ಭಾರತದಲ್ಲಿ ಅತಿಸಾಮಾನ್ಯವಾಗಿ ಬಳಕೆಯಾಗುವ ಸೇವಿಂಗ್ ಸ್ಕೀಮ್ಗಳಲ್ಲಿ ಫಿಕ್ಸೆಡ್ ಡೆಪಾಸಿಟ್ (Fixed Deposit) ಒಂದು. ಕೆಲ ಬ್ಯಾಂಕುಗಳಲ್ಲಿ ಒಳ್ಳೆಯ ಎಫ್ಡಿ ದರಗಳಿವೆ. ಸಹಕಾರಿ ಸೊಸೈಟಿ ಮತ್ತು ಸಹಕಾರಿ ಬ್ಯಾಂಕುಗಳಲ್ಲಿ ವರ್ಷಕ್ಕೆ ಶೇ. 9.50ರವರೆಗೂ ಬಡ್ಡಿದರಗಳನ್ನು ಫಿಕ್ಸೆಡ್ ಡೆಪಾಸಿಟ್ಗಳಿಗೆ ನೀಡಲಾಗುತ್ತದೆ. ಕೋ ಆಪರೇಟಿವ್ ಬ್ಯಾಂಕುಗಳಿಗೆ ಹೋಲಿಸಿದರೆ ಪ್ರಮುಖ ಬ್ಯಾಂಕುಗಳಲ್ಲಿ ಎಫ್ಡಿ ದರಗಳು ತುಸು ಕಡಿಮೆ. ಆದರೂ ಕೆಲ ಬ್ಯಾಂಕುಗಳು ಶೇ. 8ಕ್ಕಿಂತಲೂ ಹೆಚ್ಚು ಬಡ್ಡಿದರವನ್ನು ಎಫ್ಡಿಗೆ ಕೊಡುತ್ತವೆ. ಯಾವುದೇ ಬ್ಯಾಂಕ್ನಲ್ಲೂ ಹಿರಿಯ ನಾಗರಿಕರಿಗೆ ಹೆಚ್ಚು ಬಡ್ಡಿ ಸಿಗುತ್ತದೆ.
ಫಿಕ್ಸೆಡ್ ಡೆಪಾಸಿಟ್ನಲ್ಲಿ ಹೆಚ್ಚಿನ ಮಂದಿ ಸಾಮಾನ್ಯವಾಗಿ ಒಂದು ವರ್ಷದ ಅವಧಿಗೆ ಠೇವಣಿ ಇರಿಸುತ್ತಾರೆ. ಈ ಅವಧಿಗೆ ಪ್ರಮುಖ ಬ್ಯಾಂಕುಗಳಲ್ಲಿ ಎಷ್ಟೆಷ್ಟು ಬಡ್ಡಿ ಸಿಗುತ್ತದೆ ಎಂಬ ವಿವರ ಇಲ್ಲಿದೆ.
ಇಲ್ಲಿ ವಿವಿಧ ಅವಧಿಯ ಎಫ್ಡಿಗಳಿಗೆ ಶೇ. 3ರಿಂದ ಶೇ. 7.10ರವರೆಗೂ ಬಡ್ಡಿ ಆಫರ್ ಇದೆ. ಹಿರಿಯ ನಾಗರಿಕರಿಗೆ 50 ಬೇಸಿಸ್ ಪಾಯಿಂಟ್ಗಳಷ್ಟು ಹೆಚ್ಚು ಬಡ್ಡಿ ಸಿಗುತ್ತದೆ. ಅಂದರೆ ಶೇ. 7.6ರವರೆಗೂ ಬಡ್ಡಿ ಸಿಗುತ್ತದೆ. ಒಂದು ವರ್ಷದ ಠೇವಣಿಗೆ ಶೇ. 6.70ರಷ್ಟು ಬಡ್ಡಿ ನೀಡಲಾಗುತ್ತದೆ.
ಇದನ್ನೂ ಓದಿ: ಎಸ್ಬಿಐ ವೀಕೇರ್ ಸ್ಕೀಮ್; ಗರಿಷ್ಠ ಬಡ್ಡಿ ಕೊಡುವ ಈ ಯೋಜನೆ ಈ ತಿಂಗಳೇ ಕೊನೆ
ಎಚ್ಡಿಎಫ್ಸಿ ಬ್ಯಾಂಕ್ನಲ್ಲಿ 7 ದಿನದಿಂದ 10 ವರ್ಷದ ವಿವಿಧ ಅವಧಿಯ ಠೇವಣಿಗಳಿಗೆ ಶೇ. 3ರಿಂದ ಶೇ. 7.25ರಷ್ಟು ಬಡ್ಡಿ ಇದೆ. ಒಂದು ವರ್ಷದ ಠೇವಣಿಗೆ ಶೇ. 7.10 ಬಡ್ಡಿ ಕೊಡಲಾಗುತ್ತದೆ.
ಭಾರತದ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಎನಿಸಿದ ಎಸ್ಬಿಐನಲ್ಲಿ ಸಾಮಾನ್ಯ ಗ್ರಾಹಕರ ನಿಶ್ಚಿತ ಠೇವಣಿಗಳಿಗೆ ಶೇ. 3ರಿಂದ ಶೇ. 7.1ರಷ್ಟು ಬಡ್ಡಿ ಇದೆ. ಒಂದು ವರ್ಷದ ಅವಧಿಯ ಠೇವಣಿಗೆ ಶೇ. 6.8 ಬಡ್ಡಿ ಆಫರ್ ಇದೆ.
ಈ ಸರ್ಕಾರಿ ಬ್ಯಾಂಕ್ನಲ್ಲಿ ಎಫ್ಡಿಗಳಿಗೆ ಶೇ. 4ರಿಂದ ಶೇ. 7.40ರವರೆಗೆ ಬಡ್ಡಿ ಕೊಡಲಾಗುತ್ತದೆ. ಕೆನರಾ ಬ್ಯಾಂಕ್ನ ಒಂದು ವರ್ಷದ ಅವಧಿಯ ಠೇವಣಿಗೆ ಶೇ. 7.05 ಬಡ್ಡಿ ಇದೆ. ಆದರೆ, ಒಂದು ವರ್ಷದೊಳಗೆ ಈ ಠೇವಣಿಯನ್ನು ಹಿಂಪಡೆಯುವಂತಿಲ್ಲ. ಅವಧಿಗೆ ಮುನ್ನ ಠೇವಣಿ ಹಿಂಪಡೆಯುವುದಾದರೆ ಬಡ್ಡಿ ದರ ಶೇ. 7.25ರವರೆಗೂ ಮಾತ್ರ ಇರುತ್ತದೆ.
ಇದನ್ನೂ ಓದಿ: ಗಂಡ ಆದಾಯ ಸರ್ಟಿಫಿಕೇಟ್ ಇಲ್ಲದೇ ಗೃಹಿಣಿಯರಿಗೆ ಇನ್ಷೂರೆನ್ಸ್ ಪಾಲಿಸಿ ಸಿಗುತ್ತಾ? ವಾಸ್ತವ ಸ್ಥಿತಿ ಏನಿದೆ?
ಕರ್ಣಾಟಕ ಬ್ಯಾಂಕ್ನಲ್ಲಿ ಫಿಕ್ಸೆಡ್ ಡೆಪಾಸಿಟ್ಗಳಿಗೆ ಶೇ. 4.50 ಯಿಂದ ಶೇ. 7.30ರವರೆಗೂ ಬಡ್ಡಿ ಇದೆ. ಒಂದು ವರ್ಷದ ಅವಧಿಯ ಠೇವಣಿಗೆ ಶೇ. 7ರಷ್ಟು ಬಡ್ಡಿ ಇದೆ.
ಈ ಮೇಲಿನ ಐದು ಬ್ಯಾಂಕುಗಳಲ್ಲಿ ತಿಳಿಸಲಾಗಿರುವ ಬಡ್ಡಿ ದರಗಳು 2 ಕೋಟಿ ರೂಗಿಂತ ಕಡಿಮೆ ಮೊತ್ತದ ಹಣದ ಠೇವಣಿಗೆ ಅನ್ವಯ ಆಗುತ್ತವೆ. 2 ಕೋಟಿಗೂ ಹೆಚ್ಚಿನ ಮೊತ್ತದ ಠೇವಣಿಗೆ ನೀಡುವ ಬಡ್ಡಿಯಲ್ಲಿ ತುಸು ವ್ಯತ್ಯಯ ಇರುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ