ್ ಖಾತೆಯೊಂದಿಗೆ ಆಧಾರ್ ಜೋಡಣೆ ಮಾಡಿರುವ, ಅಂದರೆ ಆಧಾರ್ ಎನೇಬಲ್ಡ್ ಬ್ಯಾಂಕ್ ಅಕೌಂಟ್ ಹೊಂದಿರುವ ಯಾರು ಬೇಕಾದರೂ ಆಧಾರ್ ಸಂಖ್ಯೆ ಮೂಲಕ ಹಣ ಕಳುಹಿಸುವ ಸೇವೆ ಪಡೆಯಬಹುದು. ಆಧಾರ್ ಹೊಂದಿರುವವರು ಬ್ಯಾಂಕ್​ಗೆ ತೆರಳಿ ಸಂಖ್ಯೆಯನ್ನು ಜೋಡಣೆ ಮಾಡುವುದರ ಜತೆಗೆ ಆಧಾರ್ ಎನೇಬಲ್ಡ್ ಬ್ಯಾಂಕ್ ಅಕೌಂಟ್ ಸ್ಥಾಪಿಸಿದರೆ ಬಳಿಕ ಎಇಪಿಎಸ್ ಸೇವೆ ಪಡೆಯಬಹುದು.

ಆಧಾರ್ ಮೂಲಕ ಹಣ ಕಳುಹಿಸಲು ಏನು ಮಾಡಬೇಕು?

  • ನಿಮ್ಮ ಪ್ರದೇಶದಲ್ಲಿರುವ ಸಂಬಂಧಪಟ್ಟ ಬ್ಯಾಂಕಿಂಗ್ ಕರೆಸ್ಪಾಂಡೆಂಟ್ ಅನ್ನು ಭೇಟಿ ಮಾಡಿ.
  • 12 ಡಿಜಿಟ್​ಗಳ ಆಧಾರ್ ಸಂಖ್ಯೆಯನ್ನು ಒಪಿಎಸ್ ಮಷಿನ್​ನಲ್ಲಿ ಭರ್ತಿ ಮಾಡಿ.
  • ನಿಮಗೆ ಅಗತ್ಯವಿರುವ ಸೇವೆಗಳನ್ನು ಆಯ್ಕೆ ಮಾಡಿಕೊಳ್ಳಿ (ವಿತ್​ಡ್ರಾ, ಡಿಪಾಸಿಟ್, ಬ್ಯಾಲೆನ್ಸ್ ಎನ್​ಕ್ವಯರಿ ಇತ್ಯಾದಿ).
  • ನಿಮ್ಮ ಬ್ಯಾಂಕ್​​ನ ಹೆಸರು ಹಾಗೂ ನೀವು ವಿತ್​ಡ್ರಾ ಮಾಡಬೇಕಿರುವ ಮೊತ್ತವನ್ನು ನಮೂದಿಸಿ.
  • ಬಯೋಮೆಟ್ರಿಕ್ ಟ್ರಾನ್ಸಾಕ್ಷನ್​ ಅನ್ನು ದೃಢೀಕರಿಸಿ ಹಣ ವಿತ್​ಡ್ರಾ ಮಾಡಿ.

ಆಧಾರ್ ಮೂಲಕ ಹಣ ಕಳುಹಿಸಲು ಏನೆಲ್ಲ ಮಾಹಿತಿ ಬೇಕು?

  • ಆಧಾರ್ ಸಂಖ್ಯೆ
  • ಬ್ಯಾಂಕ್ ಹೆಸರು
  • ಎನ್​​ರೋಲ್​ಮೆಂಟ್ ವೇಳೆ ನೀಡಿದ ಬಯೋಮೆಟ್ರಿಕ್
  • ಟ್ರಾನ್ಸಾಕ್ಷನ್ ಟೈಪ್

ಆಧಾರ್ ಮೂಲಕ ಯಾವೆಲ್ಲ ಸೇವೆ ಲಭ್ಯ?

  • ಬ್ಯಾಲೆನ್ಸ್ ಪರಿಶೀಲನೆ
  • ನಗದು ವಿತ್​ಡ್ರಾ
  • ನಗದು ಠೇವಣಿ ಇರಿಸುವಿಕೆ
  • ಆಧಾರ್ ಟು ಆಧಾರ್ ಫಂಡ್ ಟ್ರಾನ್ಸ್​ಫರ್
  • ಪಾವತಿ ವಹಿವಾಟುಗಳು (ಸಿ2ಬಿ, ಸಿ2ಬಿ ಟ್ರಾನ್ಸಾಕ್ಷನ್ಸ್)
  • ಭೀಮ್ ಆಧಾರ್ ಪೇ
  • ದೃಢೀಕರಣ

ಆಧಾರ್ ಎನೇಬಲ್ಡ್ ಪೇಮೆಂಟ್ ಸಿಸ್ಟಂ ಬ್ಯಾಂಕ್​ಗೆ ಭೇಟಿ ನೀಡದೆಯೇ ಮನೆಯಲ್ಲೇ ಕುಳಿತುಕೊಂಡು ಬ್ಯಾಂಕಿಂಗ್ ಸೇವೆಗಳನ್ನು ಪಡೆಯಲು ಗ್ರಾಹಕರಿಗೆ ಅನುಕೂಲ ಒದಗಿಸುತ್ತದೆ. ವೈಯಕ್ತಿಕ ಬ್ಯಾಂಕ್ ವಿವರಗಳನ್ನು ನೀಡುವ ಅಗತ್ಯ ಇಲ್ಲದಿರುವುದರಿಂದ ಇದೊಂದು ಸುರಕ್ಷಿತ ವಿಧಾನವಾಗಿದೆ ಎಂದು ಎನ್​ಪಿಸಿಐ ತಿಳಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:25 pm, Wed, 25 January 23