
ಮುಂಬೈ, ಸೆಪ್ಟೆಂಬರ್ 16: ತಾತನ ಆಸ್ತಿಯಲ್ಲಿ ಮೊಮ್ಮಕ್ಕಳಿಗೆ ಕಾನೂನು ಪ್ರಕಾರ ಪಾಲು ಪಡೆಯುವ ಹಕ್ಕು ಇರುತ್ತದೆ. ಆದರೆ, ಅಮ್ಮನ ತವರಿನ ಮನೆಯಲ್ಲಿ ಆಕೆಯ ಮಕ್ಕಳು ಆಸ್ತಿಯಲ್ಲಿ ಪಾಲು ಕೇಳಬಹುದಾ? ಬಾಂಬೆ ಹೈಕೋರ್ಟ್ (Bombay High Court) ಇತ್ತೀಚೆಗೆ ಇಂಥ ಪ್ರಕರಣವೊಂದರಲ್ಲಿ ಮಹತ್ವದ ತೀರ್ಪು ನೀಡಿದೆ. ಅಮ್ಮನ ಕಡೆಯ ತಾತನ ಆಸ್ತಿಗೆ ಪಾಲು ಕೇಳಿ ಮೊಮ್ಮಗಳೊಬ್ಬಳು ಸಲ್ಲಿಸಿದ ಅರ್ಜಿಯನ್ನು ಬಾಂಬೆ ಉಚ್ಚ ನ್ಯಾಯಾಲಯ ತಿರಸ್ಕರಿಸಿದೆ.
ನಾಮದೇವ್ ಎಂಬ ವ್ಯಕ್ತಿಯ ಆಸ್ತಿಯಲ್ಲಿ ಪಾಲು ಕೇಳಿದ ಪ್ರಕರಣ ಇದು. ಈಗ ಮೃತರಾಗಿರುವ ನಾಮದೇವ್ ಅವರಿಗೆ ನಾಲ್ವರು ಹೆಣ್ಮಕ್ಕಳು ಹಾಗೂ ನಾಲ್ವರು ಗಂಡು ಮಕ್ಕಳು ಹೀಗೆ ಎಂಟು ಮಕ್ಕಳಿದ್ದಾರೆ. ಈ ನಾಲ್ವರು ಹೆಣ್ಮಕ್ಕಳ ಪೈಕಿ ಒಬ್ಬಾಕೆಯ ಮಗಳು ಕೋರ್ಟ್ನಲ್ಲಿ ಕೇಸ್ ಹಾಕಿದ್ದಾಳೆ. ತನಗೆ ಆಸ್ತಿಯಲ್ಲಿ ಒಂದು ಪಾಲು ಬರಬೇಕು ಎಂಬುದು ಆಕೆಯ ಮನವಿ. ಕೋರ್ಟ್ ಈಕೆಯ ಮನವಿಯನ್ನು ತಿರಸ್ಕರಿಸಿದೆ.
ಇದನ್ನೂ ಓದಿ: ಕೇವಲ 30,000 ರೂ ಸಂಬಳವಾ? 2 ಕೋಟಿ ರೂ ಹಣ ಮಾಡಲು ಈ ಟ್ರಿಕ್ಸ್ ಬಳಸಿ
ಆ ಹುಡುಗಿಯ ಆಸ್ತಿ ಪಾಲು ಮನವಿಯನ್ನು ಕೋರ್ಟ್ ತಿರಸ್ಕರಿಸಲು ಕಾರಣ ಇದೆ. ಈ ಪ್ರಕರಣದಲ್ಲಿ ಕೇಸ್ ಹಾಕಿದ ಹುಡುಗಿಯ ತಾಯಿಯು ಆಸ್ತಿಯಲ್ಲಿ ಪಾಲು ಕೇಳಿಲ್ಲ. ಕೋರ್ಟ್ ಪ್ರಕಾರ, ನಾಮದೇವ್ ಅವರ ಆಸ್ತಿಯಲ್ಲಿ ಪಾಲು ಕೇಳುವ ಹಕ್ಕು ಇರುವುದು ಅವರ ಎಂಟು ಮಕ್ಕಳಿಗೆ ಮಾತ್ರ.
ಕೇಸ್ ಹಾಕಿದ ಹುಡುಗಿಯ ತಾಯಿ ಇನ್ನೂ ಬದುಕಿದ್ದಾರೆ. ಅಂಥ ಸಂದರ್ಭದಲ್ಲಿ ಅವರನ್ನು ಬಿಟ್ಟು ಆಸ್ತಿ ಕೇಳುವ ಹಕ್ಕು ಹುಡುಗಿಗೆ ಇರುವುದಿಲ್ಲ.
ಈಕೆಯ ತಾಯಿ ನಿಧನ ಹೊಂದಿದ ಬಳಿಕ ಮಾತ್ರವೇ ಆಸ್ತಿಯಲ್ಲಿ ಪಾಲು ಕೇಳಲು ಮಕ್ಕಳಿಗೆ ಹಕ್ಕು ಸಿಗುತ್ತದೆ.
ಇದನ್ನೂ ಓದಿ: ಪೋಸ್ಟ್ ಆಫೀಸ್ನ ಈ ಸ್ಕೀಮ್ನಲ್ಲಿ 25 ವರ್ಷಕ್ಕೆ 1 ಕೋಟಿ ರೂ ಗಳಿಕೆಗೆ ಅವಕಾಶ
ಒಬ್ಬ ವ್ಯಕ್ತಿ ತನ್ನ ತಾತನ (ಅಪ್ಪನ ಅಪ್ಪ) ಆಸ್ತಿಯಲ್ಲಿ ಪಾಲು ಕೇಳುವ ಹಕ್ಕು ಹೊಂದಿರುತ್ತಾರೆ. ಅಪ್ಪ ಜೀವಂತ ಇದ್ದಾಗಲೂ ಈ ಹಕ್ಕು ಇರುತ್ತದೆ. ಆದರೆ ಈ ಹಕ್ಕು ಅಮ್ಮನ ಕಡೆಯ ತಾತನ ಆಸ್ತಿಯಲ್ಲಿ ಇರುವುದಿಲ್ಲ. ಇಲ್ಲಿ ತಿಳಿಸಿರುವುದು ಹಿಂದೂ ಕಾಯ್ದೆ ಪ್ರಕಾರ ಇರುವ ಕಾನೂನು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ